ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-06-2021
ಹುಲಸೂರ ಪೊಲೀಸ ಠಾಣೆ ಯು.ಡಿ.ಆರ್ ಸಂ. 03/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಅನಸೂಯಬಾಯಿ ಗಂಡ ರಾಮ ಪಂಡರಪುರೆ, ವಯ: 40 ವರ್ಷ, ಜಾತಿ: ಮರಾಠಾ, ಸಾ: ಹಾಲಹಳ್ಳಿ, ತಾ: ಹುಲಸೂರ ರವರ ಗಂಡನಾದ ರಾಮ ತಂದೆ ವಿನಾಯಕರಾವ ವಾಮನರಾವ ಪಂಡರಪುರೆ, ವಯ: 40 ವರ್ಷ, ಜಾತಿ: ಮರಾಠಾ, ಸಾ: ಹಾಲಹಳ್ಳಿ, ತಾ: ಹುಲಸೂರ ರವರು ಸ್ವಲ್ಪ ಮಾನಸೀಕ ಅಸ್ವಶ್ಥತೆಯಿಂದ ಬಳಲುತ್ತಿದ್ದರು, ಹೀಗಿರುವಾಗ ದಿನಾಂಕ 29-05-2021 ರಂದು ಹೊಲಕ್ಕೆ ಹೋದವರು ಮರಳಿ ಮನೆಗೆ ಬಾರದೇ ದಿನಾಂಕ 30-05-2021 ರಂದು 220 ಗಂಟೆಯಿಂದ ದಿನಾಂಕ 31-05-2021 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಹುಲಸೂರ-ಹಾಲಹಳ್ಳಿ ರಸ್ತೆಯ ಜೈನುಲ್ಲಾ ದರ್ಗಾದ ಹತ್ತಿರದ ಅರಳಿ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲಿಸ್ ಠಾಣೆ, ಬೀದರ ಯು.ಡಿ.ಆರ್ ಸಂ. 20/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಾರುತೆಪ್ಪಾ ತಂದೆ ಭೀಮರಾವ ಭೋಜಪ್ಪನೊರ, ವಯ: 64 ವರ್ಷ, ಜಾತಿ: ಲಿಂಗಾಯತ, ಸಾ: ಚಿಟ್ಟಾವಾಡಿ ಗ್ರಾಮ, ಬೀದರ ರವರು ತನ್ನ ಮಗನಾದ ಸತೀಶ ತಂದೆ ಮಾರುತೆಪ್ಪಾ ಭೋಜಪ್ಪನೊರ, ವಯ: 26 ವರ್ಷ, ಜಾತಿ: ಲಿಂಗಾಯತ, ಇಬ್ಬರು ಕೂಡಿ ತಮ್ಮ ಗ್ರಾಮದಲ್ಲಿ ಚಹಾ ಹೋಟೆಲ್ ಮತ್ತು ಕಿರಾಣಾ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಸತಿಷ ಇತನು ಸರಾಯಿ ಕುಡಿಯು ಚಟದವನಿದದು, ಈಗ ಸದ್ಯ ಲಾಕಡೌನ್ ಇದ್ದ ಪ್ರಯುಕ್ತ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ ಇದರಿಂದಾಗಿ ಸತಿಷ ಇತನು ದಿನಾಲು ಸರಾಯಿ ಕುಡಿಯುತ್ತಿದ್ದನು, ಹೀಗಿರುವಲ್ಲಿ ಸತಿಷ ಇತನು ವ್ಯಾಪಾರ ಸರಿಯಾಗಿ ಆಗದೇ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 31-05-2021 ರಂದು ಅಂದಾಜು 0930 ಗಂಟೆಯ ಸಮಯಕ್ಕೆ ಚಿಟ್ಟಾ ಶಿವಾರದಲ್ಲಿರುವ ಅಹ್ಮದಸಾಬ ಇವರ ಹೊಲದಲ್ಲಿನ ಮಾವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ತನ್ನ ಮಗನ ಸಾವಿನ ಬಗ್ಗೆ ಯಾವುದೇ ದೂರ ಅಥವಾ ಸಂಸಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 49/2021, ಕಲಂ. 279, 304(ಎ) ಐಪಿಸಿ :-
ದಿನಾಂಕ 31-05-2021 ರಂದು ಫಿರ್ಯಾದಿ ಸರಸ್ವತಿ ಗಂಡ ಚನ್ನಮಲ್ಲಯ್ಯಾ ಸ್ವಾಮಿ ಸಾ: ರಾಜೋಳ ಗ್ರಾಮ, ತಾ: ಬಸವಕಲ್ಯಾಣ, ಜಿ: ಬೀದರ ರವರ ಮಗನಾದ ಶರಣಯ್ಯಾ ತಂದೆ ಚನ್ನಮಲ್ಲಯ್ಯಾ ಸ್ವಾಮಿ ವಯ: 34 ವರ್ಷ, ಜಾತಿ: ಸ್ವಾಮಿ, ಸಾ: ರಾಜೋಳ ಗ್ರಾಮ, ತಾ: ಬಸವಕಲ್ಯಾಣ, ಜಿ: ಬೀದರ ಇತನು ಬೇಳಕೆರಾ ಗ್ರಾಮಕ್ಕೆ ಹೋಗಿ ತನ್ನ ಹೆಂಡತಿಗೆ ಕರೆದುಕೊಂಡು ಬರುವುದಾಗಿ ಹೇಳಿ ಬಜಾಜ ಮೊಟರ ಸೈಕಲ್ ನಂ. ಎಪಿ-28/ಎ.ಡಬ್ಲು-0025 ನೇದರ ಮೇಲೆ ಕಂದಗೂಳ ಕಡೆಯಿಂದ ಶಮತಾಬಾದ ಕಡೆಗೆ ಹೊಗುತ್ತಿರುವಾಗ ಕಂದಗೂಳ-ಶಮತಾಬಾದ ರೋಡಿನ ಕಾರ್ನರ್ ಹತ್ತಿರ ತನ್ನ ಮೊಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ವಾಹನ ಕಂಟ್ರೋಲ್ ಮಾಡದೇ ರೋಡಿನ ಪಕ್ಕದಲ್ಲಿ ತಗ್ಗಿನಲ್ಲಿದ್ದ ಗಿಡಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಆತನ ಎಡತಲೆ ಒಡೆದು ಭಾರಿ ರಕ್ತಗಾಯ ಮತ್ತು ಎಡ ಹೆಬ್ಬೆರಳು ಕಡಿದು ಭಾರಿ ರಕ್ತಗಾಯ ಹಾಗೂ ಮೈಎಲ್ಲಾ ತರಚಿದ ರಕ್ತಗಾಯಗಳಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು 108 ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಮನ್ನಾಎಖೇಳ್ಳಿಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.