Police Bhavan Kalaburagi

Police Bhavan Kalaburagi

Monday, July 1, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 30-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ನಂದರ್ಗಿ ಗ್ರಾಮದ ಮಲ್ಲಿಕಾರ್ಜುನ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ನಂದರ್ಗಿ ಗ್ರಾಮಕ್ಕೆ ಹೋಗಿ ಮಲ್ಲಿಕಾರ್ಜುನ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು ಲಕ್ಷಿಪುತ್ರ ತಂದೆ ಮಡೆಪ್ಪ ರೇವೂರ ಸಾ||ನಂದರ್ಗಿ ಗ್ರಾಮ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 830/- ರೂಪಾಯಿ ನಗದು ಹಣ ಹಾಗೂ 2)ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ 3)ಒಂದು ಪೆನ್ನ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 104/2019 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಫರತಾಬಾದ ಠಾಣೆ : ದಿನಾಂಕ 30/06/2019 ರಂದು ಫರಹತಾಭಾದ ಪೊಲೀಸ ಠಾಣಾ ವ್ಯಾಪ್ತಿಯ ಹೇರೂರು(ಬಿ) ಗ್ರಾಮದ ಮರಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ  ಪಿ.. ಫರತಾಬಾದ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೇರೂರು(ಬಿ) ಗ್ರಾಮಕ್ಕೆ ಹೊಗಿ ವಾಹನವನ್ನು ಸ್ವಲ್ಪ ದೂರು ನಿಲ್ಲಿಸಿ ಇಳಿದು ನಡೆದುಕೊಂಡು ಬಾತ್ಮಿ ಇದ್ದ ಸ್ಥಳದ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲು ಸದರಿ ಹೇರೂರು(ಬಿ) ಗ್ರಾಮದ ಮರಗಮ್ಮ ಗುಡಿಯ ಹತ್ತಿರ ಒಬ್ಬ ವ್ಯಕ್ತಿ  ಸಾರ್ವಜನಿಕ ಸ್ಥಳದಲ್ಲಿ ನಿಂತು ಗಿರಾಕಿಗಳಿಂದ ಹಣವನ್ನು ಪಡೆದು ತನ್ನ ಹತ್ತಿರ ಇದ್ದ ಸರಾಯಿ ಬಾಟಲಗಳನ್ನು ತೆಗೆದು ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ನಾವೇಲ್ಲರೂ ಕೂಡಿ ಸದರಿ ಸಾರಾಯಿ ಮಾರಾಟ ಮಾಡುತ್ತಿದ್ದ ಮನುಷ್ಯನಿಗೆ ದಾಳಿ ಮಾಡಿ ಹಿಡಿದುಕೊಂಡಿದ್ದು. ಗಿರಾಕಿಗಳು ಓಡಿ ಹೋಗಿದ್ದು. ನಂತರ ಸಾರಾಯಿ ಮಾರುತ್ತಿದ್ದವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ನಾಗಯ್ಯ ತಂದೆ ಗೋಪಯ್ಯ ಕಲಾಲ ( ಗುತ್ತೆದಾರ) ಸಾಃ ಬಸವ ಪಟ್ಟಣ್ಣ ಗ್ರಾಮ ಅಂತಾ ತಿಳಿಸಿದ್ದುಆತನ ವಶದಲ್ಲಿದ್ದ ಸಾರಾಯಿ ಬಾಟಲಗಳನ್ನು ಪರಿಶೀಲಿಸಿ ನೋಡಲು 1) ಓಲ್ಡ ಟವರ್ನ ವಿಸ್ಕಿ 180 ಎಮ್.ಎಲ್. ಒಟ್ಟು 15 ಪೌಚಗಳು ಇದ್ದು. ಒಂದರ ಕಿಮ್ಮತ್ತು 60.64 ರೂಪಾಯಿ ಅಂತೆ ಇದ್ದು ಒಟ್ಟು 15 ಪೌಚಗಳ ಕಿಮ್ಮತ್ತು 909/- ರೂಪಾಯಿ 2) ಓರಿಜನಲ್ ಚಾಯ್ಸ್ ವಿಸ್ಕಿ 180 ಎಂ.ಎಲ್ನ 20 ಪೌಚಗಳು ಒಂದರ ಕಿಮ್ಮತ್ತು 74.13/-ರೂ ನಂತೆ ಒಟ್ಟು 1482=00 ರೂಪಾಯಿ ಇದ್ದವು. ನಂತರ ಮದ್ಯ ಮಾರಾಟ ಮಾಡುವ ಬಗ್ಗೆ ದಾಖಲಾತಿಗಳ ಇರುವ ಬಗ್ಗೆ ವಿಚಾರ ಮಾಡಲು ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತಾ ತಿಳಿಸಿದ್ದು. ನಂತರ ಆತನ ಅಂಗಶೋಧನೆ ಮಾಡಲು ಮದ್ಯ ಮಾರಾಟ ಮಾಡಿದ ನಗದು ಹಣ 570/- ಸಿಕ್ಕಿದ್ದು. ಹೀಗೆ ಒಟ್ಟು 2391/- ರೂಪಾಯಿ ಕಿಮ್ಮತ್ತಿನ ಮದ್ಯದ ಬಾಟಲಗಳು ಹಾಗೂ ನಗದು ಹಣ 570/- ರೂ ನೆದ್ದವುಗಳನ್ನು ಕೇಸಿನ ಮುಂದಿನ ಪರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಸದರಿ ಮುದ್ದೆಮಾಲು, ಆರೋಪಿತನೊಂದಿಗೆ ಫರತಾಬಾದ ಠಾಣೆಗೆ ಬಂದು ಠಾಣೆಯ  ಗುನ್ನೆ ನಂ 96/2019 ಕಲಂ 32, 34 ಕೆ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದ ಟಿಪ್ಪರಗಳು ಮತ್ತು ಜೇಸಿಬಿ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 29-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಘತ್ತರಗಾ ಗ್ರಾಮದ ಹತ್ತಿರ ಇರುವ ಭೀಮಾನದಿ ಹತ್ತಿರ  ಜೆಸಿಬಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಘತ್ತರಗಾ ಗ್ರಾಮದ ಭೀಮಾನದಿ ಹತ್ತಿರ ಹೋಗಿ ಸ್ವಲ್ಪ ದೂರು ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೊಡಲು, ಘತ್ತರಗಾ ಗ್ರಾಮದ ಭೀಮಾನದಿಯ ದಡದ  ಹತ್ತಿರ ಜೆಸಿಬಿ ಸಹಾಯದಿಂದ ಟಿಪ್ಪರಗಳಲ್ಲಿ ಮರಳು ತುಂಬುತಿದ್ದಾಗ. ನಾವು ಪಂಚರ ಸಮಕ್ಷಮದಲ್ಲಿ ಸದರಿಯವರ ದಾಳಿ ಮಾಡಿದಾಗ ಸದರಿಯವರು ನಮ್ಮನ್ನು ನೋಡಿ ಓಡ ತೊಡಗಿದರು, ಆಗ ನಾವು ಸದರಿಯವರ ಬೆನ್ನು ಹತ್ತಿ ಅವರಲ್ಲಿ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ ಒಬ್ಬಬ್ಬರಾಗಿ ತಮ್ಮ ಹೆಸರು 1)ಉಮೇಶ ತಂದೆ ಅಬಾ ಬೊಸ್ಲೆ ||ಟಿಪ್ಪರ ನಂಬರ ಕೆಎ-33 -4562 ನೇದ್ದರ ಚಾಲಕ ಸಾ||ಅಗರಖೇಡ ತಾ||ಇಂಡಿ 2)ಚಾಂದಪಾಷಾ ತಂದೆ ಖುರುಸಿದ್ದಮಿಯಾ ||ಜೆ,ಸಿ,ಬಿ.ಕ್ಲಿನರ್ ಸಾ||ಊಡಗಿ ತಾ||ಸೆಡಂ 3) ಬಸವರಾಜ ತಂದೆ ಶಿವಶರಣ ಜಮಾದಾರ ಸಾ||ನಿಲಗಾರ ಕರಜಗಿ ತಾ||ಅಕ್ಕಲಕೋಟ 4) ಮುಜಾಹಿದ್ದಿನ ತಂದೆ ಅಬ್ದುಲಸಾಬ ಮೋರಟಗಿ ಸಾ|| ಬಗಲೂರ ಅಂತ ತಿಳಿಸಿದ್ದು ಮತ್ತು ಟಿಪ್ಪರ ನಂಬರ ಕೆಎ-28 ಡಿ-4065 ನೇದ್ದರ ಚಾಲಕ ಹಾಗೂ ಜೆ,ಸಿ.ಬಿ.ಆಫ್ ರೇಟರ ಓಡಿ ಹೋಗಿದ್ದು ಇರುತ್ತದೆ. ನಂತರ ಪಂಚರ ಸಮಕ್ಷಮ ಟಿಪ್ಪರ ನಂಬರಗಳನ್ನು ನೋಡಲಾಗಿ 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-28 ಡಿ-4065 ಸದರಿ ಟಿಪ್ಪರ .ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ .ಕಿ 10.000/- ರೂ ಇರಬಹುದು 2) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-33 -4562 ಸದರಿ ಟಿಪ್ಪರ .ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ .ಕಿ 10.000/-ರೂ ಇರಬಹುದು ನಂತರ ಜೆ,ಸಿ,ಬಿ ನಂಬರ ನೋಡಲಾಗಿ ಅದರ ಚೆಸ್ಸಿ ನಂಬರ HAR3DXSSE01869333 ನೇದ್ದು ಇದ್ದು ಅದರ :ಕಿ:10,00,000/-ರೂ  ಇರಬಹುದು ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಸದರಿ ಟಿಪ್ಪರಗಳನ್ನು ಸಿಬ್ಬಂದಿಯವರ ಸಹಾಯದಿಂದ ಅಫಜಲಪೂರ ಪೊಲೀಸ್ ಠಾಣೆಗೆ ತಂದು ಠಾಣೆಯ ಗುನ್ನೆ ನಂ 103/2019 ಕಲಂ 379 ಐಪಿಸಿ ಮತ್ತು 21 (1) ಎಮ್.ಎಮ್.ಡಿ.ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಬೀರಪ್ಪ ತಂದೆ ಶಿವಪ್ಪ ಹಿರೇಕುರುಬರ ಕಂದಾಯ ನಿರೀಕ್ಷಕರು ಅಫಜಲಪೂರ ರವರು ದಿನಾಂಕ 30-06-2019 ರಂದು ಮಾನ್ಯ ಮದುರಾಜ ತಹಸಿಲ್ದಾರರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಶ್ರೀ ಮಂಜುನಾಥ ಹೂಗಾರ ಪಿ.ಎಸ್. ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಗ್ರಾಮದ ಭೀಮಶಾ ತಂದೆ ಲಚ್ಚಪ್ಪ ಇವರ ಪಟ್ಟಾ ಜಮೀನು ಸರ್ವೆ ನಂ 38/ಪೋ2/1 ವಿಸ್ತೀರ್ಣ 18 ಗುಂಟಾ ಹೊಲದಲ್ಲಿ ಸುಮಾರು 50 ಟಿಪ್ಪರ ಟ್ರೀಪ್ ಮರಳನ್ನು ಅಕಿ-5 ಲಕ್ಷ ರೂಪಾಯಿ ಕಿಮ್ಮತ್ತಿನ ಮರಳನ್ನು ಸಂಗ್ರಹಿಸಿದ್ದು, ಸದರಿ ಮರಳನ್ನು ಜಪ್ತ ಮಾಡಿಕೊಳ್ಳಲಾಗಿರುತ್ತದೆ. ಅದರಂತೆ ಶಿವಪೂರ ಗ್ರಾಮದಲ್ಲಿರು ಸರ್ಕಾರಿ ಜಾಗದಲ್ಲಿ ಇನ್ನಿತರರು ಕೂಡಾ ಒಟ್ಟು ಅಂದಾಜು 150 ಟಿಪ್ಪರ ಟ್ರೀಪ್ ಮರಳನ್ನು ಅನದಿಕೃತವಾಗಿ ಕಳ್ಳತನದಿಂದ ಸಂಗ್ರಹಿಸಿಟ್ಟಿರುತ್ತಾರೆ. ಸದರಿ ಮರಳನ್ನು ಸಹ ಜಪ್ತ ಮಾಡಿಕೊಳ್ಳಲಾಗಿರುತ್ತದೆ. ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಪಟ್ಟಾ ಜಮೀನಿನ ಮಾಲಿಕನಾದ ಭೀಮಶಾ ತಂದೆ ಲಚ್ಚಪ್ಪ ಸಾ|| ಶಿವಪೂರ ಈತನ ಮೇಲೆ ಮತ್ತು ಇನ್ನು ಕೆಲವು ಜನರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 105/2019 ಕಲಂ 379 ಐಪಿಸಿ & 21(1) ಎಮ್ ಎಮ್ ಡಿ ಆರ್ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಬೀರಪ್ಪ ತಂದೆ ಶಿವಪ್ಪ ಹಿರೇಕುರುಬರ ಕಂದಾಯ ನಿರೀಕ್ಷಕರು ಅಫಜಲಪೂರ ರವರು ದಿನಾಂಕ 30-06-2019 ರಂದು ಮಾನ್ಯ ಮದುರಾಜ ತಹಸಿಲ್ದಾರರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಶ್ರೀ ಮಂಜುನಾಥ ಹೂಗಾರ ಪಿ.ಎಸ್. ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕೇಶಾಪೂರ ಹಳೆಯ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಯಾರೋ 2 ರಿಂದ 3 ಜನರು ಅನದಿಕೃತವಾಗಿ ಕಳ್ಳತನದಿಂದ ಸುಮಾರು 30 ಟಿಪ್ಪರ ಟ್ರೀಪ್ ಮರಳನ್ನು ಅಕಿ-3 ಲಕ್ಷ ರೂಪಾಯಿ ಕಿಮ್ಮತ್ತಿನ ಮರಳನ್ನು ಸಂಗ್ರಹಿಸಿದ್ದು, ಸದರಿ ಮರಳನ್ನು ಜಪ್ತ ಮಾಡಿಕೊಳ್ಳಲಾಗಿರುತ್ತದೆ.           ಕಾರಣ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಗುನ್ನೆ ನಂ 106/2019 ಕಲಂ 379 ಐಪಿಸಿ & 21(1) ಎಮ್ ಎಮ್ ಡಿ ಆರ್ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ವಾಡಿ ಠಾಣೆ : ದಿನಾಂಕ 29/06/2019 ರಂದು ಶ್ರೀ  ವಿಜಯ ತಂದೆ ಕಿಶನ ಚವ್ಹಾಣ ಸಾ:ಸೇವಾಲಾಲನಗರ ತಾಂಡಾ ವಾಡಿ ರವರು ಮತ್ತು ತನ್ನ ಹೆಂಡತಿ ಕೂಡಿಕೊಂಡು ಇಂದಿರಾನಗರದ ಸಿಂಡಿಕೇಟ ಏರಿಯಾದಲ್ಲಿರುವ ಮಲ್ಲಣ್ಣಾ ಮಾಲಿಕರ ಖಣಿಯಲ್ಲಿ ಕೂಲಿಕೆಲಸ ಮಾಡುತ್ತೆವೆ. ಅಲ್ಲಿ ರೋಹಿತ ಮತ್ತು ಲಲಿತಾ ಎನ್ನುವರು ಸಹ ಖಣಿ ಕೆಲಸಕ್ಕೆ ಬರುತ್ತಾರೆ. ಹೀಗಿದ್ದು ದಿನಾಂಕ 13/06/2019 ರಂದು ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ಖಣಿಯಲ್ಲಿ ಕೆಲಸಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾಗ ಬೆಳಗ್ಗೆ  11-00 ಗಂಟೆ ಸುಮಾರು ಖಣಿಯಲ್ಲಿ ಪರ್ಶಿಯನ್ನು ತುಂಬಿಕೊಂಡು ಹೋಗಲು ಬಂದ ಲಾರಿ ನಂಬರ ಕೆಎ-48 -1745 ನೇದ್ದರ ಚಾಲಕನು ಒಮ್ಮೇಲೆ ಅಲಕ್ಷತನದಿಂದ ಲಾರಿಯನ್ನು ವೇಗವಾಗಿ ಹಿಂದಕ್ಕೆ ಚಲಾಯಿಸಿದ್ದರಿಂದ ನನ್ನ ಹೆಂಡತಿಯ ಹೆಡಕಿನ ಭಾಗಕ್ಕೆ ಲಾರಿಯ ಹಿಂದಿನ ಫಾಟಾದ ಭಾಗ ಬಡಿದಿದ್ದರಿಂದ ಅವಳು ಒಮ್ಮೇಲೆ ಚಿರುತ್ತಾ ನೆಲದ ಮೇಲೆ ಬಿದ್ದಳು. ನಾನು ಮತ್ತು ರೋಹಿತ ಕೂಡಿಕೊಂಡು ನನ್ನ ಹೆಂಡತಿಯ ಹತ್ತಿರ ಹೋಗಿ ನೋಡಲಾಗಿ ಅವಳು ಬೇಹೋಷ ಆಗಿ ಬಿದ್ದಿದ್ದು ಅವಳ ಹೆಡಕಿನ ಭಾಗಕ್ಕೆ ಬಡಿದಿದ್ದು ಕಂಡು ಬಂದಿರುತ್ತದೆ. ಲಾರಿ ನಂಬರ ಕೆಎ-48-1745 ಇರುತ್ತದೆ. ನಂತರ ನನ್ನ ಹೆಂಡತಿಗೆ ಖಾಸಗಿ ವಾಹನದಲ್ಲಿ ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚರಿಸಿಕೊಂಡು ನಂತರ ಹೆಚ್ಚಿನ ಉಪಚಾರ ಕುರಿತು ಸೋಲಾಪುರದ ಗಂಗಾಮಯಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಹೆಂಡತಿಯ ಹೆಡಕಿಗೆ ಭಾರಿ ಗುಪ್ತಗಾಯವಾಗಿದ್ದರಿಂದ ವೈದ್ಯರು ಶಸ್ತ್ರ ಚಿಕಿತ್ಸೆ ಸಹ ಮಾಡಿದ್ದು ಇನ್ನೂ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಅವಳಿಗೆ ಸರಿಯಾಗಿ ಮಾತನಾಡಲು ಬರುವದಿಲ್ಲ.  ಸದರಿ ಲಾರಿ ಚಾಲಕನ ಆಲಕ್ಷತನದಿಂದ ಘಟನೆ ಸಂಭವಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆ ಗುನ್ನೆ ನಂ 74/2019 ಕಲಂ 279,338 ಐಪಿಸಿ 187 ,ಎಮ್.ವಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಜೈಭೀಮ ತಂದೆ ಸಿದ್ರಾಮ ಬಿಲಗುಂದಿ ಸಾ|| ಬಸವ ನಗರ ಕಲಬುರಗಿ ರವರ ತಮ್ಮನಾದ ಗೌತಮ ಇತನು ಸುಮಾರು ವರ್ಷಗಳಿಂದ ಮದ್ಯ ಸೇವನೆ ಮಾಡುವ ಚಟವುಳ್ಳವನಿದ್ದು ಇದರಿಂದ ತನ್ನ ಆರೋಗ್ಯ ಹದಗೆಡಿಸಿಕೊಂಡಿದ್ದು ಇರುತ್ತದೆ. ನಮ್ಮ ತಮ್ಮನ ಹೆಂಡಿತಿಯಾದ ವಿಜಯಲಕ್ಷ್ಮೀ ಇವಳು ಕಳೆದ 5 ತಿಂಗಳ ಹಿಂದೆ ತನ್ನ ಮೊದಲ ಹೆರಿಗೆಗಾಗಿ ತನ್ನ ತವರು ಮನೆಯಾದ ಅಲದಿಹಾಳ ಗ್ರಾಮಕ್ಕೆ ಹೋಗಿದ್ದು ಅವಳಿಗೆ ಒಂದು ಮಗು ಆಗಿದ್ದು ಇರುತ್ತದೆ. ನಮ್ಮ ತಮ್ಮನಾದ ಗೌತಮ ಇತನು ಆಗಾಗ ಮನೆಯಲ್ಲಿ ನೇಣು ಹಾಕಿಕೊಂಡು ಸಾಯುತ್ತೇನೆ ಅಂತ ಹೇಳುತ್ತಾ ಬಂದಿರುತ್ತಾನೆ. ಹೀಗಿದ್ದು ಇಂದು ದಿನಾಂಕ:30.06.2019 ರಂದು ಮದ್ಯಾನ್ಹ 12:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ಗೌರಮ್ಮ ಇಬ್ಬರು ಮನೆಯ ಮುಂದೆ ಕುಳಿತಿರುತ್ತೇವೆ ಅಷ್ಟರಲ್ಲಿ ನಮ್ಮ ತಮ್ಮ ಗೌತಮ ಇತನು ಬಂದು ಮನೆಯ ಒಳಗೆ ಹೋಗಿ ಕೊಂಡಿ ಹಾಕಿಕೊಂಡಿರುತ್ತಾನೆ. ಸ್ವಲ್ಪ ಸಮಯದ ನಂತರ ಅವನು ಬಾಗಿಲು ತೆರೆಯದೆ ಇದ್ದಾಗ ನಾನು ಗಾಬರಿಯಾಗಿ ಜೋರಾಗಿ ಬಾಗಿಲಿಗೆ ಒದ್ದು ಒಳಗೆ ಹೋಗಿ ನೋಡಿದಾಗ ನಮ್ಮ ತಮ್ಮ ಗೌತಮ ಇತನು ಕುತ್ತಿಗೆಗೆ ಅಂಗಿಯಿಂದ ಪತ್ರಾಕ್ಕೆ ಅಳವಡಿಸಿದ ಕಟ್ಟಿಗೆಯ ತೊಲೆಗೆ ಅಂಗಿಯಿಂದ ನೇಣು ಹಾಕಿಕೊಂಡಿದ್ದು ತಕ್ಷಣ ನಾನು ಅವನಿಗೆ ಉಪಚಾರಕ್ಕಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ನಮ್ಮ ತಮ್ಮನಿಗೆ ಪರೀಕ್ಷಿಸಿದಾಗ ಅವನು ಮೃತಪಟ್ಟಿದ್ದು ಇರುತ್ತದೆ ಅಂತ ತಿಳಿಸಿರುತ್ತಾರೆ. ನಮ್ಮ ತಮ್ಮನು ಮದ್ಯ ಸೇವನೆ ಮಾಡಿ ಆರೋಗ್ಯ ಹದಗೆಡಿಸಿಕೊಂಡು ಇದರಿಂದ ಮಾನಸಿಕಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯ ಯು.ಡಿ.ಆರ್. ನಂ. 10/2019 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಹರಿಸಿಕೊಂಡು ಹೋದ ಪ್ರಕರಣ :
ನರೋಣಾ ಠಾಣೆ : ಶ್ರೀಮತ.ಶಾಂತಾಬಾಯಿ ಗಂಡ ಅಮೃತ ಮಾಂಗ, ಸಾ:ಧುತ್ತರಗಾಂವ ರವರ ಗಂಡನಾದ ಅಮೃತ ಇವರು ಸುಮಾರು 4 ವರ್ಷಗಳಿಂದ ಹೊಟ್ಟೆಪಾಡಿಗಾಗಿ ವಿದೇಶಕ್ಕೆ ಹೋಗಿರುತ್ತಾರೆ. ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಮಾತ್ರ ವಾಸವಾಗಿರುತ್ತೇವೆ. ನಮ್ಮ ಕೇರಿಯ ರವಿ ತಂದೆ ಪಂಡಿತರಾಯ ಭಾವಿಮನಿ, ಸಾ:ಧುತ್ತರಗಾಂವ ಈತನು ಸುಮಾರು ಒಂದು ವರ್ಷದಿಂದ ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಪದೇಪದೇ ಬರುವುದು. ನನ್ನ ಮಗಳಾದ ಪ್ರೀತಿ ಇವಳಿಗೆ ಕೈ ಸನ್ಯ ಮಾಡುತ್ತಿದ್ದನು, ಆಗಾಗ ನನ್ನ ಮಗಳು ಹೋರಗಡೆ ಹೋಗಿ ಬರುವಾಗ ಅವಳಿಗೆ ಅಡ್ಡಗಟ್ಟಿ ಮಾತನಾಡುವುದು ಮಾಡುತ್ತಿದ್ದು, ವಿಷಯ ನನಗೆ ಗೊತ್ತಾಗಿ ನಾನು ರವಿ ಮತ್ತು ಅವರ ತಂದೆ ಮತ್ತು ಕುಟುಂಬದವರಿಗೆ ನಿಮ್ಮ ಹುಡುಗ ರೀತಿ ಮಾಡುವುದು ಸರಿಯಲ್ಲಾ ಅಂತಾ 2-3 ಬಾರಿ ತಿಳಿಸಿ ಹೇಳಿದ್ದು ಇರುತ್ತದೆ. ಹೀಗಿದ್ದು ನಮ್ಮ ಸಂಬಂಧಿಕರಾದ ನಾಗಣ್ಣಾ ಮಾಂಗ ಸಾ:ರೇವೂರ(ಬಿ) ಗ್ರಾಮ ಇವರು ಗೋಳಾ(ಬಿ) ಗ್ರಾಮದ ಲಕ್ಕಮ್ಮ ದೇವಸ್ಥಾನದಲ್ಲಿ ದೇವರ ಕಾರ್ಯಕ್ರಮ ಇಟ್ಟಿಕೊಂಡಿದ್ದು, ಕಾರ್ಯಕ್ರಮಕ್ಕೆ ನನಗೂ ಕೂಡ ಬರಲು ಹೇಳಿದ ಕಾರಣ ನಾನು ಮತ್ತು ನನ್ನ 4ಜನ ಮಕ್ಕಳು ಎಲ್ಲರೂ ಸೇರಿ ದಿ:24/06/2019 ರಂದು ರೇವೂರ(ಬಿ) ಗ್ರಾಮಕ್ಕೆ ಹೋಗಿರುತ್ತೇವೆ. ರೇಷನ ಬಂದಿರುವ ವಿಷಯ ಗೊತ್ತಾಗಿ ನಾನು ನಮ್ಮೂರಿಗೆ ವಾಪಸ್ಸು ಅದೇ ದಿವಸ ಬಂದಿದ್ದು, ಆದರೆ ನನಗೆ ಕೆಲಸವಿದ್ದ ಕಾರಣ ಸದರಿ ಕಾರ್ಯಕ್ರಮಕ್ಕೆ ಹೋಗಿರುವುದಿಲ್ಲ. ಆದರೆ ನಮ್ಮ ತಮ್ಮನಾದ ಶಿವರಾಜ್ ತಂದೆ ಕರಬಸಪ್ಪಾ ಮಾಂಗ ಇತನೊಂದಿಗೆ ನನ್ನ ಮಗಳಾದ ಪ್ರೀತಿ ಇವಳು ದಿನಾಂಕ:25/06/2019 ರಂದು ಬೆಳಿಗ್ಗೆ ರೇವೂರ(ಬಿ) ಗ್ರಾಮ ದಿಂದ ಗೋಳಾ(ಬಿ) ಗ್ರಾಮದ ಲಕ್ಕಮ್ಮ ದೇವಸ್ಥಾನಕ್ಕೆ ಹೋಗಿರುತ್ತಾರೆ. ನಾನು ದಿ:25/06/2019 ರಂದು ಪುನಃ ರೇವೂರ(ಬಿ) ಗ್ರಾಮಕ್ಕೆ ಸಾಯಂಕಾಲ ಹೋಗಿರುತ್ತೇನೆ. ರಾತ್ರಿ 10-00 ಗಂಟೆ ಸುಮರಿಗೆ ದೇವರ ಕಾರ್ಯಕ್ರಕ್ಕೆ ಹೋದವರು ವಾಪಸ್ಸು ರೇವೂರ(ಬಿ) ಗ್ರಾಮಕ್ಕೆ ಬಂದಿದ್ದು ಆದರೆ ನನ್ನ ಮಗಳಾದ ಪ್ರೀತಿ ಇವಳು ಬಂದಿರುವುದಿಲ್ಲ. ನನ್ನ ತಮ್ಮನಾದ ಶಿವರಾಜ್ ಇತನಿಗೆ ಪ್ರೀತಿ ಬಗ್ಗೆ ವಿಚಾರಿಸಲಾಗಿ. ಅವನು ನನಗೆ ತಿಳಿಸಿದ್ದು ಏನಂದರೆ, ಪ್ರೀತಿ ಇವಳು ಕಾರ್ಯಕ್ರಮದಲ್ಲಿ ಊಟಮಾಡಿ ದೇವರ ದರ್ಶನ ಮಾಡಿಕೊಂಡು ಬರುತ್ತೇನೆಂದು ಹೇಳಿ ನಮ್ಮ ಅಕ್ಕನ ಮಗಳಾದ ರೇಷ್ಮಾ ತಂದೆ ಶಂಕರ ಮಾಂಗ ಸಾ:ರೇವೂರ(ಬಿ) ಇವಳ ಸಂಗಡ ಹೋಗಿದ್ದು. ಸ್ವಲ್ಪ ಹೊತ್ತಿನಲ್ಲಿ ಸಾಯಂಕಾಲ 5-00 ಗಂಟೆ ಸುಮಾರಿಗೆ ದೇವಸ್ಥಾನದ ಹತ್ತಿರ ಧುತ್ತರಗಾಂವ ಗ್ರಾಮದ ರವಿ ಈತನು ಮೊಟಾರ್ ಸೈಕಲ್ ಮೇಲೆ ಬಂದು ಬಲವಂತವಾಗಿ ಪ್ರೀತಿ ಇವಳಿಗೆ ಮೊಟಾರ್ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗುವಾಗ ಪ್ರೀತಿ ಇವಳು ಚಿರಾಡಿದ್ದನ್ನು ನೋಡಿದ ಪ್ರೀತಿ ಇವಳ ತಮ್ಮನಾದ ನಾಗೇಶ ತಂದೆ ಅಮೃತ ಮಾಂಗ, ರೇಷ್ಮಾ ತಂದೆ ಶಂಕರ ಮಾಂಗ್, ಶೈಲಾ ತಂದೆ ನಾಗಪ್ಪಾ ಮಾಂಗ್ ಇವರು ಓಡಿ ಬಂದು ನಮ್ಮ ಮುಂದೆ ವಿಷಯ ತಿಳಿಸಿದ್ದು ಆಗ ನಾನು ಮತ್ತು ನಮ್ಮ ಸಂಬಂಧಿಕರೆಲ್ಲರೂ ಕೂಡಿ ಗೋಳಾ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡಕಲಾಗಿ ಎಲ್ಲಿಯೂ ಪ್ರೀತಿಯು ಸಿಕ್ಕಿರುವುದಿಲ್ಲ ಅಂತಾ ತಿಳಿಸಿದನು. ಇದರ ಬಗ್ಗೆ ನಾನು ಮತ್ತು ನಮ್ಮ ಸಂಬಂಧಿಕರು ಅದೇ ದಿನ ಧುತ್ತರಗಾಂವ ಗ್ರಾಮಕ್ಕೆ ಬಂದು ರವಿ ಈತನ ಮನೆಯವರಿಗೆ ತಿಳಿಸಿ ನಾವು ಮತ್ತು ರವಿ ಈತನ ಮನೆಯವರು ಎಲ್ಲರೂ ಸೇರಿ ಎಲ್ಲಾ ಕಡೆ ರವಿ ಇತನಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದು, ರವಿ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಕಲಬುರಗಿ, ಗಾಣಗಾಪೂರ ರೇಲ್ವೆ ಸ್ಟೇಷನ್, ಅಫಜಲಪೂರ, ಇವುಗಳಿಗೆ ಭೇಟಿಕೊಟ್ಟು ಹುಡಕಾಡಿದರು ನನ್ನ ಮಗಳು ಪ್ತೆಯಾಗಿರುವುದಿಲ್ಲಾ  ನನ್ನ ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ದುರುದ್ದೇಶದಿಂದ ಬಲವಂತಾಗಿ ಅಪಹರಣ ಮಾಡಿಕೊಂಡು ಹೋದ ರವಿ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂರಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯ ಗುನ್ನೆ ನಂ 92/2019 ಕಲಂ 366() ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಚೌಕ ಠಾಣೆ : ಶ್ರೀ ಮಹಾಂತಯ್ಯ ತಂದೆ ಅಣವೀರಯ್ಯ ಹಿರೇಮಠ, ಸಾ: ಮನೆ ನಂ.9-270, ಸರ್ದಾರ ವಲ್ಲಭಭಾಯಿ ಪಟೇಲ ಶಾಲೆಯ ಹತ್ತಿರ ಕಟಗರಪೂರ ಶಹಾಬಜಾರ ಕಲಬುರಗಿ ರವರು 2017 ರಲ್ಲಿ ತನ್ನ ಸ್ವಂತ ಕೆಲಸಕ್ಕಾಗಿ ಹಿರೋ ಸ್ಪ್ಲೆಂಡರ್ ಮೋಟರ ಸೈಕಲ ಸಂಖ್ಯೆ KA 32 EQ 0358 ನೇದ್ದನ್ನು ಖರೀದಿ ಮಾಡಿದ್ದು ಮೋಟಾರ ಸೈಕಲ್ ನ್ನು  ನಾನೆ ಇಲ್ಲಿಯವರೆಗೂ ಉಪಯೋಗ ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು ದಿನಾಂಕಃ29.04.2019 ರಂದು ನಾನು ನನ್ನ ಮನೆಯಿಂದ ಕಿರಾಣಿ ಖರೀಧಿ ಕುರಿತು 1.00 ಪಿ.ಎಂಕ್ಕೆ ಬಂದು ಕಿರಾಣಾ ಬಜಾರಿಗೆ ಬಂದಿದ್ದು ನನ್ನ ಹಿರೋ ಸ್ಪ್ಲೆಂಡರ್ ಮೋಟರ ಸೈಕಲ ಸಂಖ್ಯೆ KA 32 EQ 0358 ನೆದ್ದು ಕಿರಾಣಾ ಬಜಾರದ ಮಾದಮಶೆಟ್ಟಿ ಅಂಗಡಿ ಹಿಂದುಗಡೆ ಗಲ್ಲಿಯ ರಸ್ತೆಯಲ್ಲಿ ನಿಲ್ಲಿಸಿ ನಾನು ಕಿರಾಣಿ ಖರೀಧಿ ಕುರಿತು ಹೋಗಿದ್ದು, ನಂತರ ಖರೀದಿ ಮುಗಿಸಿಕೊಂಡು 2.00 ಪಿ.ಎಂಕ್ಕೆ ಮರಳಿ ಬಂದು ನಾನು ನಿಲ್ಲಿಸಿದ ನನ್ನ ಮೋಟರ ಸೈಕಲ ಇರಲಿಲ್ಲ. ಅಲ್ಲಿಯೇ ಅಕ್ಕ-ಪಕ್ಕದಲ್ಲಿ ಹುಡುಕಾಡಲಾಗಿ ಎಲ್ಲಿಯೂ ಕಾಣಲಿಲ್ಲ ಆಗ ನಾನು ಗಾಬರಿಗೊಂಡು ನನ್ನ ಗೆಳೆಯರಾದ ಮಂಜುನಾಥ ಬಿರಾದರ, ಮುನಿಂದರ ಮಠಪತಿ ಇವರಿಗೆ ನನ್ನ ಮೊಟಾರ ಸೈಕಲನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದು ಅವರು ನಾನು ಇರುವ ಕಿರಾಣಾ ಬಜಾರ ಹತ್ತಿರ ಬಂದು ಅಲ್ಲಿ ಎಲ್ಲಾ ಕಡೆ ನನ್ನ ಮೊಟಾರ ಸೈಕಲ ಬಗ್ಗೆ ಹುಡುಕಾಡಿದ್ದು ಎಲ್ಲಿಯೂ ಸಿಗಲಿಲ್ಲ. ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಕೂಡಾ ನನ್ನ ಮೋಟರ ಸೈಕಲ ಸಿಕ್ಕಿರುವುದಿಲ್ಲ. ನನ್ನ ಮೋಟರ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ನನ್ನ ಕಳುವಾದ ಮೋಟಾರ ಸೈಕಲ ವಿವರ ಕೆಳಗಿನಂತಿದೆ. ಮೋಟಾರ ಸೈಕಲ ವಿವರ : HERO SPLENDOR PLUS , ಮೋಟಾರ ಸೈಕಲ ನಂ:KA32 EQ 0358, ಮೋಟಾರ ಸೈಕಲ ಚೆಸ್ಸಿ ನಂ : MBLHARO81HHD21071, ಮೋಟಾರ ಸೈಕಲ ಇಂಜನ ನಂ: HA10AGHHDB6830, ಮೋಟಾರ ಸೈಕಲ ಮಾದರಿ: 2017, ಮೋಟಾರ ಸೈಕಲ ಬಣ್ಣ: SILVER ಅಂದಾಜ ಕಿಮ್ಮತ್ತು :35,000/- ರೂಪಾಯಿ. ಇರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಗುನ್ನೆ ನಂ 74/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಚೌಕ ಠಾಣೆ : ಶ್ರೀ ಅಹೆಮ್ಮದಅಲಿ ತಂದೆ ಶಾವರಮಿಯಾ ಗುರುಮಿಠಕಲ ಸಾ: ಅವರಾದ (ಬಿ) ಗ್ರಾಮ ತಾ:ಜಿ: ಕಲಬುರಗಿ ರವರು. 2017 ರಲ್ಲಿ ನನ್ನ ಮದುವೆಯ ಕಾಲಕ್ಕೆ ನನ್ನ ಸಂಭಂಧಿಕರು ನನಗೆ ಹೊಂಡಾ ಸಿ.ಬಿ ಶೈನ ಮೋಟರ ಸೈಕಲನ್ನು ಉಡುಗೋರೆಯಾಗಿ ನೀಡಿದ್ದು ಮೋಟಾರ ಸೈಕಲನ್ನು ನಾನೆ ಇಲ್ಲಿಯವರೆಗೂ ಕೆಲಸಕ್ಕೆ ಹೋಗಿ ಬರಲು ಉಪಯೋಗ ಮಾಡಿಕೊಂಡು ಬಂದಿರುತ್ತೇನೆ.  ಹೀಗಿದ್ದು ದಿನಾಂಕ:04.05.2019 ರಂದು ಬೆಳಿಗ್ಗೆ 10.00 ಗಂಟೆಗೆ ನಾನು ಕೆಲಸಕ್ಕೆ ಬಂದಾಗ ಪ್ರತಿ ದಿವಸ ನಿಲ್ಲಿಸುವಂತೆ ಚೈನಾ ಕಾಂಪ್ಲೆಕ್ಷ ಮುಂದುಗಡೆ ಉಳ್ಳಾಗಡ್ಡಿ ಮಾರ್ಕೇಟ ರಸ್ತೆಯ ಪಕ್ಕದಲ್ಲಿ ಮೋಟರ ಸೈಕಲಗಳನ್ನು ನಿಲ್ಲಿಸುವ ಸ್ಥಳದಲ್ಲಿ ಮೋಟರ ಸೈಕಲ ಸಂಖ್ಯೆ KA32 EP 6218 ನೆದ್ದು ನಿಲ್ಲಿಸಿ ನಾನು ಕೆಲಸಕ್ಕೆ ಹೋಗಿದ್ದು ಇರುತ್ತದೆ, ಮದ್ಯಾಹ್ನ ಸುಮಾರು 2.00 ಪಿ.ಎಂಕ್ಕೆ ಊಟಕ್ಕೆ ಹೋಗ ಬೇಕೆಂದು ಬಂದು ನಾನು ನಿಲ್ಲಿಸಿದ ನನ್ನ ಮೋಟರ ಸೈಕಲ ನೋಡಲು ಅಲ್ಲಿ ಇರಲಿಲ್ಲ. ಅಲ್ಲಿಯೇ ಅಕ್ಕ-ಪಕ್ಕದಲ್ಲಿ ಹುಡುಕಾಡಲಾಗಿ ಎಲ್ಲಿಯೂ ಕಾಣಲಿಲ್ಲ ಆಗ ನಾನು ಗಾಬರಿಗೊಂಡು ಅಲ್ಲಿಯೇ ಇದ್ದ ನನ್ನ ಗೆಳೆಯರಾದ 1. ಶ್ರೀ ಬಾಬಾಖಾನ 2. ಶ್ರೀ ಶರಣು  ಇವರಿಗೆ ನನ್ನ ಮೊಟಾರ ಸೈಕಲನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದು ಅವರೂ ಕೂಡಾ ಬಂದು ನನ್ನ ಮೋಟರ ಸೈಕಲ ಇಲ್ಲದಿರುವುದನ್ನು ಕಂಡು ಎಲ್ಲಾ ಕಡೆ ನನ್ನ ಮೊಟಾರ ಸೈಕಲ ಬಗ್ಗೆ ಹುಡುಕಾಡಿದ್ದು ಎಲ್ಲಿಯೂ ಸಿಕ್ಕಿರುವುದಿಲ್ಲಾ ಸದರಿ ನನ್ನ ಕಳುವಾದ ಮೋಟಾರ ಸೈಕಲ ವಿವರ ಕೆಳಗಿನಂತಿದೆ. ಮೋಟಾರ ಸೈಕಲ ವಿವರ: HONDA CB SHINE BS IV, ಮೋಟಾರ ಸೈಕಲ ನಂ: KA32EP6218, ಮೋಟಾರ ಸೈಕಲ ಚೆಸ್ಸಿ ನಂ: ME4JC654AHT002467, ಮೋಟಾರ ಸೈಕಲ ಇಂಜನ ನಂ: JC65ET1003923, ಮೋಟಾರ ಸೈಕಲ ಮಾದರಿ:2017, ಮೋಟಾರ ಸೈಕಲ ಬಣ್ಣ: BLUE ಅಂದಾಜ ಕಿಮ್ಮತ್ತು :35,000/- ರೂಪಾಯಿ ಆಗಬಹುದು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯ ಗುನ್ನೆ ನಂ 75/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ನಾಗೇಂದ್ರ ತಂದೆ ಶ್ರೀಮಂತರಾವ ಬೀಮಳ್ಳಿ ಸಾ: ಮನೆ ನಂ 11-356 ಧನಗರ ಗಲ್ಲಿ ಬ್ರಹ್ಮಪೂರ ಕಲಬುರಗಿ. ರವರು 2004 ರಲ್ಲಿ ಒಂದು ಹಿರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟಾರ ಸೈಕಲ ನಂ. ಕೆ.-32 ಕ್ಯೂ-6555 ||ಕಿ|| 10,000=00 ನೇದ್ದನ್ನು ಖರೀದಿ ಮಾಡಿಕೊಂಡು ನನ್ನ ಸ್ವಂತ ಕೆಲಸಕ್ಕೆ ಉಪಯೋಗ ಮಾಡುತ್ತಾ ಬಂದಿರುತ್ತೇನೆ. ಕಳೆದ 3 ತಿಂಗಳ ಹಿಂದೆ ಅಂದರೆ ದಿನಾಂಕ:10.03.2019 ರಂದು ಸಾಯಂಕಾಲ 07:00 ಗಂಟೆ ಸುಮಾರಿಗೆ ನನ್ನ ಖಾಸಗಿ ಕೆಲಸದ ನಿಮಿತ್ಯವಾಗಿ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಕಮಲ ಹೊಟೆಲ್ ಮುಂದುಗಡೆ ನನ್ನ ವಾಹನವನ್ನು ನಿಲ್ಲಿಸಿ ಬಸ್ ನಿಲ್ದಾಣದ ಒಳಗಡೆ ಹೋಗಿ ಒಂದು ತಾಸು ಅಂದರೆ ರಾತ್ರಿ 08:00 ಗಂಟೆಗೆ ಬಂದು ನೋಡುವಷ್ಟರಲ್ಲಿ ಸದರಿ ನನ್ನ ಮೋಟರ ಸೈಕಲ್ ಅಲ್ಲಿ ಇರಲಿಲ್ಲ. ಅಕ್ಕ ಪಕ್ಕದಲ್ಲಿ ಹುಡುಕಾಡಿದರು. ಸದರಿ ಮೋಟರ ಸೈಕಲ್ ಸಿಗಲಿಲ್ಲ ಬಹುಷ ಯಾರೋ ಅಪರಿಚಿತ ಕಳ್ಳರು ಸದರಿ ನನ್ನ ಮೋಟರ ಸೈಕಲನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಾನು ಕಲಬುರಗಿ ನಗರದಲ್ಲಿರುವ ಎಲ್ಲಾ ಹೊಟೆಲಗಳ ಮುಂದೆ, ಚಿತ್ರ ಮಂದಿರಗಳ ಮುಂದೆ ಹುಡುಕಾಡಿದರು, ಸದರಿ ನನ್ನ ಮೋಟರ ಸೈಕಲ್ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯ ಗುನ್ನೆ ನಂ 52/2019 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.