ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-07-2021
ಹುಲಸೂರ ಪೊಲೀಸ ಠಾಣೆ ಯು.ಡಿ.ಆರ್ ಸಂ. 04/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ವೀರಭದ್ರ ತಂದೆ ಚಂದ್ರಪ್ಪಾ ಬಿರಾದಾರ ಸಾ: ಖಂಡಾಳ ರವರ ತಂದೆಯಾದ ಚಂದ್ರಪ್ಪಾ ತಂದೆ ರೇವಣಪ್ಪಾ ಬಿರಾದಾರ ವಯ: 65 ವರ್ಷ ರವರು ಒಕ್ಕಲುತನಕ್ಕಾಗಿ ಬ್ಯಾಂಕ ಆಫ್ ಬರೋಡಾ ಬಸವಕಲ್ಯಾಣದಲ್ಲಿ 3,30,000/- ರೂಪಾಯಿಗಳು, ಪಿಕೆಪಿಎಸ್ ಗೌರ ಬ್ಯಾಂಕದಲ್ಲಿ 50,000/- ರೂಪಾಯಿಗಳು ಬೆಳೆ ಸಾಲ ಪಡೆದುಕೊಂಡಿರುತ್ತಾರೆ, ಬಸವಕಲ್ಯಾಣದ ಪಿ.ಎಲ್.ಡಿ ಬ್ಯಾಂಕದಿಂದ 9,90,000/-ರೂಪಾಯಿಗಳು ಕೃಷಿ ಟ್ರ್ಯಾಕ್ಟರ್ ಸಾಲ ಪಡೆದÄಕೊಂಡಿರುತ್ತಾರೆ, ಹೀಗೆ ಒಟ್ಟು 13,70,000/- ರೂಪಾಯಿಗಳ ಸಾಲ ಮಾಡಿರುತ್ತಾರೆ, ಮಳೆ ಸರಿಯಾಗಿ ಆಗದೆ ಇರುವುದರಿಂದ ಬೆಳೆ ಬರದೆ ಇರುವುದರಿಂದ ತಂದೆ ಚಂದ್ರಪ್ಪಾ ರವರು ಸಾಲ ಮರುಪಾವತಿ ಮಾಡಿರುವುದಿಲ್ಲ, ತಂದೆಯವರು ಬಹಳ ಸಾಲ ಮಾಡಿಕೊಂಡಿದ್ದೇನೆ ಸಮಯಕ್ಕೆ ಸರಿಯಾಗಿ ಮಳೆ ಬರದೆ ಬೆಳೆ ಕೂಡ ಸರಿಯಾಗಿ ಬರುತ್ತಿಲ್ಲ ಸಾಲ ಹೇಗೆ ತಿರಿಸುವುದು ಅಂತ ಹೇಳಿ ಚಿಂತೆ ಮಾಡುತ್ತಿದರು, ಹೀಗಿರುವಾಗ ದಿನಾಂಕ 25-07-2021 ರಂದು ತಂದೆಯವರು ಕೆಲಸ ಮಾಡಲು ಹೊಲಕ್ಕೆ ಹೋಗಿ ಒಕ್ಕಲುತನಕ್ಕಾಗಿ ಮಾಡಿದ 13,70,000/- ರೂಪಾಯಿಗಳ ಸಾಲ ತಿರಿಸಲಾಗದೆ ಅದೇ ಚಿಂತೆಯಲ್ಲಿ ಗೌರ ಶಿವಾರದ ತಮ್ಮ ಹೊಲ ಸರ್ವೆ ನಂ. 131 ರಲ್ಲಿನ ಹೊಲದ ಬಂದಾರಿಯ ಮೇಲಿರುವ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 36/2021, ಕಲಂ. 379 ಐಪಿಸಿ :-
ದಿನಾಂಕ 04-07-2021 ರಂದು ರಾತ್ರಿ 12 ಗಂಟೆಯ ನಂತರ ಫಿರ್ಯಾದಿ ವಿಶ್ವನಾಥ ತಂದೆ ಜಗನ್ನಾಥ ಮಾಶೆಟ್ಟಿ ವಯ: 52 ವರ್ಷ, ಜಾತಿ: ಲಿಂಗಾಯತ, ಸಾ: ರಾಚಪ್ಪ ಗೌಡಗಾಂವ ರವರು ತನ್ನ ಮನೆಯ ಮುಂದೆ ನಿಲ್ಲಿಸಿದ ಸ್ಪ್ಲೆಂಡರ್ ಪ್ಲಸ ಮೋಟಾರ ಸೈಕಲ ನಂ. ಕೆಎ-39/ಹೆಚ್-5024 ನೇದನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ, ನಂತರ ಸದರಿ ಮೋಟಾರ್ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 48/2021, ಕಲಂ. 379 ಐಪಿಸಿ :-
ಫಿರ್ಯಾದಿ ಪ್ರದೀಪ ತಂದೆ ಪೀರಾಜಿ ಮೇತ್ರೆ ವಯ: 23 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಡೋಣಗಾಂವ ಗ್ರಾಮ, ತಾ: ಕಮಲನಗರ, ಜಿ: ಬೀದರ, ಸದ್ಯ: ಶರಣನಗರ ಆದರ್ಶ ಕಾಲೋನಿ ರೈಲ್ವೆ ಗೇಟ ಬೀದರ ರವರು ಸಂತೋµÀ ತಂದೆ ಕಲ್ಲಪ್ಪಾ ಹೊಂಡಾಳೆ ವಯ: 46 ವರ್ಷ, ಜಾತಿ: ಲಿಂಗಾಯತ, ಸಾ: ಡೋಣಗಾಂವ ಗ್ರಾಮ, ತಾ: ಕಮಲನಗರ ರವರ ಹತ್ತಿರವಿರುವ ದ್ವೀಚಕ್ರ ವಾಹನ ಸಂ. ಕೆಎ-38/ಎಲ್-3204, ಚಾಸಿಸ್ ನಂ. MBLHA10EVBGG01477, ಇಂಜಿನ್ ನಂ. HA10EDBGG36650, ಮಾದರಿ 2011, ಬಣ್ಣ: ಕೆಂಪು ಬಣ್ಣ ಹಾಗೂ ಅ.ಕಿ 25,000/- ರೂ. ನೇದನ್ನು ಸಂತೋಷ ರವರಿಂದ ಕೇಳಿ ತನ್ನ ಬಳಿ ಇಟ್ಟುಕೊಂಡಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 03-05-2021 ರಂದು ಫಿರ್ಯಾದಿಯು ತನ್ನ ಅಣ್ಣ ಪ್ರಜ್ವಲ ವಯ: 26 ವರ್ಷ ಇಬ್ಬರು ಕೂಡಿ ಬೀzÀರ ನಗರದ ರೈಲ್ವೆ ಸ್ಟೇಷನಗೆ ಹೋಗಿ ರೈಲ್ವೆ ಸ್ಟೇಷನ್ ಹತ್ತಿರ ಇರುವ ವಾರ್ತಾ ಕಛೇರಿ ಮುಂದೆ ಸದರಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ರೈಲ್ವೆ ಸ್ಟೇಷನಗೆ ಹೋಗಿ ಬಂದು ನೋಡಲಾಗಿ, ಫಿರ್ಯಾದಿಯು ನಿಲ್ಲಿಸಿದ ಸ್ಥಳದಲ್ಲಿ ಸದರಿ ದ್ವಿಚಕ್ರ ವಾಹನ ಇರಲಿಲ್ಲ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 103/2021, ಕಲಂ. 379 ಐಪಿಸಿ :-
ದಿನಾಂಕ 15-04-2021 ರಂದು 1500 ಗಂಟೆಯಿಂದ 1600 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಮಹೇಶ್ವರಿ ಗಂಡ ನಾಗಪ್ಪಾ ಮುಚಳಂಬೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ರಾಂಪುರೆ ಬ್ಯಾಂಕ ಕಾಲೋನಿ ಬೀದರ ರವರ ಹಿರೋ ಡ್ಯೂಎಟ್ ªÁಹನ ಸಂ. ಕೆ.ಎ-38/ಎಸ-3541 Engine No. JF33AAGGA08927, Chessis No. MBLJF16ESGGA07286, ಮಾದರಿ 2016, ಬಣ್ಣ: ಕೆಂಪು ಬಣ್ಣ ನೇದರ ಮೇಲೆ ತನ್ನ ಗಂಡನ ಜೊತೆಯಲ್ಲಿ ಮನ್ನಳಳಿ ಗ್ರಾಮಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಅಮಲಾಪೂರ ಗ್ರಾಮದ ದಾಟಿದ ನಂತರ ಗೋಯಲ ಮನೆಯ ಸ್ವಲ್ಪ ಮುಂದುಗಡೆ ವಾಹನ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಅಲ್ಲೆ ಹತ್ತಿರದ ತಮ್ಮ ಸಂಬಂಧಿಕರ ಹೊಲಕ್ಕೆ ಹೋಗಿ ಮರಳಿ ಬಂದು ನೋಡಲು ಸದರಿ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಸದರಿ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 104/2021, ಕಲಂ. 379 ಐಪಿಸಿ :-
ಫಿರ್ಯಾದಿ ದಿನೇ±À ತಂದೆ ರಂಗಪ್ಪಾ ಪೊಲೀಸ ಪಾಟೀಲ ವಯ: 31 ವರ್ಷ, ಜಾತಿ: ರೆಡ್ಡಿ, ಸಾ: ಖಾಜಿ ಕಾಲೋನಿ ಬೀದರ ರವರು ತನ್ನ ಸೋದರ ಮಾವ ರಾಜೇಂದ್ರ ತಂದೆ ಸಿದ್ರಾಮಪ್ಪಾ ಸಾ: ಗುಲಬರ್ಗಾ ರವರ ಹೆಸರಿನಲ್ಲಿರುವ ಹಿರೋ ಹೊಂಡಾ ಸ್ಪ್ಲೆಂಡರ್ ಮೋಟಾರ ಸೈಕಲ ನಂ. KA-51/U-3688, Engine No. HA10EA9HE86975, Chessis No. MBLHA10EJ9HE39403, ಮಾದರಿ 2009, ಬಣ್ಣ: ಕಪ್ಪು ಬಣ್ಣ, ಅ.ಕಿ 30,000/- ರೂ. ನೇದನ್ನು ಫಿರ್ಯಾದಿಯು ಉಪಯೋಗಿಸುತ್ತಿದ್ದು, ಹೀಗಿರುವಾಗ ದಿನಾಂಕ 23-04-2021 ರಂದು 1200 ಗಂಟೆಗೆ ದಿನಾಂಕ ಫಿರ್ಯಾದಿಯು ತಮ್ಮ ಸಂಬಂಧಿಕರಿಗೆ ಬಿಡಲು ಬೀದರ ರೇಲ್ವೆ ನಿಲ್ದಾಣಕ್ಕೆ ಹೋಗಿ ಗಾಂಧಿಗಂಜ ಕಡೆ ಇರುವ ಪ್ರವೇಶ ಗೇಟದಿಂದ ಹೋಗಿ ರೇಲ್ವೆ ನಿಲ್ದಾಣದ ಹಿಂಬದಿ ಸದರಿ ಮೋಟಾರ ಸೈಕಲ ನಿಲ್ಲಿಸಿ ರೇಲ್ವೆ ನಿಲ್ದಾಣಕ್ಕೆ ಹೋಗಿ ಮರಳಿ 1230 ಗಂಟೆಗೆ ಬಂದು ನೋಡಲಾಗಿ ಸದರಿ ಮೋಟಾರ ಸೈಕಲ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 25-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. ಅಪರಾಧ ಸಂ. 132/2021, ಕಲಂ. 379 ಐಪಿಸಿ :-
ಫಿರ್ಯಾದಿ ಮಹೇಶಕುಮಾರ ತಂದೆ ಮಲ್ಲಿಕಾರ್ಜುನ ಮುಚಳಂಬೆ ವಯ: 41 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 1-1-56 ತಿನದುಕಾನ ಗಲ್ಲಿ ಹಳೆ ಭಾಲ್ಕಿ ರವರ ಅಣ್ಣನಾದ ಸಂತೋಷಕುಮಾರ ತಂದೆ ಮನ್ಮಥಪ್ಪಾ ರವರು ತನ್ನ ಸ್ವಂತ ಬಳಕೆಗಾಗಿ ಒಂದು ಮೋಟರ ಸೈಕಲ್ ಹಿರೋ ಹೊಂಡಾ ಫ್ಯಾಶನ ಪ್ರೋ ನಂ. ಎ.ಪಿ-29/ಎಫ್-2802, Chassis No. 04K09C45017, Engine No. 04K08M45316, Colour PAPDRNPBK, Model 2004 & ಅ.ಕಿ 15,000/- ರೂ. ನೇದನ್ನು ಖರೀದಿ ಮಾಡಿದ್ದು ನಂತರ ಸದರಿ ಮೋಟಾರ ಸೈಕಲನ್ನು ಫಿರ್ಯಾದಿಯ ಬಳಕೆಗಾಗಿ ನೀಡಿದ್ದು ಇರುತ್ತದೆ, ಫಿರ್ಯಾದಿಯು ಸದರಿ ಮೋಟರ್ ಸೈಕಲನ್ನು ದಿನಾಂಕ 03-07-2021 ರಂದು ತನ್ನ ವ್ಯಾಪಾರ ಕುರಿತು ಬಳಸಿ ರಾತ್ರಿ ಸಮಯದಲ್ಲಿ ತನ್ನ ಮನೆಯ ಮುಂದೆ ನಿಲ್ಲಿಸಿ ದಿನಾಂಕ 04-07-2021 ರಂದು 0600 ಗಂಟೆಗೆ ಎದ್ದು ನೋಡುವಷ್ಟರಲ್ಲಿ ರಾತ್ರಿ ನಿಲ್ಲಸಿದ ಮೋಟಾರ ಸೈಕಲ ಇರಲಿಲ್ಲ, ಕಾರಣ ಯಾರೋ ಕಳ್ಳರು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 133/2021, ಕಲಂ. 392 ಐಪಿಸಿ :-
ಕೆಲವು ದಿನಗಳ ಹಿಂದೆ ಫಿರ್ಯಾದಿ ಅಪ್ಪರಾವ ತಂದೆ ಭೀಮಶ್ಯಾ ಬ್ಯಾಲಹಳ್ಳಿಕರ, ವಯ: 59 ವರ್ಷ, ಜಾತಿ: ಟೋಕರಿ ಕೋಳಿ, ಸಾ: ಹಣಕುಣಿ, ತಾ: ಹುಮನಾಬಾದ ರವರ ಹೊಲದಲ್ಲಿ ಬಾವಿಯಲ್ಲಿದ್ದ ಮೋಟಾರ್ ಮಳೆ ನೀರಿನಲ್ಲಿ ಮುಳುಗಿ ಕೆಟ್ಟಿದ್ದು ಅದನ್ನು ರಿಪೇರಿಗಾಗಿ ಚಿಟಗುಪ್ಪಾದಲ್ಲಿ ಮೆಕ್ಯಾನಿಕ ಅಂಗಡಿಯಲ್ಲಿ ನೀಡಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 24-07-2021 ರಂದು 0500 ಗಂಟೆ ಸುಮಾರಿಗೆ ಫಿರ್ಯಾದಿಯು ರಿಪೇರಿಗೆ ಕೊಟ್ಟ ಮೋಟಾರ್ ತರಲು ಚಿಟಗುಪ್ಪಾಕ್ಕೆ ತಮ್ಮ ಹಿರೋ ಹೊಂಡ ಸ್ಪ್ಲೆಂಡರ್ ಮೋಟರ ಸೈಕಲ ಮೇಲೆ ಒಬ್ಬನೇ ಬಂದಾಗ ಮೆಕ್ಯಾನಿಕ ಖಮರೋದ್ದಿನ ಇತನು ಇನ್ನೂ ರಿಪೇರಿಂiÀiÁಗಿರುವುದಿಲ್ಲ ಅಂತಾ ತಿಳಿಸಿರುತ್ತಾನೆ, ನಂತರ ಫಿರ್ಯಾದಿಯು ಚಿಟಗುಪ್ಪಾದ ಖಾನ ಹೊಟೇಲನಲ್ಲಿ ಚಹಾ ಕುಡಿದು ಮರಳಿ ತಮ್ಮೂರಿಗೆ ಚಿಟಗುಪ್ಪಾದಿಂದ ವಳಕಿಂಡಿ ಮಾರ್ಗವಾಗಿ ಹೋಗುವಾಗ ವಳಕಿಂಡಿ-ಹಣಕುಣಿ ರೋಡ ವಳಕಿಂಡಿ ಶಿವಾರದಲ್ಲಿರುವ ಟಾವರಗಿಂತ ಮುಂಚೆ ರಾಮಪೂರದೋರ ರವರ ಹೋಲದ ಹತ್ತಿರ ಹೋದಾಗ ಹಿಂದಿನಿಂದ ಬಂದ ಒಂದು ಕಪ್ಪುಬಣ್ಣದ ಪಲ್ಸರ ಮೋಟರ ಸೈಕಲ ಚಾಲಕನು ಫಿರ್ಯಾದಿಯ ಮೋಟರ ಸೈಕಲಗೆ ಅವನ ಮೋಟರ ಸೈಕಲ ಮುಂದೆ ತಂದು ಅಡ್ಡದಾರಿ ತಡೆದಾಗ, ಆ ಮೋಟರ ಸೈಕಲ ಮೇಲಿನ ಹಿಂಬದಿ ಸವಾರನು ಮೋಟರ ಸೈಕಲಿನಿಂದ ಕೆಳಗಿಳಿದು ಬಂದು ಫಿರ್ಯಾದಿಯ ಮೋಟರ ಸೈಕಲ ಕೀಲಿ ತೆಗೆದು ಮೋಟರ ಸೈಕಲ ಬಂದ ಮಾಡಿ, ಫಿರ್ಯಾದಿಗೆ ಚಾಕು ತೋರಿಸಿ ಹೆದರಿಸಿ, ಫಿರ್ಯಾದಿಯ ಶರ್ಟ ಜೇಬಿನಲ್ಲಿರುವ ಮೋಬೈಲ್ Samsang Galaxy A30s (Airtel Sim No:9972897564, IMEI NO: 351715112084346, 351716112084344) ಅ.ಕಿ 18,000/- ರೂ. ನೇದನ್ನು ಕಸಿದುಕೊಂಡು ನಂತರ ಜೇಬಿನಲ್ಲಿರುವ ಹಣ ನೀಡು ಇಲ್ಲದಿದ್ದರೆ ಚಾಕುವಿನಿಂದ ಹೊಡೆಯುತ್ತೇನೆಂದು ಹೆದರಿಸಿದಾಗ, ಫಿರ್ಯಾದಯು ನನ್ನ ಪ್ಯಾಂಟಿನ ವಾಚಪಾಕಿಟಿನಲ್ಲಿದ್ದ 8,000/- ರೂ. ನಗದು ಹಣ ನೀಡಿದ್ದು, ನಂತರ ಫಿರ್ಯಾದಿಯು ಹಣ ಕೊಡುವಾಗ ಬಲಗೈ ಬೆರಳಿನಲ್ಲಿದ್ದ ನವಗ್ರಹದ ಬಂಗಾರದ ಉಂಗುರ ಅ.ಕಿ 32,00/- ರೂ. ನೇನ್ನು ಕಸಿದುಕೊಂಡಿರುತ್ತಾನೆ, ನಂತರ ಅವರಿಬ್ಬರೂ ಅದೇ ಮೋಟಾರ ಸೈಕಲ ಮೇಲೆ ಮರಳಿ ವಳಕಿಂಡಿ ಕಡೆಗೆ ಹೋಗಿರುತ್ತಾರೆ, ಅವರುಗಳು ಕನ್ನಡದಲ್ಲಿ ಮಾತನಾಡುತ್ತಿದ್ದು ಅಂದಾಜು 25-30 ವರ್ಷ ವಯಸ್ಸಿನವರಾಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 121/2021, ಕಲಂ. 336 ಜೊತೆ 34 ಐಪಿಸಿ :-
ದಿನಾಂಕ 24-07-2021 ರಂದು ವೀರಯ್ಯಾ ಸ್ವಾಮಿ ಎ.ಎಸ್.ಐ ಬಸವಕಲ್ಯಾಣ ನಗರ ಪೋಲೀಸ್ ಠಾಣೆ ಸಸ್ತಾಪೂರ ಬಂಗ್ಲಾ ಆಟೋ ನಗರ ಇಂಡಿಸ್ಟ್ರೀಲ್ ಎರಿಯಾದಲ್ಲಿರುವ ಪ್ಲಾಟ ನಂ. 24 ನೇದರಲ್ಲಿ ಮಾನವನ ಪ್ರಾಣಕ್ಕೆ ಮತ್ತು ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ಬೈಯೋ ಡೀಜೀಲ್ ಸಂಗ್ರಹಿಸಿರುತ್ತಾರೆಂದು ಅಮರ ಕುಲಕರ್ಣಿ ಪಿ.ಎಸ್.ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಸ್ತಾಪೂರ ಬಂಗ್ಲಾ ಆಟೋ ನಗರ ಇಂಡಿಸ್ಟ್ರೀಲ್ ಎರಿಯಾದಲ್ಲಿರುವ ಪ್ಲಾಟ ನಂ. 24 ನೇದರ ಗೇಟ ಹತ್ತಿರ ಹೋಗಿ ನೋಡಲು ಬಾತ್ಮಿಯಂತೆ ಒಂದು ದೊಡ್ಡ ಕಟ್ಟಡ ಇದ್ದು ಅದಕ್ಕ ಶಟರ್ ತೇರೆದಿದ್ದು ಇಬ್ಬರು ವ್ಯಕ್ತಿಗಳು ಅಲ್ಲೆ ಕುಳಿತ್ತಿದ್ದು ಸುಮಾರು 2,000 ಲೀಟರ ಗಾತ್ರದ ಹಳದಿ ಬಣ್ಣದ 4 ಪ್ಲಾಸ್ಟೀಕ್ ಟ್ಯಾಂಕಗಳು ಮತ್ತು ಬೀಳಿ ಬಣ್ಣದ ಸುಮಾರು 2,000 ಲೀಟರ ಗಾತ್ರದ 2 ಟ್ಯಾಂಕಗಳು, ನೀಲಿ ಬಣ್ಣದ 200 ಲೀಟರ ಗಾತ್ರದ 5 ಪ್ಲಾಸ್ಟೀಕ್ ಬ್ಯಾರಲಗಳು ಹಾಗೂ ಒಂದು ಡೀಜಿಲ್ ಹಾಕುವ ಒಂದು ಮಷೀನ್ ಇರುವುದನ್ನು ನೋಡಿ ದಾಳಿ ಮಾಡಿದಾಗ ಇಬ್ಬರು ಆರೋಪಿತರು ಕಣ್ಣು ತಪ್ಪಿಸಿ ಓಡಿ ಹೋಗಿರುತ್ತಾರೆ, ಆವಾಗ ಅಲ್ಲೆ ಇದ್ದ ಒಬ್ಬ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮೈನೋದ್ದಿನ್ ತಂದೆ ಕಲಿಮೋದ್ದಿನ್ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ತಾಜ ಕಾಲೋನಿ ಬಸವಕಲ್ಯಾಣ ಎಂದು ತಿಳಿಸಿದಾಗ ಓಡಿ ಹೋದ ವ್ಯಕ್ತಿಗಳ ಹೆಸರು ವಿಚಾರಿಸಿದಾಗ ಅವನು 1) ಗುಲಾಮ ರಸೂಲ್ ತಂದೆ ಫಯಾಜಮಿಯ್ಯಾ ನಿಜಾಮ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಪಾಶಾಪೂರ ಗಲ್ಲಿ ಬಸವಕಲ್ಯಾಣ, 2) ಎಕ್ಬಾಲಮಿಯ್ಯಾ ತಂದೆ ಇಬ್ರಾಹಿಂಸಾಬ ಅಧೋನಿ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಅಲ್ಲಾನಗರ ಬಸವಕಲ್ಯಾಣ ಎಂದು ತಿಳಿಸಿದಾಗ ಸದರಿ ಕಟ್ಟಡದಲ್ಲಿ ಪರಿಶೀಲೀಸಿ ನೋಡಲು ಸುಮಾರು 2,000 ಲೀಟರ ಗಾತ್ರದ ಹಳದಿ ಬಣ್ಣದ 4 ಪ್ಲಾಸ್ಟೀಕ್ ಟ್ಯಾಂಕಗಳು ಇದ್ದು ಅದರ ಮೇಲೆ Plasto Gold 6 ಎಂದು ಬರೆದಿದ್ದು ಇರುತ್ತದೆ, ಪ್ರತಿ ಟ್ಯಾಂಕಿನಲ್ಲಿ ಅಂದಾಜು 1,000 ಲೀಟರ ಬೈಯೋ ಡೀಜೀಲ್ ಇರುತ್ತದೆ ಮತ್ತು ಬೀಳಿ ಬಣ್ಣದ ಸುಮಾರು 2,000 ಲೀಟರ ಗಾತ್ರದ 2 ಟ್ಯಾಂಕಗಳು ಇದ್ದು ಅವುಗಳ ಮೇಲೆ Plasto[R] ಎಂದು ಬರೆದಿದ್ದು ಇರುತ್ತದೆ, ಪ್ರತಿ ಟ್ಯಾಂಕದಲ್ಲಿ ಅಂದಾಜು 1,000 ಲೀಟರ ಬೈಯೋ ಡೀಜೀಲ್ ಇರುತ್ತದೆ ಮತ್ತು ನೀಲಿ ಬಣ್ಣದ 200 ಲೀಟರ ಗಾತ್ರದ 5 ಪ್ಲಾಸ್ಟೀಕ್ ಬ್ಯಾರಲಗಳು ಅದರಲ್ಲಿ ಎರಡು ಖಾಲಿ ಮತ್ತು ಒಂದು ಬ್ಯಾರರದಲ್ಲಿ 100 ಲೀಟರ ಮತ್ತು ಎರಡು ಬ್ಯಾರಲಗಳಲ್ಲಿ 200 ಲೀಟರನಂತೆ ಒಟ್ಟು 400 ಲೀಟರ ಬೈಯೋ ಡೀಜೀಲ್ ಇರುತ್ತದೆ, ಈ ಎಲ್ಲ ಟ್ಯಾಂಕಗಳಲ್ಲಿ ಮತ್ತು ಬ್ಯಾರಲಗಳಲ್ಲಿದ್ದ ಒಟ್ಟು 6,500 ಲೀಟರ ಪ್ರತಿ ಲೀಟರ ಬೇಲೆ 70/- ರೂಪಾಯಿ ಹೀಗೆ ಒಟ್ಟು 4,55,000/- ರೂಪಾಯಿ ಮತ್ತು ಸದರಿ ಅಂಗಡಿಯಲ್ಲಿ ಅಥವಾ ಕಟ್ಟಡದಲ್ಲಿ ಪರಿಶೀಲಸಿ ನೋಡಲು ಒಂದು ಬೈಯೋ ಡೀಜೀಲ್ ಹಾಕುವ ಮಷೀನ್ ಜೋತೆ ಬ್ಯಾಟ್ರಿ ಹಾಗೂ ಯು.ಪಿ.ಎಸ್ ಇವುಗಳ ಅ.ಕಿ 50,000/- ರೂ. ಮತ್ತು Varuna 240 2 ಹೆಚ್.ಪಿ ಮೋಟಾರ್ ಅ.ಕಿ 8000/- ರೂ., ಮತ್ತು susu sugna 1 ಹೆಚ್.ಪಿ ಮೋಟಾರ್ ಅ.ಕಿ 5000/- ರೂ., ಹೀಗೆ ಒಟ್ಟು 5,18,000/- ರೂಪಾಯಿ ಬೆಲೆಯ ಸ್ವತ್ತು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 126/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 25-07-2021 ರಂದು ರವಿಕುಮಾರ ಪಿಎಸಐ (ಕಾಸು) ಹುಮನಾಬಾದ ಪೊಲಿಸ ಠಾಣೆ ರವರಿಗೆ ಬಂದ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು
ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮೊಳಕೇರಾ ಗ್ರಾಮದ
ಮಾಣಿಕಪ್ಪಾ ಹುಮನಾಬಾದೆ ರವರ ಮನೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಮೋಳಕೇರಾ ಗ್ರಾಮದ
ಮಾಣಿಕಪ್ಪಾ ಹುಮನಾಬಾದೆ ಇವರ ಮನೆಯಲ್ಲಿ ಮಾರಾಟ ಮಾಡಲು ಸರಾಯಿ ಇಟ್ಟಿರುವುದನ್ನು ಖಚಿತ
ಪಡಿಸಿಕೊಂಡು ಪಂಚರೊಂದಿಗೆ ಸದರಿ ಮನೆಯ ಮೇಲೆ ದಾಳಿ ಮಾಡಿ ನೋಡಲು ಒಂದು ಬೀಳಿ ಚೀಲದಲ್ಲಿ 90 ಎಮ್.ಎಲ್ ದ 15 ಓರಿಜಿನಲ್
ಚ್ವಾಯಿಸ್ ವಿಸ್ಕಿ ಪಾಕೇಟಗಳು ಅ.ಕಿ 526.95 ರೂ ಮತ್ತು 90 ಎಮ್.ಎಲ್ ದ 32 ವಿಸ್ಕಿ
ಬಾಟಲಗಳು ಅ.ಕಿ 1124.16
ರೂ
ನೇದವು ಇರುತ್ತವೆ, ಅಲ್ಲೆ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಳಾಸ
ವಿಚಾರಿಸಲು ಅವನು ತನ್ನ ಹೆಸರು ಸಂಜುಕುಮಾರ ತಂದೆ ಮಾಣಿಕಪ್ಪಾ ಹುಮನಾಬಾದೆ ವಯ: 23 ವರ್ಷ, ಜಾತಿ: ಕುರುಬ,
ಸಾ: ಮೋಳಕೆರಾ ಅಂತಾ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿಗೆ ಸರಾಯಿ ಪಾಕೇಟಗಳನ್ನು ಎಲ್ಲಿಂದ
ತಂದಿರುವೆ ಅಂತಾ ಕೇಳಿದಾಗ ಸದರಿ ಸರಾಯಿ ಪಾಕೇಟಗಳನ್ನು ಹುಮನಾಬಾದ ಪಟ್ಟಣದಲ್ಲಿರುವ ಎಲ್ಲಾ
ವೈನಶಾಪಗಳಿಂದ 5-6,
5-6 ಪಾಕೇಟಗಳನ್ನು
ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟು ನಾನು ಇದನ್ನು ಮಾರಾಟ ಮಾಡುತ್ತಿದ್ದೇನೆ ಅಂತಾ
ತಿಳಿಸಿರುತ್ತಾನೆ, ನಂತರ ಸರಾಯಿ ಪ್ಯಾಕೇಟಗಳು ತೆಗೆದುಕೊಂಡು ಬಂದು ಮಾರಾಟ ಮಾಡಲು ಲೈಸನ್ಸ
ಪರವಾನಿಗೆ ವಿಚಾರಣೆ ಮಾಡಲು ಅವನು ತಿಳಿಸಿದೆನೆಂದರೆ ನನ್ನ ಹತ್ತಿರ ಯಾವುದೇ ರಿತೀಯ ಲೈಸನ್ಸ
ಪರವಾನಿಗೆ ಇರುವುದಿಲ್ಲಾ ನಾನು ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದೇನೆ ಅಂತ
ತಿಳಿಸಿರುತ್ತಾನೆ, ನಂತರ ಸದರಿ ಸರಾಯಿಯನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.