ಇಸ್ಪೀಟ ಜುಜಾಟದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 10-10-2013 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಕಮಲಾಪೂರ ಗ್ರಾಮದ ಜೈ ಭವಾನಿ ದೇವಸ್ಥಾನದ ಎದುರಿನ
ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ
ಖಚಿತ ಭಾತ್ಮಿ ಬಂದ ಮೇರೆಗೆ, ನಾನು, ಪಂಚರು ಮತ್ತು ಠಾಣೆಯ ಸಿಬ್ಬಂದಿ ಜನರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಿ ಪಂಚರ ಸಮಕ್ಷಮದಲ್ಲಿ ನಾನು, ಮತ್ತು ಸಿಬ್ಬಂದಿಯವರು
ದಾಳಿ ಮಾಡಿದ್ದು. ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದ 1 .ವೀರಶೇಟ್ಟಿ ತಂದೆ
ಮಾರುತಿ ಚಾಂಗಲೇರಿ 2. ಸಿದ್ದಪ್ಪ ತಂದೆ ಸುಭಾಷ ನಾಟೀಕಾರ 3. ರಾಮಲಿಂಗ ತಂದೆ ಅಣ್ಣಪ್ಪ ಕೇಶ್ವಾರ 4. ನಾಗರಾಜ ತಂದೆ
ಶಿವಶರಣಪ್ಪ ನಾಟೀಕಾರ 5.
ನಾಗರಾಜ ತಂದೆ ಅಣ್ಣಪ್ಪ ಹಂಚನಾಳ ಸಾಃ ಎಲ್ಲರೂ ಕಮಲಾಪೂರ ತಾಃಜಿಃ ಗುಲಬರ್ಗಾ 05 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಿ, ಅಂಗ ಶೋಧನೆ ಮಾಡಿ, ಒಟ್ಟು 1670=00 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡು ಜಪ್ತ
ಪಂಚನಾಮೆಯೊಂದಿಗೆ, ಎಲ್ಲಾ 05 ಜನ ಆರೋಪಿತರನ್ನು, ಮತ್ತು ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 1670=00 ರೂ
ಹಾಗು, 52 ಇಸ್ಪೇಟ ಎಲೆಗಳೋಂದಿಗೆ ಠಾಣೆಗೆ ಬಂದು ಶ್ರೀ ಶಿವರಾಯ ಎ.ಎಸ್.ಐ ರವರ ವರದಿ
ಮೇರೆಗೆ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜುಜಾಟ ನಿರತ ಇಬ್ಬರು ವ್ಯಕ್ತಿಗಳ ಬಂಧನ :
ದೇವಲ
ಗಾಣಗಾಪೂರ ಠಾಣೆ : ದಿನಾಂಕ:10-10-2013
ರಂದು 12:50 ಪಿಎಂಕ್ಕೆ ಗೊಬ್ಬುರ (ಬಿ) ಗ್ರಾಮದ ಶರಣಬಸವೇಶ್ವರ ಗುಡಿಯ ಮುಂದೆ ನೋಡಲಾಗಿ ಅಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕ ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೆ ಒಂದು
ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ
ಒಬ್ಬನು ಜನರಿಗೆ ಕೂಗಿ ಹೇಳುತಿದ್ದು ಇನ್ನೊಬ್ಬನು ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ
ಬರೆದ ಮಟಕಾ ಚೀಟಿ ಕೊಟ್ಟು, ಮಟಕಾ ಜೂಜಾಟವಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಠಳಕ್ಕೆ ಹೋಗಿ ಮರೆಯಲ್ಲಿ
ನಿಂತು ನೋಡಲಾಗಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದನ್ನು
ನೋಡಿ ದಾಳಿ ಮಾಡಿ ಸಮಕ್ಷಮದಲ್ಲಿ
ಒಮ್ಮಲೆ ದಾಳಿ ಮಾಡಿ ಇಬ್ಬರನ್ನು ಹಿಡಿದು ಸದರಿಯವರನ್ನು
ವಿಚಾರಿಸಲು ಅವರು ತಮ್ಮ ಹೆಸರು 1] ದತ್ತಪ್ಪ ತಂದೆ ಗುರಪ್ಪ ದೂಪದ 2]
ಮೌಲಾಸಾಬ ತಂದೆ ರಾಜಾಸಾಬ ಮಾಶ್ಯಾಳ ಇಬ್ಬರು ಸಾ||ಗೊಬ್ನುರ
(ಬಿ) ಅಂತ ತಿಳಿಸಿದ್ದು ಸದರಿಯವರಿಂದ ನಗದು ಹಣ 775-00,
ಒಂದು ಮಟಕಾಚೀಟಿ, ಒಂದು ಬಾಲಪೆನ್ನ, ಒಂದು ಕಾರ್ಬನ ಕಂಪನಿಯ ಮೋಬೈಲ್ ಪಂಚರ ಸಮಕ್ಷಮ
ವಶಪಡಿಸಿಕೊಂಡು ಆರೋಪಿತರೋಂದಿಗೆ ಠಾಣೆಗೆ ಭಂದು ಸದರಿಯವರ ವಿರುದ್ಧ ದೇವಲಗಾಣಗಾಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಡಬೂಳ
ಠಾಣೆ : ಶ್ರೀಮತಿ ಚಂದ್ರಭಾಗ ಗಂಡ ನಾಗಣ್ಣಾ ಹರಕಂಚಿ ಸಾ: ಹಳೆ ಹೆಬ್ಬಾಳ ತಾ:
ಚಿತ್ತಾಪೂರ ಇವರು ದಿನಾಂಕ:10-10-2013
ರಂದು ಮನೆಯಲ್ಲಿರುವಾಗ ಬೀರಣ್ಣ ಸಂಗಡ 2 ಜನರು ಸಾ: ಎಲ್ಲರು ಹಳೆ
ಹೆಬ್ಬಾಳ ಗ್ರಾಮದವರು ಮನೆಯ ಹತ್ತಿರ ಬಂದು ಹೊರಗೆ ಕರೆದು ನಮ್ಮ ಹೊಲದಿಂದ ಹೋದ ಕೆನಲದ ಪರಿಹಾರ ಹಣವನ್ನು
ನಮಗೆ ಸಮಭಾಗ ಕೊಡಬೇಕು ಅಂತ ಕೇಳಿದಕ್ಕೆ ಫಿರ್ಯಾದಿ ನಮಗೆ 4 ಎಕರೆ 22 ಗುಂಟೆ ನಿಮಗೆ 2 ಎಕರೆ ಹೊಲವಿದ್ದು. ಹಿಂದಿನಂತೆ ನಮಗೆ ಎರಡು ಪಾಲು ನಿಮಗೆ
ಒಂದು ಪಾಲು ಬರುತ್ತದೆ ಅಂತ ಹೇಳಿದಕ್ಕೆ ಆರೋಪಿತರೆಲ್ಲರು ಅವಾಚ್ಯವಾಗಿ ಬೈದು ಕೂದಲು ಹಿಡಿದು ಜಗ್ಗಾಡಿ
ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ
ಠಾಣೆ : ಶ್ರೀಮತಿ ಸಂಗೀತಾ
ಗಂಡ
ಗಣೇಶ
ಚವ್ಹಾಣ
ಸಾ:
ಮಲ್ಲಯ್ಯನ
ತಾಂಡಾ
ಪಾಳಾ
ತಾ:ಜಿ: ಗುಲಬರ್ಗಾ
ಇವರು ದಿನಾಂಕ
09-10-2013 ರಂದು
ಸಾಯಾಂಕಾಲ
06-00 ಗಂಟೆ
ಸುಮಾರಿಗೆ
ನಾನು
ಮನೆಯ
ಮುಂದೆ
ಇದ್ದಾಗ
ನಮ್ಮ
ತಾಂಡಾದ
1) ರಾಮಚಂದ್ರ
ತಂದೆ
ಮಾನಸಿಂಗ
ಚವ್ಹಾಣ
2) ಲಿಂಗರಾಜ
ತಂದೆ
ರಾಮಚಂದ್ರ
ಚವ್ಹಾಣ
3) ವೆಂಕಟೇಶ
ತಂದೆ
ರಾಮಚಂದ್ರ
ಚವ್ಹಾಣ
4) ಅರವಿಂದ
ತಂದೆ
ರಾಮಚಂದ್ರ
ಚವ್ಹಾಣ
5) ಮಾನಸಿಂಗ
ತಂದೆ
ರಾಮಚಂದ್ರ
ಚವ್ಹಾಣ
6)ದೇವಿಬಾಯಿ
ಗಂಡ
ರಾಮಚಂದ್ರ
ಚವ್ಹಾಣ
7) ಸವಿತಾ
ಗಂಡ
ಪಾಂಡು
ರಾಠೋಡ
ಇವರೆಲ್ಲರೂ
ಮನೆಯ
ಎದುರು
ಬಂದು
ಅವಾಚ್ಯ
ಶಬ್ದಗಳಿಂದ
ಬೈಯ್ದು
ಕಲ್ಲಿನಿಂದ
ಕೈಗಳಿಂದ
ಹೊಡೆದು
ರಕ್ತಗಾಯ
ಹಾಗೂ
ಗುಪ್ತಗಾಯ
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಲ್ಲಪ್ಪ ತಂದೆ ಮಾಳಪ್ಪ ಹೊಸಮನಿ ಸಾ : ಗೌರ(ಕೆ) ರವರು ದಿನಾಂಕ 10-10-2013 ರಂದು ಮದ್ಯಾಹ್ನ 12:00 ಗಂಟೆ
ಸಮಯಕ್ಕೆ ತಮ್ಮ ಮೇಟಗಿಯ ಮುಂದೆ ಇದ್ದಾಗ ನಮ್ಮ ತಮ್ಮ ಹೋನ್ನಪ್ಪ ಮತ್ತು ಆತನ ಹೆಂಡತಿ ಹಿರಿಗೆಮ್ಮ
ಹಾಗೂ ಅಣ್ಣ ಲಕ್ಕಪ್ಪ ಮತ್ತು ಆತನ ಹೆಂಡತಿ ಶಿವಮ್ಮ
4 ಜನರು ನನ್ನ ಹತ್ತಿರ ಅವಾಚ್ಯ ಶಬ್ದಗಳಿಂದ ಬೈದು ಹೋನ್ನಪ್ಪ
ಈತನು ಅಲ್ಲಿಯೆ ಬಿದ್ದ ಬಡಿಗೆಯನ್ನು ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದನು. ಲಕ್ಕಪ್ಪ ಈತನು
ಕಲ್ಲು ತಗೆದುಕೊಂಡು ನನ್ನ ಬೇನ್ನಿನ ಮೇಲೆ ಹೊಡೆದನು. ಹಿರಿಗೆಮ್ಮ ಮತ್ತು ಶಿವಮ್ಮ ಇಬ್ಬರು
ಕೈಯಿಂದ ನನ್ನ ಮೈ ಕೈಗೆ ಹೊಡೆದಿರುತ್ತಾರೆ. ಸದರಿಯವರು ಹೊಡೆದು
ರಕ್ತಗಾಯಪಡಿಸಿ ಮಗನೆ ನೀನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ಕಲಾಸ ಮಾಡುತ್ತೆವೆ ಅಂತಾ ಜೀವದ
ಹೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ಶ್ರೀ ಹೊನ್ನಪ್ಪ ತಂದೆ ಮಾಳಪ್ಪ ಹೊಸಮನಿ ಸಾ : ಗೌರ (ಕೆ) ಇವರು ದಿನಾಂಕ 10-10-2013 ರಂದು ಮದ್ಯಾಹ್ನ 12:00 ಗಂಟೆ
ಸಮಯಕ್ಕೆ ನಾನು ನಮ್ಮ ಹೊಲದಲ್ಲಿ ನೀರು ಬಿಡಬೇಕು ಎಂದು ಕರೆಂಟ ಮೋಟಾರ ಚಾಲು ಮಾಡಲು
ಹೊಗುತ್ತಿದ್ದಾಗ ಮಲ್ಲಪ್ಪ ಮತ್ತು ನನ್ನ ತಾಯಿ ಸುಗಲಾಬಾಯಿ ಹಾಗೂ ಮಲ್ಲಪ್ಪನ ಹೆಂಡತಿ ಶರಣಮ್ಮ
ಮತ್ತು ಬೀಮಣ್ಣನ ಹೆಂಡತಿ ಕವಿತಾ 4 ಜನರು ನನ್ನ ಹತ್ತಿರ ಬಂದು ನನ್ನನ್ನು ತಡೆದು ನಿಲ್ಲಿಸಿ ನನಗೆ
ಏನೊ ಸೂಳೆ ಮಗನೆ ಕರೆಂಟ ಮೋಟಾರ ಚಾಲು ಮಾಡಲು ಹೊಗುತ್ತಿದ್ದಿಯಾ , ಇವತ್ತು ನನ್ನ ಪಾಳಿ
ಇರುತ್ತದೆ, ಅಂತಾ ಏಕಾ ಏಕಿ ಕೈಯಿಂದ ಮಲ್ಲಪ್ಪ ಈತನು ನನಗೆ ಹೊಡೆಯ ಹತ್ತಿದನು. ಶರಣಮ್ಮ ಇವಳು ಈ ಮಗನಿಗೆ
ಬಿಡ/ಬೇಡಾ ಕಲಾಸ ಮಾಡು ಅಂತಾ ಅಲ್ಲೆ ಇದ್ದ ಒಂದು ಬಡಿಗೆಯನ್ನು ಮಲ್ಲಪ್ಪನಿಗೆ ತಂದು ಕೊಟ್ಟಿದ್ದು,
ಮಲ್ಲಪ್ಪ ಈತನು ಅದೆ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹಾಗೂ ಕೈಗಳಿಗೆ ಹೊಡೆದನು. ಕವೀತಾ ಇವಳು
ತನ್ನ ಕೈ ಬೇರಳಿನ ಉಗುರಿನಿಂದ ನನ್ನ ಬೇನ್ನಿನ ಮೇಲ ಚೂರಿದಳು . ಸದರಿಯವರು ಹೊಡೆಯುತ್ತಿದ್ದಾಗ
ನಾನು ಕೇಳಗೆ ಬಿದ್ದು ಚಿರಾಡುತ್ತಿದ್ದೆನು. ಆಗ 4 ಜನರು ಸೇರಿ ಕಾಲಿನಿಂದ ನನಗೆ ಒದ್ದು ಗಾಯಪಡಿಸಿ ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ
:
ಶ್ರೀ ಅಂಬಾರಾಯ ತಂದೆ ಶರನಪ್ಪ ಜಿಂಝೆ ಸಾ: ಬೆಳಮಗಿ ಗ್ರಾಮ ತಾ:ಆಳಂದ ಇದ್ದು ಈ ಮೂಲಕ ತಮ್ಮಲ್ಲಿ ದೂರು
ಸಲ್ಲಿಸುವುದೇನಂದರೆ ದಿನಾಂಕ; 08-10-2013 ರಂದು ನಮ್ಮೂರಿನ ಗ್ರಾಂ ಪಂ ಕಾರ್ಯಲಯದಲ್ಲಿ ನನ್ನಗೂ
ಮತ್ತು ನಮ್ಮ ಗ್ರಾಮದ ಚೆನ್ನಬಸಪ್ಪ ತಂದೆ ಮಲ್ಲೇಶಪ್ಪ ಖಣ್ಣಾಕರ ರವರ ಮಧ್ಯ ಬಾಯಿ ಮಾತಿನಿಂದ ವಾದ
ವಿವಾದವಾಗಿರುತ್ತದೆ. ಈ ಹಿನ್ನೆಯಲ್ಲಿ ಅವರು ನನ್ನ ವಿರುದ್ದ ದೂರು ನೀಡಿದ್ದು ಆದರೂ ಸಹ ಸುಮ್ಮನಿದ್ದೇನೆ ಇಂದು ದಿನಾಂಕ 10-10-2013 ರಂದು
ಮುಂಜಾನೆ 6-15 ಸುಮಾರಿಗೆ ನಾನು ಸಲಗರ ಹೋಗುವ
ರಸ್ತೆ ಮೇಲೆ ವಾಕಿಂಗ ಮಾಡುವಾಗ 1] ಅಶೋಕ ತಂದೆ
ದೇವಿಂದ್ರಪ್ಪ ಸುತಾರ 2] ಚೆನ್ನಬಸಪ್ಪ ತಂದೆ ಮಲ್ಲೇಶಪ್ಪ
ಖಣ್ಣಾಕರ 3] ಸಿದ್ರಾಮಪ್ಪ ತಂದೆ ಚಂದ್ರಕಾಂತ ಬಸನಾಕರ ಈ ಮೂರು ಜನರು ಕೂಡಿಕೊಂಡು ನನ್ನನ್ನು
ತಡೆದು ನಿಲ್ಲಿಸಿ ಏಲೆ ಬೋಸಡಿ ಮಗನೆ ಗ್ರಾಂ ಪಂ ಉಪಾಧ್ಯಕ್ಷ ಆಗಿದಿಯಂತ ಬಹಳ ನಿಗರಿಲೇ
ತಿರುಗಾಡುತಿದ್ದಿ ನಿನ್ನೆ ಸೊಕ್ಕ ಬಹಳ ಬಂದಿದೆ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಶೋಕನು ಕೈಯಿಂದ ಮುಷ್ಟಿ ಮಾಡಿ ನನ್ನ ಎದೆಗೆ
ಗುದ್ದುತಿರುವಾಗ ಚೆನ್ನಬಸಪ್ಪ ಮತ್ತು ಸಿದ್ರಾಮಪ್ಪ
ಇವರು ಇಬ್ಬರು ಕೂಡಿ ಕೈಯಿಂದ ನನ್ನ ಬೆನ್ನ ಮೇಲೆ
ಹೊಡೆಯುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಅಲ್ಲದೆ ಇನ್ನೂ ಮುಂದೆ ನೀನೆನಾದರೂ ಗ್ರಾಂ ಪಂ ಉಪಾಧ್ಯಕ್ಷ
ಇದ್ದಿನಿಯಂತ ಧಿಮಾಕಲೇ ತಿರಾಗಾಡದಿಯಂದರೆ ನಿನ್ನ ಖಲ್ಲಾಸ ಮಾಡುತ್ತೆವೆಂದು ಜೀವ ಬೆದರಿಕೆ
ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ
ಠಾಣೆ : ಶ್ರೀಮತಿ ಸುಶಿಲಾಬಾಯಿ ಗಂ ಪಾಂಡು ರಾಠೋಡ ಸಾ: ಪೊಲಕಪಳ್ಳಿ ತಾಂಡಾ ತಾ: ಚಿಂಚೊಳಿ ಇವರು 09.100.2013 ರಂಧು ಸಾಯಾಂಕಾಲ ನಾನು ನಮ್ಮ ಮನೆಯ ಪಕ್ಕದ ಬೀಮರಾವ್
ತಂದೆ ಸೇವು ಪವಾರ ಇವರ ಮನೆಯ ಮುಂದಿನ ದಾರಿಯ ಮೂಲಕ ನಡೆದುಕೊಂಡು ಬರುತ್ತಿದ್ದಾಗ ಭಿಮರಾವ್
ಪವಾರ ಇವನು ಅವಾಚ್ಯಶಬ್ದಗಳಿಂದ ಬೈದು ನನ್ನ ಹೆಂಡತಿಯ ಮೇಲೆ
ಸುಳ್ಳು ಸುಳ್ಳೆ ಕೇಸು ಮಾಡಿದ್ದಿ ನೀನು ಆ
ಕೆಸನ್ನು ವಾಪಸ್ಸು ತೆಗೆದುಕೋ ಇಲ್ಲಾ ನಿನ್ನ ಜೀವ
ಸಹಿತ ಬಿಡುವದಿಲ್ಲಾ ಸದರ ಭಿಮರಾವ್ ತಂಧೆ ಸೇವು ಪವಾರ ಇವನಿಗೆ ನೀನು ಹಾಗೆಲ್ಲಾ ಹೊಲಸು
ಬೈಯಬೇಡಾ ನನ್ನ ಗಂಡ ಸತ್ತಿದ್ದಕ್ಕೆ
ನಾಣು ಕೇಸು ಮಾಡಿದಿನಿ, ಅದು ಕೋರ್ಟನಲ್ಲಿ ನಡೆದಿರುತ್ತದೆ ಅದನ್ನ ನೀನೇನು ಕೇಳುತ್ತಿ ಅಂತಾ ಅಂದು ನನ್ನ ಮನೆಗೆ ಕಡೆಗೆ ನಡೆದುಕೊಂಡು
ಹೋಗುತ್ತಿರಬಾಎಕಾದರೆ ಸದರಿಯವನು ಜೋರು ದ್ವನಿಯಲ್ಲಿ ಏ ಬೋಸಡಿ ನನಗೆ ಕಣ್ಣು ನಿಗರಿಸಿ ಮಾತಾಡಿ ಹೋಗ್ತಿಯಾ ಅಂತಾ ಅನ್ನುತ್ತಲೇ
ಓಡಿ ಬಂದು ನನ್ನನು ತಡೆದು ನಿಲ್ಲಿಸಿ ನನ್ನ ತಲೆಗೂದಲನ್ನು ತನ್ನ ಕಯಯಿಂದ ಹಿಡಿದು ಜಗ್ಗಾಡಿ ಮಾನ ಭಂಗವನ್ನುಂಟು
ಮಾಡಿದ್ದಲ್ಲದೆ ನನ್ನ ಕಪಾಳಕ್ಕೆ ಕೈಯಿಂದ ಹೋಡೆದಿರುತ್ತಾನೆ ಅಷ್ಟರಲ್ಲಿಯೇ ಸದರಿಯವನ
ಮನೆಯಂಗಳದಲ್ಲಿಯೇ ಇದ್ದ ಸದರಿಯವನ ಹೆಂಡತಿಯಾದ ಸರೋಜಾದೇವಿ ಮಕ್ಕಳಾದ ಜೋತಿಬಾಯಿ ಹಾಗೂ ಶೋಬಾಬಾಯಿ
ಇವರೆಲ್ಲರೂ ಕೂಡಿ ಬಂದು ಕೈಯಿಂದ ಕಪಾಳಕ್ಕೆ ಹೋಡೆದು ದುಖಾ:ಪತ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ
ಠಾಣೆ : ಶ್ರೀ ಚನ್ನಬಸವರೆಡ್ಡಿ
ಬೋರಗಿ
ಸಾ:
ನೇರಡಗಿ
ಇವರು ದಿನಾಂಕ 01-10-2013
ರಂದು
ಸಾಯಂಕಾಲ 6-30 ಗಂಟೆಗೆ
ಮುದಬಾಳ
(ಕೆ)
ಕ್ರಾಸ
ದಾಟಿ 1 ಕಿ.ಮೀ. ಅಂತರದ ಮೇಲೆ ಫಿರ್ಯಾದಿಯು
ತನ್ನ
ಮೊಟಾರ ಸೈಕಲ್ ನಂ. ಕೆಎ-32-ಎಕ್ಸ-8793 ನೇದ್ದರ
ಮೇಲೆ
ದೇಸಾಯಿ
ಇತನಿಗೆ
ಕೂಡಿಸಿಕೊಂಡು
ಹೋಗುತ್ತಿದ್ದಾಗ
ಆರೋಪಿತನು ತನ್ನ ಮೋಟಾರ ಸೈಕಲ್ ನಂ.
ಕೆಎ-28- ಕ್ಯೂ-7725 ನೇದ್ದನ್ನು
ಅತಿ
ವೇಗ
ಮತ್ತು
ಅಲಕ್ಷತನದಿಂದ
ನಡೆಸುತ್ತಾ
ನಮ್ಮ
ಮೋಟರಸೈಕಲಕ್ಕೆ
ಡಿಕ್ಕಿ
ಪಡಿಸಿ
ನನಗೆ
ಗಾಯ
ಪೆಟ್ಟುಗೊಳಿಸಿ
ತನ್ನ
ಮೋಟರಸೈಕಲದೊಂದಿಗೆ
ಓಡಿ
ಹೋಗಿರುತ್ತಾನೆ
ನಾನು
ಆಸ್ಪತ್ರೆ
ತೋರಿಸಿ
ಡಿಸ್
ಚಾರ್ಜ
ಆಗಿ
ಠಾಣೆಗೆ
ತಡವಾಗಿ
ಠಾಣೆಗೆ
ಬಂದು
ಅರ್ಜೀ
ನೀಡಿರುತ್ತೇನೆ
ಕಾರಣ
ಸದರ
ಆರೋಪಿತನ
ವಿರುದ್ದ
ಕಾನೂನು
ಪ್ರಕಾರ
ಕ್ರಮ
ಜರುಗಿಸಬೇಕು
ಅಂತ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಸ್ಟೇಷನ
ಬಜಾರ ಠಾಣೆ : ಶ್ರೀ
ಶೆಷಶಯನ ತಂದೆ ಕೃಷ್ಣಮಾಚಾರ್ಯ ಮಾರ್ತಾಡ ಸಾ|| ಪ್ಲಾಟ
ನಂ.46ಎ ಶ್ರೀಕೃಷ್ ಗಾಬರೆ ಲೇಔಟ ಗುಲಬರ್ಗಾ ಇವರು ದಿನಾಂಕ.
06.10.2013 ರಂದು 11.00 ಎ.ಎಂ ಕ್ಕೆ ಮನೆಗೆ ಕೀಲಿ ಹಾಕಿಕೊಂಡು ಹೈದ್ರಾಬಾದಕ್ಕೆ ಹೋಗಿದ್ದು
ಇಂದು ದಿನಾಂಕ. 10.10.2013 ರಂದು 7.00 ಪಿ.ಎಂ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು
ಮನೆಯ ಬಾಗಿಲ ಕೊಂಡಿ ಮುರಿದು ಮನೆಯಲ್ಲಿಯ 79 ಗ್ರಾಂ ಬಂಗಾರದ ವಡವೆಗಳು ಅ.ಕಿ|| 2,37,000/-
ಮತ್ತು 500 ಗ್ರಾಂ ಬೆಳ್ಳಿಯ ಸಾಮಾನುಗಳು ಅ.ಕಿ|| 30,000/-
ರೂ ಹಾಗೂ ನಗದು ಹಣ 40,000/- ರೂ ಹೀಗೆ ಒಟ್ಟು 3,07,000/-
ರೂ ಕಿಮ್ಮತ್ತಿನ ಬಂಗಾರ ಬೆಳ್ಳಿ ನಗದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ದೇವಿಂದ್ರ
ಕುನ್ನುರ
ಇವರು ದಿನಾಂಕ
09-10-2013 ರಂದು ರಾತ್ರಿ 11-30 ಗಂಟೆಯಿಂದ
ಬೆಳಿಗ್ಗೆ 6-00 ಅವದಿ ಒಳಗೆ ಯಾರೋ ಕಳ್ಳರು
ನಮ್ಮ
ಮನೆಯ
ಬಾಗಿಲ
ಕೀಲಿ
ಮುರಿದು
ಮನೆಯ
ಒಳಗೆ
ಹೋಗಿ
ಟೆಬಲ್
ಡ್ರಾದ
ಕೀಲಿ
ಮುರಿದು
ಡ್ರಾದಲ್ಲಿಟ್ಟ 59500/- ರೂಪಾಯಿ
ಕಿಮ್ಮತ್ತಿನ
ಬಾಂಗರದ
ಅಭರಣಗಳು
ಮತ್ತು
ನಗದು
ಹಣ 2000/- ರೂ ಹಿಗೆ ಒಟ್ಟು 61500/- ರೂ ಕಿಮ್ಮತ್ತಿನ
ವಸ್ತುಗಳು
ಯಾರೋ
ಕಳ್ಳರು
ಕಳುವು
ಮಾಡಿಕೊಂಡು
ಹೋಗಿದ್ದು
ಅವರನ್ನು
ಪತ್ತೆ
ಹಚ್ಚಿ
ಅವರ
ವಿರುದ್ದ
ಕಾನೂನು
ಪ್ರಕಾರ
ಕ್ರಮ
ಜರುಗಿ
ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಸಂಗಣ್ಣ ದಂಡೋತಿ
ಇವರು ಮತ್ತು ತಮ್ಮ ಹೆಂಡತಿ
ಇಬ್ಬರೂ
ಕೂಡಿಕೊಂಡು
ದಿ: 09-10-2013 ರಂದು ಸಾಯಂಕಾಲ 5.00 ಗಂಟೆಗೆ
ನಾವು
ಬಾಡಿಗೆ
ಇದ್ದ
ಬಸವೇಶ್ಚವರ
ಕಾಲೋನಿಯಲ್ಲಿ
ಇರುವ
ಮನೆಗೆ
ಕೀಲಿ
ಹಾಕಿಕೊಂಡು
ನಮ್ಮೂರಾದ
ನರಿಬೋಳಿಗೆ
ಹೋಗಿದ್ದು
ನಂತರ
ನಮ್ಮ
ಮನೆಯ
ಮಾಲಿಕನು
ಪೋನ
ಮಾಡಿ
ತಿಳಿಸಿದೆನೆಂದರೆ
ನಿಮ್ಮ
ಮನೆಯ
ಕೀಲಿ
ಮುರಿದ್ದು
ಯಾರೋ
ಕಳ್ಳರು
ಕೀಲಿ ಮುರಿದು ಮನೆ ಕಳವು ಮಾಡಿರುತ್ತಾರೆ ಅಂತಾ ತಿಳಿಸಿದ್ದು ನಾವು ಬಂದು ನೋಡಲಾಗಿ
ನಮ್ಮ
ಮನೆ
ಕೀಲಿ
ಮುರಿದು
ಮನೆ
ಒಳಗೆ
ಹೋಗಿ
ಅಲಮಾರಿ
ಕೀಲಿ
ಮುರಿದ್ದು
ಅದರಲ್ಲಿ
ಇದ್ದ 15200 ರೂ/ ಕಿಮ್ಮತ್ತಿನ
ಬೆಳ್ಳಿ
ಸಾಮಾನಗಳನ್ನು ಯಾರೋ ಕಳ್ಳರು
ಕಳ್ಳತನ
ಮಾಡಿಕೊಂಡು
ಹೋಗಿರುತ್ತಾರೆ
ಅಂತಾ
ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ಗುರಪ್ಪ ವಗ್ಗಿ ಚಿಂಚೋಳಿ ಸರಕಾರಿ ಪ್ರೌಡ ಶಾಲೆ ಇವರು ದಿನಾಂಕ 09-10-2013 ರಂದು ಸಕಕಾರಿ ಶಾಲೆ ಮುಚ್ಚಿಕೊಂಡು ಹೋದಾಗ ಯಾರೋ ಕಳ್ಳರು ಶಾಲೆಯ ಕೀಲಿ ಮುರಿದು ಶಾಲೆಯಲ್ಲಿದ್ದ 4 ಸಿಲಿಂಡರ ಅ ಕಿ 2400/- ನೇದ್ದವುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.