¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-12-2018
PÀªÀÄ®£ÀUÀgÀ ¥ÉưøÀ oÁuÉ C¥ÀgÁzsÀ ¸ÀA.
150/2018, PÀ®A. 279, 338, 304(J) L¦¹ :-
ದಿನಾಂಕ 13-12-2018 ರಂದು ಫಿರ್ಯಾದಿ ಶ್ರೀರಂಗ ತಂದೆ ಮಾರುತಿ
ಪರಿಹಾರ ಸಾ: ಕೊಟಗ್ಯಾಳ ರವರು ತಮ್ಮೂರಿಗೆ ತನ್ನ ಮೊಟಾರ ಸೈಕಲ್ ಮೇಲೆ ಹೊಗುತ್ತಿರುವಾಗ ಹಿಂದಿನಿಂದ
ರಾಂಪೂರ ಕಡೆಯಿಂದ ಒಂದು ಬಿಳಿ ಬಣ್ಣದ ಆಟೋ ಜನರಿಗೆ ಕೂಡಿಸಿಕೊಂಡು ಅತೀವೇಗ ಹಾಗು ನಿಷ್ಕಾಳಜಿಯಿಂದ
ಚಲಾಯಿಸಿಕೊಂಡು ಫಿರ್ಯಾದಿಗೆ ಸೈಡ ಹೊಡೆದು ಮುಂದೆ ಹೊದಾಗ ಮುಂದೆ ಕುಡ ಹನುಮಾನ ಮಂದಿರದ ಹತ್ತಿರ
ರೋಡಿಗೆ ಎದುರಿನಿಂದ ಒಂದು ಟೆಂಪೊ ಕೂಡಾ ಅತೀವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿ ಓಡಿಸಿಕೊಂಡು
ಬಂದು ಸದರಿ ಆಟೋ ಹಾಗು ಎದುರಿನಿಂದ ಬಂದ ಟೆಂಪೊ ಎರಡು ಮುಖಾಮುಖಿ ಡಿಕ್ಕಿ ಮಾಡಿಕೊಂಡು ಒಂದಕ್ಕೊಂದು
ತೋರಚಿಕೊಂಡಿದ್ದು ಇರುತ್ತದೆ, ಫಿರ್ಯಾದಿಯು ಹಿಂದಿನಿಂದ ಹೋಗಿ ನೋಡಲು ಸದರಿ ಆಟೋ ನಂ.
ಎಮ್.ಹೆಚ್-26/ಕೆ-2976 ಹಾಗು ಟೆಂಪೊ ನಂ. ಎಮ್.ಹೆಚ್-26/ಬಿ-3507 ಇರುತ್ತವೆ, ಆಟೋದಲ್ಲಿದ್ದ
ಒಬ್ಬ ವ್ಯಕ್ತಿಗೆ ಭಾರಿ ಗಾಯಗಳಾಗಿದ್ದು ಅವನಿಗೆ ನೋಡಲು ಅವನು ತಮ್ಮೂರಿನ ಮಾರುತಿ ತಂದೆ ರಘುನಾಥ
ದಾಮುವಾಲೆ ವಯ: 30 ವರ್ಷ, ಜಾತಿ: ಎಸ್ಸಿ ಚಾಂಬಾರ ರವರು ಇದ್ದು ಅವರಿಗೆ ಬಲಭುಜಕ್ಕೆ ಭಾರಿ ರಕ್ತಗಾಯ, ಎಡಗಾಲ ಮೊಳಕಾಲ
ಕೆಳಗೆ ಭಾರಿ ರಕ್ತಗಾಯ, ಬಲಗಾಲ
ಪಾದದ ಮೇಲೆ ಭಾರಿ ರಕ್ತಗಾಯ, ಎರಡು
ಕುಂಡೆತಿಕಗಳಿಗೆ ಭಾರಿ ರಕ್ತಗಾಯವಾಗಿದ್ದು ಅವರಿಗೆ 108 ನಲ್ಲಿ ಚಿಕಿತ್ಸೆ ಕುರಿತು ಕಮಲನಗರ
ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಜಿಲ್ಲಾ
ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ, ನಂತರ ಸದರಿ ಆಟೋ ಚಾಲಕನ ಹೆಸರು ನರಸಿಂಗ ತಂದೆ
ವಿಜಯಕುಮಾರ ಕಾಂಬಳೆ ಸಾ: ರಂಡ್ಯಾಳ, ಟೆಂಪೊ
ಚಾಲಕನ ಹೆಸರು ಬಾಲಾಜಿ ತಂದೆ ಶಿವರಾಜ ಪವಾರ ಸಾ: ದೇವಣಿ ಅಂತಾ ಗೊತ್ತಾಗಿದ್ದು ಇರುತ್ತದೆ, ನಂತರ ಗಾಯಗೊಂಡ ಮಾರುತಿ ತಂದೆ ರಘುನಾಥ ದಾಮುವಾಲೆ ಇತನು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-12-2018 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 310/2018, ಕಲಂ. 436
ಐಪಿಸಿ :-
ಫಿರ್ಯಾದಿ ರಾಮರತನ ತಂದೆ ವಿಠಲರಾವ ಗಣೂರೆ ಸಾ:
ಕಲವಾಡಿ ರವರು ಬೂಲೇಟ ಮೋಟಾರ ಸೈಕಲ ನಂ. ಕೆಎ-39/ಆರ್-6161 ನೆದ್ದು ಖರಿದಿ ಮಾಡಿದ್ದು, ದಿನಾಂಕ 13-12-2018 ರಂದು ಮನೆಯಲ್ಲಿ ಫಿರ್ಯಾದಿಯ ತಮ್ಮ ಅಂಕುಶ ರವರ ಮದುವೆ ಕಾರ್ಯಕ್ರಮ
ಇರುವದರಿಂದ ಮದುವೆ ಕಾರ್ಯಕ್ರಮ ಮುಗಿದ ನಂತರ ರಾತ್ರಿ ಎಲ್ಲರು ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ
14-12-2018 ರಂದು ಮುಂಜಾನೆ ನಸುಕಿನ ಜಾವ 4 ಗಂಟೆಗೆ ಸುಮಾರಿಗೆ ಎಚ್ಚರಾಗಿ ಎದ್ದು ನೊಡಲು ಮೋಟಾರ ಸೈಕಲಿಗೆ ಬೆಂಕಿ
ಹತ್ತಿದನ್ನು ನೊಡಿ ಅಲ್ಲೆ ಮಲಗಿಕೊಂಡಿದ್ದ ಸಂಬಂಧಿಕರಾದ ದಯಾನಂದ ತಂದೆ ಹಣಮಂತರಾವ ಪಾಟೀಲ, ಹಾಗೂ ಆಳು ಮನುಷ್ಯ ಚಂದ್ರಕಾಂತ ತಂದೆ ಬಾಲಾಜಿರಾವ ರವರಿಗೆ ಎಬ್ಬಿಸಿ ಮೋಟಾರ
ಸೈಕಲಿಗೆ ಹತ್ತಿದ ಬೆಂಕಿಯನ್ನು ಆರಿಸಿದ್ದು ಇರುತ್ತದೆ, ಯಾರೋ ಅಪರಿಚೀತರು ದುರುದ್ವೇಶದಿಂದ
ಮನೆಗೆ ಅಳವಡಿಸಿದ ಸಿಸಿ ಕ್ಯಾಮೇರಾದ ವೈರ ಕಡಿದು ಮನೆಯ ಮುಂದೆ ನಿಲ್ಲಿಸಿದ ಸದರಿ ಬೂಲೇಟ ಮೋಟಾರ
ಸೈಕಲನ್ನು ಸುಟ್ಟು ಸುಮಾರು 1,75,000/- ಬೆಲೆ ಬಾಳುವುದನ್ನು ಹಾನಿ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ
ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.