Police Bhavan Kalaburagi

Police Bhavan Kalaburagi

Monday, November 16, 2020

BIDAR DISTRICT DAILY CRIME UPDATE 16-11-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-11-2020


ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 151/2020 ಕಲಂ 379 ಐಪಿಸಿ :-

ದಿನಾಂಕ 15/11/2020 ರಂದು 0900 ಗಂಟೆಗೆ ಫಿರ್ಯಾದಿ ಸಂತೋಷ ತಂದೆ ಪಾಂಡುರಂಗ ಸಾ. ವಾಂಜ್ರಿ ಹುಮನಾಬಾದ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ  ಫಿರ್ಯಾದಿಯು ಕ್ರೂಜರ ನಂ ನಂ ಕೆ. ಎ 47 ಎಂ. 1460 ನೇದರ ಮೇಲೆ ಡ್ರೈವರ ಕೆಲಸ ಮಾಡಿಕೊಂಡಿದ್ದು ದಿನಾಂಕ 12/11/2020 ರಂದು ನಾನು ಬೀದರಗೆ ವಾಹನ ಬಾಡಿಗೆ ಹೋಗಿ ಬಂದು  ತನ್ನ ಕ್ರೋಜರ ವಾಹನ ರಾತ್ರಿ 8.30 ಗಂಟೆಗೆ  ಮನೆಯ ಮುಂದೆ ನಿಲ್ಲಿಸಿದ್ದು ಇರುತ್ತದೆ.   ದಿನಾಂಕ 13/11/2020 ರಂದು ಮುಂಜಾನೆ 7.00 ಗಂಟೆಗೆ ಎದ್ದು  ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ   ಕ್ರೂಜರ ವಾಹನ ನೋಡಲು ಇರಲಿಲ್ಲ   ಎಲ್ಲ ಕಡೆ ಹುಡಕಾಡಿ ನೋಡಲು ಎಲ್ಲಿಯು ಸಿಕ್ಕಿರುವುದಿಲ್ಲ. ದಿನಾಂಕ 12/11/2020 ರ ರಾತ್ರಿ ವೇಳೆಯಲ್ಲಿ ಹುಮನಾಬಾದ ಪಟ್ಟಣದ ವಾಂಜ್ರಿಯಲ್ಲಿರುವ  ಮನೆಯ ಮುಂದೆ ನಿಲ್ಲಿಸಿದ ನಮ್ಮ ಕ್ರೂಜರ ವಾಹನ ಟ್ರಕ್ಸ, ತೋಫಾನ್ ಕ್ರೂಜರ ನಂ ಕೆ.ಎ 47. ಎಂ 1460 , ಮಾದರಿ 2009, ಸೀಲವರ ಬಣ್ಣದ್ದು, ಇಂಜಿನ ನಂಬರ D27034126 ಮತ್ತು ಚೇಸ್ಸಿ ನಂಬರ MC1D4DHAXAP002126. ಅಂದಾಜು ಕಿಮ್ಮತ್ತು 25,0000/- ರೂ. ನೇದ್ದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಔರಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 103/2020 ಕಲಂ 379 ಐಪಿಸಿ :-

ದಿನಾಂಕ:15/11/2020 ರಂದು 1400 ಗಂಟೆಗೆ ಫಿಯರ್ಾದಿ ಶ್ರೀಮತಿ ಶಿಲ್ಪಾ ತಂದೆ ಶಿವಕುಮಾರ ಚಿಟ್ಮೆ ವ:25 ವರ್ಷ ಜಾ/ ಲಿಂಗಾಯತ ಉ/ ಮನೆ ಕೇಲಸ ಸಾ/ ತೆಗಂಪೂರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೇನೆಂದರೆ. ಫಿರ್ಯಾದಿಗೆ 2 ಜನ ಗಂಡು ಮಕ್ಕಳಿದ್ದು ಇವರು ಮತ್ತು ಇವರ ಗಂಡ ಒಕ್ಕಲುತನ ಕೆಲಸದ ಮಾಡಿಕೊಂಡು ಉಪಜಿವಿಸುತ್ತಿದ್ದು ಹಾಗು ಇವರ ಹತ್ತಿರ ಎರಡು ಎಮ್ಮೆಗಳು ಇರುತ್ತವೆ. ಗಿರುವಾಗ ದಿನಾಂಕ;03/11/2020 ರಂದು  ಮನೆಯಲ್ಲಿ ಕೇಲಸ ಮಾಡಿಕೊಂಡು  ಎರಡು ಎಮ್ಮೆಗಳನ್ನು ಮನೆಯಿಂದ ಬಿಟ್ಟುಕೊಂಡು   ಹೊಲಕ್ಕೆ ಹೋಗಿ ಮೈಯಿಸಿಕೊಂಡು ಸಾಯಂಕಾಲ ಮನೆಗೆ ಬಂದು ಮನೆಯ ಮುಂದೆ ಹನುಮಾನ ಗುಡಿಯ ಹತ್ತಿರ ಇರುವ ಕೆ.ಇ.ಬಿ ಕಂಬಕ್ಕೆ ನಮ್ಮ ಸಣ್ಣ ಎಮ್ಮೆಯನ್ನು ಒಂದು ಹಗ್ಗದಿಂದ ಕಟ್ಟಿಹಾಕಿದ್ದು ಮತ್ತೊಂದು ದೊಡ್ಡ ಎಮ್ಮೆಯನ್ನು ಮನೆಯ ಮುಂದಿನ ಕೊಟ್ಟಿಗೆಯಲ್ಲಿ ಕಟ್ಟಿ ಮನೆಯ ಕೆಲಸ ಆದ ಮೇಲೆ ಊಟ ಮಾಡಿಕೊಂಡು ರಾತ್ರಿ 11.30 ಗಂಟೆಗೆ ಎರಡು ಎಮ್ಮೆಗಳಿಗೆ  ಹುಲ್ಲು ಹಾಕಿ   ಮನೆಯಲ್ಲಿ ಮಲಗಿರುತ್ತಾರೆ.  ಬೆಳಿಗ್ಗೆ ದಿನಂಕ:04/11/2020 ರಂದು ನಸುಕಿನ ಜಾವ 4 ಗಂಟೆಯ ಸುಮಾರಿಗೆ ನೋಡಿದಾಗ ಎಮ್ಮೆಗಳು ಇರಲಿಲ್ಲ ರಾತ್ರಿ ಸಮಯದಲ್ಲಿ ಕಳುವಾದ ಎಮ್ಮೆಯನ್ನು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ ಅಂತಾ ದಿನಾಂಕ:15/11/2020 ರಂದು ಠಾಣೆಗೆ ಬಂದು ದೂರು ನೀಡಿದ್ದು ಅವುಗಳ ಅಂದಾಜು ಕಿಮ್ಮತ್ತು 40.000-/ಆಗಬಹುದು ಅದನ್ನು ಯಾರೋ ಅಪರಿಚಿತ ಕಳ್ಳರು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಔರಾದ ಪೊಲೀಸ್ ಠಾಣೆ ಅಪರಾಧ 102/2020 ಕಲಂ 379 ಐಪಿಸಿ :-

ದಿನಾಂಕ:15/11/2020 ರಂದು 1300 ಗಂಟೆಗೆ ಶ್ರೀಮತಿ ಕಂಬಳಬಾಯಿ ಗಂಡ ಸ್ವ ಸಿದ್ದಪ್ಪಾ ಚಿಟ್ಮೆ ವ/ 35 ವರ್ಷ ಜಾ/ ಲಿಂಗಾಯತ ಉ/  ಮನೆ ಕೇಲಸ ಸಾ/ ತೆಗಂಪೂರ ರವರು ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಇವರಿಗೆ 3 ಜನ ಗಂಡು ಮಕ್ಕಳಿದ್ದು ಇವರ ಪತಿ ಸುಮಾರು 10 ವರ್ಷದ ಹಿಂದೆ ಮೃತ ಪಟ್ಟಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ:03/11/2020 ರಂದು  ಇವರು ಮನೆಯಲ್ಲಿ ಕೇಲಸ ಮಾಡಿಕೊಂಡು ತನ್ನ ಇದ್ದ ಒಂದು ಎಮ್ಮೆಯನ್ನು ಮನೆಯಿಂದ ಬಿಟ್ಟುಕೊಂಡು   ಹೊಲಕ್ಕೆ ಹೋಗಿ ಮೈಯಿಸಿಕೊಂಡು ಸಾಯಂಕಾಲ ಮನೆಗೆ ಬಂದು ಮನೆಯ ಮುಂದೆ ಸಿಸಿ ರೋಡ ಇದ್ದು ರೋಡಿನ ಮೇಲೆ ಒಂದು ಕಬ್ಬಿಣದ ಸಂಕಳಿ ಹಾಕಿದ್ದು ಅದಕ್ಕೆ ಹಗ್ಗದಿಂದ ಕಟ್ಟಿಹಾಕಿ ನಂತರ ಮನೆಯಲ್ಲಿ ಕೆಲಸ ಮಾಡಿ ಊಟ ಮಾಡಿ ರಾತ್ರಿ 11.30 ಗಂಟೆಗೆ ನಂತರ ಎಮ್ಮೆಗೆ  ಹುಲ್ಲು ಹಾಕಿ  ಮಕ್ಕಳಾದ ಮಹೇಶ ಮತ್ತು ನಾಗೇಶ ಮೂವರು ಮನೆಯಲ್ಲಿ ಮಲಗಿದ್ದು ನಂತರ ದಿನಾಂಕ:04/11/2020 ರಂದು ನಸುಕಿನ ಜಾವ 4 ಗಂಟೆಯ ಸುಮಾರಿಗೆ  ಎದ್ದು ನೋಡಿದಾಗ  ಮನೆಯ ಮುಂದೆ ಕಟ್ಟಿದ ಎಮ್ಮೆ ಕಾಣಿಸುತ್ತಿಲ್ಲಾ ಅಂತ ಮನೆಯ ಒಳಗೆ ಬಂದು  ಫಿಯರ್ಾದಿಗೆ ಎಬ್ಬಿಸಿ ಎಮ್ಮೆ ಕಾಣುತ್ತಿಲ್ಲಾ ಅಂತ ಹೇಳಿದ್ದು ಗಾಬರಿಗೊಂಡು ನಾನು ಸಹ ಮನೆಯ ಹೋರಗೆ ಬಂದು ನೋಡಿದಾಗ ಎಮ್ಮೆಗಳು ಇದ್ದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿದರು ಸಹ ಸಿಕ್ಕಿರುವುದಿಲ್ಲ ಅವಗಳ ಅಂ.ಕಿ.  60.000-/ಆಗಬಹುದು ಯಾರೋ ಅಪರಿಚಿತ ಕಳ್ಳರು ರಾತ್ರಿ ವೇಳೆಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನಿಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 173/2020 ಕಲಂ ಮನುಷ್ಯ ಕಾಣೆ :-

ದಿನಾಂಕ 15/11/2020 ರಂದು 10-00 ಗಂಟೆಗೆ ಶ್ರೀ ದತ್ತು@ ದತ್ತಾತ್ರೆಯ ತಂದೆ ಅಪ್ಪಾರಾವ ಕಾಂಬಳೆ ವಯ 57 ವರ್ಷ ಸಾ|| ವಿದ್ಯಾನಗರ  ಇವರ 3 ಜನ ಗಂಡು ಮಕ್ಕಳು, ಇಬ್ಬರು ಹೇಣ್ಣು ಮಕ್ಕಳು ಇರುತ್ತಾರೆ. ಹೀಗಿರುವಾಗ ಹೀರಿಯ ಮಗನಾದ ಅಂಬಾದಾಸ ಇತನು  ದಿನಾಂಕ 27/08/2020 ರಂದು ಸಾಯಂಕಾಲ 1900 ಗಂಟೆಗೆ ಸೂಮಾರಿಗೆ ತಾನು ಹೋರಗೆ ಹೋಗಿ ಬರುತ್ತೆನೆಂದು ಹೇಳಿ ಹೋದವನು   ತಡ ರಾತ್ರಿಯಾದರು ಮನೆಗೆ ಮರಳಿ ಬಾರದ ಕಾರಣ ಮರು ದಿವಸಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಇವರ ಮಗ ಅಂಬಾದಾಸ ಇತನ ಪತ್ತೆಯಾಗದೆ ಇಲ್ಲಿಯ ವರೆಗೆ ಸಂಬಂದಿಕರ ಮನೆಯಲ್ಲಿ, ಇತರೆ ಕಡೆ ಹುಡುಕಾಡಿ ಠಾಣೆಗೆ ಬಂದು ದೂರು ನಿಡಲು ತಡವಾಗಿರುತ್ತದೆ, ಚಹರೆ ಪಟ್ಟಿ ಈ ಕೆಳಗಿನಂತೆ ಇರುತ್ತದೆ 1)ಹೆಸರು ಮತ್ತು ವಿಳಾಸ  ;- ಅಂಬಾದಾಸ ತಂದೆ ದತ್ತು@ ದತ್ತಾತ್ರೆಯ ಕಾಂಬಳೆ ವಯ 30 ವರ್ಷ ಸಾ|| ವಿದ್ಯಾ ನಗರ ಕಾಲೋನಿ 11 ನೇ ಕ್ರಾಸ ಬೀದರ 2) ಮೈಬಣ್ಣ ;- ಗೋದಿ ಬಣ್ಣ 3)ಮೈಕಟ್ಟು  :-  ತಳ್ಳನೇಯ ಮೈಕಟ್ಟು 4)ಬಟ್ಟೆ :- ಬಿಳಿ ಬಣ್ಣದ  ನಡುವೆ ಕಪ್ಪು ಹೂ ವುಳ್ಳ ಶರ್ಟ, ನೀಲಿ ಬಣ್ಣದ ಜೀನ್ಸ  ಪ್ಯಾಂಟ 5)ಭಾಷೆ :-  ಕನ್ನಡ, ಹಿಂದಿ. ಮರಾಠಿ(ತಪದಲಿ ಮಾತನಾಡುತ್ತಾನೆ) ಕಾರಣ  ಅಂಬಾದಾಸ ಇತನ ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.