Police Bhavan Kalaburagi

Police Bhavan Kalaburagi

Wednesday, April 28, 2021

BIDAR DISTRICT DAILY CRIME UPDATE 28-04-2021

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-04-2021

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 24/2021 ಕಲಂ 392 ಐಪಿಸಿ :- 

 

 ದಿನಾಂಕ 27/04/2021 ರಂದು 1330 ಗಂಟೆಗೆ ನಾಗಶೇಟ್ಟಿ ತಂದೆ ಅಶೋಕ ಹಡಪದ ವಯ-24 ಜಾ|| ಹಡಪದ   ಮು|| ಸಂಗೋಳಗಿ ತಾ|| ಜಿ|| ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 26/04/2021 ರಂದು ಫಿರ್ಯಾದಿ ಮತ್ತು ಸಂಬಂದಿ ಸಿದ್ದು ತಂದೆ ಮಲ್ಲಿಕಾರ್ಜುನ  ಹಡಪದ ವಯ-25   ಇಬ್ಬರು  ಮೋಟಾರ ಸೈಕಲ  ನಂ ಕೆ.ಎ 38 9213 ನೇದರ ಮೇಲೆ ತಮ್ಮ ಗ್ರಾಮದಿಂದ ರಾಜೇಶ್ವರಕ್ಕೆ ಸಂಬಂದಿಕರ ಮೋಕ್ಷಕ್ಕೆ ಹೋಗಿ ನಂತರ  ಮರಳಿ ಸಂಬಂದಿಕರ ಮನೆ ಚಿದ್ರಿಗೆ ಹೋಗುತ್ತಿದ್ದಾಗ ರಾತ್ರಿ 9 ಗಂಟೆಗೆ ಅಯಾಸಪೂರ ಕ್ರಾಸ ಹತ್ತಿರ ಬೆಳ್ಳುರಾ ರಿಂಗ್ ರೋಡ ಮೇಲೆ ಹಿಂದಿನಿಂದ ಒಂದು ಮೊಟಾರ ಸೈಕಲ ಮೇಲೆ ಮೂರು ಜನ ಯಾರೋ ಅಪರಿಚಿತರು  ಬಂದು ಮೊಟಾರ ಸೈಕಲ ಮದ್ಯ ಕುಳಿತವನು  ಫೀರ್ಯಾದಿ ಶರ್ಟನ ಜೇಬಿನಲ್ಲಿದ  ಓಪೋ ರೆನೋ 2 ಎಫ್ ಮೋಬೈಲ್ ಅಂ ಕೀ 20,000/- ನೇದನ್ನು  ಕಸಿದುಕೊಂಡು ಹೋಗಿರುತ್ತಾರೆ. ಸದರಿಯವರು ಒಂದು ಕೆಂಪು ಪಲ್ಸರ ಎನ್.ಎಸ್ 200 ಮೊಟಾರ ಸೈಕಲ ಮೇಲೆ ಬಂದಿದ್ದು ಎಲ್ಲರು ಮಾಸ್ಕ ಹಾಕಿರುತ್ತಾರೆ.  ಕತ್ತಲಾಗಿದರಿಂದ ಘಟನೆ ನಂತರ  ಮನೆಗೆ ಹೋಗಿ ಮನೆಯವರಿಗೆ ವಿಚಾರಿಸಿ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 74/2021 ಕಲಂ 32(3) ಕೆ.. ಕಾಯ್ದೆ ;-

 

ದಿನಾಂಕ 27/04/2021 ರಂದು 1015 ಗಂಟೆಗೆ ಸಿಪಿಐ ರವರು ಕಚೇರಿಯಲ್ಲಿ ಇದ್ದಾಗ  ಮೋಬೈಲ್ ಮುಖಾಂತರ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಕನಕಟ್ಟಾ ಗ್ರಾಮದಲ್ಲಿ ಮಲ್ಲಿಕಾರ್ಜುನ ಎಂಬ ವ್ಯಕ್ತಿ ತನ್ನ  ಹೋಟೆಲದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನವು ಮಾಡಿಕೊಟ್ಟಿರುತ್ತಾನೆ ಅಂತ ಭಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಕನಕಟ್ಟಾ ಗ್ರಾಮಕ್ಕೆ ಹೋಗಿ ಮಲ್ಲಿಕಾರ್ಜುನ ಮೇತ್ರೆ ಇವನ  ಹೋಟೆಲದಲ್ಲಿ ನೋಡಲು ಹೋಟೆಲ ಒಳಗಡೆ ಟೇಬಲ ಮೇಲೆ ಸರಾಯಿ ಪ್ಯಾಕೇಟ, ಪ್ಲಾಸ್ಟಿಕ್ ಗ್ಲಾಸ್ ಮತ್ತು ನೀರಿನ ಬಾಟಲ ಇದ್ದವು. ಅಲ್ಲೆ ಹಾಜರಿದ್ದ ವ್ಯಕ್ತಿಗೆ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಿಕಾಜರ್ುನ ತಂದೆ ದೇವಿದಾಸ ಮೇತ್ರೆ, ವಯ 38 ವರ್ಷ, ಜಾ. ಕುರುಬರು, ಉ. ಹೋಟೆಲ ಕೆಲಸ, ಸಾ. ಹಲಸಿ (ಎಲ್), ಸದ್ಯ ಕನಕಟ್ಟಾ ಗ್ರಾಮ ಅಂತಾ ತಿಳಿಸಿ ಸದರಿ ಹೊಟೆಲ ತನ್ನದೆ ಇರುತ್ತದೆ ಅಂತ ತಿಳಿಸಿದನು. ಅವನಿಗೆ ಸರಾಯಿ ಬಾಟಲಿ ಬಗ್ಗೆ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ತನ್ನ ಹೋಟೆಲದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿ ಕೊಟ್ಟಿರುವುದು ಒಪ್ಪಿಕೊಂಡನು. ಅವನಿಗೆ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಕುರಿತು ಸರಕಾರದಿಂದ ಪರವಾನಿಗೆ ತೋರಿಸಲು ಹೇಳಿದಾಗ ಅವನು ತನ್ನ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತ ತಿಳಿಸಿದನು ಮತ್ತು ಓಡಿ ಹೋದವನ ವಿಳಾಸ ವಿಚಾರಿಸಿದಾಗ ಅವನ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲಾ ಅಂತ ತಿಳಿಸಿದನು. ನಂತರ ಟೇಬಲ ಮೇಲಿನ 1]  180 ಎಮ್ಎಲ್ನ ಒಂದು ಓ.ಟಿ ಅದರಲ್ಲಿ ಅರ್ದ ಖಾಲಿ ಅಗಿದ್ದು ಕಿಮ್ಮತ 100/- ರೂಪಾಯಿ 2]  1 ಪ್ಲಾಸ್ಟಿಕ್ ಗ್ಲಾಸ್ ಅ:ಕಿ: 00 ಮತ್ತು 4] ಒಂದು ನೀರಿನ ಪ್ಲಾಸ್ಟಿಕ ಬಾಟಲ ಅ:ಕಿ: 00=00 ನೇದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.