Police Bhavan Kalaburagi

Police Bhavan Kalaburagi

Tuesday, January 9, 2018

BIDAR DISTRICT DAILY CRIME UPDATE 09-01-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-01-2017

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 02/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 08-01-2018 ರಂದು ಫಿರ್ಯಾದಿ ಪಾರ್ವತಿ ಗಂಡ ದತ್ತಾತ್ರೀ ವರ್ಮಾ ವಯ: 28 ವರ್ಷ, ಜಾತಿ: ಎಸ್ ಸಿ ಹೋಲಿಯಾ, ಸಾ: ಹಾರೂರಗೇರಿ ಬೀದರ ರವರು ಹಾರೂರಗೇರಿ ಕಮಾನದಿಂದ ಗಾಂಧಿಗಂಜ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಅಂದರೆ ಗಾಂಧಿಗಂಜದಿಂದ ಹಾರೂರಗೇರಿ ಕಮಾನ ಕಡೆಗೆ ಆಟೋ ನಂ. ಕೆಎ38/9216 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗಾಂಧೀಗಂಜ ಎರಿಯಾದಲ್ಲಿ ಪಲ್ಟಿ ಮಾಡಿರುತ್ತಾನೆ, ಆಗ ಫಿರ್ಯಾದಿ ಮತ್ತು ಫಿರ್ಯಾದಿಗೆ ಪರಿಚಯ ಇರುವ ಪವನ ಸುತಾರ ಕೂಡಿ ಹೋಗಿ ನೋಡಲು ಆಟೋದಲ್ಲಿದ್ದ ಪ್ರಯಾಣಿಕ ಫಿರ್ಯಾದಿಯವರ ಗಂಡ ದತ್ತಾತ್ರಿ ಇವರು ಇದ್ದರು, ಅವರಿಗೆ ಬಲಗೈ ಮೊಳಕೈ ಮತ್ತು ಮುಂಗೈ ಮದ್ಯದ ಭಾಗದಲ್ಲಿ ಕೈ ಮುರಿದು ಭಾರಿ ಗುಪ್ತಗಾಯ, ಬಲಗಾಲ ಪಾದದ ಮೇಲೆ ರಕ್ತಗಾಯ, ಬಲಗಾಲ ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ, ಜನರು ಸೇರುವದನ್ನು ಕಂಡು ಆರೋಪಿಯು ಪಲ್ಟಿಯಾದ ತನ್ನ ಆಟೋವನ್ನು ಎಬ್ಬಿಸಿಕೊಂಡು ಆಟೋ ಸಮೇತ ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು ತನ್ನ ಗಂಡನಿಗೆ ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.Yadgir District Reported Crimes Updated on 09-01-2018

                                       Yadgir District Reported Crimes
  ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 11/2018  ಕಲಂ 20 (ಬಿ) ಎನ್.ಡಿ.ಪಿಎಸ್ ಎಕ್ಟ  1985;- ದಿನಾಂಕ 08-01-2018 ರಂದು 2-15 ಪಿ.ಎಂ ಕ್ಕೆ ಸ.ತ.ಪಿರ್ಯಾಧಿ ಶ್ರೀ ಅರುಣಕುಮಾರ ಪಿ.ಎಸ್.ಐ (ಕಾ.ಸು) ಯಾದಗಿರ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಒಂದು ವರದಿ , ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ತಾವು ಇಂದು ದಿನಾಂಕ 08-01-2018  ರಂದು 11-00 ಎ.ಎಂ.ಕ್ಕೆ ನಾನು ಠಾಣೆಯಲ್ಲಿದ್ದಾಗ ಖಚಿತ ಬಾತ್ಮೀ ಬಂದಿದ್ದೇನೆಂದರೆ ಎಸ್ ಹೊಸಳ್ಳಿ ಸೀಮಾಂತರದ ಕಟಗಿಶಹಾಪೂರ - ಎಸ್. ಹೊಸಳ್ಳಿ ರೋಡಿನ ಪಕ್ಕದಲ್ಲಿ ಅನಧೀಕೃತವಾಗಿ ಗಾಂಜಾ ಗಿಡಗಳನ್ನು ಬೆಳೆದಿರುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಒಬ್ಬ ಪತ್ರಾಂಕಿತ ಅಧಿಕಾರಿಯವರ ಅವಶ್ಯಕತೆ ಇದ್ದ ಕಾರಣ ಶ್ರೀ ಪ್ರಹ್ಲಾದ ಜೋಷಿ ಸಹಾಯಕ ಉಪನ್ಯಾಸಕರು ಡಿಗ್ರಿ ಕಾಲೇಜ ಯಾದಗಿರಿ ಇವರಿಗೆ ಇಂದು ನೊಟೀಸ್ ನೀಡಿ ಅದರಲ್ಲಿ ಅವರಿಗೆ ದಾಳಿ ಸಮಯದಲ್ಲಿ ಸ್ಥಳದಲ್ಲಿ ಹಾಜರಿರಲು ಕೇಳಿಕೊಂಡಾಗ ಅವರು ಒಪ್ಪಿಕೊಂಡಿದ್ದು ಅವರನ್ನು ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಅಬ್ದುಲ್ಬಾಷಾ ಪಿಸಿ-237 ಹಾಗೂ ಜಗನ್ನಾಥರೆಡ್ಡಿ ಪಿಸಿ-114 ಠಾಣೆಯಿಂದ 11-15 ಎ.ಎಂ.ಕ್ಕೆ ನಮ್ಮ ಠಾಣೆಯ ಸಕರ್ಾರಿ ಜೀಪ್ನಲ್ಲಿ ಹೊರಟು ಬಂದಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಶಶಿಕಾಂತ ದೈಹಿಕ ಶಿಕ್ಷಕರು ಹಾಗೂ ಶಶಿಧರ ಮಟ್ಟಿ ಸಹ ಶಿಕ್ಷಕರು ಇವರಿಗೆ ದಾಳಿಯ ಮಾಹಿತಿ ತಿಳಿಸಿ ಅವರಿಗೆ ದಾಳಿ ಸಮಯದಲ್ಲಿ ಸ್ಥಳದಲ್ಲಿ ಹಾಜರಿದ್ದು ಜಪ್ತಿ ಪಂಚನಾಮೆಗೆ ಪಂಚರಾಗಲು ಕೇಳಿಕೊಂಡಾಗ ಅವರು ಕೂಡಾ ಒಪ್ಪಿಕೊಂಡಾಗ  ಎಲ್ಲರೂ ಕೂಡಿ ನಮ್ಮ ಜೀಪಿನಲ್ಲಿಯೇ ಅಲ್ಲಿಂದ 11-30 ಎ,ಎಮ್ ಕ್ಕೆ ಹೊರಟು ಎಸ್, ಹೊಸಳ್ಳಿ ಮಾರ್ಗವಾಗಿ ಎಸ್ ಹೊಸಳ್ಳಿ ಕಟಗಿ ಶಹಾಪೂರ ಮಾರ್ಗದಲ್ಲಿ ಎಸ್. ಹೊಸಳ್ಳಿ ಸೀಮಾತರದಲ್ಲಿ ರೋಡಿನ ಬದಿಯಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ರೋಡಿನಿಂದ ದಕ್ಷೀಣ ದಿಕ್ಕಿನ ಕಡೆಗೆ ನಡೆದುಕೊಂಡು ಹೋದಾಗ ಉಳ್ಳಾಗಡ್ಡಿ ಹೋಲದಲ್ಲಿ ಒಬ್ಬ ವೈಕ್ತಿಯು ಸದೆ ತೆಗೆಯುತ್ತಿದ್ದನು ನಾವು ಆತನ ಹತ್ತಿರ ಹೋಗುತ್ತಿದ್ದಂತೆ ಅವನು ಹತ್ತಿರ ಹೊಲದಲ್ಲಿ ಮರೆಯಾಗಿ ಓಡಿ ಹೋದನು. ಓಡಿ ಹೋದವನ ಬಗ್ಗೆ ವಿಚಾರಿಲಾಗಿ ಅವನ ಹೆಸರು  ಶರಣಪ್ಪಾ ತಂದೆ ಬಸಪ್ಪಾ ಹಡಪದ ಸಾ: ಎಸ್. ಹೊಸಳ್ಳಿ ಅಂತಾ ಗೊತ್ತಾಗಿರುತ್ತದೆ. ನಾವು ಸದರರಿ ಹೊಲದಲ್ಲಿ ಮರಿಶೀಲಿಸಿ ನೋಡಲಾಗಿ ಉಳ್ಳಗಡ್ಡಿ ಜೊತೆಯಲ್ಲಿ ಗಾಂಜಾದ ಗಿಡಗಳನ್ನು ಅಕ್ರಮವಾಗಿ ಬೆಳೆಯಿಸಿದ್ದನು. ಸದರಿ ಶರಣಪ್ಪನು ಗಾಂಜಾ ಗಿಡಗಳನ್ನು ಬೆಳೆಯಲು ಸಕರ್ಾರದಿಂದ ಪರವಾನಿಗೆ ಪಡೆಯದೇ ಅಕ್ರಮವಾಗಿ ಬೆಳೆಸಿರುತ್ತಾನೆ ಅಂತಾ ಖಚಿತವಾಗಿರುತ್ತದೆ. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿ ಗಾಂಜಾ ಗಿಡಗಳನ್ನು ದೇವರಾಜ ತಂದೆ ಬಸಪ್ಪಾ ಕೊಂಡಾನೋರ ಸಾ: ಬಂದಳ್ಳಿ ಇವರಿಂದ ತೂಕ ಮಾಡಿಸಿದ್ದು, 3 ಕೆ.ಜಿ. ಆಗಿರುತ್ತವೆ. 1 ಕೆ.ಜಿ. ಗಾಂಜಾಕ್ಕೆ ಅ.ಕಿ. ರೂ 1000/-  ದಂತೆ ಒಟ್ಟು 3 ಕೆ.ಜಿ.ಗಾಂಜಾದ  ಅಂದಾಜು ಕಿಮ್ಮತ್ತು ರೂ. 3000/- ಆಗುತ್ತದೆ. ಎಲ್ಲಾ ಗಾಂಜಾವನ್ನು ನಾನು ಒಂದು ಗೋಣಿ ಚೀಲದಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ನಿಶನೆ ಮಾಡಿದ ಚೀಟಿ ಅಂಟಿಸಿ ಜಪ್ತಿ ಮಾಡಿ ನಮ್ಮ ವಶಕ್ಕೆ ತೆಗೆದುಕೊಂಡಿರುತ್ತೇನೆ. ಜಪ್ತಿ ಮಾಡಿಕೊಂಡ ಒಟ್ಟು ಗಾಂಜಾದಲ್ಲಿ 200 ಗ್ರಾಂ ಗಾಂಜಾ ಎಪ್.ಎಸ್.ಎಲ್.ಪರೀಕ್ಷೆಗಾಗಿ ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಶೀಲ್ ಮಾಡಿ ಪಿ.ಎಸ್.ಆರ್ ಅಂತಾ ಶೀಲ್ ಮಾಡಿ ನಮ್ಮ ತಾಬಾಕ್ಕೆ ತೆಗದುಕೊಂಡಿದ್ದು ಇರುತ್ತದೆ. ಸದರಿ ಪಂಚನಾಮೆಯನ್ನು ಇಂದು ದಿನಾಂಕ 08-01-2018 ರಂದು ಮದ್ಯಾಹ್ನ 12-30 ಪಿ.ಎಮ್ ದಿಂದ 1-30 ಪಿ.ಎಮ್ ದವೆರೆಗೆ ಸ್ಥಳದಲ್ಲಿ ಕುಳಿತು ಬರೆದು ಮುಗಿಸಿದ್ದು ಇರುತ್ತದೆ ನಂತರ ಅಲ್ಲಿಂದ ಠಾಣೆಗೆ ಮರಳಿ ಬಂದು ಕೇಸಿನ ಮುದ್ದೆ ಮಾಲಿನೊಂದಿಗೆ ಬಂದು ಸ.ತ.ಪಿರ್ಯಾಧಿದಾರನಾಗಿ ಮುಂದಿನ ಕ್ರಮಕ್ಕಾಗಿ ಈ ವರದಿ ಸಲ್ಲಿಸಿದ್ದು ಇರುತ್ತದೆ ಅಂತಾ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 11/2018 ಕಲಂ  20(ಬಿ) ಎನ್.ಡಿ.ಪಿ.ಎಸ್. ಆಕ್ಟ್-1985 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 04/2018 ಕಲಂ 279 ಐಪಿಸಿ ಸಂಗಡ 192(), 190(2), 196, ಐಎಂವಿ ಆಕ್ಟ್ ;- ದಿನಾಂಕ 08/01/2018  ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ಮಾನ್ಯ ಹರಿಬಾ ಜಮಾದಾರ ಪಿ. ಸಾಹೇಬರು ಸಂಚಾರಿ ಪೊಲೀಸ್ ಠಾಣೆ ಯಾದಗಿರಿರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಹರಿಬಾ ಜಮಾದಾರ ಪಿಐ ಸಂಚಾರಿ ಪೊಲೀಸ ಠಾಣೆ ಯಾದಗಿರಿ ತಮಗೆ ವರದಿ ಮೂಲಕ ಸೂಚಿಸುವುದೆನೆಂದರೆ ಇಂದು ದಿನಾಂಕ: 08/01/2018 ರಂದು ಸಾಯಂಕಾಲ 5 ಪಿ.ಎಂ.ಸುಮಾರಿಗೆ ನಾನು ಯಾದಗಿರಿ ನಗರದ ಸಂಚಾರಿ ಕರ್ತವ್ಯ ಕುರಿತು ನಾನು ಮತ್ತು ಸಿಬ್ಬಂದಿಯವರೊಂದಿಗೆ ಕೂಡಿಕೊಂಡು ಯಾದಗಿರಿ ನಗರದ ಸುಭಾಷ್ ಸರ್ಕಲ್ ಹತ್ತಿರ ಕರ್ತವ್ಯದ ಮೇಲಿರುವಾಗ  ಯಾದಗಿರ ಹಳೆ ಬಸ್ ನಿಲ್ದಾಣದ ಕಡೆಯಿಂದ ಒಂದು ಆಟೋ ಟಂ,ಟಂ ನಂಬರ ಕೆ,,33, -7580 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲು ಆಟೋದಲ್ಲಿ ಸುಮಾರು  06 ಜನರು ಇದ್ದು ತನ್ನ ಪರಮಿಟ್ ಉಲ್ಲಂಘನೆ ಮಾಡಿ ಹೆಚ್ಚಿನ ಜನರನ್ನು ಹಾಕಿಕೊಂಡು ಹೊರಟಿದ್ದು, ಆಟೋ ವಾಹನ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ತಿಮ್ಮಯ್ಯ ತಂದೆ ಮಲ್ಲಿಕಾರ್ಜುನ ಡೊಂಕನೋರ ವಯ;20 ವರ್ಷ, ಜಾ;ಬೇಡರ, ;ಆಟೋ ನಂ.ಕೆಎ-33, -7580 ನೇದ್ದರ ಚಾಲಕ,ಸಾ;ಬಾಚವಾರ ತಾ;ಜಿ;ಯಾದಗಿರಿ ಅಂತಾ ತಿಳಿಸಿದ್ದು, ಸದರಿ ಆಟೋದ ದಾಖಲಾತಿಗಳನ್ನು ಹಾಜರುಪಡಿಸಲು ಚಾಲಕನಿಗೆ ಸೂಚಿಸಿದಾಗ ಆಟೋದ ಇನ್ಸುರೆನ್ಸ್, ವಾಯು ಮಾಲಿನ್ಯ ಪ್ರಮಾನ ಪತ್ರ ಹಾಜರುಪಡಿಸಿರುವುದಿಲ್ಲ. ಸದರಿ ವಾಹನವನ್ನು ಚಾಲಕನ ಸಮೇತ ಮುಂದಿನ ಕ್ರಮ ಕುರಿತು ತಮ್ಮ ಮುಂದೆ  ಹಾಜರು ಪಡಿಸಿದ್ದು ಇರುತ್ತದೆಸದರಿ ಆಟೋ ಟಂ,ಟಂ ನಂ.ಕೆಎ-33, -7580  ನೆದ್ದರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 04/2018 ಕಲಂ 279 ಐಪಿಸಿ ಸಂಗಡ 192(), 190(2), 196 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
                                                                    
 ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 09/2018 ಕಲಂ 504 ಐಪಿಸಿ ಮತ್ತು 3(1)(ಡಿ),3(1)()ಎಸ್.ಸಿ./ಎಸ್.ಟಿ. ಯಾಕ್ಟ 1989 ;- ದಿನಾಂಕ: 08/01/2018 ರಂದು ಮಧ್ಯಾಹ್ನ 2.00 ಪಿ.ಎಂ.ಕ್ಕೆ ಫಿಯರ್ಾದಿ ಶ್ರೀ ಹೊನ್ನಪ್ಪ ತಂ/ ಶಿವಪ್ಪ ಹೊಸ್ಮನಿ ಜಾ|| ಹೊಲೆಯ ಉ||ಸಮಾಜ ಸೇವೆ (ಪ್ರಜ್ಞಾ ಕಿರಿಯ ಪ್ರಾಥಮಿಕ ಶಾಲೆಯ ಕಾರ್ಯದಶರ್ಿ ಸಾ|| ಗಂಗನಾಳ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಒಂದು ದೂರು ಅಜರ್ಿ ಸಲ್ಲಿಸಿದರ ಸಾರಾಂಶವೇನೆಂದರೆ, ಫಿಯರ್ಾದಿಯು 2014-15 ಸಾಲಿನಲ್ಲಿ ಗಂಗನಾಳ ಗ್ರಾಮದಲ್ಲಿ ಪ್ರಜ್ಞಾ ಅನ್ನುವ ಹೆಸರಿನಲ್ಲಿ ಪ್ರಾಥಮಿಕ ಶಾಲೆ ಪ್ರಾರಂಬಿಸಿದ್ದು, 2015-16 ನೇ ಸಾಲಿನಲ್ಲಿ ಆರ್.ಟಿ.ಇ (ಕಡ್ಡಾಯ ಉಚಿತ ಶಿಕ್ಷಣ ಹಕ್ಕು ) ಅಡಿಯಲ್ಲಿ 25% ವಿಧ್ಯಾಥರ್ಿಗಳಿಗೆ ದಾಖಲುಮಾಡಿಕೊಂಡಿದ್ದು, ಸದರ ಶಾಲೆಯಲ್ಲಿ ಧಾಖಲಾದ ಮಕ್ಕಳ ಅನುಗುಣವಾಗಿ ಒಟ್ಟು 1 ಲಕ್ಷದ 50 ಸಾವಿರ ರೂಪಾಯಿ ಬರುತ್ತಿದ್ದು, ಈ ವಿಷಯದಲ್ಲಿ ಫಿಯರ್ಾದಿ 2-3 ಸಲ ಬಿ.ಇ.ಓ ರವರಿಗೆ ಹೋಗಿ ವಿಚಾರಿಸಿದಾಗ ಎಲ್ಲಾ ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಬನ್ನಿರಿ ಎಂದು ಹೇಳಿ ಕಳುಹಿಸಿದ್ದು, ಅದರಂತೆ ಎಲ್ಲಾ ಖಾಸಗಿ ಶಾಲೆಗಳ ಮುಖ್ಯಸ್ಥರು ಚಚರ್ಿಸಿ ದಿನಾಂಕ: 08/01/2018 ರಂದು ಬೇಟಿ ಮಾಡಲು ನಿರ್ಧರಿಸಿದ್ದು, ಅಷ್ಟರಲ್ಲಿ ದಿನಾಂಕ: 06/01/2018  ರಂದು ಬಿ.ಇ.ಓ ಶಹಾಪುರ ಇವರು ತಮ್ಮ ಇಲಾಖೆಯ ಸಿ.ಆರ್.ಸಿ ಪರವತಯ್ಯ ಶಾಸ್ತ್ರಿ ಇವರನ್ನು ಗಂಗಾನಾಳದ ಫಿಯರ್ಾದಿಯ ಶಾಲೆಗೆ ನಿರೀಕ್ಷಣೆಗಾಗಿ ಕಳುಹಿಸಿದ್ದು, ಅದರಂತೆ ಪರವತಯ್ಯ ಶಾಸ್ತ್ರಿಗಳು ಶಾಲೆಗೆ ಬೇಟಿ ಕೊಟ್ಟು ಶಾಲೆಯ ಮುಖ್ಯ ಗುರುಗಳು ಹಣಮಂತಪ್ಪ ಇವರಿಗೆ ನಿಮ್ಮ ಶಾಲೆಗೆ ಆರ್.ಟಿ.ಐ ಅಡಿಯಲ್ಲಿ ಅಂದಾಜು 1.50 ಲಕ್ಷ ರೂಪಾಯಿ ಅನುದಾನ ಮಂಜೂರು ಆಗಿರುತ್ತದೆ 7% ರಂತೆ ಒಟ್ಟು 10,000/- ರೂಪಾಯಿ ಕೊಡುವಂತೆ ನಿಮ್ಮ ಕಾರ್ಯದಶರ್ಿರವರಿಗೆ ತಿಳಿಸಿರಿ ಇಲ್ಲದಿದ್ದರೆ ನಿಮ್ಮ ಶಾಲೆಯಲ್ಲಿ ಮೂಲಭೂತ ಸೌಕರ್ಯ ಇರುವುದಿಲ್ಲ ಎಂದು ನಾನು ವರದಿ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಬಿ.ಈ.ಓ ರವರು ನನ್ನನ್ನು ಕಳುಹಿಸಿರುತ್ತಾರೆ ಅಂತಾ ಹೇಳಿ ಹೋಗಿದ್ದು, ನನಗೆ ವಿಷಯ ಗೊತ್ತಾಗಿ ಫಿಯರ್ಾದಿಯು ಶ್ರೀ ಚನ್ನಬಸ್ಸು ನ್ಯಾಯವಾದಿಗಳು, ಅಸೋಕ ಕೂಡ್ಲೂರು, ರಾಯಪ್ಪ ಸಾಲಿಮನಿ, ಪ್ರೇಮನಾಥ ಶೆಟ್ಟಿ ಮತ್ತು ಅಂಬ್ರೇಶ ಇಟಗಿ ಇವರಿಗೆ ತಿಳಿಸಿದಾಗ ಎಲ್ಲರೂ ಕೂಡಿ ಅಂದೆ ಸಾಯಂಕಾಲ ಬಿ.ಇ.ಓ ರವರಿಗೆ ಬೇಟಿಯಾಗಲು ಬಿ.ಇ.ಓ ಕಛೇರಿಗೆ ಹೋಗುತ್ತಿದಾಗ ಸಾಯಂಕಾಲ ಅಂದಾಜು 5.45 ಪಿ.ಎಂ. ಸುಮಾರಿಗೆ  ದಾರಿ ಮಧ್ಯದಲ್ಲಿ ವಾಲ್ಮಿಖಿ ಚೌಕ ಹತ್ತಿರ ಎದುರಿಗೆ ಬಿ.ಇ.ಓ ರವರು ತಮ್ಮ ಜೀಪಿನಲ್ಲಿ ಬಂದಾಗ ಎಲ್ಲರೂ ಕೂಡಿ ಈ ಬಗ್ಗೆ ವಿಚಾರಿಸಿದಾಗ ಹೌದು ಸಿ.ಆರ್.ಪಿ ರವರಿಗೆ ನಾನೆ ಕಳುಹಿಸಿರುತ್ತೇನೆ. ಅಂತಾ ಹೇಳಿದರು. ಆಗ ಫಿಯರ್ಾದಿಯು ನಾನು ದಲಿತ ವರ್ಗದ ನಿರುದ್ಯೋಗಿ ಪದವಿದರನಿದ್ದೆನೆ ನಮ್ಮ ಸಣ್ಣ ಗ್ರಾಮದಲ್ಲಿ ಸ್ವಂತ ಖಚರ್ಿನಲ್ಲಿ ಬಡ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದೆಂದು ಶಾಲೆ ಪ್ರಾರಂಭಿಸಿದ್ದೇನೆ ಸರಕಾರ ಕೊಡುವ ಅನುಧಾನದಲ್ಲಿ ನಿಮಗೆ 10 ಸಾವಿರ ಏಕೆ ಕೊಡಬೇಕು ಅಂತಾ ಅಂದಾಗ ಬಿ.ಇ.ಓ ರವರು ನೀನು ದಲಿತ ವರ್ಗಕ್ಕೆ ಸೇರಿದರೆ ನನಗೇನು ನಿಮ್ಮಂತ ದಲಿತರನ್ನು ಎಷ್ಟು ಜನರನ್ನು ನೋಡಿಲ್ಲಾ ನಿಮ್ಮಂತ ಕೀಳು ಮಟ್ಟದ ಹೊಲೆಯ ಜಾತಿಯವರಿಗೆ ಬುದ್ದಿ ಇಲ್ಲಾ ಎಂದು ಅವಾಚ್ಯ ಶಬ್ದದಿಂದ ಸಾರ್ವಜನಿಕ ಸ್ಥಳದಲ್ಲಿ ಅವಮಾನವಾಗುವಂತೆ ಬೈದು ನಾನ್ಸೆನ್ಸ ನನಗೇನು ಗೊತ್ತಿಲ್ಲಾ ಕೊಡಲೇ ಬೇಕು ಇಲ್ಲದಿದ್ದರೆ ನಿಮ್ಮಶಾಲೆಗೆ ಅನುದಾನ ರದ್ದು ಮಾಡುತತ್ತೇನೆ ಅಂತಾ ಇತ್ಯಾದಿ ಬೈದಿದ್ದು ಇರುತ್ತದೆ.
     ನಂತರ ವಿಷಯವನ್ನು ಖಾಸಗಿ ಶಾಲೆಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳೊಂದಿಗೆ ಇಂದು ಮುಂಜಾನೆ ಚಚರ್ಿಸಿ ಅರ್ಜ ಕೊಡುತ್ತಿದ್ದೇನೆ, ಆದಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿ ಅಂತಾ ಅಜರ್ಿ ಸಲ್ಲಿಸಿದ್ದು ಸದರ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 09/2018 ಕಲಂ 504 ಐಪಿಸಿ ಮತ್ತು 3(1)(ಆರ್),3(1)(ಎಸ್) ಎಸ್.ಸಿ/ಎಸ್.ಟಿ ಕಾಯ್ದೆ 1989 ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.