ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-11-2020
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 177/2020, ಕಲಂ. 2 The prevention of insult’s to National honor Act 1971 :-
ದಿನಾಂಕ 26-11-2020 ರಂದು ವಾಟ್ಸ ಆ್ಯಪ್ ಎಂಬ ಸಾಮಾಜಿಕ ಜಾಲ ತಾಣದಲ್ಲಿ ಪಾಲಿಟಿಕಲ ಡೆಬಿಟ ಎಂಬ ಗ್ರುಪನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿಯ ಜಿಲ್ಲಾ ಸಂಚಾಲಕರಾದ ಉಮೇಶಕುಮಾರ ಸ್ವಾರಳ್ಳಿಕರ ಅವರು 72 ನೇ ಸಂವಿಧಾನ ದಿನದ ಪ್ರಯುಕ್ತ ಶುಭಾಷಯ ಕೋರುವ ವಾಟ್ಸ ಆ್ಯಪ್ ಗ್ರುಪ್ನಲ್ಲಿ ಪೋಸ್ಟನ್ನು ಹಾಕಿರುತ್ತಾರೆ, ಆದರೆ 8748888200 ಮೊಬೈಲ್ ಸಂಖ್ಯೆಯಿಂದ ಆರೋಪಿ ವಿನಯ ಬಿರಾದಾರ ಇತನು ಅದಕ್ಕೆ ಪ್ರತ್ಯುತ್ತರವಾಗಿ ನಾನು ಸಂವಿಧಾನ ದಿನವನ್ನು ಏಕೆ? ಆಚರಿಸಬೇಕು, ಸಂವಿಧಾನವು ನನಗೆ ಸಮಾಜಿಕವಾಗಿ ಯಾವುದೆ ನ್ಯಾಯ ಒದಗಿಸಿಲ್ಲಾ, ನಾನು ಸಂವಿಧಾನವು ಒಪ್ಪುವುದಿಲ್ಲ, ಸಂವಿಧಾನವು ಜಾತಿ ಆಧಾರದ ಮೇಲೆ ರಚಿತವಾಗಿದೆ ಎಂದು ಹೀಗೆ ವಿವಿಧ ರೀತಿಯಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸುವ ಬಗ್ಗೆ ಕಮೆಂಟನ್ನು ಮಾಡಿರುತ್ತಾನೆ, ನವೆಂಬರ 26 ರಂದು ದೇಶದ ಪ್ರತಿಯೊಬ್ಬ ನಾಗಿರಕರು ರಾಷ್ಟ್ರಪತಿ ಹಾಗು ಪ್ರಧಾನ ಮಂತ್ರಿಯನ್ನು ಸೇರಿ ಎಲ್ಲರು ಗೌರವಿಸಿ ಪುಶ್ಪನಮನ ಮಾಡಿ ಗೌರವ ಸಲ್ಲಿಸಿರುತ್ತಾರೆ, ಆದರೆ ವಿನಯ ಬಿರಾದಾರ ಇತನು ಪದೆ ಪದೆ ಸಂವಿಧಾನ ವಿರೋಧಿ ಪೊಸ್ಟಗಳನ್ನು ಶೇರ ಮಾಡುತ್ತಿರುವುದು ಕಾನೂನ ವಿರುದ್ದ ಕೆಲಸವಾಗಿದೆ ಅಂತ ಫಿರ್ಯಾದಿ ನರಸಿಂಗ ಸಮ್ರಾಟ ಜಿಲ್ಲಾ ಸಂಘಟನಾ ಸಂಚಾಲಕರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಜಿಲ್ಲಾ ಸಮಿತಿ ಬೀದರ ರವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 29-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 59/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 29-11-2020 ರಂದು ವಿಠಲಪೂರ ಶಿವಾರದ ಅರಣ್ಯ ಪ್ರದೆಶದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಗಂಗಮ್ಮಾ ಪಿಎಸ್ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ವಿಠಲಪೂರ ಶಿವಾರದ ಮರಕುಂದಾ ರೋಡಿನ ಮೇಲೆ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ 1) ಮುಲ್ತಾನಿಶಾ ತಂದೆ ಬಿಯಾಬಾನಿಶಾ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಮರಕುಂದಾ ಇತನು ಹಾಗೂ ಇನ್ನೂ 9 ಜನ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರ ಸಹಾಯಂದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 2900/- ರೂ. ಹಾಗೂ 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 159/2020, ಕಲಂ. 353, 332, 307, ಜೊತೆ 34 ಐಪಿಸಿ :-
ಹುಮನಾಬಾದ ಪೊಲೀಸ ಠಾಣೆಯ ಅಪರಾಧ ಸಂ. 145/2020 ಕಲಂ. 420 ಜೊತೆ 34 ಐಪಿಸಿ ದಿನಾಂಕ 27-10-2020 ರಂದು ದಾಖಲಾಗಿದ್ದು, ಅದರಲ್ಲಿ ಫಿರ್ಯಾದಿ ಮಲ್ಲಪ್ಪರವರು ತಿಳಿಸಿದೆನೆಂದರೆ ತನ್ನ ಗಮನ ಬೇರೆ ಕಡೆ ಸೆಳೆದು ಆರೋಪಿತರು ವಿಶೇಷ ತಂಡದ ಪೊಲೀಸರಾಗಿ ಮಿತ್ರ ಪೊಲೀಸ ಅಂತಾ ತಪಾಸಣೆ ಮಾಡುವದು ಇದೆ ಅಂತಾ ಕಾರ್ಡನ್ನು ತೋರಿಸಿ ನನ್ನ ಕರ್ಚಿಪದಲ್ಲಿ ಬಂಗಾರದ ಉಂಗುರು ಹಾಕಿದಂತೆ ಮಾಡಿ ಮನೆಗೆ ಹೋಗುವರಿಗೆ ತೆಗೆಯ ಬೇಡಿ ಅಂತಾ ಹೇಳಿ ಅವರ ಹತ್ತಿರ ಕಪ್ಪು ಬಣ್ಣದ ಯುನಿಕೋರ್ನ ಮೋಟಾರ ಸೈಕಲ ಮೇಲೆ ಹೊಗಿರುತ್ತಾರೆ ಎಂಬ ಬಗ್ಗೆ ದೂರು ದಾಖಲಾಗಿದ್ದು, ಸದರಿ ಪ್ರಕರಣದಲ್ಲಿನ ಆರೋಪಿತರ ಪತ್ತೆಗಾಗಿ ರವಿಕುಮಾರ ತಂದೆ ಸುಬಾಷಚಂದ್ರ ಪಿಎಸಐ (ಕಾ.ಸು) ಹುಮನಾಬಾದ ಪೊಲೀಸ ಠಾಣೆ ರವರು ಮತ್ತು ಕಿರಣ ಪಿಎಸಐ (ಅವಿ), ಭಗವಾನ ಸಿಎಚಸಿ ಹಾಗೂ ನವೀನ ಸಿಪಿಸಿ ರವರೆಲ್ಲರೂ ಒಂದು ವಿಶೇಷ ತಂಡ ಮಾಡಿಕೊಂಡು ಹುಮನಾಬಾದ ಪಟ್ಟಣದಲ್ಲಿ ಚಿದ್ರಿ ಬೈಪಾಸ ಹತ್ತಿರ ಪೆಟ್ರೋಲಿಂಗ ಮಾಡುತ್ತಾ ಪ್ರಕರಣದ ಆರೋಪಿತರ ತಪಾಸಣೆ ಮಾಡುತ್ತಿರುವಾಗ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಯೂನಿಕೋರ್ನ ಮೋಟಾರ ಸೈಕಲ ಮೇಲೆ ನೂರ ದಾಬಾ ಕಡೆಯಿಂದ ಹೋಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಮತ್ತು ನವೀನ ಇಬ್ಬರು ನವೀನ ಈತನ ಮೋಟಾರ ಸೈಕಲ ಮೇಲೆ ಮತ್ತು ಕಿರಣ ಪಿಎಸಐ ಮತ್ತು ಭಗವಾನ ಇಬ್ಬರು ಭಗವಾನ ಇವನ ಮೋಟಾರ ಸೈಕಲ ಮೇಲೆ ಕುಳಿತು ರಾ.ಹೆ ನಂ. 65 ರ ಮೇಲೆ ಎಸ.ಅರ ವಾಟರ ಸರ್ವಿಸಿಂಗ ದಾಟಿದ ನಂತರ ಕಲಬುರ್ಗಿ ಕಡಗೆ ಹೋಗುವ ಸರ್ವಿಸ ರೋಡಿನ ಮೇಲೆ ಸಂಶಯ ಇದ್ದ ಯೂನಿಕಾರ್ನ ಮೋಟಾರ ಸೈಕಲ್ ಚಕ್ ಮಾಡುವಾಗ ನೂರ ಧಾಬಾ ಕಡೆಯಿಂದ ಬರುತ್ತಿದ್ದ ಯೂನಿಕಾರ್ನ ಮೋಟಾರ ಸೈಕಲ ಮೇಲೆ ಇಬ್ಬರೂ ಬರುತ್ತಿರುವಾಗ ಮೋಟಾರ ಸೈಕಲ ನಿಲ್ಲಿಸಲು ಕೈ ಸನ್ನೇ ಮಾಡುತ್ತಿರುವಾಗ ಅವರು ನೋಡಿ ಗುರುತಿಸಿ ತಪ್ಪಿಸಿಕೊಳ್ಳಲು ಪಿಎಸ್ಐ ರವರಿಗೆ ಓವರ ಟೇಕ ಮಾಡಿ ಅವರು ಅಲ್ಲೆ ರೋಡಿನ ಬದಿಯಲ್ಲಿ ಮೋಟಾರ್ ಸೈಕಲ ಕೆಳಗೆ ಬಿಟ್ಟು ರೋಡಿನ ಆಚೆಗೆ ಡಿವೈಡರ ದಾಟಿ ಓಡುತ್ತಿರುವಾಗ ಎಲ್ಲರು ಅವರ ಬೆನ್ನು ಹತ್ತಿ ಗಡವಂತಿ ಕಡೆಗೆ ಮಾವಿನ ತೋಟದ ಕಡೆಗೆ ತಗ್ಗಿನಲ್ಲಿ ಅವರನ್ನು ಹಿಡಿದು ನಿಲ್ಲಿಸುವಾಗ ಅದರಲ್ಲಿನ ಕೆಂಪು ಕಂದು ಬಣ್ಣದ ಟಿ ಶರ್ಟ ಧರಿಸಿದ ಒಬ್ಬ ವ್ಯಕ್ತಿ ತನ್ನ ಜೇಬಿನಿಂದ ಒಂದು ಬ್ಲೇಡ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಅರೆ ಪೊಲೀಸ ಹಮಾರಕೂ ಪಕಡನೇಕೂ ಆತೆ ತುಮರಾಕೂ ಖತಂ ಕರತೆ ಅಂತಾ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿ ಭಗವಾನ ಈತನ ಕುತ್ತಿಗೆಯ ಮೇಲೆ ಬ್ಲೇಡದಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸುವಾಗ ಭಗವಾನ ಈತನು ತನ್ನ ರಕ್ಷಣೆಗೆ ತನ್ನ ಎಡಗೈ ಮುಂದೆ ಮಾಡಿದಾಗ ಎಡಗೈ ಅಂಗೈಗೆ ಬ್ಲೇಡದಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮತ್ತು ಬಿಳಿ ಬಣ್ಣದ ಒಳಗಡೆ ಕಪ್ಪು ಹಳದಿ ಪಟ್ಟಿವುಳ್ಳ ಟಿ ಶರ್ಟ ಧರಿಸಿದ ವ್ಯಕ್ತಿ ಅಲ್ಲೆ ಇದ್ದ ನವೀನ ಈತನಿಗೆ ಅವನ ಹತ್ತಿರ ಇದ್ದ ಚಾಕುವಿನಿಂದ ಹೊಟ್ಟೆಯ ಮೇಲೆ ಹೊಡೆಯಲು ಪ್ರಯತ್ನಿಸಿದಾಗ ಅವನು ತನ್ನ ರಕ್ಷಣೆಗೆ ತನ್ನ ಬಲಗೈ ಮುಂದೆ ಮಾಡಿದಾಗ ಬಲಗೈ ತಾಗಿ ರಕ್ತ ಬಂದಿದ್ದು ನಂತರ ನವೀನ ಈತನ ಕುತ್ತಿಗೆಯನ್ನು ಹಿಡಿದು ಹಿಚುಕಲಿಕಲಿಕ್ಕೆ ಬಂದಾಗ ನವೀನ ಈತನು ತಪ್ಪಿಸಿಕೊಳ್ಳಲು ಕೆಳಗೆ ಬಿದ್ದಾಗ ನವೀನ ರವರ ಬಲಗೈಗೆ ಪೆಟ್ಟಾಗಿರುತ್ತದೆ, ಈ ವೇಳೆಗೆ ಜೀವ ರಕ್ಷಣೆಗಾಗಿ ಪಿಎಸ್ಐ ರವರು ತನ್ನ ಹತ್ತಿರವದ್ದ ಸರ್ವಿಸ ಪಿಸ್ತೂಲ ತೆಗೆದು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದಾಗ ಅದರಲ್ಲಿನ ಇನ್ನೊಬ್ಬ ವ್ಯಕ್ತಿ ಪಿಎಸ್ಐ ರವರ ಬಲಗೈಗೆ ಕೈಯಿಂದ ಜೋರಾಗಿ ಹೋಡೆದಾಗ ಪಿಎಸ್ಐ ರವರ ಪಿಸ್ತೂಲ ಜಾರಿ ಕೆಳಗೆ ಬಿದ್ದಾಗ ಪಿಎಸ್ಐ ರವರು ಸಹ ಕಾಲು ಜಾರಿ ಕೆಳಗೆ ಬಿದ್ದಿರುತ್ತಾರೆ, ಆಗ ಅಲ್ಲೆ ಇದ್ದ ಪಿಎಸಐ ಕಿರಣ ರವರು ಇಬ್ಬರನ್ನು ಹಿಡಿದುಕೊಳ್ಳಲು ಹೋದಾಗ ಅವರಿಗೂ ಸಹ ಬಲಗಾಲು ಮೋಳಕಾಲ ಕೆಳಗೆ ಕೆಂಪು ಬಣ್ಣದ ಟಿ ಶರ್ಟ ಧರಿಸಿದ ವ್ಯಕ್ತಿ ಕಾಲಿನಿಂದ ಒದ್ದು ಗಾಯ ಪಡಿಸಿದಾಗ ಕಿರಣ ರವರು ಕೆಳಗೆ ಬಿದ್ದಾಗ ಅವರ ಬಲಗೈ ಬೆರಳಿನ ಮೇಲೆ ಬಿಳಿ ಮತ್ತು ಕಪ್ಪು ಪಟ್ಟಾಪಟ್ಟಿವುಳ್ಳ ಟಿ ಶರ್ಟ ಧರಿಸಿದ ವ್ಯಕ್ತಿ ಒದ್ದು ರಕ್ತಗಾಯ ಪಡಿಸಿ ಅವರು ಓಡುತ್ತಿದ್ದಾಗ ಪಿಎಸ್ಐ ರವರು ತನ್ನ ಸರ್ವಿಸ ಪಿಸ್ತೂಲ ತೆಗೆದುಕೊಂಡು ಅವರಿಗೆ ಓಡಿ ಹೋಗದಂತೆ ನಿಂತುಕೊಳ್ಳಿ ಅಂತ ಸೂಚಿಸಿದಾಗ ಬಿಳಿ ಪಟಾಪಟಿ ಶರ್ಟ ಧರಿಸಿದ ವ್ಯಕ್ತಿ ಪಿಎಸ್ಐ ರವರಿಗೆ ಕೊಲೆ ಮಾಡುವ ಉದ್ದೆಶದಿಂದ ಅವನ ಕೈಯಲ್ಲಿದ್ದ ಚಾಕು ಪಿಎಸ್ಐ ರವರ ಕಡೆಗೆ ಏಸೆದಾಗ ಪಿಎಸ್ಐ ರವರು ತನ್ನ ಪ್ರಾಣ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಅವನ ಕಾಲಿನ ಕೆಳ ಜಾಗಕ್ಕೆ ಎರಡು ಸುತ್ತು ಗುಂಡು ಹಾರಿಸಿದ್ದು ಇರುತ್ತದೆ, ಆಗ ಅವರು ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಾ ಅಲ್ಲೆ ಇರುವ ತಗ್ಗಿನಲ್ಲಿ ಜಾರಿ ಬಿದ್ದಾಗ ಎಲ್ಲರು ಹೋಗಿ ಇಬ್ಬರನ್ನು ಹಿಡಿದುಕೊಂಡು ಅವರನ್ನು ವಿಚಾರಿಸಲಾಗಿ ಕೆಂಪು ಕಂದು ಬಣ್ಣದ ಶರ್ಟ ಉಟ್ಟಿರುವ ವ್ಯಕ್ಯಿ ತನ್ನ ಹೆಸರು ಸಾಬೇರ ಹುಸೇನ @ ಸಾದುಲ ಹುಸೇನ ತಂದೆ ಹಮಾಯನ್ ಅಲಿ ಸಾ: ಚಿದ್ರಿ ರೋಡ ಹುಸೇನಿ ಕಾಲೋನಿ ಇರಾನಿ ಗಲ್ಲಿ ಬೀದರ ಮತ್ತು ಮತ್ತೊಬ್ಬನ ಬಿಳಿ ಬಣ್ಣದ ಒಳಗಡೆ ಕಪ್ಪು ಹಳದಿ ಪಟ್ಟಿವುಳ್ಳ ಟಿ ಶರ್ಟ ಧರಿಸಿದ ವ್ಯಕ್ತಿಯ ಹೆಸರು ವಿಚಾರಿಸಲು ಅವನು ತನ್ನ ಹೆಸರು ಜಾವೇದ ಖಾನ ತಂದೆ ಪರವೇಜ ಖಾನ ಸಾ: ಕಾಲಾ ಮಜೀದ ಹತ್ತಿರ ಇರಾನಿ ಗಲ್ಲಿ ಬೀದರ ಅಂತಾ ತಿಳಿಸಿದರು, ಅವರಿಬ್ಬರು ತಗ್ಗಿನಲ್ಲಿ ಬಿದ್ದಿರುವದರಿಂದ ಸಾಬೇರ ಹುಸೇನ ಈತನ ತಲೆ ಎಡ ಭಾಗಕ್ಕೆ ಮತ್ತು ಕಿವಿಯ ಹತ್ತಿರ ರಕ್ತಗಾಯವಾಗಿದ್ದು ಮತ್ತು ಸೊಂಟದಲ್ಲಿ ಗುಪ್ತಗಾಯವಾಗಿರುತ್ತದೆ ಅಂತ ತಿಳಿಸಿರುತ್ತಾನೆ ಮತ್ತು ಜಾವೀದ ಖಾನ ಈತನ ಎಡಗೈ ಮುಂಗೈಗೆ ಮತ್ತು ಬಲಗೈಗೆ ಗಾಯಗಳಾಗಿದ್ದು ಎಡಗಾಲಿನ ಮೋಳಕಾಲಿಗೆ ಗುಪ್ತಗಾಯ, ಸೊಂಟದಲ್ಲಿ ಸಹ ಗುಪ್ತಗಾಯ ಆಗಿರುತ್ತದೆ ಅಂತ ತಿಳಿಸಿರುತ್ತಾನೆ, ಮೊದಲು ಬ್ಲೇಡದಿಂದ ಭಗವಾನ ಈತನಿಗೆ ಕೊಲೆ ಮಾಡಲು ಹೋಡೆದ ವ್ಯಕ್ತಿ ಸಾಬೇರ ಹುಸೇನ ಮತ್ತು ನವೀನ ಈತನಿಗೆ ಚಾಕಿವಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಜಾವೇದ ಖಾನ ಇರುತ್ತಾನೆ ಮತ್ತು ಪಿಎಸ್ಐ ರವರಿಗೆ ಜಾವೀದ ಖಾನ ಈತನು ತನ್ನ ಕೈಗೆ ಹೋಡೆದು ಪಿಸ್ತೂಲ ಕೆಳಗೆ ಬಿಳಿಸಿದ ವ್ಯಕ್ತಿ ಇರುತ್ತಾನೆ ಹಾಗೂ ಕಿರಣ ರವರಿಗೆ ಸಾಬೇರ ಹುಸೇನ ಮತ್ತು ಜಾವೇದ ಖಾನ ರವರು ಹೊಡೆದಿರುತ್ತಾರೆಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ದಿನಾಂಕ 29-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 106/2020, ಕಲಂ. 279, 338 ಐಪಿಸಿ ಜೊತೆ 187 ಐಎಮ್ವಿ ಕಾಯ್ದೆ :-
ದಿನಾಂಕ 29-11-2020 ರಂದು ಫಿರ್ಯಾದಿ ನಾಗಪ್ಪ ತಂದೆ ಮಲ್ಲಪ್ಪ ಗೋರಗೋಟ್ಟಿ ವಯ: 45 ವರ್ಷ, ಜಾತಿ: ಕುರಬ, ಸಾ: ಚರಕಪಳ್ಳಿ, ತಾ: ಜಹೀರಾಬಾದ ರವರು ತನ್ನ ಹೆಂಡತಿ ರೇಖಾ, ಮಗ ಸತೀಶ ವಯ: 13 ವರ್ಷ ಮೂವರು ಕೂಡಿ ತಾಳಮಡಗಿ ಗ್ರಾಮಕ್ಕೆ ಬಂದು ಮರಳಿ ಹೋಗಿದ್ದು, ಆದರೆ ಮಗ ಸತೀಶ ಈತನು ತನ್ನ ತಾತನ ಮನೆಯಲ್ಲಿ ಉಳಿದುಕೊಂಡಿದ್ದು ಇರುತ್ತದೆ, ಹೀಗಿರುವಲ್ಲಿ ದಿನಾಂಕ 29-11-2020 ರಂದು ರಾ.ಹೇ ನಂ. 65 ರ ತಾಳಮಡಗಿ ಗ್ರಾಮದ ಸರ್ವಿಸ ರೋಡಿನ ಮೇಲೆ ಅಲ್ಲಮ ಪ್ರಭು ಗುಡಿಯ ಹತ್ತಿರ ಸತೀಷ ಇತನು ರಸ್ತೆ ದಾಟಿ ಮನೆಯ ಕಡೆ ಬರುತ್ತೀರುವಾಗ ಮನ್ನಾಎಖೆ್ಖೕಳ್ಳಿ ಕಡೆಯಿಂದ ಬಜಾಜ ಪಲ್ಸರ ಮೋಟಾರ ಸೈಕಲ ನಂ. ಎಪಿ-12/ಜಿ-7084 ನೇದರ ಚಾಲಕನಾದ ತನ್ನ ವಾಹನವನ್ನು ಅತೀವೆಗ ಹಾಗೂ ನಿಷ್ಕಾಳಜಿತನದಿಂದ ಚಲಾಸುತ್ತಾ ಬಂದು ರಸ್ತೆ ದಾಟುತ್ತಿದ್ದ ಸತೀಶ ಈತನಿಗೆ ಡಿಕ್ಕಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಸತೀಶ ಈತನು ಭಾರಿಗಾಯಗೊಂಡಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಹುಮನಾಬಾದ ಹೀರಾ ಪಾಟೀಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ, ನಂತರ ಸತೀಷ ಇತನಿಗೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಒಂದು ಅಂಬುಲೇನ್ಸನಲ್ಲಿ ಕಲಬುರ್ಗಿಯ ವಾತ್ಸಲ್ಯ ಲೈಫ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 151/2020, ಕಲಂ. 317 ಐಪಿಸಿ :-
ದಿನಾಂಕ 28-11-2020 ರಂದು 2100 ಗಂಟೆಗೆ ಫಿರ್ಯಾದಿ ಅನೀಲಕುಮಾರ ತಂದೆ ವೈಜಿನಾಥ ಹಾಲಕೂಡೆ ವಯ: 48 ವರ್ಷ, ಜಾತಿ: ಲಿಂಗಾಯತ, ಉ: ದತ್ತು ಸಂಸ್ಥೆ ಕರಡ್ಯಾಳ ಗುರಕುಲ ಅಧೀಕ್ಷಕ, ಸಾ: ಗುರು ಕಾಲೋನಿ ಭಾಲ್ಕಿ ರವರು ಕರಡ್ಯಾಳ ಗುರಕುಲ ದತ್ತು ಸಂಸ್ಥೆಯಿಂದ ಭಾಲ್ಕಿಗೆ ತನ್ನ ಮನೆಯ ಕಡೆಗೆ ಹೋಗುತ್ತಿರುವಾಗ ಬೀದರ-ಭಾಲ್ಕಿ ರೋಡ ಕರಡ್ಯಾಳ ಗುರುಕುಲ ಕಾಲೇಜ ಗೇಟ ಹತ್ತಿರ ಮಗು ಅಳುವ ಶಬ್ದ ಕೇಳಿ ತಕ್ಷಣ ಫಿರ್ಯಾದಿಯು ಹೋಗಿ ನೋಡಲಾಗಿ ಒಂದು ನವಜಾತ ಹೆಣ್ಣು ಶಿಶುವನ್ನು ಯಾರೋ ಅಪರಿಚೀತ ಮಹಿಳೆ ಅನಾಥವಾಗಿ ತೋರೆದು ಬಿಟ್ಟು ಹೋಗಿರುತ್ತಾರೆ, ಸುತ್ತಲೂ ಹುಡುಕಾಡಲು ಯಾರೂ ಇಲ್ಲದರಿಂದ ಮಗು ಅಳುತ್ತಿರುವದರಿಂದ ಕೂಡಲೆ ಮಗುವಿಗೆ ಭಾಲ್ಕಿ ಡಾ: ಜಾಧವ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಹೋಗಿ ದಾಖಲು ಮಾಡಿ, ನಂತರ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ಸದ್ಯ ಮಗು ಬೀದರ ಸರಕಾರಿ ಆಸ್ಪತ್ರೆ ಐ.ಸಿ.ಯು ನಲ್ಲಿ ಇರುತ್ತದೆ, ಯಾರೋ ಒಬ್ಬ ಹೆಂಗಸು ಹೆಣ್ಣು ಮಗುವಿಗೆ ಜನ್ಮ ನೀಡಿ ಅದರ ಜನನವನ್ನ ಮರೆ ಮಾಚುವ ಉದ್ದೇಶದಿಂದ ಬಿಟ್ಟು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 82/2020, ಕಲಂ. 379 ಐಪಿಸಿ :-
ದಿನಾಂಕ 22-11-2020 ರಂದು 0800 ಗಂಟೆಯಿಂದ 1700 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಜೊನ್ನಿಕೇರಿ ಗ್ರಾಮದಲ್ಲಿರುವ ಸೊಲಾರ ಪ್ಲಾಂಟನಲ್ಲಿರುವ ವಿದ್ಯೂತ ಕಂಬದ 8 ಬ್ಯಾಟರಿಗಳು ಅ.ಕಿ 54,880/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಪ್ರವಿಣ ತಂದೆ ರಾಜಕುಮಾರ ಸದಾನಂದ ಉ: ರಿತಿಸ್ ಮೀರಾ ಇನ್ಫ್ರಾ ಎಲ್.ಎಲ್.ಪಿ ನೇದರ ಜೊನ್ನಿಕೇರಿಯಲ್ಲಿರುವ ಸೊಲಾರ ಪ್ಲಾಂಟನಲ್ಲಿ ಸೆಕ್ಯೂರಿಟಿ ಸುಪರವೈಸರ್ ಸಾ: ಜೊನ್ನಿಕೇರಿ ರವರು ನೀಡಿದ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 29-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.