Police Bhavan Kalaburagi

Police Bhavan Kalaburagi

Wednesday, February 3, 2021

BIDAR DISTRICT DAILY CRIME UPDATE 03-02-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-02-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 18/2021, ಕಲಂ. 379 ಐಪಿಸಿ :-

ದಿನಾಂಕ 02-01-2021 ರಂದು 1700 ಗಂಟೆಯಿಂದ ದಿನಾಂಕ 03-01-2021 ರಂದು 0900 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಮಾರತರೆಡ್ಡಿ ತಂದೆ ಘಾಳರೆಡ್ಡಿ ಬಿರಾದಾರ ವಯ: 40 ವರ್ಷ, ಜಾತಿ: ರೆಡ್ಡಿ, ಸಾ: ಲ್ಲೆಪುರ ಗ್ರಾಮ, ತಾ: ಔರಾದ, ಸದ್ಯ: ಬುತ್ತಿ ಬಸವಣ್ಣ ಮಂದಿರ ಹತ್ತಿರ, ಬೀದರ ರವರು ತನ್ನ ಮನೆಯ ಮುಂದೆ ನಿಲ್ಲಿಸಿದ ತನ್ನ ಸ್ಪ್ಲೆಂಡರ ಪ್ಲಸ ದ್ವಿಚಕ್ರ ವಾಹನ ಸಂ. KA-38/K-3140, ENGINE No. HA10EA9HFA0289, CHESSI No. MBLHA10EE9HF51167, ಮಾದರಿ 2009, ಬಣ್ಣ ಕಪ್ಪು ಬಣ್ಣ, .ಕಿ 17,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 04/2021, ಕಲಂ. 279, 337, 338 .ಪಿ.ಸಿ ಜೊತೆ 187 .ಎಮ್.ವಿ ಕಾಯ್ದೆ :-

ದಿನಾಂಕ 02-02-2021 ರಂದು ಫಿರ್ಯಾದಿ ಶಹಜಅಮಾನ ತಂದೆ ಎಂಡಿ ಇಜಾಜ ಅಹ್ಮದ, ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ದರ್ಗಾಪೂರ ಬೀದರ ರವರು ತನ್ನ ತಂದೆಯಾದ ಎಂಡಿ ಇಜಾಜ ಅಹ್ಮದ ತಂದೆ ಮಹ್ಮದ ಅಬ್ದುಲಸಾಬ, ವಯ: 56 ವರ್ಷ, ಮತ್ತು ತಾಯಿ ಫಾತೀಮ ಜೌಹಾರ ಗಂಡ ಎಂಡಿ ಇಜಾಜ ಅಹ್ಮದ ವಯ: 45 ವರ್ಷ, ಮೂವರು ಕೂಡಿಕೊಂಡು ಕಾರ ನಂ. ಕೆಎ-38/ಎಮ್-3625 ನೇದರಲ್ಲಿ ಮನ್ನಾಎಖೇಳ್ಳಿ ಕಡೆಯಿಂದ ಬೀದರ ಕಡೆಗೆ ಹೋಗುತ್ತಿರುವಾಗ ಬಗದಲ ಧರಿ ಹತ್ತಿರ ಬಂದಾಗ ಬೀದರ ಕಡೆಯಿಂದ ಮನ್ನಾಎಖೇಳಿ ಕಡೆಗೆ ಹೋಗುತ್ತಿದ್ದ ಲಾರಿ ನಂ. ಕೆಎ-38/4014 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಕಾರಿಗೆ ಡಿಕ್ಕಿ ಮಾಡಿ ಲಾರಿ ನಿಲ್ಲಿಸಿದ ಹಾಗೇ ಮಾಡಿ ಲಾರಿ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಕಾರನಲ್ಲಿದ್ದ ಫಿರ್ಯಾದಿಯ ಮುಖಕ್ಕೆ, ತಲೆಗೆ, ಬೆನ್ನಿಗೆ, ಎರಡು ಭುಜಕ್ಕೆ ಬಲಗಣ್ಣಿಗೆ ರಕ್ತಗಾಯವಾಗಿರುತ್ತದೆ, ತಂದೆಯ ಎದೆಗೆ ಗುಪ್ತಗಾಯಬಲಪಾದಕ್ಕೆ, ಎಡಗಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ತಾಯಿ ರವರ ತಲೆಯ ಹಿಂದೆ ಭಾರಿ ರಕ್ತಗಾಯ, ಹಣೆಯ ಮೇಲೆ ರಕ್ತಗಾಯ, ಕಣ್ಣಿಗೆ ರಕ್ತಗಾಯವಾಗಿರುತ್ತದೆ, ನಂತರ ಅಲ್ಲಿಂದಲೇ ಹೋಗುತ್ತಿದ್ದ ಪರಿಚಯಸ್ಥರಾದ ಸಾಧಿಕ ಮತ್ತು ಫರೀದ ಇಬ್ಬರು ನೋಡಿ ಗಾಯಗೊಂಡ ಎಲ್ಲರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 23/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 02-02-2021 ರಂದು ಚಿಟಗುಪ್ಪಾ ಶಿವಾರದಲ್ಲಿ ಕೆಲವು ಜನರು ಹಣ ಹಚ್ಚಿ ಅಂದರ-ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಲಂಬಿ ಪಿ.ಎಸ್. (ಕಾ.ಸೂ) ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಶಿವಾರದ ಬೇಳಕೇರಾ ರಸ್ತೆ ಮೇಲಿರುವ ಸರಕಾರಿ ನಾಲಾದ ತಗ್ಗಿನಲ್ಲಿ ದೂರದಿಂದ ಮರೆಯಾಗಿ ನಿಂತು ನೋಡಲು ಅಲ್ಲಿ 07-08 ಜನರು ಗೊಲಾಗಿ ಕುಳಿತು ಜೂಜಾಟವಾಡುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ದಾಳಿ ಮಾಡುವಾಗ ಎಲ್ಲರೂ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಪಕ್ಕದಲ್ಲಿರುವ ಹೋಲದಲ್ಲಿ ಓಡಿ ಹೋಗುವಾಗ ಅದರಲ್ಲಿ ಇಬ್ಬರನ್ನು ಹಿಡಿದಿದ್ದು ಇನ್ನುಳಿದವರು ಓಡಿ ಹೋಗಿರುತ್ತಾರೆ, ಹಿಡಿದವರ ಹೆಸರು, ವಿಳಾಸ ವಿಚಾರಿಸಿ ಅಂಗ ಪರಿಶೀಲಿಸಲು ಅವರು ತಿಳಿಸಿದ್ದೆನೆಂದರೆ 1) ಚಂದ್ರಕಾಂತ ತಂದೆ ವೀರಶೆಟ್ಟಿ ಕಡಬಿ, ವಯ: 32 ವರ್ಷ, ಸಾ: ಬೇಳಕೇರಾ, 2) ಆಸೀಫ ತಂದೆ ಪಾಶಾಮಿಯ್ಯಾ ಕಮಲಾಪೂರೆ, ವಯ: 30 ವರ್ಷ, ಸಾ: ಗರೀಬಶಾಹ ತಕಿಯಾ ಚಿಟಗುಪ್ಪಾ ಅಂತ ತಿಳಿಸಿದ್ದು ಇರುತ್ತದೆ, ನಂತರ ಅವರಿಂದ ನಗದು ಹಣ 14,300/- ರೂ. ಹಾಗು 52 ಇಸ್ಪಿಟ ಎಲೆಗಳು ಮತ್ತು ಇಸ್ಪೀಟ ಆಡುವ ಸ್ಥಳದಲ್ಲಿ 06 ಮೋಟರ ಸೈಕಲಗಳು ಇದ್ದು ಅವುಗಳ ನಂಬರ ನೋಡಲು 1) Hero Spl+ No. KA-39/S-3935, 2) TVS XL No. KA-39/Q-1027, 3) Hero Spl + No. KA-39/S-0287, 4] Passion + No. MH-13/AM-6344, 5) Honda Deo No. KA-39/Q-7546, 6) Hero Spl + Chasis No. MBLHAR078JHJ79618, 6 ವಾಹನಗಳ ಒಟ್ಟು ಬೆಲೆ ಅ.ಕಿ 01,50,000/- ರೂ. ಇರುತ್ತದೆ, ನಂತರ ನಗದು ಹಣ, ಇಸ್ಪಿಟ್ ಎಲೆಗಳು ಹಾಗೂ 6 ವಾಹನಗಳನ್ನು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು ಸರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.