Police Bhavan Kalaburagi

Police Bhavan Kalaburagi

Thursday, April 23, 2020

BIDAR DISTRICT DAILY CRIME UPDATE 23-04-2020


                      
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-04-2020

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 46/2020 ಕಲಂ 273, 284 ಐಪಿಸಿ ಮತ್ತು 32, 34 ಕೆ.ಇ. ಕಾಯ್ದೆ ;-

ದಿನಾಂಕ: 22/04/2020 0900 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಅಂಬೆಸಾಂಗವಿ ಕ್ರಾಸ ಹತ್ತಿರ ನಾಲ್ಕು ಜನ ವ್ಯಕ್ತಿಗಳು   ಒಂದು  ಪ್ಲಾಸ್ಟೀಕ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ (ಕಲಬರಕೆ ಸರಾಯಿ) ಮಾರಾಟ ಮಾಡಲು ಸಾಗಾಣಿಕೆ ಮಾಡಿಕೊಂಡು ಹೊಗುವ ಸಲುವಾಗಿ ಅಂಬೆಸಾಂಗವಿ ಕ್ರಾಸ ಹತ್ತಿರ ನಿಂತಿದ್ದಾರೆ  ಅಂತ ಖಚಿತ ಮಾಹಿತಿ ಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿದಾಗ ಇಬ್ಬರು ಪೊಲೀಸರಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ  ಉಳಿದ ವರನ್ನು ಹಿಡಿದು ವಿಚಾರಿಸಲು ಅವರು ತನ್ನ ಹೆಸರು 1)  ಮಹೇಶ ತಂದೆ ಗೊವಿಂದ ಸುರ್ಯವಂಶಿ ವಯ 32 ವರ್ಷ ಜಾತಿ ಎಸ ಸಿ ಮಾದಿಗ , ಪಂಚರ ಮೇಕಾನಿಕ  ಸಾ/ ಲಂಜವಾಡ  2) ಮಲ್ಲಿಕಾರ್ಜುನ ತಂದೆ ಶಿವರಾಜ ಭಾರಂಭಾಯಿ ವಯ 32 ಜಾತಿ ಕಬ್ಬುಲಿಗ , ಕೂಲಿ ಸಾ/ ಸಿಧ್ಧಾರ್ಥನಗರ ಭಾಲ್ಕಿ ಅಂತ ತಿಳಿಸಿದನು ನಂತರ ಓಡಿ ಹೊದ ವ್ಯಕ್ತಿಗಳ ಹೆಸರು ವಿಳಾಸ ಮಹೇಶ ಈತನಿಗೆ ವಿಚಾರಿಸಲು ಅವರು 1) ಸಂತೊಷ ತಂದೆ ಕಾಶಿರಾಮ ಚವ್ಹಾಣ ವಯ 35 ಸಾ/ ಬೀರಿ(ಬಿ) ತಾಂಡಾ 2) ಸುರೇಶ ತಂದೆ ಕಾಶಿರಾಮ ಚವ್ಹಾಣ ಸಾ/ ಬೀರಿ (ಬಿ) ತಾಂಡಾ ಅಂತ ತಿಳಿಸಿರುತ್ತಾರೆ ನಂತರ   ಅವರ  ಹತ್ತಿರ ಇದ್ದ    20  ಲೀಟರದಷ್ಟು  ಕಳ್ಳಭಟ್ಟಿ ಸರಾಯಿ ಇದ್ದು ಪ್ರತಿಯೊಂದು ಲೀಟರನ ಸರಾಯಿ ಅ;ಕಿ; 100/- ರೂ ಹೀಗೆ ಒಟ್ಟು 20 ಲೀಟರ ಸರಾಯಿ ಅ;ಕಿ, 2000/- ರೂ ಬೇಲೆ ಬಾಳುವದು ಇರುತ್ತದೆ. ನಂತರ  ಮಹೇಶ ತಂದೆ ಗೊವಿಂದ ಇತನ ಅಂಗಜಡತಿ ಮಾಡಿ ನೋಡಲಾಗಿ ಆತನ ಶೇರ್ಟಿನ ಜೇಬಿನಲ್ಲಿ 200/- ರೂ ನಗದು ಹಣ, ಇರುತ್ತವೆ  ಮಲ್ಲಿಕಾರ್ಜುನ ತಂದೆ ಶಿವರಾಜ  ಇತನ ಹತ್ತಿರ  ಆತನ ಶೇರ್ಟಿನ ಜೇಬಿನಲ್ಲಿ 200/- ರೂ ನಗದು ಹಣ, ಇರುತ್ತವೆ ಹೀಗೆ  ಎಲ್ಲಾ  ಒಟ್ಟು 2,400/- ರೂ ಬೆಲೆ ಬಾಳುವ, ಕಳ್ಳಭಟ್ಟಿ,ಕಲಬರಕೆ, ವಿಷಪುರಿತ, ಸರಾಯಿ, ನಗದು ಹಣ ಆರೋಪಿತರ ವಶದಿಂದ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ಭಾಲ್ಕಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 47/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 22/04/2020 ರಂದು 1530 ಗಂಟೆಗೆ   ಪಿ.ಎಸ್.ಐ  ಪೊಲೀಸ್ ಠಾಣೆಯಲ್ಲಿರುವಾಗ   ಖಚೀತ ಮಾಹಿತಿ ಬಂದಿದ್ದೇನೆಂಧರೆ, ಭಾತಂಬ್ರಾ  ಗ್ರಾಮದ ವಾಮನರಾವ ಮರಾಠಾ ರವರ ಹೊಲದ ಹತ್ತಿರ ಬೇವಿನ ಮರದ ಕೆಳಗೆ ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ   ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 1615 ಗಂಟೆಗೆ ದಾಳಿ ಮಾಡಿ   1) ರಾಜಕುಮಾರ ತಂದೆ ಬಕ್ಕಂಪ್ರಭು ಸೊನಾರ ವಯ 39 ವರ್ಷ ಜಾ; ಪಾಂಚಾಳ,; ಒಕ್ಕಲುತನ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗೂ ನಗದು ಹಣ 1600 ರೂ, ಇದ್ದು 2) ಸತೀಷ ತಂದೆ ಜಗನ್ನಾಥ ಬಿರಾದಾರ ವಯ 40 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗು ನಗದು  ಹಣ 1100/- ರೂ ಇದ್ದು 3)  ಸಂಜೀವಕುಮಾರ ತಂದೆ ಶಿವರಾಜ ಚಿದ್ರೆ ವಯ 38 ವರ್ಷ ಜಾ; ಲಿಂಗಾಯತ ಉ; ಒಕ್ಕಲುತನ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗೂ ನಗದು ಹಣ 1300/- ರೂ ಇದ್ದು 4) ಶಿವಕುಮಾರ ತಂದೆ ಸಿದ್ರಾಮಪ್ಪಾ ನಾರಾ ವಯ 28 ವರ್ಷ ಜಾ; ಲಿಂಗಾಯತ ಉ; ಕೆ.ಇ.ಬಿ. ಆಪರೇಟರ ಸಾ; ಭಾತಂಬ್ರಾ  ಇವರ ಕೈಯಲ್ಲಿ 03 ಇಸ್ಪೀಟ ಎಲೆಗಳು ಹಾಗು ನಗದು ಹಣ 1600 ರೂ ಇದ್ದು, 5) ಮಲ್ಲಿಕಾಜರ್ುನ ತಂದೆ ಘಾಳೆಪ್ಪಾ ಚಿಲ್ಲಗರ್ೆ ವಯ 28 ವರ್ಷ ಜಾ; ಲಿಂಗಾಯತ ಉ; ಕೆ.ಇ.ಬಿ. ಹೇಲಪರ ಸಾ; ಭಾತಂಬ್ರಾ. ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ನಗೆದು ಹಣ 1400/- ರೂ, 6) ಶಿವದಾಸ ತಂದೆ ಶಂಕ್ರೆಪ್ಪಾ ಮೇತ್ರೆ ವಯ 42 ವರ್ಷ ಜಾ; ಎಸ್.ಟಿ. ಗೊಂಡಾ ಉ; ಒಕ್ಕಲುತನ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು ಹಾಗೂ ನಗದು ಹಣ 1500/- ರೂ ಇದ್ದು 7) ನಾಗರಾಜ ತಂದೆ ಮಾಣಿಕರಾವ ಮೇತ್ರೆ ವಯ 27 ವರ್ಷ ಜಾ; ಎಸ್.ಟಿ. ಗೊಂಡಾ ಉ; ಒಕ್ಕಲುತನ ಸಾ; ಭಾತಂಬ್ರಾ , ಇವರ ಕೈಯಲ್ಲಿ 03 ಇಸ್ಪೀಟ ಎಲೇಗಳು, ಹಾಗೂ ನಗದು ಹಣ 700/- ರೂ ಇದ್ದು 8) ಕುಶಾಲ ತಂದೆ ಪಂಡಿತರಾವ ಕುಟಮಲಗೆ ವಯ 31 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಭಾತಂಬ್ರಾ ಇವರ ಕೈಯಲ್ಲಿ 03 ಇಸ್ಟೀಟ ಎಲೇಗಳು ಹಾಗು ನಗದು ಹಣ 800/- ರೂ ಇದ್ದು  ಹೀಗೆ ಎಲ್ಲರ ಕೈಯಲ್ಲಿದ್ದ ಒಟ್ಟು  24 ಇಸ್ಪೀಟ ಎಲೆಗಳು ಹಾಗೂ ನಗದು ಹಣ 10000/- ರೂ ಇದ್ದು, ಹಾಗೂ ಎಲ್ಲರ ಮಧ್ಯ ನಗದು ಹಣ 2500/- ರೂ ಹಾಗೂ 28 ಇಸ್ಪೀಟ  ಎಲೆಗಳು ಇದ್ದು ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು 12,500/- ರೂ ನಗದು ಹಣ  ಹಾಗೂ ಇಸ್ಪೀಟ ಎಲೆಗಳನ್ನು ಪಂಚರು ಸಮಕ್ಷಮ ಜಪ್ತಿ ಮಾಡಿಕೊಂಡು  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.