Police Bhavan Kalaburagi

Police Bhavan Kalaburagi

Thursday, June 1, 2017

Yadgir District Reported Crimes


                                                  Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 89/2017 ಕಲಂ 379 ಐ.ಪಿ.ಸಿ;- ದಿನಾಂಕ 31/05/2017 ರಂದು ಬೆಳಿಗ್ಗೆ 09 ಗಂಟೆಗೆ ಫಿಯರ್ಾಧಿ ಶ್ರೀ ರವೀಂದದ್ರರೆಡ್ಡಿ ತಂದೆ ಈರಣ್ಣರೆಡ್ಡಿ ರೆಡ್ಡಡಿ ವಯಾ 44 ವರ್ಷ, ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಗಾಂಧಿನಗರ ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ನಾನು ರವೀಂದ್ರರೆಡ್ಡಿ ತಂದೆ ಈರಣ್ಣರೆಡ್ಡಿ ಸಾ|| ಮನೆ ನಂ 5-1-254, ಗಾಂಧಿ ನಗರ ಸ್ಟೇಷನ ಏರಿಯಾ ಯಾದಗಿರಿ ನಿವಾಸಿ ಇದ್ದು, ಈ ಮೂಲಕ ಪ್ರಮಾಣಿಕರಿಸಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಹಿರೋ ಹೊಂಡಾ ಸಿ.ಡಿ ಡಿಲೆಕ್ಸ್ ವಾಹನ ನಂ ಕೆ.ಎ 33 ಕೆ. 1947, ಚೆಸ್ಸಿ ನಂ ಒಃಐಊಂ11ಇಓಂ9ಐಔ1139, ಇಂಜಿನ್ ನಂ-ಊಂ11ಇಅಂ9ಐ06958, ಇದ್ದು, ಇದರ ನೊಂದಣಿ ಕೃತ ಮಾಲಕನಾಗಿದ್ದು, ಎಂದಿನಂತೆ ನಾನು ನನ್ನ ಸದರಿ ವಾಹವನ್ನು ದಿನಾಂಕ 13/04/2017 ರಂದು ಸಾ|| 8 ಕ್ಕೆ ರಾತ್ರಿ ಹಿರೋ ಶೋ ರೂಮ್ ಚಿತ್ತಾಪೂರ ರಸ್ತೆ ಮೋಹನ ಕಾಂಪ್ಲೆಕ್ಸ್ ಹಿಂದುಗಡೆ, ಯಾದಗಿರಿಯಲ್ಲಿರುವ ಸದರಿ ಜಾಗದಲ್ಲಿ ನಾನು ನನ್ನ ವಾಹನವನ್ನು ನಿಲ್ಲಿಸಿದದ್ದೆನು. ಸ್ವಲ್ಪ (09 ಪಿ.ಎಂಕ್ಕೆ) ಸಮಯವನ್ನು ಬಿಟ್ಟು ತಿರುಗಿ ನಾನು ನನ್ನ ವಾಹವನ್ನು ತೆಗೆದುಕೊಂಡು ಮನೆಗೆ ಹೋಗಬೇಕೆಂದುಕೊಂಡು ನಾನು ನನ್ನ ವಾಹನವನ್ನು ನಿಲ್ಲಿಸಿದ ಜಾಗದದಲ್ಲಿ ಹೋಗಿ ನೋಡಿದರೆ, ಸದರಿ ಜಾಗದಲ್ಲಿ ನನ್ನ ಗಾಡಿಯು ಇರಲಿಲ್ಲ. ಕಳುವಾಗಿದೆ ಎಂದು ಅಲ್ಲಿ ಇಲ್ಲಿ ಹುಡುಕಾಡಲಾಗಿ ಸದರಿ ಗಾಡಿಯು ಪತ್ತೆಯಾಗಿರುವುದಿಲ್ಲ. ಮತ್ತು ಎಲ್ಲಾ ರೀತಿಯಲ್ಲಿ ಹುಡುಕಿದರು ಸಿಕ್ಕಿರುವುದಿಲ್ಲವಾದ್ದರಿಂದ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಮೋ.ಸೈ. ಅ.ಕಿ 30,000/- ರೂ||, ವಾಹನದ ಬಣ್ಣ ಕಪ್ಪು ಇರುತ್ತದೆ. ಆದ್ದರಿಂದ ದಯಪೂರ್ವಕ ಮನವಿ ಸಲ್ಲಿಸುತ್ತಿದ್ದೇನೆ ಅಂತಾ ನೀಡಿದ ಲಿಖಿತ  ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ 89/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 90/2017 ಕಲಂ. 78 (3) ಕೆ.ಪಿ. ಆಕ್ಗಟ;- ದಿನಾಂಕ 31/05/2017 ರಂದು 6-15 ಪಿಎಂಕ್ಕೆ ಮಾನ್ಯ ಸುನೀಲ ವ್ಹಿ ಮೂಲಿಮನಿ ಪಿ.ಎಸ್.ಐ (ಕಾಸು) ಸಾಹೇಬರು ಠಾನೆಗೆ ಬಂದು ಆರೋಪಿ ಮತ್ತು ಮುದ್ದೆಮಾಲಿನೊಂಇಗೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:31/05/2017 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಯಾದಗಿರಿ ನಗರದ ಕೊಟಗಾರವಾಡಿಯ ಗಂಗಾಪರಮೇಶ್ವರಿ ಕಲ್ಯಾಣ ಮಂಟಪ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ವಿಠೋಭಾ ಹೆಚ್.ಸಿ.86, ರವಿ ರಾಠೋಡ ಪಿ.ಸಿ 269 ರವರಿಗೆ ಕರೆದು ವಿಷಯ ತಿಳಿಸಿ ರವಿ ಪಿಸಿ ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದು ಪಂಚರನ್ನು ಕರೆದುಕೊಂಡು ಠಾಣೆಗೆ ಬಂದಾಗ ಅವರಿಗೂ ವಿಷಯ ತಿಳಿಸಿ ಎಲ್ಲರೊಂದಿಗೆ ಠಾಣೆಯಿಂದ 4-15 ಪಿಎಂಕ್ಕೆ ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ ದಾಳಿ ಕುರಿತು ಹೊರಟು 4-25 ಪಿಎಂಕ್ಕೆ ಸ್ಥಳಕ್ಕೆ ಹೋಗಿ ಕೊಟಗಾರವಾಡಿಯ ಗಂಗಾ ಪರಮೇಶ್ವರಿ ಕಲ್ಯಾಣ ಮಂಟಪ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು  ನಡೆದುಕೊಂಡು ಹೋಗಿ ಒಂದು ಮನೆಯ ಹತ್ತಿರ ಮರೆಯಾಗಿ ನಿಂತು ನೋಡಿದಾಗ ಕಲ್ಯಾಣ ಮಂಟಪ ಮುಂದೆ ಇರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ 1=00 ರೂಪಾಯಿಗೆ 80=00 ರೂಪಾಯಿ ಗೆಲ್ಲಿರಿ ಮಟ್ಕಾ ಆಡಿರಿ ಎಂದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಚೀಟಿಯಲ್ಲಿ  ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಸದರಿಯವನಿಗೆ 4-45 ಪಿಎಂಕ್ಕೆ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಲ್ಲಪ್ಪ ತಂ. ಶಿವಪ್ಪ ಚಿರ್ತ ವಃ 45 ಜಾಃ ಕುರುಬರು ಉಃ ಒಕ್ಕಲುತನ ಮತ್ತು ಮಟ್ಕಾ ಬರೆಯುವುದು ಸಾಃಕೊಲಿವಾಡ ಯಾದಗಿರಿ ಅಂತಾ ಹೇಳಿದ್ದು, ಸದರಿಯವನಿಂದ 1) ಮಟ್ಕಾ ಜೂಜಾಟದ 1200=00 ರೂ. ನಗದು ಹಣ, 2) ಒಂದು ಮಟ್ಕಾ ನಂಬರ ಬರೆದ ಚೀಟಿ ಅ.ಕಿ.00-00 3) ಒಂದು ಬಾಲಪೆನ ಅ.ಕಿ.00-00 ಇವುಗಳನ್ನು ಜಪ್ತಿ ಮಾಡಿಕೊಂಡು 4-45 ಪಿಎಮ್ ದಿಂದ 5-45 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡು 6-15 ಪಿಎಂಕ್ಕೆ ಠಾಣೆಗೆ ಬಂದಿದ್ದು ಈ ಅಪರಾಧವು ಅಸಂಜ್ಞೆಯ ಸ್ವರೂಪದ್ದಾಗಿರುವುದರಿಂದ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಲಯದಿಂದ 8-15 ಪಿಎಂಕ್ಕೆ ಅನುಮತಿ ಪಡೆದುಕೊಂಡು  ಠಾಣೆ ಗುನ್ನೆ ನಂ.90/2017 ಕಲಂ.78(3) ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 28/2017 ಕಲಂ 279, 338, ಐಪಿಸಿ;- ದಿನಾಂಕ 31/05/2017 ರಂದು ಸಾಯಂಕಾಲ 5-45 ಪಿ.ಎಂ. ಸುಮಾರಿಗೆ ಫಿಯರ್ಾದಿ ಗಾಯಾಳು ತಮ್ಮ ಎಳೆನೀರು ಅಂಗಡಿಗೆ  ರಸ್ತೆಯ ಪಕ್ಕದಲ್ಲಿ ಹೊರಟಾಗ ಮಾರ್ಗ ಮದ್ಯೆ ಹೊಸಳ್ಳಿ ಕ್ರಾಸ್-ಶಾಸ್ತ್ರಿ ಚೌಕ್ ಮುಖ್ಯ ರಸ್ತೆಯ ಹೊಸ ಬಸ್ ನಿಲ್ದಾಣದ  ಹತ್ತಿರ ಆರೋಪಿ ತನ್ನ ಮೋಟಾರು ಸೈಕಲ್ ನಂ.ಕೆಎ-04, ಜೆಬಿ-2872 ನೆದ್ದನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಫಿಯರ್ಾದಿಗೆ ನೇರವಾಗಿ  ಡಿಕ್ಕಿಪಡಿಸಿದ ಪರಿಣಾಮ ಪಿಯರ್ಾದಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಸೊಂಟಕ್ಕೆ ಭಾರೀ ಗುಪ್ತಗಾಯವಾಗಿದ್ದು, ಎರಡು ಮೊಣಕಾಲುಗಳಿಗೆ, ಕೈಗಳಿಗೆ, ಭುಜಕ್ಕೆ ತರಚಿದ ರಕ್ತಗಾಯಗಳಾಗಿದ್ದು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಈ ಮೇಲಿನಂತೆ ಕ್ರಮ ಜರುಗಿಸಿದ್ದುಅದೆ                                                               
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 29/2017 ಕಲಂ 279,337,338,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್;- ದಿನಾಂಕ: 01-06-2017 ರಂದು ನಸುಕಿನ ಸಮಯದಲ್ಲಿ ಭಿಮನಗರ ತಾಂಡಾದ ಸಂತೋಷ ತಂದೆ ಸೋಮ್ಯಾ ರಾಠೋಡ, ಚಂದ್ರು ತಂದೆ ಚಾಪಲಾ ರಾಠೋಡ ಈತನು ನಡೆಸುತ್ತಿದ್ದ ಟ್ಯಾಕ್ಟರ ಇಂಜಿನ ನಂಬರ ಕೆಎ-33, ಟಿಎ-4315 ಟ್ರಾಲಿ ಸಮೇತ ತಾಂಡಾದ ಸಂತೋಷ ತಂದೆ ಸೋಮ್ಯಾ ರಾಠೋಡ, ಶಂಕರ ತಂದೆ ಕೀರ್ಯಾ ರಾಠೋಡ, ಕುಮಾರ ತಂದೆ ಶಂಕರ ರಾಠೋಡ, ಎಲ್ಲರೂ ಕೂಡಿಕೊಂಡು ಚಂದ್ರು ಇವರ ಹೊಲದಲ್ಲಿಯ ಕಟ್ಟಿಗೆಗಳನ್ನು ತರಲು ಟ್ಯಾಕ್ಟರ ಟ್ರಾಲಿಯಲ್ಲಿ ಚಂದ್ರು, ಕುಮಾರ, ಶಂಕರ ಮೂವರು ಕುಳಿತಿದ್ದು ಟ್ಯಾಕ್ಟರನ್ನು ಚಂದ್ರು ಈತನು ನಡೆಸಿಕೊಂಡು ಹೊಗುತ್ತಿದ್ದನು. ಅಂದಾಜು 4-30 ಎ.ಎಂ. ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಡಿಕಲ್ ಕಾಲೇಜ ಕ್ರಾಸ ಹತ್ತಿರ ರೋಡಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಯಾದಗಿರಿ ಕಡೆಯಿಂದ ಒಂದು ಲಾರಿ ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ನೊಡ ನೊಡುತ್ತಿದ್ದಂತೆ ಟ್ಯಾಕ್ಟರ ಟ್ರಾಲಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಪಡಿಸಿದಾಗ ಟ್ಯಾಕ್ಟರ ಟ್ರಾಲಿಯಲ್ಲಿ ಕುಳಿತ ಕುಮಾರ ಈತನು ಟ್ಯಾಲಿಯಿಂದ ಒಮ್ಮೆಲೆ ಸಿಡಿದು ರಸ್ತೆಯ ಮೇಲೆ ಬಿದ್ದಿದ್ದು ಟ್ಯಾಕ್ಟರ ಕೂಡಾ ಸ್ವಲ್ಪ ಮುಂದೆ ಹೋಗಿ ಪಲ್ಟಿಯಾಗಿ ರಸ್ತೆಯ ಎಡಗಡೆ ತಗ್ಗಿನಲ್ಲಿ ಬಿದ್ದಿತು, ಆಗ ಸದರಿ ಅಪಘಾತದಲ್ಲಿ ಚಂದ್ರು ಈತನಿಗೆ ಬಲಗಾಲಿನ ಹಿಮ್ಮಡಿಗೆ ಭಾರಿ ಗುಪ್ತ ಗಾಯ ಎರಡು ಬುಜಗಳಿಗೆ ಗುಪ್ತಗಾಯ ಹಾಗೂ ಶಂಕರ ಈತನಿಗೆ ತಲೆಯ ಹಿಂಬಾಗಕ್ಕೆ ಭಾರಿ ರಕ್ತಗಾಯ ಹಾಗೂ ಮುಖಕ್ಕೆ ಭಾರಿಗಾಯ ಹೊಂದಿ ಹಲ್ಲು ಮುರಿದ್ದಿದ್ದು, ಟ್ಯಾಕ್ಟರ ಚಾಲಕ ಚಂದ್ರು ಈತನಿಗೆ ಬಲಗಣ್ಣಿಗೆ ಭಾರಿ ಗುಪ್ತ ಹಾಗೂ ತೆರಚಿದ ಗಾಯವಾಗಿದ್ದು, ರೋಡಿನ ಬಿದ್ದ ಕುಮಾರ ಈತನಿಗೆ ಲಾರಿ ಆತನ ಮೇಲೆ ಹಾಯ್ದು ಹೋಗಿದ್ದರಿಂದ ತಲೆಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೆದುಳು ಹೊರಗೆ ಬಂದಿದ್ದು ಎರಡು ಮೊಳಕಾಲಗಳ ಕೆಳಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದನು. ಲಾರಿ ಚಾಲಕನು ಲಾರಿಯನ್ನು ಅಲ್ಲೆ ಸ್ವಲ್ಪ ಮುಂದುಗಡೆ ಸೈಡಿಗೆ ನಿಲ್ಲಿಸಿ ಕುಮಾರ ಈತನು ಮೃತಪಟ್ಟಿದ್ದನ್ನು ತಿಳಿದು ಪುನ ಲಾರಿಯನ್ನು ಚಾಲು ಮಾಡಿಕೊಂಡು ಹೊರಟು ಹೊದನು. ಲಾರಿ ನಂಬರ ನೊಡಿದ್ದು ಅದರ ನಂಬರ ಜಿಎ-05, ಟಿ-4210 ನೇದ್ದು ಇದ್ದು ಚಾಲಕನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಘಟನೆಯು ಲಾರಿ ನಂಬರ ಜಿಎ-05, ಟಿ-4210 ನೇದ್ದರ ಚಾಲಕನ ಅತೀ ವೇಗ ಮತ್ತು ಅಲಕ್ಷತನ ಚಾಲನೆ ಮಾಡಿ ಟ್ಯಾಕ್ಟರಕ್ಕೆ ಡಿಕ್ಕಿ ಪಡಿಸಿದ್ದರಿಂದ ಸಂಬವಿಸಿದ್ದು ಅಂತ ದೂರಿನ ಸಾರಾಂಶದ ಮೇಲಿಂದ ಈ ಮೇಲಿನ ಗುನ್ನೆ ಧಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ: 279, 337, 338, ಐಪಿಸಿ;- ದಿನಾಂಕ 31/05/2017 ರಂದು ಮಧ್ಯಾಹ್ನ 3-15 ಗಂಟೆಗೆ ಫಿರ್ಯಾಧಿ ಮತ್ತು ಆರೋಪಿತನು ಕೂಡಿಕೊಂಡು ಮೋಟಾರ ಸೈಕಲ ನಂ ಕೆ-35-ಎಲ್-2481 ನೆದ್ದರ ಮೇಲೆ ಕುಳಿತುಕೊಂಡು ತಮ್ಮ ಬೀಗರಿಗೆ ಮಾತಾಡಿಸಿಕೊಂಡು ಬರುವ ಕುರಿತು ತ್ಮಮೂರಿನಿಂದ ರಾಸಮುದ್ರ ಗ್ರಾಮಕ್ಕೆ ಹೋಗುವಾಗ ಮಾರ್ಗಮಧ್ಯ ಮುಂಡರಗಿ-ರಾಮಸಮುದ್ರ ರೋಡಿನ ಮೇಲೆ ಹೋಗುವಾಗ ಆರೋಪಿತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ನಾಯಿ ಅಡ್ ಬಂದುದ್ದರಿಂದ ಒಮ್ಮೆಲೆ ಬ್ರೇಕ್ ಹಾಕಿದಾಗ ಮೋಟಾರ ಸೈಕಲ ಸ್ಕೀಡ ಆಗಿ ಅಪಘಾತ ಮಾಡಿದ್ದರಿಂದ ಫಿರ್ಯಾಧಿಗೆ ಮತ್ತು ಆರೋಪಿತನಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆದ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ: 323, 324, 504, 506 ಐಪಿಸಿ;- ದಿನಾಂಕ 01/06/2017 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿದಾರನು ಶೆಟ್ಟಿಕೇರಾ ಗ್ರಾಮದ ಶಾಂತಮ್ಮ ಇವರ ಹೊಟೆಲ ಹತ್ತಿರ ಕುಳಿತಾಗ ಆರೋಪಿತನು ಅಲ್ಲಿಗೆ ಬಂದನು, ಆಗ ಫಿರ್ಯಾಧಿಯು ನಾನು ಮನೆ ಕಟ್ಟುತ್ತಿದ್ದೆನೆ, ನನಗೆ ಕಟ್ಟಿಗೆಗಳು ಬೇಕಾಗಿವೆ ನಮ್ಮ ಹೊಲದಲ್ಲಿಯ ಗಿಡಗಳು ಕಡಿದುಕೊಳ್ಳುತ್ತೆನೆ ಅಂತಾ ಅಂದಾಗ ಆರೋಪಿತನು ಆವಾಚ್ಯವಾಗಿ ಬೈದು ಜಗಳ ತೆಗೆದು ಕಟ್ಟಿಗೆಯಿಂದ, ಕೈಯಿಂದ ಹೊಡೆದು ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.
 

BIDAR DISTRICT DAILY CRIME UPDATE 01-06-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-06-2017

OgÁzÀ(©) ¥Éưøï oÁuÉ UÀÄ£Éß £ÀA. 94/2017, PÀ®A. 392 L¦¹ :-
¢£ÁAPÀ 29-05-2017 gÀAzÀÄ 2230 UÀAmÉUÉ ¦üAiÀiÁ𢠲ªÁf vÀAzÉ ¥ÁAqÀÄgÁAUÀ eÁzsÀªÀ ªÀAiÀÄ: 24 ªÀµÀð, eÁw: ®ªÀiÁtÂ, ¸Á: JPÀA¨Á, vÁ: OgÁzÀ(¨Á) gÀªÀj vÀªÀÄä PÉ®¸À ªÀÄÄVzÀ £ÀAvÀgÀ ªÀÄ£ÉUÉ ºÉÆUÀ®Ä vÀqÀªÁVzÀÝjAzÀ ¦üAiÀiÁð¢AiÀÄÄ vÀªÀÄä ªÀiÁ°PÀjUÉ ºÉý vÁ£ÀÄ ZÀ¯Á¬Ä¸ÀÄwÛzÀÝ PÁgÀ £ÀA. PÉJ-28/J£ï-5952 £ÉÃzÀÄ ZÀ¯Á¬Ä¹PÉÆAqÀÄ vÀªÀÄÆäjUÉ ºÉÆÃUÀĪÁUÀ J¦JA¹ PÁæ¸À ºÀwÛgÀ ¦üAiÀiÁð¢AiÀÄ ºÀ¼ÉAiÀÄ ¸ÉßûvÀ£ÁzÀ gÉÆûzÁ¸À vÀAzÉ Q±À£À ¥ÀªÁgÀ ¸Á: ¸ÀĨsÁµÀUÀ°è zÉUÀ®ÆgÀ (ªÀĺÁgÁµÀÖç) EvÀ£ÀÄ ¨sÉÃnAiÀiÁV vÀ£ÀUÉ ªÀÄ£ÉUÉ ºÉÆÃUÀ®Ä vÀqÀªÁVzÉ £À£Àß eÉÆvÉ §gÀÄvÉÛÃ£É CAvÀ w½¹zÀÝjAzÀ CªÀ¤UÉ PÁj£À°è PÀÆr¹PÉÆAqÀÄ JPÀA¨Á UÁæªÀÄzÀ ºÀwÛgÀ ºÉÆÃzÁUÀ ¸ÀzÀj gÉÆûzÁ¸À EvÀ£ÀÄ £À£ÀUÉ ¹UÀgÉÃl ¨ÉÃPÀÄ PÁgÀ ¤°è¸ÀÄ JAzÀÄ ºÉýzÀÝjAzÀ ¦üAiÀiÁð¢AiÀÄÄ JPÀA¨Á UÁæªÀÄzÀ ²ÃªÁf ZËPÀ ºÀwÛgÀ PÁgÀ ¤°è¹zÀÄÝ, DUÀ gÉÆûzÁ¸À EvÀ£ÀÄ ¦üAiÀiÁð¢UÉ ¹UÀgÉÃl vÀgÀĪÀAvÉ w½¹zÁUÀ ¦üAiÀiÁð¢AiÀÄÄ ¤gÁPÀj¹zÁUÀ CªÀ£ÀÄ MvÁÛAiÀÄ ¥ÀƪÀðPÀªÁV ¦üAiÀiÁð¢UÉ PɼÀUÉ E½¹ ¹UÀgÉÃlÄ vÀgÀĪÀAvÉ PÀ¼ÀÄ»¹ ¦üAiÀiÁð¢AiÀÄÄ ¹UÀgÉÃl vÀgÀ®Ä ºÉÆÃUÀĪÀµÀÖgÀ°è ¸ÀzÀj gÉÆûzÁ¸À EvÀ£ÀÄ £Á£ÀÄ ZÀ¯Á¬Ä¸ÀÄwÛzÀÝ PÁgÀ £ÀA PÉJ-28/J£ï-5952 £ÉÃzÀÄ ZÀ¯Á¬Ä¹PÉÆAqÀÄ Nr ºÉÆÃVgÀÄvÁÛ£É. DzÀÝjAzÀ ¸ÀzÀj gÉÆûzÁ¸À EvÀ£ÀÄ £Á£ÀÄ ZÀ¯Á¬Ä¸ÀÄwÛzÀÝ PÁgÀ zÉÆaPÉÆAqÀÄ ºÉÆÃUÀĪÀ GzÉÝñÀ¢AzÀ vÀ£ÀUÉ ¹UÀgÉÃl ¨ÉÃPÀÄ CAvÀ ºÉý £Á£ÀÄ ¹UÀgÉÃl vÀgÀ®Ä ºÉÆÃzÁUÀ DgÉÆæ gÉÆûzÁ¸À vÀAzÉ Q±À£À ¥ÀªÁgÀ ¸Á: ¸ÀĨsÁµÀUÀ°è zÉUÀ®ÆgÀ (ªÀĺÁgÁµÀÖç) EvÀ£ÀÄ PÁgÀ £ÀA. PÉJ-28/J£ï-5952 C.Q 2,50,000/- gÀÆ. £ÉÃzÀÄ zÉÆÃaPÉÆAqÀÄ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 31-05-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 56/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 31-05-2017 ರಂದು ಫಿರ್ಯಾದಿ ಎಮ್.ಡಿ ಮೊಶೀನ ಅಹೇಮದ ತಂದೆ ಅಬ್ದುಲ ಖಯೂಮ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಅಮಲಾಪುರ ಬೀದರ ಮತ್ತು ಊರಿನ ಹಾಜಿ ಮಹಮ್ಮದ ಹನೀಫ ತಂದೆ ಅಬ್ದುಲ ರಹೇಮಾನ ಇಬ್ಬರೂ ಬೀದರ ಹೊಸ ಬಸ್ ನಿಲ್ದಾಣದ 2 ನೇ ಗೇಟ ಹತ್ತಿರ ಮಾತಾಡುತ್ತಾ ನಿಂತಿದ್ದು,  ಆಗ ಫಿರ್ಯಾದಿಯ ತಮ್ಮನಾದ ಎಂ.ಡಿ ಅಮೇರ ಇವರು ತನ್ನ ಮೋಟಾರ ಸೈಕಲ ನಂ. ಕೆಎ-38/ಆರ್-2851 ನೇದರ ಮೇಲೆ ಅಮಲಾಪೂರದಿಂದ ಮಡಿವಾಳ ಸರ್ಕಲ ಮುಖಾಂತರ ಶಿವನಗರ ಬೀದರ ಕಡೆಗೆ ಹೋಗುತ್ತೀರುವಾಗ ಶಿವನಗರ ಕಡೆಯಿಂದ ಒಂದು ಆಟೋ ನಂ. ಕೆಎ-38/3678 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಬಸ್ ನಿಲ್ದಾಣದ 2 ನೇ ಗೇಟ ಹತ್ತಿರ ರೋಡಿನ ಡಿವೈಡರ ಗ್ಯಾಪದಲ್ಲಿ ಫಿರ್ಯಾದಿಯ ತಮ್ಮನ ಮೋಟಾರ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿ ಆಟೋ ಸ್ವಲ್ಪ ನಿಲ್ಲಿಸಿದಂತೆ ಮಾಡಿ ತನ್ನ ಆಟೋ ಸಮೇತ ಬೀದರ ಕಡೆ ಓಡಿ ಹೋಗಿರುತ್ತಾನೆ, ಅಲ್ಲೇ ಘಟನೆಯನ್ನು ಪ್ರತ್ಯೇಕ್ಷ ಕಂಡ ಫಿರ್ಯಾದಿ ಮತ್ತು ಹಾಜಿ ಮಹಮ್ಮದ ಹನೀಫ ಇಬ್ಬರೂ ಕೂಡಿ ಸಮೀಪ ಹೋಗಿ ನೋಡಲು ಎಂ.ಡಿ ಅಮೇರ ಇತನ ಬಲಗೈ ಮುಂಗೈಯಿಂದ ರೆಟ್ಟೆಯವರೆಗೆ ಭಾರಿ ರಕ್ತ ಗುಪ್ತಗಾಯವಾಗಿದ್ದು, ಗಾಯ ಬಹಳ ಗಂಭಿರ ಇದ್ದುದರಿಂದ ರಕ್ತಸ್ರಾವ ಕಡಿಮೆ ಆಗದಕ್ಕೆ ಕೂಡಲೇ ಫಿರ್ಯಾದಿಯು ಒಂದು ಅಂಬುಲೇನ್ಸ ಕರೆಯಿಸಿ ತಮ್ಮನಿಗೆ ಹೈದ್ರಾಬಾದ ಮ್ಯಾಕ್ಸ ಕ್ವೀವರ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾಧಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಹುಮನಾಬಾದ ಸಂಚಾರ  ಪೊಲೀಸ್ ಠಾಣೆ ಗುನ್ನೆ ನಂ. 61/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 31-05-2017 ರಂದು ನೇಲಕೂಡದಲ್ಲಿ ಫಿರ್ಯಾದಿ ಮಾರುತಿ ತಂದೆ ಸಂಬಂಣ್ಣಾ ಭಂಡಾರಿ ವಯ: 65 ವರ್ಷ, ಜಾತಿ: ಎಸ.ಸಿ, ಸಾ: ಬೇನಚಿಂಚೋಳಿ, ತಾ: ಹುಮನಾಬಾದ ರವರ ಸಂಬಂಧಿಕರ ಮದುವೆ ಇದ್ದ ಕಾರಣ ತಮ್ಮೂರಿನಿಂದ ಹುಮನಾಬಾದಕ್ಕೆ ಬಂದು ಹುಮನಾಬಾದನಿಂದ ಫಿರ್ಯಾದಿ ಹಾಗು ಫಿರ್ಯಾದಿಯ ಸಂಬಂಧಿಕರಾದ ಬಸವರಾಜ ಸಿಂಧೆ ಸಾ: ಹುಮನಾಬಾದ ರವರು ಕೂಡಿಕೊಂಡು ನೇಲಕೂಡಕ್ಕೆ ಹೋಗಿ ಮರಳಿ ಹುಮಬಾದಕ್ಕೆ ಗೋರಂಪಳ್ಳಿ ಮಾರ್ಗವಾಗಿ ಒಂದು ಅಟೊ ನಂ. ಕೆಎ-39/5609 ನೇದರಲ್ಲಿ ಫಿರ್ಯಾದಿ ಹಾಗು ಬಸವರಾಜ ಮತ್ತು ಕಟ್ಟಳ್ಳಿಯಿಂದ ಶಿವಲಿಂಗಪ್ಪ ಜಮಗಿ ಸಾ: ಕಟ್ಟಳ್ಳಿ, ಸುಭಾಷ ಚಿಟ್ಟನಳ್ಳಿಕರ ಸಾ: ಹುಮನಾಬಾದ, ಸರಸ್ವತಿ ಚಿಟ್ಟನಳ್ಲಿಕರ ಸಾ: ಹುಮನಾಬಾದ, ದಾನಪ್ಪ ನವಲೇಕರ ಸಾ: ಕಟ್ಟಳ್ಳಿ, ಚಂದ್ರಕಾಂತ ಗಡವಂತಿಕರ ಸಾ: ಕಟ್ಟಳ್ಳಿ ರವರೆಲ್ಲ ಕೂಡಿಕೊಂಡು ಹುಮನಾಬಾದಕ್ಕೆ ಬರುವಾಗ ಸದರಿ ಅಟೊ ಚಾಲಕನಾದ ಆರೋಪಿ ಸಾಯಬಣ್ಣಾ ತಂದೆ ರೇವಣಸಿದ್ದಪ್ಪ ಸಾ: ಗೋರಂಪಳ್ಳಿ ಈತನು ತನ್ನ ಆಟೊವನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬರುವಾಗ ಹುಮನಾಬಾದ ಟಿಚರ್ಸ್ ಕಾಲೋನಿ ದಾಟಿದ ನಂತರ ತಗ್ಗಿನಲ್ಲಿ ಹಣಕುಣಿ ಕ್ರಾಸ ಹತ್ತಿರ ಬಂದಾಗ ಅದೆ ವೇಳೆಯಲ್ಲಿ ಎದುರಿನಿಂದ ಬಂದ ಒಂದು ಕಾರ ನಂ. ಕೆಎ-50/4033 ನೇದರ ಚಾಲಕನು ಸಹ ತನ್ನ ಕಾರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಇಬ್ಬರು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಮಾಡಿ ತಮ್ಮ ವಾಹನಗಳನ್ನು ಬಿಟ್ಟು ಓಡಿ ಹೋಗಿರುತ್ತಾರೆ, ಸದರಿ ಅಪಘಾತದಿಂದ ಬಸವರಾಜ ರವರ ಎಡ ಹುಬ್ಬಿನ ಮೇಲೆ ರಕ್ತಗಾಯ, ಶಿವಲಿಂಗಪ್ಪ ಈತನ ಬಲಗಾಲಿನ ಬೆರಳುಗಳಿಗೆ ಭಾರಿ ರಕ್ತಗಾಯ, ಮೋಳಕಾಲಿನ ಕೆಳಗೆ ಭಾರಿ ರಕ್ತಗಾಯ, ಸುಭಾಷ ಈತನ ಬಲ ಮೋಳಕಾಲಿಗೆ ರಕ್ತಗಾಯ, ಸರಸ್ವತಿ ರವರ ಬಲಗಲ್ಲಕ್ಕೆ ಹಾಗು ಬಲಗಾಲಿಗೆ ರಕ್ತಗಾಯ, ದಾನಪ್ಪ ಈತನ ಬಲಗಾಲಿನ ಪಾದದ ಮೇಲೆ ಭಾರಿ ರಕ್ತಗಾಯ, ಚಂದ್ರಕಾಂತ ಈತನ ಎಡ ಮೆಲುಕಿಗೆ, ಬಲಗಾಲಿಗೆ ತರಚಿದ ಗುಪ್ತಗಾಯ, ಫಿರ್ಯಾದಿಗೆ ಯಾವುದೆ ಗಾಯಗಳಾಗಿರುವುದಿಲ್ಲ, ನಂತರ ಗಾಯಾಳುಗಳಿಗೆ ದಾರಿಗೆ ಹೋಗುವವರ ಸಹಾಯದಿಂದ ಬೇರೆ ಅಟೊದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ದವಾಖಾನೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 87/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 31-05-2017 ರಂದು ಫಿರ್ಯಾದಿ ಸಿದ್ಧಾರ್ಥ ತಂದೆ ವಿಠಲರಾವ ಪೂಲೆಕರ ವಯ: 29 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ನಾವದಗೆರಿ ಜನವಾಡ ರೋಡ ಬೀದರ ರವರು ತನ್ನ ಗೆಳೆಯನಾದ ರಾಜಕುಮಾರ ತಂದೆ ಶರಣಪ್ಪಾ ಚಾಲಿಕರ ವಯ: 29 ವರ್ಷ, ಸಾ: ಹಜ್ಜರಗಿ ಇಬ್ಬರೂ ಕೂಡಿಕೊಂಡು ತನ್ನ ಬಜಾಜ ಪಲ್ಸರ್ ಮೋಟರ ಸೈಕಲ ನಂ. ಕೆಎ-38/ಎಸ್-3140 ನೇದರ ಮೇಲೆ ಚಿಟಗುಪ್ಪಾ ಪಟ್ಟಣಕ್ಕೆ ಬಂದು ಪುರಸಭೆಯಲ್ಲಿ ಕೆಲಸ ಮುಗಿಸಿಕೊಂಡು, ನಂತರ ಇಬ್ಬರೂ ಚಿಟಗುಪ್ಪಾದಿಂದ ಬೀದರಕ್ಕೆ ಸದರಿ ಮೋಟರ ಸೈಕಲ ಮೇಲೆ ಹೋಗುವಾಗ ಚಿಟಗುಪ್ಪಾ ಹೊಸಳ್ಳಿ ರೋಡ ರೇವಣಪ್ಪಾ ಹೊಗಡಿ ಸಾ: ಚಿಟಗುಪ್ಪಾ ರವರ ಹೊಲದ ಹತ್ತಿರ ಫಿರ್ಯಾದಿಯು ತನ್ನ ಮೋಟರ ಸೈಕಲ ತನ್ನ ಸೈಡಿಗೆ ರೋಡಿನ ಮೇಲೆ ಚಲಾಯಿಸಿಕೊಂಡು ಹೋಗುವಾಗ ಎದುರುಗಡೆಯಿಂದ ಮೋಟಾರ್ ಸೈಕಲ ನಂ. ಕೆಎ-32/ಇ.ಕೆ-4056 ನೇದರ ಚಾಲಕನಾದ ಆರೋಪಿಯು ತನ್ನ ಮೋಟರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ಮೋಟರ ಸೈಕಲದೊಂದಿಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲು ಮೋಳಕಾಲು ಕೆಳಗೆ ಗುಪ್ತಗಾಯ, ಬಲಗಾಲು ಪಾದದ ಮೇಲುಗಡೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ರಾಜಕುಮಾರ ಇತನ ಬಲಗಾಲು ಕಿರು ಬೆರಳಿಗೆ ತರಚಿದ ರಕ್ತಗಾಯ, ಬಲಗಾಲು ಮೋಳಕಾಲು ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಇಬ್ಬರು 108 ಅಂಬುಲೇನ್ಸ್ ಗೆ ಕರೆ ಮಾಡಿ ಅದರಲ್ಲಿ ಚಿಕಿತ್ಸೆ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಕ್ಕೆ ಬಂದು ದಾಖಲಾಗಿದ್ದು ಇರುತ್ತದೆ  ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Press Note

ನಿವೃತ್ತ ಪೊಲೀಸ ಅಧಿಕಾರಯ ಪುತ್ರ  ಯು.ಪಿ.ಎಸ್.ಸಿ. ಅಧಿಕಾರಿ
ಕಲಬುರಗಿ ನಗರದ ಎಕ್ಬಾಲ ಕಾಲೋನಿಯ ನಿವಾಸಿಯಾಗಿರುವ  ನಿವೃತ್ತ ಎ.ಎಸ್.ಐ. ಶ್ರೀ ಶೇಖ ಯುಸೂಫ ರವರ ಪುತ್ರ ಶ್ರೀ ಶೇಖ ತನ್ವೀರ ಆಸೀಫ ರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕಲಬುರಗಿ ನಗರದ ನೊಬೆಲ್ ಶಾಲೆಯಲ್ಲಿ  ಪಡೆದುಕೊಂಡು ಪಿ.ಯು.ಸಿ. ವ್ಯಾಸಂಗವನ್ನು ಶ್ರೀ ಶರಣಬಸವೇಶ್ವರ  ರೆಸಿಡೆನ್ಸಿಯಲ್ ಕಾಲೇಜನಲ್ಲಿ ಮುಗಿಸಿ  ಉನ್ನತ ವ್ಯಾಸಂಗವನ್ನು ಎಮ್.ಎಸ್. ರಾಮಯ್ಯಾ ಇಂಜನೀಯರಿಂಗ ಕಾಲೇಜ ಬೆಂಗಳೂರಲ್ಲಿ  ಎಲೆಕ್ಟ್ರಾನಿಕ್ಸ & ಕಮ್ಯುನಿಕೇಶನ ವಿಭಾಗದಲ್ಲಿ ಪದವಿ ಪಡೆದುಕೊಂಡು 2016 ನೇ ಸಾಲಿನಲ್ಲಿ  ಕೇಂದ್ರ ಲೋಕಸೇವಾ ಆಯೋಗದಿಂದ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶದ 25 ನೇ  gÁåAPÀ ಪಡೆದುಕೊಂಡವರಾಗಿರುತ್ತಾರೆ.  ಶ್ರೀ ಶೇಖ ತನ್ವೀರ ಆಸೀಫ ತಂದೆ ಶ್ರೀ  ಶೇಖ ಯುಸೂಫ ರವರ ಸಾಧನೆಯನ್ನು ಮಾನ್ಯ ಶ್ರೀ ಆಲೋಕ ಕುಮಾರ ಐ.ಪಿ.ಎಸ್. ಐ.ಜಿ.ಪಿ. ಈಶಾನ್ಯ ವಲಯ ಕಲಬುರಗಿ ಹಾಗೂ ಶ್ರೀ ಎನ್. ಶಶಿಕುಮಾರ. ಐ.ಪಿ.ಎಸ್. ಪೊಲೀಸ ಅಧೀಕ್ಷಕರು ಕಲಬುರಗಿ ರವರು ಶ್ಲಾಘೀಸಿರುತ್ತಾರೆ.   

Kalaburagi District Reported Crimes

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜಯಶ್ರೀ ಗಂಡ ಸಂಜೀವಕುಮಾರ ಬಾಬಾಜಿ ಸಾ|| ಮಹಾಲಕ್ಷ್ಮಿ ಲೇಔಟ ಕಲಬುರಗಿ ರವರು ಈ ಮೊದಲು ನಾನು ಬ್ರಹ್ಮಪೂರ ಬಡಾವಣೆಯ ಇಠಾಬಾಯಿ ಹೂಗಾರ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ಈಗ  ಒಂದು ತಿಂಗಳಿಂದ ಮಹಾಲಕ್ಷ್ಮಿ ಲೇಔಟ ವಿವೇಕಾನಂದ ಶಾಲೆ ಹತ್ತಿರ ಬಾಡಿಗೆಯಿಂದ ವಾಸವಾಗಿರುತ್ತೆನೆ. ನನ್ನ ಗಂಡನು ನನ್ನೊಂದಿಗೆ ತಕರಾರು ಮಾಡಿಕೊಂಡಿದ್ದು ಸುಮಾರು 9 ವರ್ಷಗಳಿಂದ ನನ್ನಿಂದ ದೂರ ಇದ್ದು ಚನ್ನವೀರ ನಗರ ಅಂಬಾಭವಾನಿ ಗುಡಿ ಹತ್ತಿರ ನಮ್ಮ ಸ್ವಂತ ಮನೆಯಲ್ಲಿ ಇರುತ್ತಾನೆ. ನಮಗೆ 1) ಶಂಕರ ಬಾಬಾಜಿ ವಯ||18 ವರ್ಷ, 2) ಶರಣು ಬಾಬಾಜಿ ವಯ||15 ವರ್ಷ ಹೀಗೆ ಇಬ್ಬರು ಗಂಡು ಮಕ್ಕಳು ಇದ್ದು ಹಿರಿಯ ಮಗನಾದ ಶಂಕರ ಇವನು ಬ್ರಹ್ಮಪೂರ ಬಡಾವಣೆಯ ಪ್ರಶಾಂತ ಸ್ಕೂಲನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, 2ನೇ ಮಗ ಶರಣು ಇವನು ಎನ್.ವಿ ಸ್ಕೂಲದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾನೆ. ಈಗ ರಜೆ ಇರುವುದರಿಂದ ಇಬ್ಬರು ಮಕ್ಕಳು ನನ್ನ ಜೊತೆ ಮನೆಯಲ್ಲಿ ಇರುತ್ತಿದ್ದರು. ದಿನಾಂಕ: 30/05/17 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನನ್ನ ಮಗನಾದ ಶಂಕರ ಬಾಬಾಜಿ ಇವನಿಗೆ ಆರಾಮ ಇಲ್ಲದ ಪ್ರಯುಕ್ತ ನಾನು ಮತ್ತು ನನ್ನ ಮಗ ಇಬ್ಬರು ಕೂಡಿಕೊಂಡು ಇ.ಎಸ್.ಐ ಆಸ್ಪತ್ರೆಗೆ ಉಪಚಾರಕೆಂದು ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ಸಾಯಾಂಕಾಲ 6-00 ಗಂಟೆಗೆ ಮನೆಗೆ ಬಂದಿರುತ್ತೆವೆ. ರಾತ್ರಿ 8-00 ಗಂಟೆಯ ವರೆಗೆ ಮಗ ಶಂಕರ ಮನೆಯಲ್ಲಿ ಇದ್ದ 8-00 ಗಂಟೆಯ ನಂತರ ಮನೆಯಿಂದ ಹೊರೆಗೆ ಹೋಗಿ ಬರುತ್ತೆನೆ ಎಂದು ಹೋದವನು ರಾತ್ರಿ 11-00 ಗಂಟೆಯಾದರೂ ಮರಳಿ ಮನೆಗೆ ಬರಲ್ಲಿಲ್ಲ. ಮಗ ಬರದೆ ಇರುವುದರಿಂದ ನಾನು ಮತ್ತು ನನ್ನ ತಮ್ಮನಾದ ನಾಗು ತಂದೆ ಶಂಕರ ನಂದಗಾಂವ ಇಬ್ಬರು ಕೂಡಿ ನಾವು ವಾಸವಿರುವ ಬಡಾವಣೆಯಲ್ಲಿ ಅಲ್ಲಿ ಇಲ್ಲಿ ಹುಡುಕಾಡಿದೆವು. ಆದರೂ ನಮ್ಮ ಮಗನ ಬಗ್ಗೆ ಯಾವುದೆ ಮಾಹಿತಿ ಸಿಗದ ಕಾರಣ ರಾತ್ರಿ ಮನೆಯಲ್ಲಿ ಮಲಗಿಕೊಂಡೆವು. ದಿನಾಂಕ: 31/05/17 ರಂದು ಬೆಳಗ್ಗೆ ಎದ್ದು ನನ್ನ ಮಗನ ಬಗ್ಗೆ ಹುಡುಕಾಡುತ್ತಿರುವಾಗ ಬೆಳಗ್ಗೆ 11-00 ಗಂಟೆ ಸುಮಾರಿಗೆ ನಮ್ಮ ತಮ್ಮನಾದ ನಾಗು ನಂದಗಾಂವಿ ಇವನು ಬಂದೇನವಾಜ ಖಾನಗಿ ದರ್ಗಾದ ಹಿಂದುಗಡೆ ಇರುವ ಖಬರಸ್ಥಾನದಲ್ಲಿ ಮಲವಿಶರ್ಜನೆ ಮಾಡಲು ಹೋದಾಗ ಅಲ್ಲಿ ನಮ್ಮ ಮಗ ಸತ್ತು ಬಿದ್ದಿರುವುದನ್ನು ನೋಡಿ ಮನೆಗೆ ಬಂದು ನನಗೆ ತಿಳಿಸಿದಾಗ ನಾನು ಮತ್ತು ನನ್ನ ತಮ್ಮ ಇಬ್ಬರು ಹೋಗಿ ನೋಡಲಾಗಿ ನನ್ನ ಮಗ ಸತ್ತು ಬಿದ್ದಿದ್ದು ನಿಜವಿತ್ತು. ಅವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ ಬಾರಿ ರಕ್ತಗಾಯ ಮತ್ತು ಮೈ ಮೇಲೆ ಅಲ್ಲಿ ಇಲ್ಲಿ ತರುಚಿದ ರಕ್ತಗಾಯವಾಗಿರುತ್ತದೆ. ನನ್ನ ಮಗನ ಶವದ ಪಕ್ಕದಲ್ಲಿ ಒಂದು ಗಾಂಜಾ ಚುಲಮಿ, ಒಂದು ಸಿಗರೆಟ್, ಒಂದು ಗೋವಾ ಗುಟಕಾ, ಒಂದು ಬೀಡಿ ಇವುಗಳು ಬಿದ್ದಿದವು.ನಾವು ಬ್ರಹ್ಮಪೂರ ಬಡಾವಣೆಯಲ್ಲಿ ಬಾಡಿಗೆಯಿಂದ ಇದ್ದಾಗ ನನ್ನ ಮಗನಿಗೆ ಶರಣಬಸವೇಶ್ವರ ದೇವಾಸ್ಥಾನದಲ್ಲಿ ಸಂಗಡ ಅವನ ಗೆಳೆಯರು ಕೂಡಿ ನನ್ನ ಮಗನ ಜೊತೆ ಗೆಳೆತನ ಮಾಡಿಕೊಂಡು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ನಾವು ಬ್ರಹ್ಮಪೂರ ಬಡವಾನೆಯಲ್ಲಿಯ ಬಾಡಿಗೆ ಮನೆ ಬಿಟ್ಟು ಮಹಾಲಕ್ಷ್ಮಿ ಲೇಔಟಕ್ಕೆ ಬಂದು ಮನೆ ಮಾಡಿಕೊಂಡು ಇದ್ದಾಗ ಕೂಡ ನಮ್ಮ ಮನೆಗೆ ಒಂದೆರಡು ಸಲ ಬಂದು ನಮ್ಮ ಮನೆಯಲ್ಲಿ ಗಲಾಟೆ ಮಾಡಿ ನಮ್ಮ ಮಗನಿಗೆ ಮನೆಯಿಂದ ಕರೆದುಕೊಂಡು ಹೋಗಿ ಹೊಡೆದು ಮೊಬೈಲ್ ಕಸಿದುಕೊಂಡ ಬಗ್ಗೆ ಮನೆಗೆ ಬಂದಾಗ ತಿಳಿಸಿರುತ್ತಾನೆ. ಸದರಿ ಅವರು ನನ್ನ ಮಗನಿಗೆ ಆಗಾಗ ತೊಂದರೆ ನೀಡಿ ಗಾಂಜಾ, ಸಿಗರೇಟ, ಬೀಡಿ ಸೇದಲು ಮತ್ತು ಗುಟಕಾ ತಿನ್ನಲು ಹಣ ಕೊಡು ಅಂತಾ ಪಿಡಿಸುತ್ತಾ ಇದ್ದರು ಹಣ ಕೊಡದೆ ಇದ್ದಲ್ಲಿ  ನಿನಗೆ ಖಲಾಸ ಮಾಡುತ್ತೆವೆ ಅಂತಾ ಹೆದರಿಸಿ ಜೀವದ ಬೇದರಿಕೆ ಹಾಕುತ್ತಿದ್ದ ಬಗ್ಗೆ ನನ್ನ ಮಗ ನನಗೆ ಆಗಾಗ ಮನೆಯಲ್ಲಿ ಹೇಳುತ್ತಿದ್ದ. ಪೊಲೀಸ ಠಾಣೆಗೆ ದೂರು ಕೊಟ್ಟರೆ ನನ್ನ ಮಗನಿಗೆ ಕೊಲೆ  ಮಾಡುತ್ತೆವೆ ಅಂತಾ ಜೀವ ಬೆದರಿಕೆ ಹಾಕಿದ್ದರಿಂದ ನನ್ನ ಮಗ ಅವರಿಗೆ ಅಂಜಿ ಯಾವುದೇ ದೂರು ವಗೈರೆ ನೀಡಿರುವುದಿಲ್ಲ. ಈ ಮೇಲಿನ ಕಾರಣಕ್ಕೆ ನನ್ನ ಮಗನಿಗೆ ಶರಣಬಸವೇಶ್ವರ ದೇವಾಸ್ಥಾನದಲ್ಲಿ ಹೂ ಮಾರುವ ಹುಡುಗ ಮತ್ತು ಅವನ ಗೆಳೆಯರು ಸೇರಿ ನನ್ನ ಮಗ ಶಂಕರನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿದ್ದು ಅವರ ಮೇಲೆ ನಮಗೆ ಬಲವಾದ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 30/05/2017 ರಂದು ರಾತ್ರಿ ಅಪರಿಚಿತ ಗಂಡು ಮನುಷ್ಯ ಅಂದಾಜು 70-75 ವರ್ಷದವನು ಕಲಬುರಗಿ ನಗರದ ಹೊರವಲಯದ ಏರಲೈನ್ಸ ದಾಬಾದಲ್ಲಿ ಊಟ ಮಾಡಿ ಮಲಗುವ ಸಲುವಾಗಿ ಅವಿನಾಶ ಪೆಟ್ರೋಲ್ ಪಂಪ ಕಡೆಗೆ ರೋಡ ಸೈಡ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಆಗ ಹಿಂದಿನಿಂದ ಅಂದರೇ ಕಲಬುರಗಿ ಹುಮನಾಬಾದ ರಿಂಗ ರೋಡ ಕಡೆಯಿಂದ  ಮೋಟಾರ ಸೈಕಲ್ ನಂ ಕೆಎ-32 ವ್ಹಿ-6592 ನೇದ್ದರ ಚಾಲಕ ಶಿವಾಕ್ಷರಯ್ಯಾ ತಂದೆ ಧಯಾಸಾಗರ್ ಕಂತಿ ಸಾ:ಹರಸೂರ ಹಾವ: ಆರ್.ಎಸ್. ಕಾಲೋನಿ ಕಲಬುರಗಿ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಅಪರಿಚಿತ ಗಂಡು ಮನುಷ್ಯನಿಗೆ ಅಪಘಾತ ಪಡಿಸಿದ್ದರಿಂದ್ದ ಆತನಿಗೆ ತಲೆಯ ಹಿಂದುಗಡೆ ಹಾಗು ಇತರೇ ಕಡೆ ಭಾರಿ ರಕ್ತಗಾಯಗಳಾಗಿದ್ದು ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದಾಗ ಸದರಿಯವನು ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ರಸ್ತೆ ಅಪಘಾತದಿಂದ ಆದ ಗಾಯಗಳಿಂದ ಇಂದು ದಿನಾಂಕ:- 31/05/2017 ರಂದು ಬೆಳಿಗ್ಗೆ 01:30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಅಬ್ದುಲ್ ಲತೀಫ ತಂದೆ ಅಬ್ದುಲ್ ಗನಿ ಶೇಖ ಸಾ:ರೆಹಮತ ನಗರ ಪಿ.ಎನ್.ಟಿ ಕಾಲೋನಿ ಹಿಂದುಗಡೆ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.