ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-08-2020
ಹೊಕ್ರಾಣಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 06/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಾರುತಿ ತಂದೆ ಗೋವಿಂದ ಅಂಭರೆ ವಯ: 53 ವರ್ಷ, ಜಾತಿ: ಕೋಳಿ, ಸಾ: ಖೇರ್ಡಾ [ಬಿ] ರವರ ಮಗನಾದ ಗಜಾನಂದ ತಂದೆ ಮಾರುತಿ ಅಂಬರೆ ವಯ: 22 ವರ್ಷ ಇತನು ವಾಹನದ ಬಾಡಿಗೆ ಕುರಿತು ಹೈದ್ರಾಬಾದಗೆ ಹೋಗಿ ಮರಳಿ ತಮ್ಮೂರಿಗೆ ಬರುವ ಕುರಿತು ಕಮಲನಗರ ಮುರ್ಕಿ ಮಾರ್ಗವಾಗಿ ಖೇರ್ಡಾ [ಬಿ] ಗ್ರಾಮಕ್ಕೆ ಬರುತ್ತಿರುವಾಗ ಹಂದಿಕೇರಾ ಗ್ರಾಮದ ಹತ್ತಿರ ದಿನಾಂಕ 09-08-2020 ರಂದು 0530 ಗಂಟೆಯಿಂದ 0630 ಗಂಟೆಯ ಮಧ್ಯದ ಅವಧಿಯಲ್ಲಿ ಗಜಾನಂದ ಇತನು ಸರಾಯಿ ಕುಡಿದ ನಶೆಯಲ್ಲಿ ಯಾವುದೋ ಕ್ರಿಮಿನಾಶಕ ಔಷಧಿ ಸೇವನೆ ಮಾಡಿಕೊಂಡು ಮೃತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 10/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 09-08-2020 ರಂದು ಫಿರ್ಯಾದಿ ಸವೀತಾ ಗಂಡ ಶ್ರೀನಾಥ ಜಾಧವ ವಯ: 35 ವರ್ಷ, ಜಾತಿ: ಕೈಕಾಡಿ, ಸಾ: ಕಿರಣಗಿ ಗ್ರಾಮ, ತಾ: ಜಿ: ಕಲಬುರ್ಗಿ, ಸದ್ಯ: ಮಂಠಾಳ ಗ್ರಾಮ ರವರ ಮಗನಾದ ಪ್ರಜ್ವಲ ತಂದೆ ಶ್ರಿನಾಥ ಜಾಧವ ವಯ: 11 ವರ್ಷ ಇತನು ಆಕಾಶ, ದಿನೇಶ, ಚರಣ ಇವರೊಂದಿಗೆ ಮಂಠಾಳ ಗ್ರಾಮದ ಪಿ.ಕೆ.ಪಿ.ಎಸ್ ಸೋಸೈಟಿಯ ಮೇಲ್ಚಾವಣಿ (ನೆಂಟಲ) ಕೆಳಗೆ ಆಟ ಆಡುತ್ತಿರುವಾಗ ಮಳೆ ಬಂದಿದ್ದರಿಂದ ಮೇಲ್ಚಾವಣಿ ನೆನೆದು ಹೋಗಿದ್ದು ಆಕಸ್ಮಿಕವಾಗಿ ಮೇಲ್ಚಾವಣಿ ಆಡ ಆಡುತ್ತಿದ್ದ ಪ್ರಜ್ವಲ ಮತ್ತು ಆಕಾಶ, ದಿನೇಶ, ಚರಣ ಇವರುಗಳ ಮೇಲೆ ಬಿದ್ದು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಪ್ರಜ್ವಲ ಇತನು ಮೃತಪಟ್ಟಿರುತ್ತಾನೆ, ಇನ್ನೂ ಮೂರು ಮಕ್ಕಳಿಗೆ ಭಾರಿ ಗಾಯಗಳಾಗಿರುತ್ತವೆ, ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ಸಂ. 10/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶಾಂತಬಾಯಿ ಗಂಡ ಶಂಕರ ಝರೆಪೇಟವಾಡ ಸಾ: ಬೆನ್ನಾಳ, ತಾ: ಮುಖೇಡ, ಜಿ: ನಾಂದೇಡ ಮಹಾರಾಷ್ಟ್ರ ರವರ ಗಂಡನಾದ ಶಂಕರ ತಂದೆ ನಾಗಪ್ಪಾ ಝರೆಪೇಟವಾಡ ವಯ: 70 ವರ್ಷ, ಸಾ: ಡೋಣಗಾಪುರ, ತಾ: ಭಾಲ್ಕಿ, ಸದ್ಯ ಔರಾದ(ಬಿ) ಇತನು ಸರಾಯಿ ಕುಡಿಯುವ ಚಟವುಳ್ಳವನಾಗಿದ್ದು ಹಾಗೂ ಆತನಿಗೆ ಫಿಟ್ಸ್ ರೋಗ ಇರುತ್ತದೆ, ಹೀಗಿರುವಾಗ ದಿನಾಂಕ 08-08-2020 ರಂದು ಔರಾದ ಪಟ್ಟಣದ ಕುಮಾರ ಪ್ಯಾಲೇಸ ಎದರುಗಡೆ ಗಂಡ ಶಂಕರ ಇತನು ಫಿಟ್ಸ್ ಬಂದು ಬಿದ್ದಾಗ ನೋಡಿ ಆತನಿಗೆ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಶಂಕರ ರೋಗದಿಂದ ಗುಣಮುಖನಾಗದೆ ಚಿಕಿತ್ಸೆ ಕಾಲಕ್ಕೆ ದಿನಾಂಕ 09-08-2020 ರಂದು ಮೃತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ದೂರು ಸಂಶಯವಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.