ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-08-2021
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 55/2021, ಕಲಂ. 416, 418, 419, 420, 12(ಬಿ) ಜೊತೆ 149 ಐಪಿಸಿ :-
ಮಿರ್ಜಾಪುರ ತಾಜ ಗ್ರಾಮದ ಸರ್ವೆ ನಂ. 39/1 ನೇದರಲ್ಲಿ ಫಿರ್ಯಾದಿ ರೇವಮ್ಮಾ ಗಂಡ ಸಂಗ್ರಾಮಪ್ಪಾ ವಯ: 75 ವರ್ಷ, ಸಾ: ಮಿರ್ಜಾಪುರ ತಾಜ ಗ್ರಾಮ, ತಾ: & ಜಿ: ಬೀದರ ರವರ ಹೆಸರಿನ ಮೇಲೆ ಭೂಮಿ ಇರುತ್ತದೆ, ಆರೋಪಿ 1) ನಂದಿನಿ ಗಂಡ ವಿಶ್ವನಾಥ ಇವಳು ಫಿರ್ಯಾದಿಯವರ ಮಗ ಭಕ್ತರಾಜ ಇತನಿಗೆ ಪರಿZÀಯ ಇರುತ್ತಾಳೆ, ಭಕ್ತರಾಜ ಇವನು ದಿನಾಂಕ 15-09-2020 ರಂದು ಮೃತಪಟ್ಟಿರುತ್ತಾನೆ, ನಂದಿನಿ ಇವಳು ಫಿರ್ಯಾದಿಗೆ ತಿಳಿಸಿದ್ದೆನೆಂದರೆ ನಿಮ್ಮ ಹೆಸರಿನ ಜಾಗೆಯಲ್ಲಿ ನನ್ನದೊಂದು ಪ್ಲಾಟ್ ಇರುತ್ತದೆ ಎಂದು ತಿಳಿಸಿದ ಮೇರೆಗೆ ಸದರಿ ವಿಷಯವನ್ನು ಫಿರ್ಯಾದಿಯು ತನ್ನ ಮಗ ಶಿವರಾಜ ಇತನಿಗೆ ತಿಳಿಸಿದ್ದು, ಆಗ ನನ್ನ ಮಗ ಶಿವರಾಜ ಇವನು ದಾಖಲಾತಿಗಳು ಸಂಗ್ರಹಿಸಿದಾಗ ಗೋತ್ತಾಗಿದ್ದೆನಂದರೆ ಬೀದರ ಉಪ ನೋಂದಣಿ ಕಛೇರಿಯ ದಸ್ತಾವೇಜ ಸಂ. 3036/2020-21 ನೇದರಲ್ಲಿ ಪ್ಲಾಟ ನಂ. 02 ಸರ್ವೆ ನಂ. 39/1 ರಲ್ಲಿಯ ಪ್ಲಾಟ್ ಫಿರ್ಯಾದಿಗೆ ಸಂಬಂಧಿಸಿದ್ದು ಇದ್ದು, ಸದರಿ ಪ್ಲಾಟನ್ನು ನಂದಿನಿ ಇವಳು ದಿನಾಂಕ 26-08-2020 ರಂದು ಫಿರ್ಯಾಧಿಗೆ ಮೊಸ ಮಾಡಿ ರಜಿಸ್ಟ್ರಿ ಮಾಡಿಕೊಂಡಿದ್ದು ಇರುತ್ತದೆ, ದಿನಾಂಕ 26-08-2020 ರಂದು ಭಕ್ತರಾಜ ಇವನು ಜಿವಂತ ವಿದ್ದಾಗ ನಂದಿನಿ ಇವಳು ಬಿ.ಪಿ.ಎಲ್ ರ್ಯಾಷನ್ ಕಾರ್ಡನಲ್ಲಿ ನಿಮ್ಮ ಹೆಸರು ಸೇರಿಸುವುದು ಇದೆ ಎಂದು ಹೇಳಿ ಕರೆದುಕೊಂಡು ಬೀದರ ಜಿಲ್ಲಾಧಿಕಾರಿಗಳ ಕಛೇರಿಗೆ ಹೋದಾಗ ಅಲ್ಲಿ ಆರೋಪಿ 2) ಬಶಿರೋದ್ದಿನ ತಂದೆ ಇಬ್ರಾಹಿಂ ಸಾ: ಗೋಲೆಖಾನಾ ಬೀದರ ಆರೋಪಿ 3) ಸೂರ್ಯಕಾಂತ ತಂದೆ ದತ್ತಾತ್ರಿ ಇವರು ಅಲ್ಲೆ ಹಾಜರಿದ್ದು ಫಿರ್ಯಾದಿಗೆ ತಿಳಿಸಿದ್ದೆನಂದರೆ ನಿಮ್ಮ ಹೆಸರು ಬಿ.ಪಿ.ಎಲ್ ರೇಷನ್ ಕಾರ್ಡನಲ್ಲಿ ಸೇರಿಸುವುದು ಇದೆ ನಿಮ್ಮ ಹೆಬ್ಬರಳು ಹಾಗೂ ಸಹಿ ಅವಶ್ಯಕತೆ ಇರುತ್ತದೆ ಎಂದು ತಿಳಿಸಿರುತ್ತಾರೆ, ನಂತರ ಆರೋಪಿ 4) ಶಿವಕುಮಾರ ಕಂಟಿ ಇತನು ಡೀಡ್ ರೈಟರ್ ಅದೇ ಕಛೇರಿಯಲ್ಲಿ ಇದ್ದು ಅವನು ಫಿರ್ಯಾದಿಗೆ ನಿಮ್ಮ ಭಾವಚಿತ್ರ ಬಿ.ಪಿ.ಎಲ್ ರ್ಯಾಷನ್ ಕಾರ್ಡಿಗೆ ಅವಶ್ಯಕತೆ ಇದೆ ಇಂದು ಹೇಳಿ ಫಿರ್ಯಾದಿಗೆ ಒಂದು ಕಂಪ್ಯುಟರ್ ಮುಂದೆ ಕೂಡಿಸಿ ಫಿರ್ಯಾದಿಯವರ ಭಾವಚಿತ್ರ ತೆಗೆದು ಹೆಬ್ಬರಳು ªÀÄತ್ತು ಸಹಿ ಮಾಡಿಸಿಕೊಂಡಿರುತ್ತಾನೆ ಹಾಗೂ ಆರೋಪಿ 5) ಸೈಯದ ಮೀರ ಮುಜಾಮಿಲ್ ಇವನು ಈ ಎಲ್ಲಾ ಕೃತ್ಯದ ರೂಪ ಸಂಚಿಸುತ್ತಾನೆಂದು, ಸದರಿ ಆರೋಪಿತರೆಲ್ಲರೂ ಈ ರೀತಿ ಸದರಿ ಪ್ಲಾಟ್ ನಂ. 2 ನೇದನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 17-08-2021 ರಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 68/2021, ಕಲಂ. 279, 338 ಐಪಿಸಿ ಜೋತೆ 187 ಮೋಟಾರ್ ವಾಹನ ಕಾಯ್ದೆ :-
ದಿನಾಂಕ 16-08-2021
ರಂದು ಫಿರ್ಯಾದಿ
ಮಹಾಂತೇಶ ತಂದೆ ಉಮಾಕಾಂತ ರಗಟೆ, ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಮಂಠಾಳ, ತಾ: ಬಸವಕಲ್ಯಾಣ ರವರ ಅಣ್ಣನಾದ ವಿನಾಯಕ ಇವರು ತನ್ನ ಮೋಟಾರ ಸೈಕಲ ನಂ. ಕೆಎ-39/ಹೆಚ್-5435 ನೇದರ ಮೇಲೆ ಬಸವಕಲ್ಯಾಣ ಕಡೆಯಿಂದ ಬಂಗ್ಲಾ ಕಡೆಗೆ ಚಲಾಯಿಸಿಕೊಂಡು ಬರುವಾಗ ಬಂಗ್ಲಾ ಹೊಳಕುಂದೆ ಪೆಟ್ರೋಲ್ ಬಂಕ್ ಹತ್ತಿರದ ಆಟೋ ನಗರ ಒಳಗಿನ ಕಚ್ಚಾ ರೋಡಿನಿಂದ ಲಾರಿ ನಂ.
ಕೆಎ-56/4980 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಯಾವುದೇ ಮುನ್ಸೂಚನೆ ನೀಡದೇ ಹಾಗೂ ಇಂಡಿಕೇಟರ್ ಹಾಕದೇ ತನ್ನ ಲಾರಿಯನ್ನು ಬಸವಕಲ್ಯಾಣ ಬಂಗ್ಲಾ ಮೇನ್ ರೋಡಿನ ಮೇಲೆ ಚಲಾಯಿಸಿಕೊಂಡು
ಬಂದು ಅಣ್ಣನ ಮೋಟಾರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಅಣ್ಣನ ಮೂಗಿಗೆ, ಬಾಯಿಗೆ, ಎರಡು ಕಪಾಳಕ್ಕೆ ರಕ್ತಗಾಯ ಹಾಗೂ ಎಡಗೈ ಮತ್ತು ಎಡಗಾಲಿಗೆ ಗುಪ್ತಗಾಯವಾಗಿರುತ್ತದೆ,
ಅಪಘಾತದ ನಂತರ ಆರೋಪಿಯು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಅಣ್ಣನಿಗೆ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 17-08-2021 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.