ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-03-2020
ಭಾಲ್ಕಿ ನಗರ ಪೊಲೀಸ್ ಠಾಣೆ
ಯು.ಡಿ.ಆರ್ ನಂ. 02/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 05-03-2020 ರಂದು ಫಿರ್ಯಾದಿ ವಿದ್ಯಾವತಿ ಗಂಡ ಚಂದ್ರಕಾಂತ ಭಾವಿಕಟ್ಟಿ, ವಯ: 38 ವರ್ಷ, ಸಾ: ಮದಕಟ್ಟಿ, ಸದ್ಯ: ಭೀಮನಗರ
ಭಾಲ್ಕಿ ರವರ ಮಗನಾದ ಅರವಿಂದ ತಂದೆ ಚಂದ್ರಕಾಂತ ಭಾವಿಕಟ್ಟೆ ಸಾ: ಮದಕಟ್ಟಿ, ಸದ್ಯ: ಭೀಮನಗರ ಭಾಲ್ಕಿ
ಇತನು ಮದಕಟ್ಟಿ ಗ್ರಾಮದಲ್ಲಿ ತನ್ನ ತಾತನ ಹೆಸರಿನಲ್ಲಿದ್ದ ಜಮೀನಿನ ಮೇಲೆ ಖಾಸಗಿ ಸಾಲ ಮಾಡಿದ್ದು ಅದನ್ನು ತೀರಿಸಲು ಆಗದೇ ಮನನೊಂದು ಮನೆಯಲ್ಲಿ ಯಾರೂ ಇಲ್ಲದಾಗ ಸೀರೆಯಿಂದ ನೇಣು
ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ,
ತನ್ನ ಮಗನ ಸಾವಿನಲ್ಲಿ ಯಾರ ಮೇಲೆ ಸಂಶಯ
ಇರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ
ಮೇರೆಗೆ ಪ್ರ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 39/2020, ಕಲಂ. 392 ಐಪಿಸಿ :-
ದಿನಾಂಕ 05-03-2020
ರಂದು ಪಿüರ್ಯಾದಿ ಜಗದೇವಿ ಗಂಡ ಶಿವಕುಮಾರ ಮುದ್ದಾ
ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಶಿವಾ ನಿವಾಸ ಕೈಲಾಸ ನಗರ
ಗುಂಪಾ ಬೀದರ ರವರ ಸಂಬಂಧಿಕರು ಬೀದರ ಬಿಗ್ ಬಜಾರ ಹಿಂದುಗಡೆ ಮನೆಹಬ್ಬ ಇಟ್ಟುಕೊಂಡಿದ್ದರ ಕಾರಣ ಪಿüರ್ಯಾದಿ ಮತ್ತು
ಮನೆಯ ಪಕ್ಕದವರಾದ ಶೋಭಾ
ಗಂಡ ಬಸವರಾಜ ಇಬ್ಬರು ಕೈಲಾಸ ನಗರದಿಂದ ನಂದನಾ
ಮೇಡಿಕಲ ಗುಂಪಾ ಕಡೆಗೆ ನಡೆದುಕೊಂಡು ಹೋಗುವಾಗ ಅಂದಾಜು 1400 ಗಂಟೆಗೆ ಗುಂಪಾ ಡಿ.ಸಿ.ಸಿ. ಬ್ಯಾಂಕ್ ಎದುರಗಡೆ ಬಂದಾಗ ಪಿüರ್ಯಾದಿಯವರ ಎದುರಗಡೆಯಿಂದ ಯಾರೋ ಒಬ್ಬ ಅಪರಿಚಿತ ವ್ಯಕ್ತಿ
ಮುಖಕ್ಕೆ ದಸ್ತಿ ಕಟ್ಟಿಕೊಂಡು ಮೋಟಾರ
ಸೈಕಲ ಮೇಲೆ ಬಂದು ಪಿüರ್ಯಾದಿಯವರ ಕೋರಳಿಗೆ ಕೈ ಹಾಕಿ ಕೊರಳಿನಲ್ಲಿರುವ 1) ಬಂಗಾರದ ದೊಡ್ಡ ಗಂಟನ್ 45 ಗ್ರಾಂ., 2) ಬಂಗಾರದ ಲಾಕೆಟ 15 ಗ್ರಾಂ., 3) ಬಂಗಾರದ ಸಣ್ಣ
ಮಂಗಳಸೂತ್ರ 15 ಗ್ರಾಂ. ಆಭರಣಗಳು ಕಡೆದು ಕೊಳ್ಳಲು ಎಳೆದಾಗ ಅದರಲ್ಲಿ ಸಣ್ಣ
ಮಂಗಳಸೂತ್ರ 15 ಗ್ರಾಂ. ಅಲ್ಲೆ ರಸ್ತೆಯಲ್ಲಿ ಕಡೆದು ಬಿದಿದ್ದು ಪಿüರ್ಯಾದಿಗೆ ಅಲ್ಲಿಯೇ ಸಿಕ್ಕಿರುತ್ತದೆ, ಉಳಿದ ಒಟ್ಟು 60 ಗ್ರಾಂ. ಬಂಗಾರದ ಆಭರಣಗಳು ಅ.ಕಿ 1,80,000/- ರೂ. ನೇದನ್ನು ಕಡಿದುಕೊಂಡು ಹೋಗಿರುತ್ತಾನೆ, ಸದರಿ ಅಪರಿಚಿತ ವ್ಯಕ್ತಿಯ ವಯಸ್ಸು ಅಂದಾಜು 20 ರಿಂದಾ 25 ವರ್ಷ
ಇರುತ್ತದೆ ಅಂತ ಕೊಟ್ಟ ಪಿüರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ.
09/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 05-03-2020 ರಂದು ರಾಜೇಶ್ವರ ಗ್ರಾಮದ ಬಸವೇಶ್ವರ ಚೌಕ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಕೂಗುತ್ತಿದ್ದು ಇನ್ನೊಬ್ಬ
ವ್ಯಕ್ತಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ವಸೀಮ್ ಪಟೇಲ್
ಪಿಎಸ್ಐ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ
ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ರಾಜೇಶ್ವರ ಗ್ರಾಮದ
ಬಸವೇಶ್ವರ ಚೌಕದಿಂದ ಸ್ವಲ್ಪ ದೂರದಿಂದ ನೋಡಲು ಬಸವೇಶ್ವರ ಚೌಕ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ
ನಂ. 1) ಶೇಕ ಅಹ್ಮದಮೀಯ್ಯಾ ತಂದೆ ಶೇಕ ಖದೀರಮೀಯ್ಯಾ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ:
ಖುರೇಷಿ ಗಲ್ಲಿ ರಾಜೇಶ್ವರ ಇತನು ಜೋರಾಗಿ ಕುಗುತ್ತಾ ಒಂದು ರೂಪಾಯಿಗೆ 90/- ರೂಪಾಯಿ ಅಂತಾ ಜೋರಾಗಿ ಕೂಗುತ್ತಿದ್ದು ಹಾಗೂ ಇನ್ನೊಬ್ಬ
ಆರೋಪಿ 2) ಎಂ.ಡಿ ಬೂರಾನೊದ್ದಿನ ಖಾನ ತಂದೆ ಎಂಡಿ ಶರೀಫೋದ್ದಿನ ಖಾನ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ:
ಖುರೇಷಿ ಗಲ್ಲಿ ರಾಜೇಶ್ವರ ಇತನು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು
ನೋಡಿ ಖಚಿತ ಪಡಿಸಿಕೊಂಡು ಅವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಅಲ್ಲಿದ್ದ
ಜನರು ಓಡಿ ಹೋಗಿರುತ್ತಾರೆ, ನಂತರ ಆರೋಪಿತರಿಗೆ ಹಿಡಿದು ಅಂಗ ಝಡ್ತಿ ಮಾಡಿ ಅವರಿಂದ ಒಟ್ಟು 2480/- ನಗದು ಹಣ, ಮಟಕ ಚೀಟಿ, ಬಾಲ ಪೇನ ನೇದ್ದವುಗಳನ್ನು
ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 21/2020, ಕಲಂ. 279, 337, 338 ಐಪಿಸಿ :-
ದಿನಾಂಕ 05-03-2020 ರಂದು ಸಂಗಮೇಶ ತಂದೆ ಸಂಜುಕುಮಾರ
ಚೆಲುವಾ ವಯ: 23 ವರ್ಷ, ಜಾತಿ: ಲಿಂಗಾಯತ, ಸಾ: ಮೇಹಕರ ರವರು ತನ್ನ ಫ್ಯಾಶನ ಪ್ರೋ ಮೋಟಾರ ಸೈಕಲ ನಂ. ಎಮ್.ಹೆಚ್-24/ಯು- 7824 ನೇದರ ಮೇಲೆ ಹೊಲಕ್ಕೆ ಹೋಗಿ
ಮರಳಿ ಮನೆಗೆ ಬರುವಾಗ ದಾರಿಯಲ್ಲಿ ಮೇಹಕರ ವಾಂಜರಖೇಡ ರೋಡ ಮಾಧವರಾವ ಪಾಟೀಲ ರವರ ಹೊಲದ ಹತ್ತಿರ ರೋಡಿನ
ಮೇಲೆ ಎದರುಗಡೆಯಿಂದ ಮೋಟಾರ ಸೈಕಲ ನಂ. ಎಪಿ-23/ಎಫ-3906 ನೇದರ ಚಾಲಕನಾಧ ಆರೋಪಿ
ವಾಮನರಾವ ಗಾಜರೆ ಸಾ: ತೂಗಾಂವ(ಹೆಚ್) ಇತನು ತನ್ನ ವಾಹನದ ಮೇಲೆ 3 ಜನರನ್ನು ಕೂಡಿಕೊಂಡು ಅತಿವೇಗ ಹಾಗೂ
ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಮಾಡಿದ್ದು,
ಇದರಿಂದ ಫಿರ್ಯಾದಿಯ ತಲೆಯಲ್ಲಿ ಭಾರಿ ರಕ್ತಗಾಯ, ಮುಖದ ಮೇಲೆ, ಎರಡು ಕಾಲುಗಳಿ ತರಚಿದ ಗಾಯವಾಗಿದ್ದು
ಇರುತ್ತದೆ ಹಾಗು ಆರೋಪಿಗೂ ಸಹ ಗಾಯವಾಗಿದ್ದು ಮತ್ತು ಹಿಂದೆ ಕುಳಿತಿರುವ ಗೋವಿಂದ ಮತ್ತು ಗಣೇಶ ನೀಡುವಂಚೆ,
ತಮ್ಮೂರ ಬಾಬುರಾವ ಲಾಸೋನೆ ರವರು ನೋಡಿ ಮನೆಯಲ್ಲಿ ತಿಳಿಸಿದ್ದರಿಂದ ಫಿರ್ಯಾದಿಯ ತಂದೆಯವರು ತಮ್ಮೂರ
ವಿರುಪಾಕ್ಷೇಶ್ವರ ಆಸ್ಪತ್ರೆಯಲ್ಲಿ ಫಿರ್ಯಾದಿಗೆ ಚಿಕಿತ್ಸೆ ಕೊಡಿಸಿರುತ್ತಾರೆಂದು ಕೊಟ್ಟ
ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.