Police Bhavan Kalaburagi

Police Bhavan Kalaburagi

Saturday, May 15, 2021

BIDAR DISTRICT DAILY CRIME UPDATE 15-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-05-2021

 

ಚಿಂತಾಕಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ರೇಶ್ಮಾ ಗಂಡ ಶೇಕ್ ಮೋಸಿನ್ @ ಚಾಂದಸಾಬ ವಯ: 19 ವರ್ಷ, ಸಾ: ಕರಂಜಿ(ಬಿ) ಗ್ರಾಮ, ತಾ: ಔರಾದ(ಬಿ) ರವರ ಗಂಡನಾದ ಶೇಕ ನೀಶಾರ @ ಚಾಂದಸಾಬ ರವರಿಗೆ ಮೋದಲು ಕೂಡಾ ಎದೆ ನೋವು ಇದ್ದು, ಅವರಿಗೆ ಕೆಲವು ಕಡೆಗಳಲ್ಲಿ ಖಾಸಗಿ ಅಸ್ಪತ್ರೆಗಳಲ್ಲಿ ತೋರಿಸಿ ಚಿಕಿತ್ಸೆ ಕೋಡಿಸಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 13-05-2021 ರಂದು ಊಟ ಮಾಡುವಾಗ ಅವರಿಗೆ ಟಸ್ಕಿ ಹತ್ತಿ ತಿವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಔರಾದ(ಬಿ) ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರಿಗೆ ತಿವೃ ಹೃದಯಘಾತವಾಗಿ ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 84/2021, ಕಲಂ. 366(ಎ) ಐಪಿಸಿ :-

ದಿನಾಂಕ 12-05-2021 ರಂದು 2100 ಗಂಟೆಗೆ ಫಿರ್ಯಾದಿ ಪುತಳಾ ಗಂಡ ವಿಶ್ವನಾಥ ವಯ: 34 ವರ್ಷ, ಜಾತಿ: ವಡ್ಡರ, ಸಾ: ಇಂದಿರಾ ನಗರ ಹುಡಗಿ, ತಾ: ಹುಮನಾಬಾದ ರವರು ಊಟ ಮಾಡಿ ತನ್ನ ಮಕ್ಕಳೊಂದಿಗೆ ಮನೆಯಲ್ಲಿ ಒಂದೇ ಕಡೆ ಮಲಗಿಕೊಂಡಿದ್ದು, ನಂತರ ರಾತ್ರಿ 0100 ಗಂಟೆ ಸುಮಾರಿಗೆ ಎದ್ದು ನೋಡಲು ಮಗಳು ಜೈಶ್ರೀ ಇವಳು ಕಾಣಲಿಲ್ಲ, ನಂತರ ಫಿರ್ಯಾದಿಯು ತನ್ನ ತಮ್ಮನಾದ ಶಿವಕುಮಾರ ಇವರಿಗೆ ಎಬ್ಬಿಸಿ ಜೈಶ್ರೀ ಇವಳು ಕಾಣುತ್ತಿಲ್ಲಾ ಅಂತಾ ಹೇಳಿದಾಗ ಫಿರ್ಯಾದಿ ಹಾಗೂ ತಮ್ಮ ಶಿವಕುಮಾರ ಮತ್ತು ವೆಂಕಟೇಶ ಎಲ್ಲರು ಕೂಡಿ ಮನೆಯ ಅಕ್ಕ-ಪಕ್ಕ ಎಲ್ಲಾ ಕಡೆ ಹುಡುಕಾಡಿದರು ಮಗಳು ಎಲ್ಲಿಯು ಕಾಣಲಿಲ್ಲ, ಎಲ್ಲಿಯಾದರು ಹೋಗಿರಬಹುದು ಬೆಳಿಗ್ಗೆಯ ತನಕ ಬರುತ್ತಾಳೆ ಅಂತಾ ಸುಮ್ಮನಾಗಿದ್ದು, ನಂತರ ಬೆಳಿಗ್ಗೆ ಜನರಿಂದ ಗೊತ್ತಾಗಿದ್ದೆನೆಂದರೆ ಓಣಿಯ ಎಕ್ಬಾಲ ಇವನ ಮಗನಾದ ತಾಹೇರ ಇವನು ಕೂಡ ರಾತ್ರಿಯಿಂದ ಕಾಣಿಸುತ್ತಿಲ್ಲಾ, ಹೀಗಾಗಿ ಆರೋಪಿ ತಾಹೇರ ತಂದೆ ಎಕ್ಬಾಲ ಸಾ: ಇಂದಿರಾನಗರ ಹುಡಗಿ ಇತನೇ ಫಿರ್ಯಾದಿಯ ಮಗಳಿಗೆ ಪುಸಲಾಯಿಸಿ ಅಪರಿಸಿಕೊಂಡು ಹೋಗಿಬಹುದೆಂದು ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 30/2021, ಕಲಂ. 457, 380 ಐಪಿಸಿ :-

ಯಾರೋ ಅಪರಿಚಿತ ಕಳ್ಳರು ದಿನಾಂಕ 14-05-2021 ರಂದು ರಾತ್ರಿ 3 ಗಂಟೆಯಿಂದ ನಸುಕಿನ 5 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಮೀನಾಕ್ಷಿ ಗಂಡ ಬಸವರಾಜ ಬಡಿಗೇರ ವಯ: 45 ವರ್ಷ, ಜಾ: ಬಡಿಗೇರ, ಸಾ: ಘೋಡಂಪಳ್ಳಿ ರವರ ಮನೆಯಲ್ಲಿ ಪ್ರವೇಶ  ಮಾಡಿ ಫಿರ್ಯಾದಿಯವರ ಪರ್ಸದಲ್ಲಿದ್ದ ಅಲಮಾರದ ಬಿಗ ತೆಗೆದುಕೊಂಡು ಅಲಮಾರದಲ್ಲಿಟ್ಟಿದ ನಗದು ಹಣ 15,25,000/- ರೂ. ಹಾಗೂ 2 ಮೋಬೈಲ್ ಅ.ಕಿ 18,000/- ರೂ. ನೇದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ, ಅಲ್ಲದೇ ಗ್ರಾಮದ ಕಾಶಿನಾಥ ತಂದೆ ಯಲ್ಲಪ್ಪಾ ಹೇಳವಾ ರವರ ಮನೆಯಲ್ಲಿ ಸಂದೂಕದಲ್ಲಿದ್ದ ನಗದು ಹಣ 4000/- ರೂ. ನೇದನ್ನು ಸಹ ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.