ಕೊಲೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ದಿನಾಂಕ 07/02/2015 ರಂದು ಬೆಳಿಗ್ಗೆ 09:00 ಎ.ಎಮ್ ಕ್ಕೆ ಶ್ರೀ ಲಕ್ಷ್ಮಣ ಕಾಂಬಳೆ ಎ.ಎಸ್.ಐ ಸ್ಟೇಷನ್ ಬಜಾರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ವರದಿ ಸಲ್ಲಿಸಿದ್ದು ಸಾರಂಶವೆನೆಂಧರೆ, ತಮ್ಮ ಆದೇಶದ ಮೇರೆಗೆ ನಾನು ಇಂದು ಬೆಳಗಿನ ಜಾವಾ ಟ್ಯಾಂಗೊ ಕರ್ತವ್ಯದಲ್ಲಿದ್ದಾಗ ಲಿಂಬ್ರಾ ಕಾಲೇಜ ಹತ್ತಿರ ಹೋಗುತ್ತಿದ್ದಾಗ ಇಂದು ಬೆಳಿಗ್ಗೆ 06:05 ಎ.ಎಮ್ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್ ದಿಂದ ನಿಸ್ತಂತು ಮೂಲಕ ತಿಳಿಸಿದ್ದೆನೆಂದರೆ, ವಸಂತ ನಗರದ ಕಾಮರೆಡ್ಡಿ ಆಸ್ಪತ್ರೆ ಹತ್ತಿರ ಒಬ್ಬ ವ್ಯಕ್ತಿ ಬಿದ್ದಿರುತ್ತಾನೆ ಹೋಗಿ ನೋಡಿರಿ ಅಂತಾ ಹೇಳಿದರು. ಆಗ ನಾನು ಐ.ಟಿ.ಐ ಕಾಲೇಜ ಎದುರುಗಡೆ ಹೋಗುತ್ತಿರುವಾಗ ರೋಡಿನ ಪಕ್ಕದ ನಾಲಿಯ ಹತ್ತಿರ ಶಿವಸಾಗರ ಬಟ್ಟೆ ಅಂಗಡಿ ಪಕ್ಕದಲ್ಲಿ ಒಬ್ಬನು ಬಿದ್ದಿದ್ದು ಹೋಗಿ ನೋಡಲು ಸದರಿಯವನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಧಳದಲ್ಲಿ ಮೃತ ಪಟ್ಟಿದನು. ಸದರಿಯವನ ಅಂದಾಜು ವಯಸ್ಸು 28-35 ವರ್ಷ, ಅಪರಿಚಿತನಿದ್ದು ಮೈ ಮೇಲೆ ಕೆಂಪು ಗೇರಿ ಗೇರಿಯ ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು ಮೈಮೇಲೆ ಒಂದು ಕೆಂಪು ಬಣ್ಣದ ಶಾಲ ಮತ್ತು ಒಂದು ಟಾವೆಲ್ ಇರುತ್ತದೆ, ತಲೆಯ ಹತ್ತಿರ ಎರಡು ಚಪ್ಪಲಗಳು ಇದ್ದು ತಲೆ ಪಕ್ಕದಲ್ಲಿ ಕಲ್ಲು ಮತ್ತು ಆಲೂ ಬ್ಲಾಕಿನ ಕಲ್ಲುಗಳು ಬಿದ್ದಿದ್ದು ಇದ್ದು, ನಂತರ ಕಾಮರೆಡ್ಡಿ ಆಸ್ಪತ್ರೆ ಹತ್ತಿರ ಹೋದಾಗ ಕಾರ್ಖಾನೆ ಮತ್ತು ಬೈಲರಗಳ ಇಲಾಖೆ ಹತ್ತಿರ ಗಾರ್ಡನ ಪಕ್ಕದಲ್ಲಿ ರೋಡಿನ ಮೇಲೆ ಒಬ್ಬನು ಬಿದ್ದಿದ್ದು ತಲೆಗೆ ಭಾರಿ ರಕ್ತಗಾಯವಾಗಿದ್ದು ಇನ್ನೂ ಜೀವಂತ ಇದ್ದು ಅವನ ತಲೆ ಪಕ್ಕದಲ್ಲಿ ಎರಡು ಕಲ್ಲುಗಳು ಮತ್ತು ಚಪ್ಪಲಿಗಳು ಇದ್ದವು ಆಗ ಸದರಿಯವನಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದೆನು. ಸದರಿಯವನು ಕೂಡಾ ಅಪರಿಚಿತನಿದ್ದು ಅಂದಾಜು ವಯಸ್ಸು 25-30 ವರ್ಷ, ಮೈಮೇಲೆ ಒಂದು ಕೆಂಪು ಮತ್ತು ಬಿಳಿ ಪಟ್ಟಿಯ ಟಿ-ಶರ್ಟ ಮತ್ತು ಒಂದು ಕಂದು ನೀಲಿ ಬಣ್ಣದ ಪ್ಯಾಂಟ ಧರಿಸಿದ್ದು, ಸದರಿಯವನು ಉಪಚಾರ ಹೊಂದುತ್ತಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮೃತ ಪಟ್ಟ ಇಬ್ಬರು ಅಪರಿಚಿತರಿದ್ದು ಯಾರೋ ದುಷ್ಕರ್ಮಿಗಳು ಯಾವುದೋ ಕಾರಣದಿಂದ ಮೊದಲು ಒಬ್ಬನನ್ನು ಐ.ಟಿ.ಐ ಕಾಲೇಜ ಎದುರುಗಡೆ ಕಲ್ಲಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿದ್ದು, ನಂತರ ಇನ್ನೋಬ್ಬನಿಗೂ ಕೂಡಾ ಬೆನ್ನು ಹತ್ತಿ ಕಾಮರೆಡ್ಡಿ ಆಸ್ಪತ್ರೆ ಹತ್ತಿರ ಕಲ್ಲಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಕಂಡುಬರುತ್ತದೆ. ಸದರಿ ಘಟನೆಯು ಇಂದು ದಿನಾಂಕ 07/02/2015 ರಂದು ಮಧ್ಯರಾತ್ರಿ 02:00 ಗಂಟೆಯಿಂದ ಬೆಳಿಗಿನ ಜಾವಾ 05:00 ಗಂಟೆಯ ಅವಧಿಯಲ್ಲಿ ಜರುಗಿರಬಹುದು, ಮುಖದ ಮೇಲೆ ಕಲ್ಲಿನಿಂದ ಹೊಡೆದು ಮುಖವನ್ನು ಗುರುತು ಹಿಡಿಯಲಾರದ ಹಾಗೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.