Police Bhavan Kalaburagi

Police Bhavan Kalaburagi

Wednesday, August 5, 2020

BIDAR DISTRICT DAILY CRIME UPDATE 05-08-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 05-08-2020
ನೂತನ ನಗರ ಪೊಲೀಸ ಠಾಣೆ ಅಪರಾಧ ಸಂಖ್ಯೆ 90/2020 ಕಲಂ 379 ಐಪಿಸಿ :-

ದಿನಾಂಕ 04/08/2020  ರಂದು 2030  ಗಂಟೆಗೆ ಫಿರ್ಯಾದಿ  ಶ್ರೀ. ಮಾಣಿಕರಾವ ತಂದೆ ರಾಘವೇಂದ್ರ ಕುಲಕರ್ಣಿ ವಯ:23 ವರ್ಷ ಜಾತಿ:ಬ್ರಾಹ್ಮಣ ಉ:ವೈದ್ಯರು ಸಾ/ಸಂಗಮೇಶ್ವರ ಕಾಲೋನಿ ಗುಂಪಾ ಬೀದರ.  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೇನಂದರೆ,  ಫಿರ್ಯಾದಿಯು ಬೀದರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ   ಮಾಡಿಕೊಂಡು  ಉಪಜೀವಿಸಿಕೊಂಡಿದ್ದು ಇವರ ಹೀರೊ ಹೊಂಡಾ ಪ್ಯಾಶನ ಪ್ರೊ  ಮೋಟರ ಸೈಕಲ  ನಂ ಕೆಎ38ಕೆ4057  ನೇದನ್ನು   ದಿನಾಂಕ 25/07/2020 ರಂದು ಸಾಯಂಕಾಲ 7:15 ಪಿ.ಎಮ್. ಗಂಟೆಗೆ  ಮೊಟರ ಸೈಕಲನ್ನು ಆಸ್ಪತ್ರೆಯ ಮುಂದೆ ನಿಲ್ಲಿಸಿ   ಆಸ್ಪತ್ರೆಯಲ್ಲಿ ನನ್ನ ಕರ್ತವ್ಯದ ಸಲುವಾಗಿ ಹೋಗಿದ್ದು, 9:15 ಗಂಟೆಯ ಸಮಯಕ್ಕೆ ಮರಳಿ ಬಂದು ನೋಡಿದಾಗ   ಮೊಟರ ಸೈಕಲ ನಾನು ಇಟ್ಟಿದ್ದ ಜಾಗದಲ್ಲಿ ಇರಲಿಲ್ಲ. ಅಕ್ಕಪಕ್ಕದಲ್ಲಿ ನೋಡಿದರೂ ಎಲ್ಲಿಯೂ ಕಾಣಲಿಲ್ಲ. ಅಂದಾಜು ಕಿಮ್ಮತ್ತು ರೂ-  20,000/-ರೂ ಆಗಿರುತ್ತದೆ. ಸದರಿ ಮೋ.ಸೈಕಲ್ ದಿನಾಂಕ 25/07/2020 ರಂದು ಸಾಯಂಕಾಲ 7:15 ಪಿ.ಎಮ್. ಗಂಟೆಯಿಂದ 9:15 ಪಿ.ಎಮ. ಗಂಟೆಯ ಅವಧಿಯಲ್ಲಿ   ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 


ಮಾರ್ಕೇಟ ಪೊಲೀಸ ಠಾಣೆ  ಯು.ಡಿ.ಆರ್. ನಂ. 08/2020 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ:04-082020 ರಂದು 1400 ಗಂಟೆಗೆ ಫಿರ್ಯಾದಿ ಶ್ರೀ.ಚಂದ್ರಶೇಕರ  ತಂದೆ ಪೋಲೆಕರ್ ವಯ:48 ವರ್ಷ ಜಾತಿ: ಸಮಗಾರ ಸಾ:ಮಂಗಲಪೇಟ  ಇವರ ಮಗ ದಿಪಕ ತಂದೆ ಚಂದ್ರಶೇಕರ್ ಪೋಲೇಕರ್ ವಯ:16 ವರ್ಷ ಜಾ:ಎಸ್.ಸಿ (ಸಮಗಾರ) ಉ:ವಿಧ್ಯಾರ್ಥಿ ಇತನು ಎಂದಿನಂತೆ  ಸಾರ್ವಜನಿಕ ಸ್ಥಳದಲ್ಲಿಟ್ಟಿದ್ದ ನೀರನ್ನು  ಮೋಟಾರ ಸಹಾಯದಿಂದ ತುಂಬಿ ಸುಮಾರು 1420 ಗಂಟೆಗೆ ಕರಟೆಂಟ ಮೋಟಾರ ಪ್ಲಗ್ ಬಂದ್ ಮಾಡುತ್ತಿರುವಾಗ  ಆಕಸ್ಮಿಕವಾಗಿ ಕರೆಂಟ ತಗುಲಿ ಮೃತ ಪಟ್ಟಿರುತ್ತಾನೆ  ನನ್ನ ಮಗನ ಮರಣದಲ್ಲಿ ಯಾವುದೇ ರೀತಿಯ ಯಾವುದೇ ಸಂಶಯ ಇರುವದಿಲ್ಲಾ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 66/2020 ಕಲಂ 73(3) ಕೆಪಿ ಕಾಯ್ದೆ :-

ದಿನಾಂಕ 04-08-2020 ರಂದು 14:30 ಗಂಟೆಗೆ ಪಿಎಸ್ಐ ರವರು  ಮನ್ನಾಎಖೇಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ ತಾಳಮಡಗಿ ಗ್ರಾಮದ ಅಂಬೇಡ್ಕರ ಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದಿದರ ಮೇರೆಗೆ ತಾಳಮಡಗಿ ಗ್ರಾಮದ ಸರಕಾರಿ ಶಾಲೆಯ ಹತ್ತೀರ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ  ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಕಲ್ಯಾಣಿ ಮಟ್ಕಾ ಜೂಜಾಟ ಇದೆ 1 ರೂಪಾಯಿಗೆ 80 ರೂಪಾಯಿ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಮ್ಳತಿದಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ 16:45 ಗಂಟೆಗೆ ದಾಳಿ ಮಾಡಿ ಮಟಕಾ ಬರೆದು ಕೊಳ್ಮ್ಳತ್ತೀದ್ದವನನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗಣಪತಿ ತಂದೆ ಈಶ್ವರ ಹಡಪದ ವಯ: 46 ವರ್ಷ ಜಾತಿ: ಹಡಪದ ಉ: ಡ್ರೈವರ ಸಾ: ತಾಳಮಡಗಿ ಗ್ರಾಮ ಅಂತ ತಿಳಿಸಿದನು. ಈ ಬಗ್ಗೆ ವಿಚಾರಿಸಿದಾಗ ತಾನು ಜನರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತೇನೆ ಅಂತಾ ತಿಳಿಸಿರುತ್ತಾನೆ. ಸದರಿಯವನ ಹತ್ತಿರ ಇದ್ದ ಒಂದು ಬಾಲ ಪೆನ್ನು, 2 ಮಟಕಾ ಬರೆದ ಚೀಟಿಗಳು ಮತ್ತು ಆತನ ಅಂಗ ಜಡ್ತಿ ಮಾಡಿ ಆತನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 3740=00 ರೂಪಾಯಿಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ. ಅಪರಾಧ ಸಂಖ್ಯೆ 65/2020 ಕಲಂ 3 & 7 ಇ.ಸಿ. ಕಾಯ್ದೆ :- 

ದಿನಾಂಕ: 04/08/2020 ರಂದು 1830 ಗಂಟೆಗೆ ಫಿಯರ್ಾದಿ ಶ್ರೀ ರಾಜೇಂದ್ರಕುಮಾರ ಆಹಾರ ನಿರೀಕ್ಷಕರು ಬಸವಕಲ್ಯಾಣ ರವರು ಠಾಣೆಗೆ ಹಾಜರಾಗಿ ತಮ್ಮ ದೂರು ಅಜರ್ಿಯೊಂದಿಗೆ ಒಂದು ಇಚರ್ಸ್ ಗೂಡ್ಸ್ ವಾಹನ ಸಂ. ಎಮ್.ಎಚ್.-40/ ವೈ-7882 ನೆದ್ದು ಮತ್ತು ಅದರಲ್ಲಿ ಒಟ್ಟು 50 ಕೆ.ಜಿ. ತೂಕವುಳ್ಳ ಒಟ್ಟು 200 ಅಕ್ಕಿಯ ಚೀಲಗಳು ಮತ್ತು ಆಪಾದಿತ ಚಂದ್ರಕಾಂತ ತಂದೆ ಶ್ರೀಮಂತ ಬಿರಬಿಟ್ಟೆ ವಯಸ್ಸು: 48ವರ್ಷ ಸಾ: ವಿ.ಕೆ.ಸಲಗರ್ ತಾ: ಅಳಂದ ಜಿ: ಕಲಬುರಗಿ ಈತನನ್ನು ಮತ್ತು ಜಪ್ತಿ ಪಂಚನಾಮೆ ಹಾಗೂ ಶ್ಯಾಂಪಲ್ ಅಕ್ಕಿಯನ್ನು ಹಾಜರು ಪಡಿಸಿದ್ದು, ದೂರು ಮತ್ತು ಜಪ್ತಿ ಪಂಚನಾಮೆಯ  ಸಾರಂಶವೆನೆಂದರೆ,  ಉಜಳಂಬ ಗ್ರಾಮದಲ್ಲಿ ಶಿವಾಜಿ ಚೌಕ್ ಹತ್ತಿರ ಒಂದು ಇಚರ್ಸ್ ಗೂಡ್ಸ್ ವಾಹನ ಸಂ. ಎಮ್.ಎಚ್.-40/ ವೈ-7882 ನೇದ್ದರಲ್ಲಿ ಸರಕಾರದಿಂದ ವಿವಿಧ ಯೋಜನೆ ಅಡಿ ಸರಬರಾಜು ಆಗುವ ಅಕ್ಕಿ ಲೋಡ ಮಾಡಿಕೊಂಡು ಬಂದು ನಿಂತಿದ್ದು ಇರುತ್ತದೆ ಅಂತಾ ಇಂದು ಬೆಳಿಗ್ಗೆ 10-00 ಗಂಟೆಗೆ ಖಚಿತ ಮಾಹಿತಿ ಬಂದಿದ್ದು,  ಮಧ್ಯಾಹ್ನ 1200 ಗಂಟೆಗೆ ಉಜಳಂಬ ಗ್ರಾಮಕ್ಕೆ ಹೋಗಿ ಶಿವಾಜಿ ಚೌಕ್ ಹತ್ತಿರ ನೋಡಲಾಗಿ ರೋಡಿನ ಪಕ್ಕದಲ್ಲಿ ಮಾಹಿತಿಯಂತೆ ಒಂದು ಇಚರ್ ಗೂಡ್ಸ್ ವಾಹನ ನಿಂತಿದ್ದು, ನೋಡಲಾಗಿ ಅದರ ಸಂ. ಎಮ್ಹೆಚ್-40/ ವೈ-7882 ಇದ್ದು,  ಸದರಿ ಚಾಲಕನಿಗೆ ವಿಚಾರಿಸಿದಾಗ ಅಕ್ಕಿಯು ಶ್ರೀ ವಿಜಯ ಪವಾರ ಎಂಬುವವರಿಗೆ ಸಂಬಂಧ ಪಟ್ಟಿದ್ದು ಇರುತ್ತದೆ ಅಂತಾ ತಿಳಿಸಿದನು. ಮತ್ತು ಸದರಿ ಅಕ್ಕಿಯ ಬಗ್ಗೆ ಯಾವುದೇ ದಾಖಲಾತಿಗಳು ಹಾಜರು  50 ಕೆ.ಜಿ.ವುಳ್ಳ ಒಟ್ಟು 200 ಅಕ್ಕಿಯ ಚೀಲಗಳಿದ್ದು ಅವುಗಳ ಒಟ್ಟು ಅಂ.ಕಿ. 2,70,000/-ರೂ. ಇರುತ್ತವೆ. ಮತ್ತು ಸದರಿ ವಾಹನದ ಅಂ.ಕೀ 5,00,000/-ರೂ. ಇರುತ್ತದೆ. ಸದರಿ ಅಕ್ಕಿಯ ಚೀಲಗಳನ್ನು ಮರಳಿ ಅದೇ ವಾಹನದಲ್ಲಿ ಹಾಕಿ, ವಾಹನ ಸಮೇತ 200 ಅಕ್ಕಿಯ ಚೀಲಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ  32, 34 ಕೆ.. ಕಾಯ್ದೆ  :-

ದಿನಾಂಕ 04-08-2020 ರಂದು 1700 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ ಯರಂಡಗಿ ಗ್ರಾಮದ ವಾಲ್ಮಿಕಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೆ ಅಧೀಕೃತವಾಗಿ ಒಂದು ಚೀಲದಲ್ಲಿ ಸರಾಯಿ ಇಟ್ಟಿಕೊಂಡು ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಯರಂಡಗಿ ಗ್ರಾಮದ ವಾಲ್ಮಿಕಿ ಚೌಕಕ್ಕಿಂದ ಸ್ವಪ್ಪ ದೂರದಲ್ಲಿ ನಾವೆಲ್ಲರೂ ಜೀಪಿನಿಂದ ನಿಂತು ಮರೆಯಾಗಿ ನೋಡಲು ಒಬ್ಬ  ವ್ಯಕ್ತಿ ಒಂದು ಬಿಳಿ ಚೀಲದಲ್ಲಿ ಸರಾಯಿ ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಸರಾಯಿ ಮಾರಾಟ ಮಾಡುವವನ ಮೇಲೆ  ದಾಳಿ ಮಾಡಿದಾಗ ಸರಾಯಿ ಖರೀದಿ ಮಾಡುವವರು ಓಡಿ ಹೋಗಿದದು ಸರಾಯಿ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಚಾರಿಸಲು ಶಿವಾಜಿ ತಂದೆ ನಾಮದೇವರಾವ ಮೂಳೆ ವಯ 48 ವರ್ಷ ಜಾತಿ ಮರಾಠಾ ಉದ್ಯೋಗ ಕೂಲಿ ಕೆಲಸ ಸಾ : ಯರಂಡಗಿ ಗ್ರಾಮ ಅಂತಾ ತಿಳಿಸಿದನು. ಇವರ ವಶದಿಂದ 1] ಓರಿಜಿನಲ್ ಚಾಯಸ ಡಿಲಕ್ಸ ವಿಷ್ಕಿ ಸರಾಯಿ 90 ಎಂಎಲ್ನ 36 ಟೆಟ್ರಾ ಪ್ಯಾಕೇಟಗಳು ಒಂದರ ಬೆಲೆ 35 ರೂಪಾಯಿ 36 ಟೆಟ್ರಾಪ್ಯಾಕ ಸರಾಯಿನ ಬೆಲೆ 1260/- ರೂ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.