ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 27.04.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಯಂಕವ್ವನ ಮಾರ್ಕೇಟನಲ್ಲಿ
ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ
ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಯಂಕವ್ವನ ಮಾರ್ಕೇಟನಲ್ಲಿ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ
ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ
ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು
ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಶಿವಶರಣಪ್ಪ ತಂದೆ
ಅರ್ಜುನ ಜಮಾದಾರ ಸಾ||
ತಂಬಾಕವಾಡಿ ತಾ||
ಆಳಂದ ಹಾ||ವ||
ಐವಾನ ಶಾಹಿ ವಸತಿ ಗೃಹ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು
ಸದರಿಯವನ ಹತ್ತಿರ 1)
ನಗದು ಹಣ 1200 ರೂ 2)
2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು
ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ಶ್ರೀಮತಿ ನೀಲಮ್ಮಾ ರವರು ದಿನಾಂಕ 27.04.2019 ರಂದು ಬೆಳಿಗ್ಗೆ 8-00 ಗಂಟೆ
ಸುಮಾರಿಗೆ ನಾನು ಮತ್ತು ನನ್ನ ಮಗನಾದ ಶಿವರುದ್ರ ಹಾಗೂ ನನ್ನ
ಸೊಸೆಯಾದ ಮಂಗಲಾ ಮೂರು ಜನರು ಕಲಬುರಗಿ ಸಂಗಮೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾದ
ನಮ್ಮ ಸಂಬಂದಿಕರನ್ನು ಮಾತನಾಡಿಸುವ ಸಲುವಾಗಿ ನಮ್ಮೂರಿನಿಂದ ಬಸ್ಸ ಮೂಲಕ ಕಲಬುರಗಿ ಕೇಂದ್ರ ಬಸ್ಸ
ನಿಲ್ದಾಣಕ್ಕೆ ಬಂದು ಇಳಿದು ಬಸ್ಸ ನಿಲ್ದಾಣದ ಸಮೀಪ ಬರುವ ಸಂಗಮೇಶ್ವರ ಆಸ್ಪತ್ರೆ ಕಡೆಗೆ
ನಡೆದುಕೊಂಡು ಹೋಗುವಾಗ ಸಂಗಮೇಶ್ವರ ಆಸ್ಪತ್ರೆಯ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂ
ಕೆಎ-39/ಕೆ-1133 ನೇದ್ದರ ಸವಾರನು ಆರ.ಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ
ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಎದುರಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶೆಂಕ್ರೆಪ್ಪ
ತಂದೆ ಶಾಮರಾವ ಬೋಳೆಗಾಂವ ಸಾ|| ಪ್ಲಾಟ್ ನಂ 104, ಲಕ್ಷ್ಮೀ ನಿಲಯ, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ ರವರು ದಿನಾಂಕ 26-04-2019 ರಂದು ತಮ್ಮ ದೈನಂದಿನ
ಕೆಲಸ ಮುಗಿಸಿಕೊಂಡು ರಾತ್ರಿ 10-00 ಪಿಎಮ್ ಕ್ಕೆ ನನ್ನ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170 ನೆದ್ದು ನಮ್ಮ ಮನೆಯ ಕಂಪೌಂಡ ಒಳಗಡೆ ಲಾಕ್ ಮಾಡಿ
ನಿಲ್ಲಿಸಿ,
ಬೇಸಿಗೆ ಇದ್ದ ಕಾರಣ ಮನೆ ಛತ್ತಿನ ಮೇಲೆ ನಾನು ಮತ್ತು ನನ್ನ ಹೆಂಡತಿ ಮಲಗಿಕೊಂಡಿದ್ದು
ಇರುತ್ತದೆ. ದಿನಾಂಕ 27-04-2019 ರಂದು 03-15 ಎ.ಎಮ್ ಸುಮಾರಿಗೆ ನಮ್ಮ ಮನೆಯ ಸುತ್ತ ಮುತ್ತ ಯಾರೋ ಚೀರಾಡುವುದು ಮತ್ತು ಕಳ್ಳರು
ಬಂದಿದ್ದಾರೆಂದು ಗದ್ದಲ ಶಬ್ದ ಕೇಳಿ ನಾನು ಕೆಳಗೆ ಬಂದು ನೋಡಲು ನಮ್ಮ ಕಂಪೌಂಡದಲ್ಲಿದ್ದ ನನ್ನ
ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170 ನೆದ್ದು
ಕಾಣಿಸಲಿಲ್ಲ ಯಾರೋ ಕಳ್ಳರು ಕಳ್ಳರನ ಮಾಡಿಕೊಂಡು ಹೋಗಿದ್ದು ಗೊತ್ತಾಯಿತು. ಮನೆಯ ಹೊರಗಡೆ ಬಂದು
ವಿಚಾರ ಮಾಡಲು ನಮ್ಮ ಮನೆಯ ಹತ್ತಿರ ಇದ್ದ ಆನಂದ ಜೊಶಿ ಹಾಗೂ ನಮ್ಮ ಮನೆಯಲ್ಲಿ ಕಿರಾಯಿ ಇರುವ
ಸುಧಾಕರ ಹಾಗೂ ರಾಘವೇಂದ್ರ ರವರ ಮನೆಗಳು ಕಳ್ಳತನವಾಗಿದ್ದು ಗೊತ್ತಾಯಿತು. ನನ್ನ ಕಳ್ಳತನವಾದ ಹೀರೋ
ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ KA32 Y 6170 ನೆದ್ದರ, ಅ.ಕಿ. 30,000/- ರೂ. ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ರಾಘವೇಂದ್ರ ತಂದೆ
ಮಲ್ಲಿನಾಥ ಜಮಾದಾರ ಸಾ|| ಪ್ಲಾಟ್ ನಂ 100, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ ರವರು ದಿನಾಂಕ 25-04-2019 ರಂದು ನಾನು ನನ್ನ ಕಾರ್ಯಾಲಯದ
ಕೆಲಸದ ನಿಮಿತ್ಯ ಬೆಂಗಳೂರಿಗೆ ಹೋಗುವ ಸಲುವಾಗಿ ತಯ್ಯಾರಾಗಿದ್ದು, ಮನೆಯಲ್ಲಿ ಹೆಣ್ಣು
ಮಕ್ಕಳು ಆಗುವ ಕಾರಣ ನನ್ನ ಹೆಂಡತಿ ಹಾಗೂ ತಾಯಿಯವರು ಕೂಡಿ ಬೀಗರ ಮನೆಯಲ್ಲಿ ಬಿಟ್ಟು ನಾನು
ಬೆಂಗಳೂರಿಗೆ 08-00 ಪಿಎಮ್ ಕ್ಕೆ ಹೋಗಿದ್ದು ದಿನಾಂಕ 27-04-2019 ರಂದು ಬೆಳಿಗ್ಗೆ 09-00 ಗಂಟೆಗೆ ಬೆಂಗಳೂರಿನಿಂದ
ಕಲಬುರಗಿಗೆ ಬಂದು ಮನೆಗೆ ಹೋಗಿ ನೋಡಲು ನಮ್ಮ ಮನೆಯ ಮುಖ್ಯ ದ್ವಾರಕ್ಕೆ ಹಾಕಿದ ಬಾಗಿಲ ಕೊಂಡಿ
ಮುರಿದು ಬಿದ್ದುದ್ದು ನೋಡಿ ಗಾಬರಿಯಾಗಿ ಬಾಜು ಮನೆಯವರಾದ ವಿಜಯಕುಮಾರ ಪಾಟೀಲ ರವರಿಗೆ
ಕರೆದುಕೊಂಡು ಮನೆಯ ಒಳಗೆ ಹೊಗಿ ನೋಡಲು ನಮ್ಮ ಬೆಡ್ ರೂಮಿನಲ್ಲಿದ್ದ ಟ್ರಜರಿ ಬಾಗಿ ಮುರಿದು
ಒಳಗಡೆಯಿದ್ದ ಲಾಕರ್ ಮುರಿದು ಎಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದು ಟ್ರಜರಿಯಲ್ಲಿಟ್ಟ ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಆಭರಣಗಳು ನಗದು ಹಣ
ಹೀಗೆ ಒಟ್ಟು 1,13,000/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಸುಧಾಕರ ತಂದೆ
ನಾಗೇಂದ್ರಪ್ಪ ಹಾಗರಗಿ ಸಾ|| ಪ್ಲಾಟ್ ನಂ 104, ಲಕ್ಷ್ಮೀ ನಿಲಯ, ಜಾಧವ ಲೇಔಟ್, ಬಿದ್ದಾಪೂರ ಕಾಲೋನಿ, ಕಲಬುರಗಿ ರವರು ದಿನಾಂಕ 26-04-2019 ರಂದು ನಮ್ಮ ಅಣ್ಣ
ಮಲ್ಲಿಕಾರ್ಜುನ ಇವರ ಮನೆಯಲ್ಲಿ ಜವಳ ಕಾರ್ಯಕ್ರಮ ಇದ್ದ ಕಾರಣ ನಾನು ಮತ್ತು ನನ್ನ ಹೆಂಡತಿ ಕೂಡಿ
ಬೆಳಿಗ್ಗೆ ನಮ್ಮ ಅಣ್ಣನ ಮನೆಗೆ ದತ್ತನಗರಕ್ಕೆ ಹೋಗಿದ್ದು ಇರುತ್ತದೆ. ರಾತ್ರಿ ಅಲ್ಲಿಯೇ ಉಳಿದಿರುತ್ತೇವೆ.
ದಿನಾಂಕ 27-4-2019 ರಂದು 04-00 ಎ.ಎಮ್ ಕ್ಕೆ ನಮ್ಮ
ಮನೆಯ ಮಾಲಿಕರಾದ ಶೆಂಕ್ರೆಪ್ಪ ತಂದೆ ಶಾಮರಾವ ಬೋಳೆಗಾಂವ ರವರು ಫೋನ್ ಮಾಡಿ ನಿಮ್ಮ ಮನೆಯ ಕೀಲಿ
ಮುರಿದು ಯಾರೋ ಮನೆ ಕಳ್ಳತನ ಮಾಡಿದಂತೆ ಕಂಡು ಬರುತ್ತಿದೆ ಬೇಗ ಬನ್ನಿರಿ ಅಂತಾ ತಿಳಿಸಿದ ಮರೆಗೆ
ನಾನು ಮತ್ತು ನನ್ನ ಹೆಂಡತಿ ಹಾಗೂ ನಮ್ಮಣ್ಣ ಮಲ್ಲಿಕಾರ್ಜುನ ಕೂಡಿ ಬಂದು ವಿಚಾರಿಸಲು ನಮ್ಮ ಮನೆ
ಮಾಲಿಕರು ತಿಳಿಸಿದ್ದೇನೆಂದರೆ, ದಿನಾಂಕ 26-04-2019 ರಂದು ರಾತ್ರಿ 10-00 ಗಂಟೆಯವರೆಗೂ ನಾವು
ಎಚ್ಚರ ಇದ್ದು,
ನಿಮ್ಮ ಮನೆ ಕೀಲಿ ಹಾಕಿದ್ದು ಇರುತ್ತದೆ. ದಿನಾಂಕ 27-04-2019 ರಂದು 03-15 ಎ.ಎಮ್ ಸುಮಾರಿಗೆ ನಮ್ಮ
ಮನೆಯ ಸುತ್ತ ಮುತ್ತ ಯಾರೋ ಚೀರಾಡುವುದು ಮತ್ತು ಕಳ್ಳರು ಬಂದಿದ್ದಾರೆಂದು ಗದ್ದಲ ಶಬ್ದ ಕೇಳಿ
ನಾನು ಕೆಳಗೆ ಬಂದು ನೋಡಲು ನಮ್ಮ ಕಂಪೌಂಡದಲ್ಲಿದ್ದ ನನ್ನ ಹೀರೋ ಹಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್
ಸೈಕಲ್ ಕಳ್ಳತನವಾಗಿದ್ದು ಮತ್ತೆ ನಿಮ್ಮ ಮನೆಕಡೆ ನೋಡಲು ನಿಮ್ಮ ಮನೆಯ ಕೀಲಿ ಮುರಿದಿದ್ದು ಕಂಡು
ಬಂದಿತು ಅಂತಾ ತಿಳಿಸಿದ್ದು ಇರುತ್ತದೆ. ನಾವು ಎಲ್ಲರೂ ಕೂಡಿ ಮನೆಯ ಒಳಗಡೆ ಹೋಗಿ ನೋಡಲು ನಮ್ಮ
ಅಡುಗೆ ಮನೆಯಲ್ಲಿಟ್ಟ ಟ್ರಜರಿ ಲಾಕ್ ಮುರಿದು, ಅದರಲ್ಲಿಟ್ಟ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು
ನಗದು ಹಣ ಹೀಗೆ ಒಟ್ಟು 1,71,000/- ಕಿಮ್ಮತ್ತಿನವುಗಳನ್ನು ದಿನಾಂಕ 26-04-2019 ರಂದು ರಾತ್ರಿ 10-00 ಪಿ.ಎಮ್ ದಿಂದ ದಿನಾಂಕ 27-04-2019 ರಂದು 03-15 ಎ.ಎಮ್ ದ ಮದ್ಯದ
ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಟ್ರಜರಿ ಲಾಕರ್ ಒಡೆದು ಕಳ್ಳತನಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮೌನೇಶ ತಂದೆ
ಶಿವಣ್ಣ ವಿಶ್ವಕರ್ಮ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ ರವರು ದಿನಾಂಕ:26/04/2019 ರಂದು ಕೋಕಿಲಾ ಪರಮೇಶ್ವರಿ ಗುಡಿಯ
ಹತ್ತಿರ ನಿಂತಿದ್ದಾಗ ನಮ್ಮ ಓಣಿಯಲ್ಲಿಯ ರಾಘು & ವಿಶಾಲ ಇವರುಗಳು ಐವೇಟರ್ ಎಕ್ಟೀವಾ ಮೇಲೆ ಬಂದವರೆ
ಅವರಲ್ಲಿ ರಾಘು ಇತನು ನನ್ನ ಹತ್ತಿರ ಬಂದು ಮಗನೆ ನನಗೆ ಗುರಾಯಿಸಿ ನೋಡುವದು ಉಗಳುವುದು ಮಾಡುತ್ತಿಯಾ
ಅಂದವನೆ ತನ್ನ ಕೈಯಲ್ಲಿದ್ದ ರಾಡಿನಿಂದ ಹೊಡೆಯಲು ಬಂದಾಗ ತಲೆ ಹೊರಳಿಸಿದ್ದು ಆಗ ನನ್ನ ತಲೆಯ ಹಿಂಬದಿಗೆ
ರಾಡಿನ ಏಟು ಬಿದ್ದು ಒಳಪೆಟ್ಟಾಯಿತು. ನನ್ನ ಹಿಡಿದುಕೊಂಡು ರಾಘು ಇತನು ಗಾಡಿಯ ಮೇಲೆ ಒತ್ತಾಯ ಮಾಡಿ
ಕೂಡಿಸಿ ತಾನು ನನಗೆ ಹಿಡಿದುಕೊಂಡು ನನ್ನ ಹಿಂದೆ ಕುಳಿತನು ವಿಶಾಲನು ಗಾಡಿ ನಡೆಸುತ್ತಾ ಸುಲ್ತಾನಪುರ
ರಸ್ತೆಯ ಇಟ್ಟಂಗಿ ಭಟ್ಟಿಯ ಹತ್ತಿರ ನನ್ನನ್ನು ಇಳಿಸಿ ರಾಘು ಇತನು ರಾಡಿನಿಂದ ನನ್ನ ಬೆನ್ನ ಮೇಲೆ ಮೈ
ಕೈಗೆ ಹೊಡೆಯ ಹತ್ತಿದ್ದು ನನಗೆ ಸುಮ್ಮನೆ ಯಾಕೆ ಹೊಡೆಯುತ್ತಿರಿ ಬಿಡು ಅಂದರೆ ಇಲ್ಲಾ ನಿನ್ನ
ಸೊಕ್ಕು ಬಹಳ ಇದೆ ನಮ್ಮ ತಂಟೆಗೆ ಬರದಂತೆ ಬುದ್ದಿ ಕಲಿಸುತ್ತೇವೆ ಅಂತಾ ಬೈಯುತ್ತಾ ರಾಡನಿಂದ ಮತ್ತೆ
ಮತ್ತೆ ಹೊಡೆದನು. ವಿಶಾಲ ಇತನು ಮೈ ಕೈಗೆ ಗುದ್ದಿದನು ನಾನು ಚಿರಾಡುತ್ತಿರುವದನ್ನು ಕೇಳಿ ಇಟ್ಟಂಗಿ
ಭಟ್ಟಿಯಲ್ಲಿ ಕೆಲಸ ಮಾಡುವವರು ಬಂದರು ಆಗ ಇವರಿಬ್ಬರೂ ನನಗೆ ಹೊಡೆಯುವದನ್ನು ಬಿಟ್ಟು ಗಾಡಿಯ ಮೇಲೆ
ಹೋದರು. ಹೋಗುವಾಗ ಈ ಸಲ ಉಳಿದಿದಿ ಇನ್ನೊಮ್ಮೆ ನಮಗೆ ನೋಡಿದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಬೈಯುತ್ತಿದ್ದರು.
ನಂತರ ನಮ್ಮ ಅಣ್ಣ ದೇವರಾಜನಿಗೆ ಪೋನ ಮಾಡಿದಾಗ ನಮ್ಮ ಅಣ್ಣ ಬಂದು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.