ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-07-2021
ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 04/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮೀನಾಕ್ಷಿ ಗಂಡ ಶಂಕರ ಚರಕಪಳ್ಳಿ ವಯ: 33 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ನಾಗೋರಾ, ತಾ: & ಜಿ: ಬೀದರ ರವರ ಗಂಡನಾದ ಶಂಕರ ತಂದೆ ಅರ್ಜುನ ಚರಕಪಳ್ಳಿ ವಯ: 42 ವರ್ಷ ಇತನು ಅತಿಯಾಗಿ ಸರಾಯಿ ಕುಡಿಯುತ್ತಿದ್ದರಿಂದ ಇಲ್ಲದೊಂದು ರೋಗ ಹುಟ್ಟಿಕೊಂಡಿದ್ದು ಹೀಗಿರುವಾಗ ದಿನಾಂಕ 27-07-2021 ರಂದು ರಾತ್ರಿಯು ಸಹ ಬಹಳಷ್ಟು ಸರಾಯಿ ಕುಡಿದು ನಶೆಯಲ್ಲಿ ಮನೆಯ ಪಡಸಾಲಿಯಲ್ಲಿ ಮಲಗಿಕೊಂಡು ದಿನಾಂಕ 28-07-2021 ರಂದು ನಸುಕಿನ ಜಾವ ಅಂದಾಜು 0400 ಗಂಟೆ ಸುಮಾರಿಗೆ ಸ್ವತಃ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ, ಆತನ ಸಾವಿನಲ್ಲಿ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 28/2021, ಕಲಂ. 279, 337, 304(ಎ) ಐಪಿಸಿ ಜೊತೆ 185 ಐಎಂವಿ ಕಾಯ್ದೆ :-
ದಿನಾಂಕ 28-07-2021 ರಂದು ಫಿರ್ಯಾದಿ ದೇವಿಂದ್ರ ತಂದೆ ಬಕ್ಕಪ್ಪಾ ಪ್ರಸಾದ ವಯ: 40 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಚಾಂಗಲೇರಾ ರವರು ತನಗೆ ಪರಿಚಯದವನಾದ ಅಫ್ರೋಜ ತಂದೆ ಬಾಬುಮಿಯ್ಯಾ ಹೊನ್ನಡ್ಡಿ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಮೀನಕೆರಾ ಗ್ರಾಮ ಇಬ್ಬರೂ ಕೂಡಿಕೊಂಡು ತನ್ನ ದ್ವೀಚಕ್ರ ವಾಹನ ನಂ. ಎಪಿ-13/ಎಮ್-4073 ನೇದರ ಮೇಲೆ ಬೀದರ ಆಸ್ಪತ್ರೆಗೆ ಹೋಗಿ ಅಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಮರಳಿ ಮನ್ನಾಏಖೇಳ್ಳಿಗೆ ಬಂದು ನಂತರ ಭಂಗೂರನಲ್ಲಿ ಒಬ್ಬ ವ್ಯಕ್ತಿಗೆ ಭೇಟಿಯಾಗಬೇಕಾಗಿದ್ದರಿಂದ ಇಬ್ಬರೂ ಕೂಡಿಕೊಂಡು ಭಂಗೂರ ಕಡೆಗೆ ಹೋಗುತ್ತಿರÄವಾಗ ಮರಕುಂದಾ ಶಿವಾರದ ರಾ.ಹೆ ನಂ. 65 ರೋಡಿನ ಮೇಲೆ ಹಿಂದಿನಿಂದ ಬರುತ್ತಿದ್ದ ಒಂದು ಕ್ರೂಜರ್ ಜೀಪ್ ನಂ. ಕೆಎ-17/ಬಿ-3988 ನೇದರ ಚಾಲಕನಾದ ಆರೋಪಿ ರಾಜಕುಮಾರ ತಂದೆ ವಿಶ್ವನಾಥ ಕುಂಬಾರ ಸಾ: ಮರಕುಂದಾ ಇತನು ತನ್ನ ವಾಹನವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳದೇ ಅತಿವೇಗ ಹಾಗೂ ನಿಷ್ಕಾಳಜಿತನಿಂದ ಅಂಕುಡೊಂಕಾಗಿ ಚಲಾಯಿಸುತ್ತಾ ಬಂದು ಫಿರ್ಯಾದಿಯ ದ್ವೀಚಕ್ರ ವಾಹನಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿ ಮತ್ತು ಮೋಟರ ಸೈಕಲ್ ಚಲಾಯಿಸುತ್ತಿದ್ದ ಅಫ್ರೋಜ್ ಇಬ್ಬರೂ ಮೋಟರ ಸೈಕಲ್ ಸಮೇತ ರೋಡಿನ ಮೇಲೆ ಬಿದಿದ್ದರಿಂದ ಫಿರ್ಯಾದಿಯ ಹಣೆಗೆ, ಬಲಗಲ್ಲದ ಮೇಲೆ, ಗಟಾಯಿಗೆ, ಎಡಭೂಜಕ್ಕೆ, ತಲೆಯ ಹಿಂದೆ ಮತ್ತು ಎರಡು ಮೊಳಕಾಲುಗಳಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಮತ್ತು ಅಫ್ರೋಜ್ ಇತನು ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಆರೋಪಿಯು ಸರಾಯಿ ಕುಡಿದ ಸ್ಥಿತಿಯಲ್ಲಿದ್ದನು, ನಂತರ ಫಿರ್ಯಾದಿಗೆ ಚಿಕಿತ್ಸೆ ಕುರಿತು 108 ಅಂಬುಲೇನ್ಸ್ ನಲ್ಲಿ ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.