ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-06-2021
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 66/2021, ಕಲಂ. 379 ಐಪಿಸಿ :-
ದಿನಾಂಕ 06-06-2021 ರಂದು 2000 ಗಂಟೆಯಿ0ದ ದಿನಾಂಕ 07-06-2021 ರಂದು 0600 ಗಂಟೆಯ ಮಧ್ಯಾವಧಿಯಲ್ಲಿ ಬೀದರ ಸರಕಾರಿ ಆಸ್ಪತ್ರೆಯ ಗೇಟ ನಂ. 2 ನೇದರ ಮುಂದೆ ನಿಲ್ಲಿಸಿದ ಫಿರ್ಯಾದಿ ಶಾಮಣ್ಣ ತಂದೆ ಹಣಮಂತ ಸಾ: ಘೋಡಂಪಳ್ಳಿ, ತಾ: ಬೀದರ ರವರ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟಾರ್ ಸೈಕಲ ನಂ. KA-32/R-9975, ಚಾಸಿಸ್ ನಂ. 06L16C02608, ಇಂಜಿನ್ ನಂ. 06L15M02690, ಮಾಡಲ್: 2006, ಬಣ್ಣ: ಕಪ್ಪು ಬಣ್ಣ ಹಾಗೂ ಅ.ಕಿ 20,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 35/2021, ಕಲಂ. 279, 337, 338, 283 ಐಪಿಸಿ :-
ದಿನಾಂಕ 12-06-2021 ರಂದು
ಫಿರ್ಯಾದಿ ಇಸ್ಮಾಯಿಲ ಖಾನ ತಂದೆ ಶರೀಫ ಖಾನ ವಯ: 50 ವರ್ಷ, ಜಾತಿ: ವÄÄಸ್ಲಿಂ, ಸಾ: ಬೂರಾಬಂಡಾ ಹೈದ್ರಾಬಾದ (ಟಿ.ಎಸ್) ರವರ ಸಂಬಂಧಿಕರು ಮೃತಪಟ್ಟಿರುವುದರಿಂದ ಕಮಲನಗರ ಗ್ರಾಮಕ್ಕೆ ಹೋಗಲು ಫಿರ್ಯಾದಿಯು ತಮ್ಮ ಸಂಬಂಧಿಕರ ಕ್ವಾಲೀಸ್ ಕಾರ್ ನಂ. ಎಪಿ-10/ಎಯು-3829 ನೇದರಲ್ಲಿ ಬೋರಾಬಂಡಾ ಹೈದ್ರಾಬಾದದಿಂದ ಹೊರಟು ಬೀದರ ಜಹಿರಾಬಾದ ರೋಡ್ ದೇವ ದೇವ ವನದ ಹತ್ತಿರ ಬಂದಾಗ ಕ್ವಾಲೀಸ ಕಾರ್ ಚಲಾಯಿಸುತ್ತಿದ್ದ ಮಹೆಬೂಬ ಪಾಶಾ ತಂದೆ ಅಬ್ದುಲ ಜಬ್ಬಾರ ಸಾ: ಬೋರಾಬಂಡಾ ಹೈದ್ರಾಬಾದ ಇವನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿ ರೋಡಿನ ಮೇಲೆ ಲಾರಿ ಚಾಲಕನು ತನ್ನ ಲಾರಿಯನ್ನು ನಿರ್ಲಕ್ಷತನದಿಂದ ನಿಲ್ಲಿಸಿದ ಲಾರಿ ನಂ. ಕೆ.ಎ-39/5317 ನೇದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿದ್ದರಿಂದ ಕ್ವಾಲೀಸ್ ವಾಹನದಲ್ಲಿದ್ದ ಫಿರ್ಯಾದಿಯವರ ಮಾವ 1) ಅಬ್ದುಲ್ ಜಬ್ಬಾರ ತಂದೆ ಅಬ್ದುಲ್ಲಾ ವಯ: 60 ವರ್ಷ, ಸಾ: ಬೋರಾಬಂಡಾ ಹೈದ್ರಾಬಾದ ರವರ ತಲೆಯಲ್ಲಿ ರಕ್ತಗಾಯ, ಎರಡು ಕೈಗಳಿಗೆ ಗುಪ್ತಗಾಯ, ಎಡಗಾಲಿನ ತೋಡೆ ಮೇಲೆ ಗುಪ್ತಗಾಯವಾಗಿರುತ್ತದೆ, ಮಾಮನ ಹೆಂಡತಿ 2) ರೇಹಾನಾ ಬೇಗಂ ಗಂಡ ಅಬ್ದುಲ ಜಬ್ಬಾರ ವಯ: 50 ವರ್ಷ, ಸಾ: ಬೋರಾಬಂಡಾ ಹೈದ್ರಾಬಾದ ಇವರ ಎಡಗಣ್ಣಿನ ಹುಬ್ಬಿನ ಮೇಲೆ ಹಾಗೂ ಬಲಗಾಲಿನ ಮೊಳಕಾಲಿಗೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯವರ ಪತ್ನಿ 3) ಶಾಹಜಹಾನ ಬೇಗಂ ಗಂಡ ಇಸ್ಮಾಯಿಲ ಖಾನ ವಯ: 40 ವರ್ಷ, ಸಾ: ಬೋರಾಬಂಡಾ ಹೈದ್ರಾಬಾದ ಇಕೆಯ ಬಲಗೈ ಮೊಳಕೈಗೆ ಭಾರಿ ಗುಪ್ತಗಾಯ, ಬೆನ್ನಿನ ಮೇಲೆ ಗುಪ್ತಗಾಯ, ಎದೆಯಲ್ಲಿ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ತಾಯಿಯಾದ 4) ಮಹೆರುನ್ನಿಸಾ ಬೇಗಂ ಗಂಡ ಶರೀಫ
ಖಾನ ವಯ: 70 ವರ್ಷ, ಸಾ: ಬೋರಾಬಂಡಾ ಹೈದ್ರಾಬಾದ ಇವರ ಎಡಗೈ ಮೊಳಕೈ ಹತ್ತಿರ ಗುಪ್ತಗಾಯವಾಗಿರುತ್ತದೆ, ತಮ್ಮನ ಹೆಂಡತಿ 5) ಹಸೀನಾ ಬೇಗಂ ಗಂಡ ಯೂಸುಫ ಖಾನ ವಯ: 45 ವರ್ಷ, ಸಾ: ಬೋರಾಬಂಡಾ ಹೈದ್ರಾಬಾದ ಇವರಿಗೆ ಬೆನ್ನಿನ ಮೇಲೆ ಭಾರಿ ಗುಪ್ತಗಾಯ, ಕುತ್ತಿಗೆ ಹಿಂದೆ ಗುಪ್ತಗಾಯವಾಗಿರುತ್ತದೆ, ಇನ್ನೊಬ್ಬರು ತಮ್ಮನ ಪತ್ನಿಯಾದ 6) ಶಾಹೀನ ಬೇಗಂ ಗಂಡ ಇಲಿಯಾಸ ಖಾನ ವಯ: 35 ವರ್ಷ, ಸಾ: ಬೋರಾಬಂಡಾ ಹೈದ್ರಾಬಾದ ಇವರಿಗೆ ಬಲ ಭುಜಕ್ಕೆ ಭಾರಿ ಗುಪ್ತಗಾಯ, ಎಡಗಡೆ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ, ಕ್ವಾಲೀಸ್ ಚಾಲಕನಾದ ಮಾಮನ ಮಗ 7) ಮಹೆಬೂಬು ಪಾಶಾ ಇವನಿಗೆ ಬಲಗಾಲಿನ ತೋಡೆ ಮೇಲೆ ಭಾರಿ ಗುಪ್ತಗಾಯ, ಬಲಗಣ್ಣಿನ ಹುಬ್ಬಿನ ಮೇಲೆ, ಕೆಳ ತುಟಿಗೆ, ಮೂಗಿನ ಮೇಲೆ ರಕ್ತಗಾಯವಾಗಿರುತ್ತದೆ, ಈ ಅಪಘಾತದಲ್ಲಿ ಫಿರ್ಯಾದಿ ಮತ್ತು ಲಾರಿ ಚಾಲಕನಾದ ಎಂ.ಡಿ.ಅಯುಬ್ ತಂದೆ ಎಂ.ಡಿ.ಯಾಕುಬ ವಯ: 38 ವರ್ಷ ಸಾ: ಮೌನೇಶ್ವರ ಮಂದಿರ ಹತ್ತಿರ ಮೈಲೂರ ಬೀದರ ಇಬ್ಬರಿಗೂ ಯಾವುದೇ ಗಾಯಾಗಳು ಆಗಿರುವುದಿಲ್ಲಾ, ಈ ಅಪಘಾತವು ಕ್ವಾಲೀಸ್ ಚಾಲಕ ಮಹೆಬೂಬು ಪಾಶಾ ಇವನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಲಾರಿ ನಂ. ಕೆ.ಎ-39/5317 ನೇದರ ಚಾಲಕ ಎಂ.ಡಿ.ಆಯುಬ ಇವನು ತನ್ನ ಲಾರಿಯನ್ನು ರೋಡಿನ ಮೇಲೆ ನಿರ್ಲಕ್ಷತನದಿಂದ ನಿಲ್ಲಿಸಿದ್ದು ಇವನ ಲಾರಿಗೆ ಹಿಂದಿನಿಂದ ಡಿಕ್ಕಿ ಮಾಡಿದ್ದರಿಂದ ಜರುಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.