¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-09-2017
RlPÀ aAZÉÆý ¥Éưøï
oÁuÉ UÀÄ£Éß £ÀA. 91/2017, PÀ®A. 279,
304(J) L¦¹ :-
ದಿನಾಂಕ 18-09-2017 ರಂದು ಫಿರ್ಯಾದಿ ಶಿವಕುಮಾರ ತಂದೆ ತುಕಾರಾಮ ಸಿಂಧೆ ವಯ: 40 ವರ್ಷ, ಜಾತಿ: ಎಸ. ಸಿ ಹೊಲಿಯಾ, ಸಾ:
ನೆಲವಾಡಿ (ಎಂ) ರವರು ಕಿರಾಣಿ ತರಲು ಚಳಕಾಪುರಕ್ಕೆ ಹೋಗಿ ಚಳಕಾಪುರದಲ್ಲಿ ಕಿರಾಣಿ ತೆಗೆದುಕೊಂಡು ವಾಪಾಸ ತನ್ನ ಮೋಟಾರ ಸೈಕಲ ಮೇಲೆ ನೆಲವಾಡಕ್ಕೆ ಫಿರ್ಯಾದಿ ಮತ್ತು ಫಿರ್ಯಾದಿಯ ಗೆಳೆಯ ದೇವೆಂದ್ರ ತಂದೆ ಬಂಡೆಪ್ಪಾ ಪೂಜಾರಿ ಇಬ್ಬರು ಹೋಗುತ್ತಿರುವಾಗ ತನ್ನ ಮೊಟಾರ ಸೈಕಲ ಮುಂದೆ ತಮ್ಮೂರ ಅಮುಲ ತಂದೆ ವಿಲಾಸರಾವ ಪಾಟೀಲ ಹಾಗು ಸಂಬಂಧಿಕ ರಾಹುಲ ತಂದೆ ಪಂಡಿತ ಸಿಂದೆ ರವರು ಕೆಎ-39/ಕ್ಯೂ-5628 ರ ನೇದರ ಮೇಲೆ ಹೋಗುತ್ತಿದ್ದರು, ಮೋಟಾರ ಸೈಕಲ ಅಮುಲ ಪಾಟೀಲ ಚಲಾಯಿಸುತ್ತಿದ್ದು, ಅವರು ಚಳಕಾಪುರ ನೆಲವಾಡ ರಸ್ತೆ ಮೇಲೆ ಹಳ್ಳದ ಹತ್ತಿರ ಹೋದಾಗ ಒಮ್ಮೆಲೆ ಆರೋಪಿ ಅಮುಲ ತಂದೆ ವಿಲಾಸರಾವ ಪಾಟೀಲ ಸಾ: ನೇಲವಾಡ ಇತನು ತನ್ನ ಮೋಟಾರ ಸೈಕಲ ಜೋರಾಗಿ ಚಲಾಯಿಸಿ ನಿಷ್ಕಾಳಜಿತನದಿಂದ ತಗ್ಗು ಬಂದಾಗ ಬ್ರೆಕ ಹಾಕಿರುತ್ತಾನೆ ಆಗ ಒಮ್ಮೆಲೆ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತ ರಾಹುಲ ತಂದೆ ಪಂಡಿತ ಸಿಂಧೆ ಇತನು ಒಮ್ಮೆಲೆ ಹಾರಿ ರಸ್ತೆಯ ಮೇಲೆ ಬಾಳಿ ಮುಖ ಕೆಳಗೆ ಮಾಡಿ ಬಿದ್ದಿರುತ್ತಾನೆ, ಆಗ ಫಿರ್ಯಾದಿಯು ನಿಂತು ರಾಹುಲ ಇತನಿಗೆ ಎಬ್ಬಿಸಿ ನೋಡಿದಾಗ ಆತನಿಗೆ ನಡು ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಸೊರುತ್ತಿತ್ತು ಆತನು ಪ್ರಜ್ಞೆ ತಪ್ಪಿ ಮಾತನಾಡುತ್ತಿರಲಿಲ್ಲ, ಫಿರ್ಯಾದಿಯು ತಕ್ಷಣ ಅವರ ತಂದೆ ತಾಯಿಗೆ ಸುದ್ದಿ ತಿಳಿಸಿದ್ದು ಅವರು ಕೂಡಲೆ ಅಲ್ಲಿಗೆ ಬಂದಾಗ ಎಲ್ಲರೂ ಅಲ್ಲಿಂದ ರಾಹುಲ ಇತನಿಗೆ ಚಳಕಾಪುರ ಗ್ರಾಮದ ಒಂದು ಆಟೋದಲ್ಲಿ ಹಾಕಿಕೊಂಡು ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಅಲ್ಲಿ ತೋರಿಸಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ರಾಹುಲ ಇತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದಾಗ ಬೀದರ ಸರ್ಕಾರಿ ಆಸ್ಪತ್ರೆಯ ವೈದ್ಯರು ರಾಹುಲನಿಗೆ ಪರೀಕ್ಷಿಸಿ ರಾಹುಲ ಈಗಾಗಲೆ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಂತಾಕಿ
ಪೊಲೀಸ್ ಠಾಣೆ ಗುನ್ನೆ ನಂ. 85/2017, ಕಲಂ. 457, 380 ಐಪಿಸಿ :-
ಫಿರ್ಯಾದಿ
ರೇಖಾ ಗಂಡ ದತ್ತಾತ್ರಿ ರಾಸೋಳೆ ವಯ: 32 ವರ್ಷ, ಜಾತಿ: ಮರಾಠಾ, ಉ: ಅಂಗನವಾಡಿ ಕಾರ್ಯಕರ್ತೆ, ಸಾ:
ಲಿಂಗದಳ್ಳಿ(ಜೆ), ತಾ: ಔರಾದ(ಬಿ) ರವರ ತಾಯಿಯಾದ
ನಿವೃತ್ತಿಬಾಯಿ ಗಂಡ ನರಸಿಂಗರಾವ ಬಿರಾದಾರ ಇವಳು ತನ್ನ ಮನೆಯಲ್ಲಿ ಒಬ್ಬಳೆ ಇರುತ್ತಾಳೆ, ಎರಡು
ದಿವಸಗಳ ಹಿಂದೆ ದಸರಾ ಹಬ್ಬದ ಪ್ರಯುಕ್ತ ಫಿರ್ಯಾದಿಯು ತನ್ನ ಗಂಡನ ಮನೆಯಲ್ಲಿ ಸುಣ್ಣ ಬಣ್ಣ
ಮಾಡುತ್ತಿರುವದ್ದರಿಂದ ಫಿರ್ಯಾದಿಯು ತನ್ನ ಮತ್ತು ತನ್ನ ಗಂಡನ ಮೈಮೇಲೆ ಇರುವ ಎರಡುವರೆ ತೊಲೆಯ
ಒಂದು ಬಂಗಾರದ ನಾನ, 5 ಮಾಸಿಯ 2 ಬಂಗಾರದ ಉಂಗುರ,
3
ಮಾಸಿಯ 1 ಉಂಗುರ ಹೀಗೆ ಒಟ್ಟು 3 ತೊಲೆ 8 ಮಾಸಿ ಬಂಗಾರದ ಒಡುವೆಗಳು ಹಾಗು 12 ತೊಲೆಯ
ಬೆಳ್ಳಿಯ ಚೈನ ಮತ್ತು ನಗದು ಹಣ 25,000/- ರೂ. ಇವುಗಳನ್ನು ತನ್ನ ತಾಯಿಯಾದ ನಿವರ್ತಿಬಾಯಿ ಬಿರಾದಾರ
ಇವಳ ಮನೆಯಲ್ಲಿನ ಅಲಮಾರಿಯಲ್ಲಿಟ್ಟು ಅದರ ಕೀಲಿಯನ್ನು ಒಂದು ಬ್ಯಾಗನಲ್ಲಿ ಹಾಕಿ ಒಂದು
ಗುಟಕ್ಕೆ ನೇತು ಹಾಕಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 18-09-2017 ರಂದು ರಾತ್ರಿ
ಊಟ ಮಾಡಿಕೊಂಡು ಫಿರ್ಯಾದಿ ಮತ್ತು ಫಿರ್ಯಾದಿಯ ತಾಯಿಯಾದ ನಿವರ್ತಿಬಾಯಿ ಇಬ್ಬರು ತಮ್ಮ ಮನೆಯ
ಅಂಗಳದಲ್ಲಿ ಮಲಗಿಕೊಂಡಿರುತ್ತಾರೆ, ನಂತರ ಮುಂಜಾನೆ 0600 ಗಂಟೆಗೆ ಫಿರ್ಯಾದಿಗೆ ಎಚ್ಚರವಾಗಿ
ಮನೆಯ ಬಾಗಿಲು ತೆಗೆದು ಒಳಗಡೆ ಹೋಗಲು ಮನೆಯ ಬೆನ್ನು ಗೋಡೆ ಒಡೆದಿದ್ದು ನೋಡಿ ಗಾಬರಿಗೊಂಡು ಅಲಮಾರಿ
ಕಡೆ ನೋಡಲು ಅಲಮಾರಿ ಖುಲ್ಲಾ ಇದ್ದು ಅದರ ಕೀಲಿ ಅದಕ್ಕೆ ಇರುತ್ತದೆ, ನಂತರ ಅಲಮಾರಿಯಲ್ಲಿಟ್ಟಿರುವ ಎರಡುವರೆ
ತೊಲೆಯ ಒಂದು ಬಂಗಾರದ ನಾನ, 5 ಮಾಸಿಯ 2 ಬಂಗಾರದ ಉಂಗುರ,
3
ಮಾಸಿಯ 1 ಉಂಗುರ ಹೀಗೆ ಒಟ್ಟು 3 ತೊಲೆ 8 ಮಾಸಿ ಬಂಗಾರ ಒಡುವೆಗಳು ಅ.ಕಿ 1,14,000/- ರೂ
ಹಾಗು 12 ತೊಲೆಯ ಬೆಳ್ಳಿಯ ಚೈನ ಅ.ಕಿ 4800/- ರೂ ಮತ್ತು ನಗದು ಹಣ 25,000/-ರೂ. ನೇದ್ದನ್ನು
ಯಾರೋ ಅಪರಿಚಿತ ಕಳ್ಳರು ದಿನಾಂಕ 18,19-09-2017 ರಂದು ರಾತ್ರಿ ವೇಳೆಯಲ್ಲಿ ಮನೆಯ ಬೆನ್ನು
ಗೋಡೆಯನ್ನು ಒಡೆದು ಮನೆಯಲ್ಲಿ ಪ್ರವೇಶಿಸಿ ಅಲಮಾರಿ ಕೀಲಿ ತೆಗೆದು ಕಳವು ಮಾಡಿಕೊಂಡು
ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA.
100/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ
17-09-2017
ರಂದು ಫಿರ್ಯಾದಿ
ಶಿವಾಜಿ ತಂದೆ
ಬಾಬುರಾವ ರಾಠೋಡ ವಯ:
26 ವರ್ಷ,
ಜಾತಿ: ಲಂಬಾಣಿ, ಸಾ: ಕೊಳಾರ(ಕೆ) ರವರು ತನ್ನ ಗೆಳೆಯನಾದ ಪರಮೇಶ್ವರ ತಂದೆ ತಂದೆ ಮಲ್ಲಪ್ಪಾ ವಗ್ಗೆ ಸಾ:
ಕೊಳಾರ(ಬಿ) ಇಬ್ಬರು ಕೂಡಿ ನೌಬಾದನಲ್ಲಿ ತರಕಾರಿ ತೆಗೆದುಕೊಂಡು ಕೊಳಾರಗೆ
ಹೋಗುವ ಕುರಿತು
ಪರಮೇಶ್ವರ ಇವರ ಮೋಟಾರ ಸೈಕಲ ನಂ.
ಕೆಎ-38/ಜೆ-3710 ನೇದ್ದರ ಮೇಲೆ ನೌಬಾದದಿಂದ ಕೊಳಾರಗೆ
ಹೋಗುತ್ತಿರುವಾಗ ಮೋಟಾರ ಸೈಕಲ ಪರಮೇಶ್ಚರ ಇವರು ಚಲಾಯಿಸುತ್ತಿದ್ದು,
ಇಬ್ಬರು ನೌಬಾದ ಬಸವೇಶ್ವರ
ಸರ್ಕಲ ಹತ್ತಿರ ಇರುವ ಕಾರಂಜಾ ಮೇಡಿಕಲ್ ಮುಂದೆ ಬಂದಾಗ ಎದುರುಗಡೆ
ಹುಮನಾಬಾದ ಕಡೆಯಿಂದ
ಟೆಂಪೂ ವಾಹನ ನಂ.
ಕೆಎ-38/6032 ನೇದರ ಚಾಲಕನಾದ ಆರೋಪಿಯು ತನ್ನ ಟೆಂಪೋ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ
ಕುಳಿತು ಹೋಗುತ್ತಿರುವ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಟೆಂಪೋ ಸಹೀತ ಬೀದರ ಕಡೆ ಓಡಿಸಿಕೊಂಡು ಹೋಗಿರುತ್ತಾನೆ,
ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲ ಮೋಳಕಾಲ ಮೇಲ್ಭಾಗದಲ್ಲಿ
ಭಾರಿ ರಕ್ತಗುಪ್ತಗಾಯ,
ಬಲಗೈ ರಟ್ಟೆಯ ಮೇಲೆ ಭಾರಿ ಗುಪ್ತಗಾಯ,
ಬಲಗೈ ಬೆರಳಿಗೆ ಗುಪ್ತಗಾಯವಾಗಿರುತ್ತದೆ,
ಪರಮೇಶ್ವರನಿಗೆ ಯಾವುದೇ
ರೀತಿಯ ಗಾಯ ಆಗಿರುವುದಿಲ್ಲ,
ಗಾಯಗೊಂಡ ಫಿರ್ಯಾದಿಗೆ ಪರಮೇಶ್ವರ ಮತ್ತು ಅಲ್ಲೆ ಇದ್ದ ವಿನೋದ ಸಾ:
ಬೀದರ ಇವರು 108 ಅಂಬುಲೇನ್ಸಗೆ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಗುನಾನಕ ಆಸ್ಪತ್ರೆಗೆ ತಂದು ದಾಖಲು
ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-09-2017 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 101/2017,
PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ
18-09-2017
ರಂದು ಫಿರ್ಯಾದಿ
ಪ್ರಭುರಾವ ತಂದೆ
ಶಿವಲಿಂಗಪ್ಪ ತರನಳ್ಳಿ,
ವಯ:
61 ವರ್ಷ,
ಜಾತಿ:
ಹಡಪದ,
ಸಾ:
ಮನೆ ನಂ.
9-5-495 ಹಳೆ ಆದರ್ಶ ಕಾಲೋನಿ ಬೀದರ
ರವರು ತನ್ನ ಸ್ಕೂಟಿ
ನಂ.
ಕೆಎ-38/ಜೆ-0717 ನೇದ್ದನ್ನು ಚಲಾಯಿಸಿಕೊಂಡು ತಮ್ಮ ಮನೆಯಿಂದ
ಶಹಾಗಂಜ ಹೋರಭಾಗದಲ್ಲಿರುವ
ತನ್ನ
ಸ್ನೇಹಿತರಾದ ಬಿ. ರತ್ನಾಕರ ಇವರ ಮನೆಗೆ ಖಾಸಗಿ ಕೆಲಸ ಕುರಿತು ಬಸವೇಶ್ವರ ವೃತ್ತದಿಂದ ಶಹಾಗಂಜ ಕಡೆಗೆ ಹೊಗಲು ಡಿ.ಸಿ.ಸಿ ಬ್ಯಾಂಕ ಪಕ್ಕದ ಸಿ.ಸಿ ರೋಡಿನ ಮೇಲೆ ಡಿ.ಸಿ.ಸಿ ಬ್ಯಾಂಕ ಮೇನ್ ಗೇಟ್ ಹತ್ತಿರ ಹೋಗುತ್ತಿರುವಾಗ ಡಿ.ಸಿ.ಸಿ ಬ್ಯಾಂಕ ಗೇಟ್ ಹತ್ತಿರ ಕ್ರಾಂತಿ ಗಣೇಶ ರಸ್ತೆ ಕಡೆಗೆ ಮುಖ ಮಾಡಿ ನಿಂತಿರುವ ಒಂದು ಇನ್ನೋವಾ ಕಾರ ನಂ.
ಕೆಎ-38/ಎಮ್-3107 ನೇದ್ದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಒಮ್ಮೇಲೆ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಮುಂದಕ್ಕೆ ತನ್ನ ಎಡಭಾಗಕ್ಕೆ ಚಲಾಯಿಸಿದ್ದರಿಂದ ಕಾರಿನ ಎಡಭಾಗದ ಡೋರ ಫಿರ್ಯಾದಿಯ
ಮೋಟಾರ ಸೈಕಲಗೆ
ತಾಗಿದ್ದರಿಂದ ಫಿರ್ಯಾದಿಯು
ಮೋಟಾರ ಸೈಕಲ
ಸಮೇತ ಕೆಳಗೆ ಬಿದ್ದಿದ್ದು,
ಪರಿಣಾಮ ಫಿರ್ಯಾದಿಯ ಬಲಭುಜಕ್ಕೆ,
ಬಲಫಕಳಿಯಲ್ಲಿ ಭಾರಿ ಗುಪ್ತಗಾಯ ಹಾಗೂ ಎಡಗೈ ಕಿರು
ಬೆರಳಿಗೆ ಭಾರಿ
ರಕ್ತ ಗುಪ್ತಗಾಯ ಮತ್ತು ಎಡಗಾಲ ತೊಡೆಗೆ,
ಬಲಗಾಲ ಮೊಳಕಾಲಿಗೆ ತರಚಿದ ರಕ್ತ ಗುಪ್ತಗಾಯವಾಗಿರುತ್ತದೆ,
ಆಗ ಫಿರ್ಯಾದಿಗೆ ಡಿಕ್ಕಿ
ಮಾಡಿದ ಆರೋಪಿಯು
ತನ್ನ ಕಾರನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ಕಾರ ಸಮೇತ ರೆಕ್ಸ ಬಾರ್ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ,
ಆಗ ಅಲ್ಲಿಯೇ
ಇದ್ದ ಫಿರ್ಯಾದಿಗೆ
ಪರಿಚಯಸ್ಥರಾದ ಅಲಿಯೋದ್ದೀನ್@ಅಲಿಬಾಬಾ ತಂದೆ ವಹಿಜೋದ್ದೀನ್ ಸಾ:
ಬೀದರ ಇವರು ಫಿರ್ಯಾದಿಗೆ
ಒಂದು ವಾಹನದಲ್ಲಿ
ಹಾಕಿಕೊಂಡು ಚಿಕಿತ್ಸೆ ಕುರಿತು ಕೃಷ್ಣಮೂರ್ತಿ ಆಸ್ಪತ್ರೆಗೆ ತಂದು ದಾಖಲು
ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ
ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ್
ಪೊಲೀಸ್ ಠಾಣೆ ಬೀದರ ಗುನ್ನೆ ನಂ. 193/2017, ಕಲಂ. 419, 420, 465, 467, 468, 471 ಜೊತೆ 34
ಐಪಿಸಿ :-
ಫಿರ್ಯಾದಿ
ಅಬ್ದುಲ್ ಸಲೀಮ ತಂದೆ ಅಬ್ದುಲ್ ಸುಕುರ ಸಾ: ಔರಾದ
(ಎಸ) ರವರು ಎಂ.ಡಿ.ಗಫೂರನ ಹತ್ತಿರ ಜಮೀನ
ಸರ್ವೆ ನಂ. 67/3ಬಿ/ಎ ನೇದ್ದರಲ್ಲಿ
16 ಗುಂಟೆ
ಜಮೀನನ್ನು ಖರೀದಿಸಿ ಸೇಲ್ ಡೀಡ ಮಾಡಿಸಿಕೊಂಡು ದಿನಾಂಕ 24-01-1995
ರಂದು
ರಿಜಿಸ್ಟರಿ ಮಾಡಿಸಿಕೊಂಡಿರುತ್ತಾರೆ, ಅಂದಿನಿಂದ ಸದರಿ ಜಮೀನು ಫಿರ್ಯಾದಿಯ ತಾಬೆಯಲ್ಲಿ ಇರುತ್ತದೆ, ಫಿರ್ಯಾದಿಯ
ಸೇಲ್ ಡೀಡ ಕಳೆದು ಹೋಗಿದ್ದರಿಂದ ಸೇಲ್ ಡೀಡ ಸರ್ಟಿಫೈಡ್ ಕಾಪಿ ದಿನಾಂಕ 14-04-2017
ರಂದು
ರಿಜಿಸ್ಟರಿ ಕಛೇರಿಯಿಂದ ಪಡೆದುಕೊಂಡಿರುತ್ತಾರೆ, ದಿನಾಂಕ 15-04-2017
ರಂದು ಫಿರ್ಯಾದಿಯು
ಖರೀದಿಸಿದ ಜಾಗಕ್ಕೆ ಹೋದಾಗ ಕೆಲ ಕೂಲಿ ಕೆಲಸಗಾರರು ಪಾಯ ಅಗಿಯುತ್ತಿದ್ದಾಗ ಅವರಿಗೆ ವಿಚಾರಿಸಲಾಗಿ ಈ ಜಾಗದ ಮಾಲಿಕ ಮಿರ್ಚಿ
ಬ್ರದರ್ಸ ಕೆಲಸಕ್ಕೆ ಹಚ್ಚಿರುತ್ತಾರೆ ಅಂದರು, ಆರೋಪಿತರಾದ ಮಹ್ಮದ್ ಸಿರಾಜ ಸಾ: ರಾಜಾಬಾಗ ಬೀದರ
ಹಾಗೂ ಇನ್ನೂ 3 ಜನರು ಇವರೆಲ್ಲರೂ ಸದರಿ ಜಾಗದ ಮಾಲಿಕ ನಾನು ಅಂತ ಫಿರ್ಯಾದಿಯ ಹೆಸರಲ್ಲಿ ನಕಲಿ
ಕಾಗದ ಪತ್ರ ಸ್ರಷ್ಟಿಸಿ ನಕಲಿ ಸಹಿ ಮಾಡಿ ಬೀದರನಲ್ಲಿ ರಿಜಿಸ್ಟರಿ ಮಾಡಿಕೊಂಡಿರುತ್ತಾರೆ,
ಫಿರ್ಯಾದಿಯು ಯಾರಿಗೂ ಸೇಲ್ ಡೀಡ ಮಾಡಿ ಕೊಟ್ಟಿರುವದರಿಲ್ಲಾ, ಫಿರ್ಯಾದಿಯ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ
ಮೋಸ ಮಾಡಿರುತ್ತಾರೆ ಹಾಗೂ ಸದರಿ ಆರೋಪಿತರು ಫಿರ್ಯಾದಿಯ ಹೆಸರಿನಲ್ಲಿ ಮತ್ತೊಂದು ನಕಲಿ ದಾಖಲಾತಿ
ಸ್ರಷ್ಟಿಸಿ ನಕಲಿ ಸಹಿ ಮಾಡಿ 12 ½ ಗುಂಟೆ ಜಾಗದ ಸೇಲ್ ಡೀಡ ಮಾಡಿಕೊಂಡಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ದಿನಾಂಕ 18-09-2017 ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.