Police Bhavan Kalaburagi

Police Bhavan Kalaburagi

Wednesday, December 2, 2020

BIDAR DISTRICT DAILY CRIME UPDATE 02-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-12-2020

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 17/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 01-12-2020 ರಂದು ಫಿರ್ಯಾದಿ ಪಾರ್ವತಿ ಗಂಡ ಮಾಣಿಕ ಗೋಣೆ ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಎದಲಾಪೂರ, ತಾ: ಬಸವಕಲ್ಯಾಣ ರವರ ಗಂಡನಾದ ಮಾಣಿಕ ತಂದೆ ನರಸಪ್ಪಾ ಗೋಣೆ  ಇತನು ಮ್ಮೂರ ಚಂದ್ರಕಾಂತ ರೆಡ್ಡಿ ಇವರ ಹೋಲದಲ್ಲಿ ಕಸ್ಮಿಕವಾಗಿ  ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ನೂತನ ನಗರ ಪೊಲೀಸ್ ಠಾಣೆ, ಬಿದರ ಅಪರಾಧ ಸಂ. 133/2020, ಕಲಂ. 302 ಐಪಿಸಿ :-

ಫಿರ್ಯಾದಿ ಜಯಮಣಿ ಗಂಡ ಮೃತ ಎಲಸನ್ ಸೋನೆ ವಯ: 22 ವರ್ಷ, ಸಾ: ಚಿಂತಾಕಿ ರವರ ಗಂಡನಾದ ಎಲಸ£ï ತಂದೆ ಮಾದಪ್ಪ ಸೋನೆ ವಯ: 25 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚಿಂತಾಕಿ ರವರು ದಿನಾಂಕ 30-11-2020 ರಂದು ಹೈದ್ರಬಾದ[ಸಂಗಾರೆಡ್ಡಿಯಿಂದ] ಬೀದರ ನಗರಕ್ಕೆ ಬಂದಾಗ ನಗರದ ಜನವಾಡ ರೋಡ ವಾಟರ ಟ್ಯಾಂಕ ಹತ್ತಿರ ಬಸ್ ನಿಲ್ದಾಣದ ಆವರಣದಲ್ಲಿ ಯಾರೋ ಅಪರಿಚಿತರು ಯಾವುದೋ ಉದ್ದೇಶದಿಂದ ಗಂಡನ ತಲೆಯಲ್ಲಿ ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಕೊಲೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-12-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 89/2020, ಕಲಂ. 279, 337, 338, 304(ಎ) ಐಪಿಸಿ :-

ದಿನಾಂಕ 01-12-2020 ರಂದು ಫಿರ್ಯಾದಿ ಮಹಾದೇವ ತಂದೆ ಪ್ರಭುಲಿಂಗಯ್ಯಾ ಮಠಪತಿ ವಯ: 30 ವರ್ಷ, ಜಾತಿ: ಸ್ವಾಮಿ, ಸಾ: ಸುಲ್ತಾನಬಾದ ವಾಡಿ, ತಾ: ಹುಮನಾಬಾದ ರವರ ದೊಡ್ಡಪ್ಪನವರಾದ ರಾಚಯ್ಯಾ ಮಠಪತಿ ರವರು ಸೈಕಲ ಮೇಲೆ ದುಬಲಗುಂಡಿ ಗ್ರಾಮದ ಕಡೆಗೆ ಹೊಗುತ್ತಿರುವಾಗ ಹುಮನಾಬಾದ ಕಡೆಯಿಂದ ಇರ್ಟಿಗಾ ಕಾರ ನಂ. ಕೆಎ-32/ಎನ್-8044 ನೇದರ ಚಾಲಕನಾದ ಆರೋಪಿ ರಮೇಶಬಾಬು ತಂದೆ ಬಸವಣಪ್ಪಾ ಹುಲಿಗೇರೆ ಸಾ: ಸಂತ, ತಾ: ಕಮಲಾಪೂರ, ಜಿ: ಕಲಬುರ್ಗಿ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸೈಕಲ ಮೇಲೆ ಹೊಗುತ್ತಿದ್ದ ರಾಚಯ್ಯಾ ಮಠಪತಿ ರವರಿಗೆ ಒಮ್ಮೇಲೆ ಎದುರುಗಡೆಯಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ರಾಚಯ್ಯಾ ಮಠಪತಿ ರವರಿಗೆ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ತಲೆಯಿಂದ ಹಾಗೂ ಕಿವಿಯಿಂದ ರಕ್ತ ಬಂದಿರುತ್ತದೆ, ನಂತರ ಅವರಿಗೆ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ವೈದ್ಯರು ಪರಿಕ್ಷಿಸಿ ರಾಚಯ್ಯಾ ಮಠಪತಿ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 76/2020, ಕಲಂ. 379 ಐಪಿಸಿ :-

ದಿನಾಂಕ 04-11-2020 ರಂದು ಫಿರ್ಯಾದಿ ರಾಮು ತಂದೆ ಅಂಬಾದಾಸ ಬುರೂಡು ವಯ: 24 ವರ್ಷ, ಜಾತಿ: ಹಿಂದೂ ಬಿ.ಸಿ.ಡಿ, ಸಾ: ಆರ್ಯ ನಗರ ಜಹೀರಾಬಾದ, ಜಿ: ಸಂಗಾರೆಡ್ಡಿ ರವರು ತನ್ನ ಗೆಳೆಯನಾದ ದುರ್ಗಾಸಾಯಿ ಇತನಿಗೆ ಭೇಟಿಯಾಗಿ ಮಾತಾಡಿಕೊಂಡು ಬರಲು ಮ್ಮೂರಿನಿಂದ ಬೀದರಗೆ ತನ್ನ ಮೊಟರ ಸೈಕಲ್ ನಂ. ಟಿ.ಎಸ್-15/ಇ.ಜಿ-1272 ನೇದರ ಮೇಲೆ ಜಿಹೀರಾಬಾದದಿಂದ ಮೀನಕೆರಾ ಕ್ರಾಸ್ ಮಾರ್ಗವಾಗಿ ಬೀದರಗೆ ಹೊಗುವಾಗ 2100 ಗಂಟೆಯ ಸುಮಾರಿಗೆ ನ್ನ ಮೊಟರ ಸೈಕಲ್ ಮೀನಕೆರಾ ಕ್ರಾಸ ಹತ್ತಿರದ ಸಂತೋಷ ರವರ ಹೊಟೆಲ್ ಹತ್ತಿರ ನಿಲ್ಲಿಸಿ ಹೊಟೇಲಗೆ ಹೊಗಿ ಊಟ ಮಾಡಿಕೊಂಡು 2115 ಗಂಟೆಗೆ ಹೊಟೇಲದಿಂದ ಹೊರಗೆ ಬರುವಷ್ಟರಲ್ಲಿ ಹೊಟೇಲ್ ಎದುರಿಗೆ ನಿಲ್ಲಿಸಿದ ಫಿರ್ಯಾದಿಯವರ ಯುನಿಕಾರ್ನ-160 ಮೊಟರ ಸೈಕಲ್ ನಂ. ಟಿ.ಎಸ್-15/ಇ.ಜಿ-1272, ಅ.ಕಿ 45.000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 107/2020, ಕಲಂ. 279, 338 ಐಪಿಸಿ :-

ದಿನಾಂಕ 01-12-2020 ಫಿರ್ಯಾದಿ ಮಹಮ್ಮದ ಪಿüರ್ದೋಶ ತಂದೆ ಚಾಂದಪಾಶಾ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನಾಎಖೇಳ್ಳಿ ರವರು ತನ್ನ ಗೆಳೆಯನಾದ ಮಹಮ್ಮದ ಲತೀಫ ತಂದೆ ಜಾಫರ ವಯ: 23 ವರ್ಷ, ಸಾ: ಮನ್ನಾಎಖೇಳ್ಳಿ ಇಬ್ಬರೂ ನೂರ ಫಂಕ್ಷಾನ ಹಾಲ ತ್ತಿ ಇರುವಾಗ ಮನ್ನಾಎಖೇಳಿ್ಳ ಬಸ್ ನಿಲ್ದಾಣದ ಕಡೆಯಿಂದ ಒಂದು ಟಿವಿಎಸ್ ಎಕ್ಸ್.ಎಲ್ ಮೋಟಾರ ಸೈಕಲ ನಂ. ಕೆಎ-38/ಆರ್-1718 ನೇದರ ಚಾಲಕನಾದ ಆರೋಪಿ ನಾಗಶೆಟ್ಟಿ ತಂದೆ ವೀರಶೆಟ್ಟಿ ಮಾಳಗೆ ವಯ: 75 ವರ್ಷ, ಜಾತಿ: ಲಿಂಗಾಯತ, ಸಾ: ರತ್ನಾಪುರ ಇತನು ತನ್ನ ಹಿಂದುಗಡೆ ಒಬ್ಬ ಹೆಣ್ಣು ಮಗಳನ್ನು ಕೂಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದಾಗ ಬಂದು ನ್ಯೂ ಲೈಫ್ ಕಾರ ಕೇರ್ ಗ್ಯಾರೇಜ ಹತ್ತಿರ ಜಂಪಿನಲ್ಲಿ ಹಿಂದೆ ಕುಳಿತ ಹೆಣ್ಣು ಗಳು ರೋಡಿನ ಮೇಲೆ ಬಿದ್ದಳು, ಆಗ ಫಿರ್ಯಾದಿ ಮತ್ತು ಮಹಮ್ಮದ ಲತಿಫ್ ಇಬ್ಬರೂ ಹೋಗಿ ಎಬ್ಬಿಸಿ ಅವಳ ಹೆಸರು ಮೋಟಾರ ಸೈಕಲ ಸವಾರನಿಗೆ ವಿಚಾರಿಸಲು ಅವಳು ಗೋದಾವರಿ ಗಂಡ ಸೂರ್ಯಕಾಂತ ಸೌಧೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ರತ್ನಾಪುರ, ತಾ: ಬೀದರ ಅಂತ ತಿಳಿಸಿದ್ದು, ಅವಳು ರೋಡಿನ ಮೇಲೆ ಬಿದ್ದ ಪರಿಣಾಮ ತಲೆಯ ಹಿಂದೆ ಭಾರಿ ರಕ್ತ ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ ಆಗಿರುತ್ತದೆ, ನಂತರ ಕೂಡಲೇ ಗಾಯಗೊಂಡ ಗೋದಾವರಿ ಇವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 42/2020, ಕಲಂ. 78(3) ಕರ್ನಾಟಕ ಪೊಲೀಸ್ ಕಾಯ್ದೆ :-

ದಿನಾಂಕ 01-12-2020 ರಂದು ಚಟ್ನಳ್ಳಿ ಗ್ರಾಮದ ಖಾಜಾನಗರದ ಸರಕಾರಿ ಶಾಲೆಯ ಹತ್ತಿರ ಖುಲ್ಲಾ ಜಾಗೆಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಡೆದು ಬಾಂಬೆ ಮಟಕಾ ಎಂಬ ನಸಿಬಿನ ಚೀಟಿ ನಡೆಸಿ 1/- ರೂಪಾಯಿಗೆ 100/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆಂದು ಕೃಷ್ಣಕುಮಾರ ಪಿ.ಎಸ್. ಮನ್ನಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಟ್ನಳ್ಳಿ ಗ್ರಾಮದ ಖಾಜಾನಗರದ ಸರಕಾರಿ ಶಾಲೆಯ ಹತ್ತಿರ ಖುಲ್ಲಾ ಜಾಗೆಯ ಹತ್ತಿರ ತಲುಪಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಮಹೇಮೂದ ತಂದೆ ಮುಸ್ತಫಾ ಬಡೆ ವಯ: 34 ವರ್ಷ, ಜಾತಿ: ಮುಸ್ಲಿಂ, ಸಾ: ಖಾಜಾನಗರ ಚಟನಳ್ಳಿ, ತಾ: ಬೀದರ ಇತನು 1/- ರೂಪಾಯಿಗೆ 100/- ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟಕಾ ಚಿಟಗಳನ್ನು ಬರೆದುಕೊಳ್ಳುತ್ತಿದ್ದ ಗ್ಗೆ ಖಚಿತ ಪಡಿಸಿಕೊಂಡು ಆತನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು ಅವನ ಬಳಿ ಇದ್ದ ಒಟ್ಟು ನಗದು ಹಣ 5140/- ರೂ., 2 ಮಟಕಾ ಚಿಟಿಗಳು ಹಾಗೂ ಒಂದು ಬಾಲಪೆನ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 167/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 01-12-2020 ರಂದು ಚಿಟಗುಪ್ಪಾ ಸರಹದ್ದಿನ ಕಠ್ಠಳ್ಳಿ ಶಿವಾರದ ಮರಗೆಮ್ಮ ದೇವಿ ದೇವಸ್ಥಾನದ ಹತ್ತಿರದ ಕೋಳಿ ಪಾರ್ಮ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಅಂದರ-ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಲಂಬಿ ಪಿ.ಎಸ್..(ಕಾ.ಸೂ) ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಠ್ಠಳ್ಳಿ ಶಿವಾರದ ಮರಗೆಮ್ಮ ದೇವಿ ದೇವಸ್ಥಾನದ ಹತ್ತಿರದ ಕೋಳಿ ಪಾರ್ಮ್ ಹತ್ತಿರ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಹೋಗಿ ಮರೆಯಾಗಿ ನೋಡಲು ಅಲ್ಲಿ ಆರೋಪಿತರಾದ ರಾಜಕುಮಾರ  ತಂದೆ ಲಕ್ಷ್ಮಣ ಭೂತಾಳೆ  ವಯ: 34 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಕಠ್ಠಳ್ಳಿ ಇತನು ಹಾಗೂ ಇನ್ನೂ 10 ಜನ ಇವರೆಲ್ಲರೂ ಗೊಲಾಗಿ ಕುಳಿತು ಜೂಜಾಟ ಆಡುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರಿಂದ 1) ಒಟ್ಟು ನಗದು ಹಣ 47,875/- ರೂ., 2) 10 ಮೊಬೈಲಗಳು,  3) 52 ಇಸ್ಪಿಟ ಎಲೆಗಳು ಹಾಗೂ 4) 2 ಮೋಟಾರ್ ಸೈಕಲಗಳು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡುಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.