ದಿನಂಪ್ರತಿ ಅಪರಾಧಗಳ ಮಾಹಿತಿ
ದಿನಾಂಕ: 11-07-2020
ನೂತನ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆ 79/2020 ಕಲಂ 379 ಐಪಿಸಿ :-
ದಿನಾಂಕ 10/07/2020 ರಂದು 1145 ಗಂಟೆಗೆ ಫಿರ್ಯಾದಿ ಶ್ರೀ. ದತ್ತಾತ್ರೆಯ ತಂದೆ ಮಾರುತಿರಾವ ವಯ:30 ವರ್ಷ ಜಾತಿ:ಮರಾಠ ಉ:ಫೀಲ್ಡ ಎಕ್ಸಿಕೇಟಿವ ಸಾ/ಚಿಟಗುಪ್ಪ ಸಧ್ಯ ಸಾಯಿಬಾಬಾ ಮಂದಿರದ
ಹತ್ತೀರ ಆದರ್ಶ ಕಾಲೋನಿ ಬೀದರ. ರವರು ಠಾಣೆಗೆ
ಹಾಜರಾಗಿ ತನ್ನದೊಂದು ಕನ್ನಡದಲ್ಲಿ ಲಿಖಿತ
ದೂರನ್ನು ನೀಡಿದರ ಸಾರಾಂಶವೇನಂದರೇ, ಇವರ ಹೊಂಡಾ ಶೈನ ಮೋಟರ ಸೈಕಲ
ನಂ. ಕೆ.ಎ.39ಆರ್3157 ದಿನಾಂಕ 27/06/2020 ರಂದು ಮದ್ಯಾಹ್ನ 1230 ಗಂಟೆಗೆ ಬೀದರ ನೆಹರು ಕ್ರಿಡಾಂಗಣ ಹತ್ತೀರ ಇರುವ ಶ್ರೀರಾಮ
ಟ್ರಾನ್ಸಪೋರ್ಟ ಫೈನಾನ್ಸ್ ಕಂಪನಿ ಲಿಮಿಟೆಡ ಕಛೇರಿಯ ಮುಂದೆ ನಿಲ್ಲಿಸಿ ಕಛೇರಿಯಲ್ಲಿ ಹೋಗಿ 1300 ಗಂಟೆಗೆ ಕಛೇರಿಯಿಂದ ಹೊರಗೆ ಬಂದು ನೋಡಿದಾಗ ತನ್ನ ಮೊಟರ ಸೈಕಲ ಇರಲಿಲ್ಲ ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ
ಹುಡುಕಾಡಿ ಠಾಣೆಗೆ ಬಂದು ದೂರು ನೀಡಲು
ತಡವಾಗಿರುತ್ತದೆ. ಮೋ.ಸೈಕಲ್ನ ಅಂ.ಕಿ. ರೂ-
35,000/-ರೂ ಆಗಿರುತ್ತದೆ.
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 151/2020 ಕಲಂ 457,
380 ಐಪಿಸಿ :-
ದಿನಾಂಕ 10/07/2020 ರಂದು 13:00 ಗಂಟೆಗೆ ದೂರುದಾರ ಶೇಕ್ ಮಧಾರ ತಂದೆ ಶೇಕ್ ಮೌಲಾನಸಾಬ ಸಾ:ಮಾಸುಮ ಪಾಶಾ ಕಾಲೋನಿ ಭಾಲ್ಕಿ
ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯು ಹಣ್ಣಿನ ವ್ಯಾಪಾರ
ಮಾಡಿಕೊಂಡು ಉಪಜಿವಿಸುತ್ತಿದ್ದು ಭಾಲ್ಕಿ ಗಾಂಧಿ ಚೌಕ ಬದಿಯಲ್ಲಿ ಇರುವ ಗಣೇಶ ಮಂದಿರದ ಹತ್ತಿರ
ತನ್ನ ಹಣ್ಣೀನ ಅಂಗಡಿ ಇರುತ್ತದೆ. ದಿನಾಲು
ಮುಂಜಾನೆ 7 ಗಂಟೆಗೆ ಅಂಗಡಿ ತೆರೆದು ರಾತ್ರಿ 8 ಗಂಟೆಗೆ ಮುಚ್ಚಿ ಹೋಗುತ್ತಿದ್ದು ಅದರಂತೆ
ದಿನಾಂಕ 09/07/2020 ರಂದು ಕೂಡಾ ಮುಂಜಾನೆ 7 ಗಂಟೆಗೆ ಅಂಗಡಿ ತೆರೆದು ಹಗಲೇಲ್ಲಾ ವ್ಯಾಪಾರ ಮಾಡಿದ್ದು ಸಧ್ಯ ಕರೋನಾ-ವೈರಸ
ಹರಡಿರುವದರಿಂದ ರಾತ್ರಿ 7 ಗಂಟೆಗೆ
ಅಂಗಡಿ ಬಂದ ಮಾಡಿ ಅವಸರದಲ್ಲಿ 3100 ರೂ ನಗದು ಹಣ ಅದರಲ್ಲಿ 1000 ಚಿಲ್ಲರೆ ಮತ್ತು 2100 ರೂಪಾಯಿಯ ನೋಟುಗಳು ಅಂಗಡಿಯಲ್ಲೆ ಇಟ್ಟು ಹೋಗಿದ್ದು ಹಿಗೀರಲು
ಮುಂಜಾನೆ ಯಥಾ ಪ್ರಕಾರ ಮುಂಜಾನೆ 7 ಗಂಟೆಗೆ ನಾನು ಅಂಗಡಿಗೆ ಬಂದಾಗ
ಅಂಗಡಿಯ ಮುಂದೆ ಹಾಕಿದ ಕಬ್ಬೀಣದ ಜಾಲಿ ಸರಿದಿದ್ದು ಅಲ್ಲದೆ ಅಂಗಡಿಯ ಶೇಟರ ಎತ್ತಿದ್ದು
ಇರುವದರಿಂದ ಅಂಗಡಿಯಲ್ಲಿ ಪರಿಶೀಲಿಸಿ ನೋಡಲು ಅಂಗಡಿಯಲ್ಲಿ ಇಟ್ಟಿದ ನಗದು ಹಣ 3100 ರೂಪಾಯಿ ಇರಲಿಲ್ಲದ ಕಾರಣ ಅಂಗಡಿಯಲ್ಲಿ ಕೂಡಿಸಿದ ಸಿಸಿ ಕ್ಯಾಮೇರಾ ಪರಿಶೀಲಸಿ ನೋಡಲು
ಅದರಲ್ಲಿ ಇಬ್ಬರು ಸಣ್ಣ ಮಕ್ಕಳ ದ್ರಶಾವಳಿಗಳು ಸೆರೆಯಾಗಿರುವದರಿಂದ ಅವುಗಳನ್ನು ಪರಿಶೀಲಿಸಿ
ನೋಡಲು ಮಲ್ಲಿಕಾಜರ್ುನ ತಂದೆ ಸಂತೊಷ ಬುಳ್ಳಾ ಮತ್ತು ಮಹೇಶ ತಂದೆ ಸಂತೋಷ ಬುಳ್ಳಾ ಸಾ: ಇಬ್ಬರು
ಪಾಪವ್ವಾ ನಗರದ ಮಕ್ಕಳ ಫೋಟೋಗಳು ಇರುತ್ತವೆ.
ದಿನಾಂಕ 09/07/2020 ರಂದು ರಾತ್ರಿ 7 ಗಂಟೆಗೆ ನಾವು ಅಂಗಡಿ ಬಂದ ಮಾಡಿ ಹೋಗಿರುವದನ್ನು ನೋಡಿ ರಾತ್ರಿ ಸಮಯದಲ್ಲಿ ಇಬ್ಬರು
ನಮ್ಮ ಅಂಗಡಿಗೆ ಬಂದು ಅಂಗಡಿಯ ಜಾಲಿ ಸರಿಸಿ ಒಳಗೆ ಹೋಗಿ ಸೇಟರ ಕೀಲಿ ಮುರಿದು ಸೇಟರ ಎತ್ತಿ ಅಂಗಡಿಯಲ್ಲಿ
ಪ್ರವೇಶ ಮಾಡಿ ಅಂಗಡಿಯಲ್ಲಿ ಇಟ್ಟಿದ ನಗದು ಹಣ 3100 ರೂಪಾಯಿ ಕಳವು ಮಾಡಿಕೊಂಡು
ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 106/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ 10-07-2020 ರಂದು ಪಿ.ಎಸ್.ಐ ರವರು ಸಿಬ್ಬಂದಿಯೊಂದಿಗೆ
ಪೇಟ್ರೊಲಿಂಗ ಕರ್ತವ್ಯ ನಿರ್ವಹಿಸುತ್ತಾ ನೇಳಗಿ ಗ್ರಾಮದ ಹನುಮಾನ ಮಂದಿರದ
ಹತ್ತಿರ ಹೊದಾಗ ಅಲ್ಲಿ ಪಿ.ಎಸ.ಐ ರವರಿಗೆ ಒಬ್ಬ ವ್ಯಕ್ತಿಯು ಹಲಬರ್ಗಾ ಕಡೆಯಿಂದ ನೇಳಗಿ ಕಡೆಗೆ
ಆಕ್ರಮವಾಗಿ ಸರಾಯಿ ಬಾಟಲಗಳು ತೆಗೆದುಕೊಂಡು ಬರುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ನೇಳಗಿ ಗ್ರಾಮದ ಹಲಬರ್ಗಾ ಜ್ಯಾಂತಿ ರೋಡಿಗೆ ಬಸವೇಶ್ವರ
ವೃತ್ತದ ಹತ್ತಿರ ಹೊಗಿ ಅಲ್ಲಿ ಎಲ್ಲರು ಮರೆಯಾಗಿ ನಿಂತು ನೊಡಿ 1630 ಗಂಟೆಯ ಸುಮಾರಿಗೆ ಹಲಬರ್ಗಾ ಕಡೆಯಿಂದ ಒಬ್ಬ ವ್ಯಕ್ತಿ ತಲೆಯ ಮೇಲೆ
ಕಾಟನ ಇಟ್ಟುಕೊಂಡು ಬರುತ್ತಿದ್ದಾಗ ಆತನ ಮೇಲೆ ದಾಳಿ ಮಾಡಿ ಆತನಿಗೆ ಹಿಡಿದು ಆತನ ಹೆಸರು ವಿಳಾಸವನ್ನು ವಿಚಾರಣೆ ಮಾಡಲು ಆತನು
ತನ್ನ ಹೆಸರು ರಾಘವೇಂದ್ರ ತಂದೆ ಜಗನಾಥ ವಯ 27 ವರ್ಷ ಜಾತಿ ಲಿಂಗಾಯತ ಉದ್ಯೋಗ ಖಾಸಗಿ ಕೆಲಸ ಸಾ// ನೇಳಗಿ ಅಂತ ತಿಳಿಸಿದ್ದು ಕಾಟನವನ್ನು ತೆಗೆದು ಪರಿಶೀಲಿಸಿ
ನೊಡಲು ಕಾಟನದಲ್ಲಿ ಯು.ಎಸ. ವಿಸ್ಕಿ 90 ಎಮ.ಎಲ ದ 96 ಸರಾಯಿ ಬಾಟಲಗಳು
ಇದ್ದು ಒಂದರ ಕಿಮತ್ತು 35/- ರೂಪಾಯಿ 13 ಪೈಸೆ ಇದ್ದು ಹಿಗೆ
ಒಟ್ಟು 96 ಸರಾಯಿ ಬಾಟಲಗಳು 3372/- ರೂಪಾಯಿ 48 ಪೈಸೆ ಕಿಮತ್ತಿನದ್ದು ಜಪ್ತಿಮಾಡಿಕೊಂಡು ಪ್ರಕರಣ
ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.