ಅಪಘಾತ ಪ್ರಕರಣ
:
ವಾಡಿ ಠಾಣೆ : ಶ್ರೀಮತಿ ದುರ್ಗಮ್ಮ ಗಂಡ ಕಾಶಪ್ಪ ರಾಜೋಳಿ ಮು:ಲಕ್ಷ್ಮೀಪೂರವಾಡಿ ರವರು ಮತ್ತು ನಮ್ಮ ಊರಿನ ರೇಣುಕಾ
ಆಂದೇಲಿ, ಶೇಖಮ್ಮ ಮೇಳಕುಂದಿ ರವರು ಸಹ ಖಣಿಯಲ್ಲಿ
ಕೂಲಿಕೆಲಸಕ್ಕೆ ಬರುತ್ತಾರೆ. ಖಣಿಯಲ್ಲಿ ಶ್ರೀನಿವಾಸ ಮಾಲಕರಿಗೆ ಸಂಭಂದಿಸಿದ ಟ್ರ್ಯಾಕ್ಟರ ನಂಬರ ಕೆಎ-32-2028/2029
ಇದ್ದು ಅದರ ಚಾಲಕ ಶ್ರೀನಿವಾಸ ತಂದೆ ತಿಪ್ಪಣ್ಣಾ ಮು:ಇಂದಿರಾನಗರ ರಾವೂರ ಇತನು ಇರುತ್ತಾನೆ. ಹೀಗಿರುವಾಗ
ಪ್ರತಿದಿನದಂತೆ ದಿನಾಂಕ 06/08/2019 ರಂದು ಬೆಳಗ್ಗೆ 09-30 ಗಂಟೆ ಸುಮಾರು ನಾನು ಮತ್ತು ನಮ್ಮ ಊರಿನ
ರೇಣುಕಾ ಮತ್ತು ಶೇಖಮ್ಮ ಕೂಡಿಕೊಂಡು ಶ್ರೀನಿವಾಸ ಮಾಲಕರ ಖಣಿಗೆ ಹೋಗಿ ಖಣಿಯಲ್ಲಿ ಪರ್ಶಿ ಚೂರುಗಳನ್ನು
ಒಂದು ಕಡೆ ಹಾಕುತ್ತಿದ್ದೆವು. ಆಗ ಚಾಲಕ ಶ್ರೀನಿವಾಸ ಇತನು ಟ್ರ್ಯಾಕ್ಟರ ತೆಗೆದುಕೊಂಡು ಬಂದು ಅದರಲ್ಲಿ
ಪರ್ಶಿಯನ್ನು ತುಂಬಲು ಹೇಳಿದಾಗ ನಾವು ಟ್ರ್ಯಾಕ್ಟರದಲ್ಲಿ ಪರ್ಶಿಯನ್ನು ತುಂಬುತ್ತಿದ್ದೆವು ಆಗ ಶ್ರೀನಿವಾಸ
ಇತನು ಟ್ರ್ಯಾಕ್ಟರ ಚಾಲು ಮಾಡಿ ಇಟ್ಟಿದ್ದು ನಾನು ಪರ್ಶಿಯನ್ನು ಎತ್ತಿ ಟ್ರ್ಯಾಲಿಯಲ್ಲಿ ಹಾಕುತ್ತಿದ್ದಂತೆ
ಚಾಲಕನು ಅಲಕ್ಷತನದಿಂದ ಒಮ್ಮೇಲೆ ಟ್ರ್ಯಾಕ್ಟರನ್ನು ಮುಂದಕ್ಕೆ ಚಲಾಯಿಸಿದಾಗ ನನಗೆ ಟ್ರ್ಯಾಕ್ಟರ ಟ್ರ್ಯಾಲಿ
ಬಡಿದು ಕೆಳಗಡೆ ಬಿದ್ದೆನು. ನಂತರ ಟ್ರ್ಯಾಕ್ಟರ ಟ್ರ್ಯಾಲಿಯ ಚಕ್ರ ನನ್ನ ಎಡಗೈ ಬೆರಳುಗಳ ಮೇಲಿಂದ ಹಾದು
ಹೋಗಿದ್ದರಿಂದ ನನ್ನ ಎಡ ಗೈ 03 ಬೆರಳುಗಳಿಗೆ ಭಾರಿ ರಕ್ತಗಾಯವಾಗಿದ್ದು ನಾನು ಚಿರಾಡಲು ಚಾಲಕನು ಮುಂದೆ
ಹೋಗಿ ಟ್ರ್ಯಾಕ್ಟರ ನಿಲ್ಲಿಸಿದನು. ರೇಣುಕಾ ಮತ್ತು ಶೇಖಮ್ಮ ಇವರು ನನಗೆ ಎಬ್ಬಿಸಿ ಪಕ್ಕದಲ್ಲಿ ಕೂಡಿಸಿದರು.
ನನ್ನ 03 ಬೆರಳುಗಳಿಗೆ ಭಾರಿ ಗಾಯವಾಗಿ ರಕ್ತ ಬರುತ್ತಿದ್ದರಿಂದ ಮೋನಪ್ಪ ಇತನು ನನಗೆ ಖಣಿಯಿಂದ ಮೇಲೆ
ಕರೆದುಕೊಂಡು ಬಂದು ಅಲ್ಲಿಂದ ಶ್ರೀನಿವಾಸ ಮಾಲಕರಿಗೆ ವಿಷಯ ತಿಳಿಸಿದಾಗ ಅವರು ಒಂದು ಖಾಸಗಿ ವಾಹನ ಕಳುಹಿಸಿದ್ದು
ನಾನು ಅದರಲ್ಲಿ ಕುಳಿತುಕೊಂಡು ಲಕ್ಷ್ಮೀಪೂರವಾಡಿಯ ವರೆಗೆ ಬಂದು ನನ್ನ ಗಂಡನಿಗೆ ವಿಷಯ ತಿಳಿಸಿದಾಗ
ಆತನು ಸಹ ಬಂದು ನೋಡಿ ಶ್ರೀನಿವಾಸ ಮತ್ತು ನನ್ನ ಗಂಡ ನನಗೆ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ
ತಂದು ಸೇರಿಕೆ ಮಾಡಿದರು. ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ವೈದ್ಯರು ನನ್ನ ಎಡಗೈ ಕಿರು
ಬೆರಳು, ಪಕ್ಕದ ಬೆರಳು ಮತ್ತು ಮಧ್ಯದ ಬೆರಳುಗಳಿಗೆ
ಶಸ್ತ್ರ ಚಿಕಿತ್ಸೆಯನ್ನು ಮಾಡಿ 03 ಬೆರಳುಗಳು ಅಂಗೈವರೆಗೆ ಕತ್ತರಿಸಿರುತ್ತಾರೆ. ಚಾಲಕ ಶ್ರೀನಿವಾಸ
ತಂದೆ ತಿಪ್ಪಣ್ಣಾ ಇತನು ಟ್ರ್ಯಾಕ್ಟರ ನಂಬರ ಕೆಎ-32-2028/2029 ನೇದ್ದನ್ನು ಅಲಕ್ಷತನದಿಂದ ಮುಂದೆ
ಚಲಾಯಿಸಿದ್ದರಿಂದ ನಾನು ಕೆಳಗಡೆ ಬಿದ್ದಿದ್ದು ನನ್ನ ಕೈ ಬೆರಳುಗಳ ಮೇಲೆ ಟ್ರ್ಯಾಕ್ಟರ ಟ್ರ್ಯಾಲಿ ಚಕ್ರ
ಹಾದು ಹೋದ ಪರಿಣಾಮ ನನ್ನ ಎಡಗೈ ಬೆರಳುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ. ಕಾರಣ ಟ್ರ್ಯಾಕ್ಟರ ನಂಬರ
ಕೆಎ-32-2028/2029 ನೇದ್ದರ ಚಾಲಕ ಶ್ರೀನಿವಾಸ ಇತನ
ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯ
ಗುನ್ನೆ ನಂಬರ 97/2019 ಕಲಂ:279,338 ಐಪಿಸಿ ಸಂಗಡ 187 ಐ.ಎಮ್ ವ್ಹಿ ಕಾಯ್ದೆ ಪ್ರಕಾರ ಪ್ರಕರಣ
ದಾಖಲಿಸಲಾಗಿದೆ.