ಮಟಕಾ ಜೂಜಾಟದಲ್ಲಿ
ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 03-02-2016 ರಂದು ಮಣೂರ
ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ
ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ
ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ
ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಕರಜಗಿ ಗ್ರಾಮದ
ಯಲ್ಲಾಲಿಂಗೇಶ್ವರ ಮಠದ ಹತ್ತಿರ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ನಿಂತು ನೋಡಲು
ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ
ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ
ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಹಾದೇವ ತಂದೆ ನಿಜಲಿಂಗಪ್ಪ ಜಾನಕರ್ ಸಾ|| ಮಣೂರ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ
ಜೂಜಾಟಕ್ಕೆ ಸಂಬಂಧ ಪಟ್ಟ 1660/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ
ಮತ್ತು ಒಂದು ಬಾಲ ಪೆನ್ನ ಔಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03-02-2016 ರಂದು ಕರಜಗಿ ಗ್ರಾಮದಲ್ಲಿ ಐಬಿ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80
ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ತಿಳಿಸಿದ ಮೇರೆಗೆ, ಶ್ರೀ ಸಿದರಾಯ ಭೋಸಗಿ
ಪಿ.ಎಸ್.ಐ ಅಫಜಲಪೂರ ಠಾಣೆ ಹಾಗು ಸಿಬ್ಬಂದಿ
ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಕರಜಗಿ ಗ್ರಾಮದ
ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬಂದು ನೋಡಲು ಐಬಿ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ
ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ
ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ
ವಿಚಾರಿಸಲಾಗಿ ಜಗನ್ನಾಥ ತಂದೆ ಹಣಮಂತ ಲೋಣಾರ ವ ಸಾ|| ಕರಜಗಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1390/- ರೂಪಾಯಿ
ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03-02-2016 ರಂದು ಉಡಚಾಣ ಕ್ರಾಸ ಹತ್ತಿರ ಜನಸಂದಣಿ ಇರುವ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ
ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಕೂಗುತ್ತಾ ಮಟಕಾ
ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ
ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಉಡಚಣ
ಕ್ರಾಸ ಸಾರ್ವಜನಿಕ ಸಂದನಿಯಲ್ಲಿ ಮರಯಲ್ಲಿ ನಿಂತು ನೋಡಲು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು
ವಿಳಾಸ ವಿಚಾರಿಸಲಾಗಿ ಕಾಂತು ತಂದೆ ಹರಿಶ್ಚಂದ್ರ ಜಾಧವ ಸಾ|| ಕರಜಗಿ ತಾಂಡಾ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1430/- ರೂಪಾಯಿ
ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು
ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು
ಸಾಗಿಸುತ್ತಿದ್ದ ಟಿಪ್ಪರ ವಶ :
ನಿಂಬರ್ಗಾ ಠಾಣೆ : ದಿನಾಂಕ 03/02/2016 ರಂದು ಶ್ರೀ ದತ್ತಾತ್ರೇಯ ಎ.ಎಸ್.ಐ ಡಿ.ಸಿ.ಐ.ಬಿ ಘಟಕ
ಕಲಬುರಗಿ ಘಟಕದ ಸಿಬ್ಬಂಧಿಯವರಾದ ಶ್ರೀ ಚಂದ್ರಕಾತ ಹೆಚ್.ಸಿ 287, ಶ್ರೀ ಪ್ರಕಾಶ ಹೆಚ.ಸಿ 370, ಶ್ರೀ ಅಂಬಾರಾಯ ಹೆಚ್.ಸಿ 54, ಶ್ರೀ ಅಯ್ಯಬ ಹೆಚ್.ಸಿ 157, ಶ್ರೀ ಮಲ್ಲಿಕಾರ್ಜುನ ಹೆಚ್.ಸಿ 191, ಶ್ರೀ ಆನಂದ ಪ್ರಸಾದ ಹೆಚ.ಸಿ 198 ರವರೊಂದಿಗೆ ಕೂಡಿಕೊಂಡು ಕಾನೂನು ಬಾಹಿರ
ಚಟುವಟಿಕೆಗಳಲ್ಲಿ ಮಾಹಿತಿ ಸಂಗ್ರಹಿಸುವ ಕುರಿತು ದಿನಾಂಕ 03/02/2016 ರಂದು ರಾತ್ರಿ 0100 ಗಂಟೆ ಸುಮಾರಿಗೆ ನಿಂಬರ್ಗಾ ಪೊಲೀಸ ಠಾಣೆಯ ವ್ಯಾಪ್ತಿಯ
ಪೈಕಿ ನಿಂಬರ್ಗಾ ಕ್ರಾಸ ಬಳಿ ಇರುವ ಮೈಕ್ರೊ ಟಾವರ ಬಳಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ
ಸ್ಟೇಶನ ಗಾಣಗಾಪೂರ ಕಡೆಯಿಂದ ಪಟ್ಟಣ ಕಡೆಗೆ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು
ತುಂಬಿಕೊಂಡು ಮಾರಾಟ ಕುರಿತು ಕಲಬುರಗಿ ಕಡೆಗೆ ಸಾಗಿಸುತ್ತಿರುವ ಬಗ್ಗೆ ಖಚೀತ ಮಾಹಿತಿ ಬಂದ
ಮೇರೆಗೆ ಕೂಡಲೇ ಸಂಗಡ ಇದ್ದ ಸಿಬ್ಬಂಧಿಯವರ ಸಹಕಾರದೊಂದಿಗೆ ಮೈಕ್ರೊ ಟಾವರ ಕಟ್ಟಡದ ಬಳಿ
ಅವತಿಕೊಂಡು ನಿಂತು ಸದರಿ ಟಿಪ್ಪರ ಬರುವಿಕೆಗಾಗಿ ಕಾಯುತ್ತಾ ನಿಂತಾಗ ರಾತ್ರಿ 0300 ಎ.ಎಮ ವೇಳೆಗೆ ಒಂದು ಟಿಪ್ಪರ ಸ್ಟೇಶನ ಗಾಣಗಾಪೂರ
ಕಡೆಯಿಂದ ಪಟ್ಟಣ ಕಡೆಗೆ ಮರಳು ತುಂಬಿಕೊಂಡು ಬರುವದನ್ನು ಕಂಡು ಅದಕ್ಕೆ ಕೈ ಮಾಡಿ ನಿಲ್ಲಿಸಿದೆವು, ಸದರಿ ಟಿಪ್ಪರ ನಂಬರ ನೋಡಲು ಕೆ.ಎ 32, ಸಿ 0228 ಇತ್ತು, ಸದರಿ ಟಿಪ್ಪರ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಫಕ್ರೊದ್ದೀನ ತಂದೆ
ಮೈಬೂಬಸಾಬ ಬೊಲೆವಾಲೆ ಸಾ|| ಸುಲ್ತಾನಪೂರ ಗಲ್ಲಿ ಮಹಾದೇವ ಗುಂಡಗಾ ಆಳಂದ ಅಂತ ತಿಳಿಸಿದ ಸದರಿಯವನಿಗೆ ಸದರ ಮರಳು ಎಲ್ಲಿಂದ
ತಂದಿರುವೆ ಮತ್ತು ಈ ಬಗ್ಗೆ ನಿನ್ನ ಹತ್ತಿರ ಸರ್ಕಾರದಿಂದ ಪರವಾನಿಗೆ ಪಡೆದ ಬಗ್ಗೆ ಪತ್ರ ಇರುವ
ಬಗ್ಗೆ ವಿಚಾರಿಸಲು ಅವನು ಆ ಬಗ್ಗೆ ಯಾವುದೆ ಪತ್ರ ಇರುವದಿಲ್ಲ ಸದರಿ ಉಸುಕು ನೇಲೊಗಿ ಹತ್ತಿರ
ಇರುವ ನದಿಯಿಂದ ತುಂಬಿಕೊಂಡು ಮಾರಾಟ ಕುರಿತು ಕದ್ದು ಕಲಬುರಗಿಗೆ ಒಯ್ಯುತ್ತಿರುವ ಬಗ್ಗೆ ತಿಳಿಸಿದ
ತಮ್ಮ ಮಾಲೀಕರ ಹೆಸರು ದಿಶಾನ ಅನ್ಸಾರಿ ತಂದೆ ಹಮೀದ ಅನ್ಸಾರಿ ಸಾ|| ಆಳಂದ ಇರುವ ಬಗ್ಗೆ ತಿಳಿಸಿದ ಸದರಿ ಮರಳು ಅಕ್ರಮವಾಗಿ
ಕಳ್ಳತನದಿಂದ ಸಾಗಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಸದರಿ ಟಿಪ್ಪರ ಚಾಲಕನಿಗೆ ಸದರಿ ಕೃತ್ಯ
ಕಾನೂನು ಬಾಹಿರವಾಗಿರುತ್ತದೆ ಅಂತ ತಿಳಿಸಿ ಅವನಿಗೆ ನನ್ನ ಸ್ವಾಧೀನಕ್ಕೆ ತೆಗೆದುಕೊಂಡೆನು, ಮತ್ತು ಮೇಲೆ ನಮೂದು ಮಾಡಿದ ಮರಳು ತುಂಬಿದ ಟಿಪ್ಪರನ್ನು
ಮೇಲೆ ನಮೂದು ಮಾಡಿದ ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ನಿಂಬರ್ಗಾ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.