Police Bhavan Kalaburagi

Police Bhavan Kalaburagi

Wednesday, June 23, 2021

BIDAR DISTRICT DAILY CRIME UPDATE 23-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-06-2021

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 51/2021, ಕಲಂ. 279, 304 () ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 20-06-2021 ರಂದು ಫಿರ್ಯಾದಿ ಎಮ್.ಡಿ ಅಜೀಜ ಖಾನ ತಂದೆ ಎಮ್.ಡಿ ಮಾಸೂಮ ಖಾನ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಬೇಗಂಪೇಟ್ ಪಾಡಿಗಡ್ಡಾ ಹೈದ್ರಾಬಾದ್ (ಟಿ.ಎಸ್) ರವರ ವಾಹನ ನಂ. ಎಮ.ಹೆಚ್-04/ವಿ.ಹೆಚ್-6925 ನೇದರ ಮಾಲಿಕರು ಮುಂಬೈದಿಂದ ಮೇಡಿಸಿನ್ ಲೋಡ್ ತೆಗೆದುಕೊಂಡು ಬರಲು ತಿಳಿಸಿದಾಗ ಫಿರ್ಯಾದಿಯು ಹೈದ್ರಾಬಾದದಿಂದ ಸದರಿ ಐಚರ್ ವಾಹನ ತೆಗೆದುಕೊಂಡು ಮುಂಬೈಗೆ ಹೋಗುವಾಗ ಪರಿಚಯದ ಅಬ್ದುಲ್ ನಯೀಮ್ ಶೆಖ ವಯ: 44 ವರ್ಷ ಇವರು ಕೂಡ ಮುಂಬೈಗೆ ಬರುವದಾಗಿ ತಿಳಿಸಿದ್ದರಿಂದ ಅವರಿಗೆ ಜೊತೆಯಲ್ಲಿ ಕರೆದುಕೊಂಡು ಮುಂಬೈಗೆ ಹೋಗಿದ್ದು ಅಲ್ಲಿ ಮೇಡಿಸಿನ್ ಲೋಡ್ ಮಾಡಿಕೊಂಡು ದಿನಾಂಕ 21-06-2021 ರಂದು ಮುಂಬೈಯಿಂದ ಬಿಟ್ಟು ರಾ.ಹೇದ್ದಾರಿ ನಂ. 65 ಮುಖಾಂತರ ಮರಳಿ ಹೈದ್ರಾಬಾದ ಕಡೆಗೆ ಹೋಗುವಾಗ ಫಿರ್ಯಾದಿಗೆ ನಿದ್ದೆ ಬರುತ್ತಿದ್ದರಿಂದ ರಾ.ಹೇದ್ದಾರೆಇ ನಂ. 65 ಅತಲಾಪೂರ ಕ್ರಾಸ್ ಹತ್ತಿರ ಇರುವ ರಿಲಾಯನ್ಸ ಪೆಟ್ರೋಲ್ ಬಂಕದಲ್ಲಿ ತನ್ನ ಐಚರ್ ವಾಹನ ನಿಲ್ಲಿಸಿ ಫಿರ್ಯಾದಿ ಮತ್ತು ಅಬ್ದುಲ್ ನಯೀಮ್ ಇಬ್ಬರು ರೋಡ್ ದಾಟಿ ಬರ್ಹಿದೆಸೆಗೆ ಹೋಗಿ ಮರಳಿ ರೋಡ್ ದಾಟಿ ಪೆಟ್ರೋಲ್ ಬಂಕ್ ಕಡೆಗೆ ಬರುವಾಗ ದಿನಾಂಕ 22-06-2021 ರಂದು 0500 ಗಂಟೆ ಸುಮಾರಿಗೆ ಅಬ್ದುಲ್ ನಯೀಮ್ ಈತನು ರಸ್ತೆ ದಾಟಲು ರೋಡಿನ ಪಕ್ಕದಲ್ಲಿ ನಿಂತಿರುವಾಗ ಬಂಗ್ಲಾ ಕಡೆಯಿಂದ ಇನೋವಾ ಕಾರ್ ನಂ. ಎಮ್.ಹೆಚ್-14/ಇ.ವಾಯ್-6800 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿ ನಿಂತ ಅಬ್ದುಲ್ ನಯೀಮ್ ಶೇಖ ಈತನಿಗೆ ಡಿಕ್ಕಿ ಮಾಡಿ ತನ್ನ ಕಾರನ್ನು ತೆಗೆದುಕೊಂಡು ಉಮರ್ಗಾ ಕಡೆಗೆ ಓಡಿ ಹೋದನು, ಸದರಿ ಡಿಕ್ಕಿಯಿಂದ ಅಬ್ದುಲ್ ನಯೀಮ್ ಶೇಖ ಈತನು ಮೇಲಕ್ಕೆ ಹಾರಿ ರೋಡಿನ ಪಕ್ಕದಲ್ಲಿ ಬಿದ್ದನು, ನಂತರ ಅಬ್ದುಲ್ ನಯೀಮ್ ಶೇಖ  ಈತನಿಗೆ ನೋಡಲು ಆತನ ತಲೆಗೆ ಭಾರಿ ಗುಪ್ತ & ರಕ್ತಾಗಾಯವಾಗಿ ಮೆದಲು ಹೊರಗೆ ಬಿದ್ದಿರುತ್ತದೆ, ಬೆನ್ನಿನಲ್ಲಿ ಭಾರಿ ಗುಪ್ತ & ರಕ್ತಗಾಯ, ಎಡಗಾಲು ಮೊಳಕಾಲಿನ ಹತ್ತಿರ ಭಾರಿ ಗುಪ್ತಗಾಯ, ಬಲಗಾಲು ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 69/2021, ಕಲಂ. 379 ಐಪಿಸಿ :-

ದಿನಾಂಕ 05-05-2021 ರಂದು 1100 ಗಂಟೆಯಿ0 1130 ಗಂಟೆಯ ಅವಧಿಯಲ್ಲಿ ಬೀದರ ಸರಕಾರಿ ಆಸ್ಪತ್ರೆಯ ಮುಂದೆ ನಿಲ್ಲಿಸಿದ  ಫಿರ್ಯಾದಿ ದೇವರಾಜ ತಂದೆ ವಿನೊದಕುಮಾರ ವಯ: 22 ವರ್ಷ, ಜಾತಿ: ಮರಾಠಾ, ಸಾ: ಶಿವನಗರ() ಬೀದರ ರವರ ಹೀರೊ ಪ್ಯಾಶನ ಪ್ರೊ ಮೋಟಾರ್ ಸೈಕಲ ನಂ. KA-38/S-5116,  Chasis No. MBLHA10BSGHC95415, Engine No. HA10EVGHC81964, Model 2016, Color: Black ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು  ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ದಿನಾಂಕ 22-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 57/2021, ಕಲಂ. 279, 338 ಐಪಿಸಿ :-

ದಿನಾಂಕ 22-06-2021 ರಂದು ಫಿರ್ಯಾದಿ ಪ್ರಕಾಶ ತಂದೆ ಅಶೋಕ ಮೇತ್ರೆ ವಯ: 25 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಖಾಜಾಪೂರ, ತಾ: ಬೀದರ ರವರು ತನ್ನ ಮೋಟಾರ ಸೈಕಲ ನಂ. ಕೆಎ-38/ಎಕ್ಸ್-4719  ನೇದರ ಮೇಲೆ ಹಿಂದೆ ತನ್ನ ದೊಡ್ಡಪ್ಪನಾದ ಶಂಕರ ತಂದೆ ಘಾಳೇಪ್ಪಾ ಮೇತ್ರೆ ವಯ: 60 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಧೂಮಸಾಪೂರ ಇವರಿಗೆ ಕೂಡಿಸಿಕೊಂಡು ಚಿದ್ರಿ ಕಡೆಗೆ ಹೋಗಲು ಕಮಠಾಣೆ ಶಾಲೆಯ ಹತ್ತಿರ ಬಂದಾಗ ವಿದ್ಯಾನಗರ ಕಾಲೋನಿ 9ನೇ ಕ್ರಾಸ್ ಒಳಗಿನಿಂದ ಮೋಟಾರ ಸೈಕಲ ನಂ. ಕೆಎ-38/ವಿ-3904 ನೇದರ ಚಾಲಕನಾದ ಆರೋಪಿ ಅಶೋಕ ತಂದೆ ಸಂಗಪ್ಪ ವಾಲ್ದೋಡ್ಡಿ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಖಾನಾಪೂರ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿದ್ದರಿಂದ ದೊಡ್ಡಪ್ಪ ಶಂಕರ ಇವರಿಗೆ ಎಡಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಫಿರ್ಯಾದಿಗೆ ತರಚಿದ ಗಾಯವಾಗಿರುತ್ತದೆ, ನಂತರ ಗಾಯಗೊಂಡ ದೊಡ್ಡಪ್ಪನಿಗೆ ಫಿರ್ಯಾದಿ ಮತ್ತು ಅಶೋಕ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಪೇಕ್ಸ ಆಸ್ಪತ್ರೇಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 92/2021, ಕಲಂ. 454, 380 ಐಪಿಸಿ :-

ದಿನಾಂಕ 22-06-2021 ರಂದು 1300 ಗಂಟೆಯಿಂ1500 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಗಿರೀಶ ತಂದೆ ವೈಜಿನಾಥ ಮುಲ್ಗೆ ವಯ: 47 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 4-743 ಶಿವಾಜಿ ನಗರ ಗುಂಪಾ ಬೀದರ ರವರ ಮನೆಗೆ ಹಾಕಿದ ಕೀಲಿ ಕೈಯನ್ನು ಕಿಟಕಿಯಿಂದ ತೆಗೆದುಕೊಂಡು ಕೀಲಿ ತೆರೆದು ಮನೆಯಲ್ಲಿ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಅಲಮಾರಿಯ ಕೀಲಿ ಮುರಿದು ಅಲಮಾರಿಯಲ್ಲಿರುವ 1) ನಗದು ಹಣ 94000/- ರೂ., 2) ಬಂಗಾರದ ಗಂಟನ ಅಂದಾಜು 45 ಗ್ರಾಂ., 3) ಕಿವಿಯ ಓಲೆ ಹಾಗು ಝುಮಕಿ ಅಂದಾಜು 10 ಗ್ರಾಂ., 4) ಹೆಣ್ಣು ಮಕ್ಕಳ ಕೈಉಂಗುರ ಎರಡು ಅಂದಾಜು 06 ಗ್ರಾಂ. ಹೀಗೆ ಒಟ್ಟು 61 ಗ್ರಾಂ. ಅ.ಕಿ 2,44,000/- ರೂ., ಹೀಗೆ ಒಟ್ಟು 3,38,000/- ರೂ. ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 73/2021, ಕಲಂ. 457, 380 ಐಪಿಸಿ :-

ದಿನಾಂಕ 16-06-2021 ರಂದು ಅಕ್ಷರದಾಸೊಹ ಅಡಿಯಲ್ಲಿ ತಡವಾಳ (ಕೆ) ಗ್ರಾಮದ ಪಂಚಶೀಲ ಪ್ರೌಡ ಶಾಲೆಗೆ ಆಹಾರ ಧಾನ್ಯಗಳು ಸರಬರಾಜು ಆಗಿರುತ್ತವೆ, ದಿನಾಂಕ 17-06-2021 ರಂದು 52 ವಿಧ್ಯಾರ್ಥಿಗಳಿಗೆ ವಿತರಿಸಲಾಯಿತು, ಉಳಿದ ಅಹಾರ ಧಾನ್ಯಗಳು ದಾಸ್ತಾನು ಕೊಣೆಯಲ್ಲಿಟ್ಟುರುವುದನ್ನು ಯಾರೋ ಕಳ್ಳರು ದಾಸ್ತಾನು ಕೋಣೆಯ ಕೀಲಿ ರಾಡಿನಿಂದ ಒಡೆದು ಒಳಗಡೆ ಪ್ರವೇಶ ಮಾಡಿ ದಾಸ್ತಾನು ಕೋಣೆಯಲ್ಲಿನ 1) ಎರಡು ಗ್ಯಾಸ ಸಿಲೇಂಡರ  (ಒಂದು ಖಾಲಿ, ಒಂದು ಭರ್ತಿ) ಅ.ಕಿ 5000/- ರೂ., 2) ಒಂದು ತೂಕದ ಯಂತ್ರ ಅ.ಕಿ 8,000/- ರೂ., ಹಾಗೂ 3) 8 ಳಿ ಚೀಲ ( 4 ಕ್ವಿಂಟಲ, 25 ಕೆ.ಜಿ ಅ.ಕಿ 4,500/- ರೂ.) ಹೀಗೆ ಒಟ್ಟು 17,500/- ರೂ ಬೆಲೆವುಳ್ಳ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಚಂದ್ರಕಾಂತ ತಂದೆ ರೇವಣಪ್ಪಾ ಖಂಡಾಳೆ ಸಾ: ಮದಕಟ್ಟಿ ತಡವಾಳ (ಕೆ) ಗ್ರಾಮದ ಪಂಚಶೀಲ ಪ್ರೌಡ ಶಾಲೆಯ ಪ್ರಭಾರಿ ಮುಖ್ಯಗುರುಗಳು ರವರು ನೀಡಿದ ದೂರಿನ ಮೇರೆಗೆ ದಿನಾಂಕ 22-06-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 54/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 22-06-2021 ರಂದು ಡೋಣಗಾಂವ(ಎಮ್) ಕ್ರಾಸ ಹತ್ತಿರ ಒಬ್ಬ ವ್ಯಕ್ತಿ ಹೋಗಿ ಬರುವ ಜನರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆಂದು ನಂದಿನಿ ಪಿಎಸ್ಐ ಕಮಲನಗರ ಪೊಲೀಸ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಡೋಣಗಾಂವ(ಎಮ್) ಕ್ರಾಸ ಹತ್ತಿರ ಹೋಗಿ ನೋಡಲು ಅಲ್ಲಿ ಆರೋಪಿ ಬಾಪುರಾವ ತಂದೆ ಭವರಾವ ಕುಲಕರ್ಣಿ ವಯ: 55 ವರ್ಷ, ಜಾತಿ: ಬ್ರಾಹ್ಮಣ, ಸಾ: ಡೋಣಗಾಂವ(ಎಮ್) ಇತನು ನಿಂತಿದ್ದು ಸದರಿ ಆರೋಪಿತನ ಮೇಲೆ ಸಂಶಯ ಪಟ್ಟು ಪಂಚರ ಸಮಕ್ಷಮ  ಸದರಿ ಆರೋಪಿತನ ಅಂಗ ಶೋಧನೆ ಮಾಡಲು ಅವನ ಹತ್ತಿರ 1) ಒಂದು ನೋಟ ಬುಕ್, 2) ಒಂದು ಬಾಲ ಪೆನ್ನ ಹಾಗೂ 3) ನಗದು ಹಣ 900/- ರೂಪಾಯಿ ಸಿಕ್ಕಿದ್ದು, ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.