Police Bhavan Kalaburagi

Police Bhavan Kalaburagi

Saturday, October 24, 2020

BIDAR DISTRICT DAILY CRIME UPDATE 24-10-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-10-2020

 

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಕಲಾವತಿ ಗಂಡ ಕಾಶಿನಾಥ ಅರಿಕೆ ವಯ: 30 ವರ್ಷ, ಜಾತಿ: ಟೋಕರಿ ಕೋಳಿ, ಸಾ: ಯಾಕತಪುರ ರವರ ಗಂಡನಾದ ಕಾಶಿನಾಥ ಇತನು ನನಗೆ ಗಂಡು ಮಕ್ಕಳು ಇಲ್ಲಾ ಹಾಗೂ ಹೆಣ್ಣು ಮಕ್ಕಳ ಮದುವೆ ಹೇಗೆ ಮಾಡುವುದು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 23-10-2020 ರಂದು 1000 ಗಂಟೆಯಿಂದ 1100 ಗಂಟೆಯ ಅವಧಿಯಲ್ಲಿ ಯಾಕತಪುರ ಗ್ರಾಮ ಶಿವಾರದ ಕಾಶಿನಾಥ ತಂದೆ ಬಸಪ್ಪಾ ವಾರಿಕ್ ಇವರ ಹೋಲದ ಮಾವಿನ ಮರದ ಟೊಂಗೆಗೆ ಒಂದು ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಯು.ಡಿ.ಆರ್ ನಂ. 20/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 22-10-2020 ರಂದು ಫಿರ್ಯಾದಿ ರಮೇಶ ತಂದೆ ಮಲಿ್ಲಕಾರ್ಜುನ ಕಾಸ್ಲೆ ವಯ: 29 ವರ್ಷ, ಜಾತಿ: ವಡ್ಡರ, ಸಾ: ಸಿಂದಬಂದಗಿ ರವರ ತಾಯಿಯಾದ ಚಂದ್ರಮ್ಮಾ ಗಂಡ ಮಲ್ಲಿಕಾರ್ಜುನ ಕಾಸ್ಲೆ ವಯ: 54 ವರ್ಷ ಇವರು ಹೊಟ್ಟೆ ಬೆನೆ ತಾಳಲಾರದೆ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷದ ಸೇವನ ಮಾಡಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ದಾಖಲು ಮಾಡಿದಾಗ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ತನ್ನ ತಾಯಿಯ ಸಾವಿನ ಬಗ್ಗೆ ನಮಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಖ 23-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 118/2020, ಕಲಂ. 457, 380 ಐಪಿಸಿ :-

ದಿನಾಂಕ 22-10-2020 ರಂದು 2200 ಗಂಟೆಯಿಂದ ದಿನಾಂಕ 23-10-2020 ರಂದು 1030 ಗಂಟೆಯ ಅವಧಿಯಲ್ಲಿ ಬೀದರ ಖಾದಿ ಭಂಡಾರ ಕಾಂಪ್ಲೆಕ್ಸನಲ್ಲಿರುವ ಫಿರ್ಯಾದಿ ಮಂಜುನಾಥ ತಂದೆ ಸಿದ್ದಪ್ಪ ಶೀಲವಂತ ವಯ: 39 ವರ್ಷ, ಜಾತಿ: ಅಕ್ಕಸಾಲಿಗ, ಸಾ: ಕೊನಮೆಳಕುಂದಾ, ಸದ್ಯ: ಟೀಚರ್ಸ ಕಾಲೋನಿ ಗುಂಪಾ ರೋಡ ಬೀದರ ರವರ ಬಂಗಾರದ ಅಂಗಡಿಯ ಮೇಲಿನ ತಗಡ ಜರುಗಿಸಿ, ತಗಡದ ಕೆಳಗೆ ಇರುವ ರೂಫ್ ಸೀಲಿಂಗ್ ಒಡೆದು ಅಂಗಡಿಯಲ್ಲಿ ಪ್ರವೇಶಿಸಿ ಅಂಗಡಿಯಲ್ಲಿಟ್ಟಿರುವ ಸುಮಾರು 60 ಗ್ರಾಂ ತೂಕದ 450 ಮೂಗಿನ ಸುಪಾನಿಗಳನ್ನು .ಕಿ 2,70,000/- ರೂ. ಹಾಗೂ ಅಂಗಡಿಯಲ್ಲಿಯ ಸಿಸಿ ಕ್ಯಾಮರಾದ ಡಿ.ವಿ.ಆರ. ಬಾಕ್ಸ .ಕಿ. 6500/- ರೂ. ಹಾಗು ನಗದು ಹಣ 5400/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 161/2020, ಕಲಂ. 379 ಐಪಿಸಿ :-

ದಿನಾಂಕ 06-10-2020 ರಂದು 2300 ಗಂಟೆಯಿಂದ ದಿನಾಂಕ 07-10-2020 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಬಾಬುರಾವ್ ತಂದೆ ವಿಠಲರಾವ್ ಬಹಿರೆ ವಯ: 50 ವರ್ಷ, ಜಾತಿ: ಮರಾಠಾ, ಸಾ: ಉಡುಮನಳ್ಳಿ, ತಾ: ಚಿಟಗುಪ್ಪಾ ರವರು ತನ್ನ ಬಜಾಜ ಪಲ್ಸರ್ ದ್ವೀಚಕ್ರ ವಾಹನ ಸಂ. ಕೆಎ-38/ವಿ-0146, ಇಂಜಿನ್ ನಂ. DHYWJK58079, ಚೆಸ್ಸಿಸ್ ನಂ. MD2A11CYOJWK0919, ಮಾಡಲ್ 2018, ಬಣ್ಣ ಕಪ್ಪು ಬಣ್ಣ, .ಕಿ 65,000/- ರೂ. ನೇದನ್ನು ಫಿರ್ಯಾದಿಯವರ ಮಗನ ಗೆಳೆಯನಾದ ಬೀದರನ ಸಿದ್ರಾಮಯ್ಯಾ ಲೇಔಟ್ ನಿವಾಸಿ ಅವಂತ ತಂದೆ ರಾಜಕುಮಾರ ರಾಂಪುರೆ ರವರ ಮನೆಯ ಮೆನ್ ಗೇಟ್ ಎದುರುಗಡೆ ಸದರಿ ವಾಹನವನ್ನು ಪಾರ್ಕ ಮಾಡಿ ಬೀಗ ಹಾಕಿ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 144/2020, ಕಲಂ. 279, 337, 338 ಐಪಿಸಿ :-

ದಿನಾಂಕ 23-10-2020 ರಂದು ಫಿರ್ಯಾದಿ ಅರುಣಕುಮಾರ ತಂದೆ ಅಶೋಕ ದೂಳ್ಳಾ, ವಯ: 21 ವರ್ಷ, ಜಾತಿ: ಲಿಂಗಾಯತ, ಸಾ: ಕಂದಗೊಳ ರವರ ತಂದೆಯವರಾದ ಅಶೋಕ ತಂದೆ ಮಾಣಿಕಪ್ಪಾ ದೂಳ್ಳಾ, ವಯ: 50 ವರ್ಷ ರವರು ತಮ್ಮ ಸಂಬಂಧಿಕರ ಹೊಲದಲ್ಲಿರುವ ಭವಾನಿ ಮಂದಿರಕ್ಕೆ ದರ್ಶನ ಕುರಿತು ಹೋಗಿ ಬರುತ್ತೇನೆಂದು ಹೇಳಿ ಮೋಟರ್ ಸೈಕಲ್ ನಂ. ಕೆ.-39/ಜೆ-2770 ನೇದರ ಮೇಲೆಮ್ಮೂರಿನಿಂದ ಹಣಕುಣಿಗೆ ಹೋಗುವಾಗ ಚಿಟಗುಪ್ಪಾ-ಇಟಗಾ ರೋಡ ಇಟಗಾ ಶಿವಾರದ ಮಡಯ್ಯಾ ಸ್ವಾಮಿ ರವರ ಹೋಲದ ಹತ್ತಿರ ಫಿರ್ಯಾದಿಯವರ ತಂದೆಯವರು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿ ಮಂಗವೊಂದಕ್ಕೆ ಡಿಕ್ಕಿ ಮಾಡಿ ಅವರೂ ಸಹ ಬಿದ್ದಿದ್ದು, ಸದರಿ ಅಪಘಾತದಿಂದ ಅವರ ಬಲಗಡೆ ತಲೆಗೆ ಭಾರಿ ರಕ್ತಗಾಯ, ಬಲಗಡೆ ಹಣೆಗೆ, ಬಲಗಣ್ಣಿನ ಹತ್ತಿರ, ಬಲಮೊಳಕೈಗೆ, ಬಲಮೋಳಕಾಲಿಗೆ ತರಚಿದ ರಕ್ತಗಾಯ, ಬಲಗಾಲ ಹಿಮ್ಮಡಿಗೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಬೆಹೋಷ ಆಗಿರುತ್ತಾರೆ, ನಂತರ ದಾರಿ ಹೋಕರು ಅವರನ್ನು ಚಿಕಿತ್ಸೆ ಕುರಿತು ಚಿಟಗುಪ್ಪ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 129/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 23-10-2020 ರಂದು ನಿಂಬೂರ ಗ್ರಾಮ ಶಿವಾರ ನಿಂಬೂರ ಸರಕಾರಿ ಪ್ರೌಡ ಶಾಲೆಯ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ನಿಂಗಪ್ಪಾ ಮಣ್ಣೂರ ಪಿ.ಎಸ್.(ಕಾಸು) ಹಳ್ಳಿಖೇಡ(ಬಿ) ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಯವರೊಡನೆ ನಿಂಬೂರ ಗ್ರಾಮ ಶಿವಾರ ನಿಂಬೂರ ಸರಕಾರಿ ಪ್ರೌಡ ಶಾಲೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ನಿಂಬೂರ ಸರಕಾರಿ ಪ್ರೌಡ ಶಾಲೆಯ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ ಆರೋಪಿತರಾದ ಮಾಣಿಕರಾವ ತಂದೆ ಶಂಕ್ರೇಪ್ಪಾ ಧಮ್ಮೂರ ಇತನು ಹಾಗೂ ಇನ್ನು 8 ಜನ ಎಲ್ಲರೂ ಸಾ: ನಿಂಬೂರ ಗ್ರಾಮ ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ, ಖಚಿತ ಪಡಿಸಿಕೊಂಡು ಸದರಿಯವರ ಮೇಲೆ ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ಸಂಬಂಧಪಟ್ಟ 52 ಸ್ಪಿಟ್ ಎಲೆಗಳು ಮತ್ತು ನಗದು ಹಣ 12,620/- ರೂ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.