ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-02-2021
ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 279, 337, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 17-02-2021 ರಂದು ಫಿರ್ಯಾದಿ ರಜನಿಕಾಂತ ತಂದೆ ನರಸಿಂಗ ಮೆಲ್ದೋಡ್ಡಿ ವಯ: 25 ವರ್ಷ, ಜಾತಿ: ಕ್ರಿಶ್ಚನ್, ಸಾ: ಹಮಿಲಾಪೂರ ಗ್ರಾಮ ರವರ ಅಣ್ಣನಾದ ಶ್ರೀಕಾಂತ ವಯ: 27 ವರ್ಷ ಇತನು ತನ್ನ ನಂಬರ ಇಲ್ಲದ ಹೊಂಡಾ ಶೈನ್ ಮೋಟಾರ್ ಸೈಕಲ ಮೇಲೆ ಕುತ್ತಾಬಾದಗೆ ಹೋಗುವಾಗ ಸೈನ್ಸ್ ಸೆಂಟರ್ ಹತ್ತಿರ ಬೀದರ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ-38/ಡಬ್ಲೂ-4206 ನೇದರ ಚಾಲಕನಾದ ಆರೋಪಿ ಸಚೀನ ತಂದೆ ವಸಂತ ಸಾ: ಗುಮ್ಮಾ ಇತನು ತನ್ನ ಮೊಟಾರ ಸೈಕಲ ಮೇಲೆ ಇಸ್ರೇಲ್ ತಂದೆ ಯಾದವ ಸಾ: ಗುಮ್ಮಾ ಇತನಿಗೆ ಕೂಡಿಕೊಂಡು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೋಗಿ ಎದುರಿನಿಂದ ಬರುತ್ತಿದ್ದ ಫಿರ್ಯಾದಿಯ ಅಣ್ಣನ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಅಣ್ಣ ಶ್ರೀಕಾಂತ ಇತನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಬೆಹೊಸ ಆಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ವೈದ್ಯರು ಚಿಕಿತ್ಸೆ ನೀಡುವಾಗ ಆಸ್ಪತ್ರೆಯಲ್ಲಿ ಅಣ್ಣ ಶ್ರೀಕಾಂತ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹೊಕ್ರಾಣಾ ಪೋಲಿಸ ಠಾಣೆ ಅಪರಾಧ ಸಂ. 01/2021, ಕಲಂ. ಮಹಿಳಾ ಕಾಣೆ :-
ಫಿರ್ಯಾದಿ ಮಾಧವ ತಂದೆ ಹಣಮಂತರಾವ ರುಮತಾಪೂರೆ ವಯ: 29 ವರ್ಷ, ಜಾತಿ: ಮರಾಠಾ, ಸಾ: ಹಂದೇಗಾಂವ, ತಾ: ಮುಖೇಡ, ಸದ್ಯ: ಭಂಡಾರ ಕಮಠಾ ರವರ ಹೆಂಡತಿ ರಾನುಬಾಯಿ ಗಂಡ ಮಾಧವ, ವಯ 26 ವರ್ಷ ಇಕೆಯು ದಿನಾಂಕ 14-02-2021 ರಂದು 0030 ಗಂಟೆಯಿಂದ 0100 ಗಂಟೆಯ ಅವಧಿಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ, ಆಕೆಯನ್ನು ಗ್ರಾಮದಲ್ಲಿ ಎಲ್ಲಾ ಕಡೆ ಹುಡಿಕಾಡಿ ನಂತರ ತಮ್ಮ ಸಂಬಂಧಿಕರಲ್ಲಿ ಕರೆ ಮಾಡಿ ರಾನುಬಾಯಿ ಬಗ್ಗೆ ವಿಚಾರಿಸಿದಾಗ ಸಂಬಂಧಿಕರು ನಮ್ಮ ಮನೆಗೆ ಬಂದಿರುವುದಿಲ್ಲಾ ಅಂತ ತಿಳಿಸಿರುತ್ತಾರೆ, ರಾನುಬಾಯಿ ಇವಳು ಗುಲಾಬಿ ಬಣ್ಣದ ಪಂಜಾಬಿ ಡ್ರೇಸ್ ಹಾಕಿರುತ್ತಾಳೆ, ಅವಳ ಚಹರೆ ಗೋಧಿ ಬಣ್ಣ, ದುಂಡು ಮುಖ, ಎತ್ತರ 5' 2 ಫೀಟ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕ ಚಿಂಚೋಳಿ ಪೋಲಿಸ ಠಾಣೆ ಯು.ಡಿ.ಆರ್ ನಂ. 02/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಪ್ರಭು ತಂದೆ ಬಾಬುರಾವ ಉಪ್ಪಾರ ವಯ: 35 ವರ್ಷ, ಸಾ: ಚಳಕಾಪೂರ, ತಾ: ಭಾಲ್ಕಿ ರವರ ತಮ್ಮನಾದ ರಘುನಾಥ ತಂದೆ ಬಾಬುರಾವ ಉಪ್ಪಾರ, ವಯ: 30 ವರ್ಷ, ಸಾ: ಚಳಕಾಪೂರ, ತಾ: ಭಾಲ್ಕಿ ಇತನು ಸಾಲದ ಬಾಧೆ ತಾಳಲಾರದೇ ದಿನಾಂಕ 17-02-2021 ರಂದು 0700 ಗಂಟೆಯಿಂದ 1000 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಹೊಲ ಸರ್ವೆ ನಂ. 253 ರಲ್ಲಿರುವ ಕೆ.ಇ.ಬಿ ಕಂಬಕ್ಕೆ ಅಳವಡಿಸಿರುವ ವಿದ್ಯೂತ ತಂತಿಗೆ ಹಿಡಿದು ಆತ್ಮಹತ್ಯ ಮಾಡಿಕೊಂಡಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ, ವಗೈರೆ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.