Police Bhavan Kalaburagi

Police Bhavan Kalaburagi

Tuesday, April 17, 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-04-2018 ರಂದು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿಮರೆಯಾಗಿ ನಿಂತು ನೊಡಲು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ  ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಶರಣು @ ಶರಣಬಸಪ್ಪ ತಂದೆ ನೀಲಕಂಠ ಮೋಸಲಗಿ 2) ಸುರೇಶ ತಂದೆ ಆನಂದಪ್ಪ ತೋಳನೂರ 3) ಮಹೇಶ ತಂದೆ ಸಂಗಪ್ಪ ಕುಂಬಾರ 4) ಅನೀಲ ತಂದೆ ಕಾಶೀನಾಥ ಜೀಪೂರ ಸಾ|| ಎಲ್ಲರು  ಮಣೂರ ಗ್ರಾಮ  ಅಂತ ತಿಳಿಸಿದ್ದು  ಸದರಿಯವರಿಂದ  ಒಟ್ಟು 12390/- ರೂ ನಗದು ಹಣವನ್ನು ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ
ಅಫಜಲಪೂರ ಠಾಣೆ : ದಿನಾಂಕ 16/04/2018 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿಮರೆಯಾಗಿ ನಿಂತು ನೊಡಲು  ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದುಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟುಮಟಕಾ ಬರೆದುಕೊಳ್ಳುತ್ತಿದ್ದುದನ್ನು  ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಪುಲೇಪ್ಪ @ ಶಿವಾನಂದ ತಂದೆ ದೇವರಾಯ ಕೋರಳ್ಳಿ ಸಾ|| ಮಣೂರ ಗ್ರಾಮ ತಾ||ಅಫಜಲಪೂರ ಅಂತಾ ತಿಳಿಸಿದ್ದುಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1610/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಮೊಸಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ಇವರು ವರ್ಷಗಳ ಹಿಂದೆ ಜೇವರ್ಗಿ ಸರಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದೆನು,  ಆ ಸಮಯದಲ್ಲಿ ಆಲುರ ಗ್ರಾಮದ ಹಮೀದ ತಂದೆ ಬಂದೇನವಾಜ ಹರನೂರ ಎಂಬುವನು ನನಗೆ ಪರಿಚಯಮಾಡಿಕೊಂಡನುಅವನು ಸಹ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನುನಂತರ ನಾವಿಬ್ಬರು ಪರಸ್ಪರ ಪ್ರಿತಿಸುತ್ತಿದ್ದೇವುಹಮೀದ ಇವನು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅನ್ನುತ್ತಾ ಬಂದಿದ್ದನು, ದಿನಾಂಕ 09-07-2015 ರಂದು ನಾನು ಮನೆಯಲ್ಲಿದ್ದಾಗ ಹಮೀದ ಇವನು ನಮ್ಮ ಮನೆಗೆ ಬಂದಿದ್ದನುಆಗ ನಮ್ಮ ಮನೆಯಲ್ಲಿ ಯಾರು ಇರಲಿಲ್ಲಾನಂತರ ಹಮೀ ಇವನು ನನಗೆ ಪುಸಲಾಯಿಸಿ ಮುಂದೆ ನಾವು ಹೇಗಾದರು ಮದುವೆಯಾಗುವುದು ಖಚಿತ ಇದೆ ಅಂತಾ ಮನ ಒಲಿಸಿ ಸಂಭೋಗಕ್ಕೆ ಒತ್ತಾಯಿಸಿದನುಆಗ ನಾನು ಮದುವೆಯಾದ ನಂತರ ಸೇರೋಣಾ ಅಂತಾ ಹೇಳಿದರು ಕೇಳದೆ ಬಲವಂತವಾಗಿ ನಮ್ಮ ಮನೆಯಲ್ಲಿ ನನಗೆ ಸಂಭೋಗ ಮಾಡಿರುತ್ತಾನೆಈ ವಿಷಯ ಯಾರಿಗು ಹೇಳಬೇಡಾ ಅಂತಾ ಹೇಳಿ ಹೋದನುನಂತರ ಆಗಾಗ ನಮ್ಮ ಮನೆಯಲ್ಲಿ ಯಾರು ಇರಲಾರದನ್ನು ಗಮನಿಸಿ ಹಮೀದ ಇವನು ನಮ್ಮ ಮನೆಗೆ ಬಂದು ನನ್ನೊಂದಿಗೆ ಸುಮಾರು ಸಲ ಬಲವಂತವಾಗಿ ಸಂಭೋಗ ಮಾಡಿರುತ್ತಾನೆನಾವಿಬ್ಬರು ಪ್ರಿತಿಸುವ ವಿಷ ನಮ್ಮ ಮನೆಯಲ್ಲಿ ಗೊತ್ತಾಗಿ ನಂತರ ನಮ್ಮ ಮನೆಯವರು ಸೇರಿಕೊಂಡು ಆಲೂರ ಗ್ರಾಮದ ಹಮೀದ ರವರ ಮನೆಗೆ ಹೋಗಿ ವಿಷಯ ಹೇಳಿದರುಹಮೀದ ಇವನು ಬೆಂಗಳೂರು ಸಿ..ಆರ್ ಪೋಲಿಸ ನೇಮಕಾತಿಯಾಗಿದ್ದನುನಮ್ಮ ಮನೆಯವರುಹಮೀದನಿಗೆ ಹಾಗು ಅವರ ಮನೆಯವರಿಗೆ  ಪೊಲೀಸ ಟ್ರೇನಿಂಗ ಹೊಗುವ ಮುಂಚೆನೆ ಮದುವೆ ಮಾಡಿಬಿಡೋಣಾ ಅಂತಾ ಹೇಳಿದಾಗ ಹಮೀದ ರವರ ಮನೆಯವರು ಪೊಲೀಸ ಟ್ರೇನಿಂಗ ಮುಗಿದ ನಂತರ ಮದುವೆ ಮಾಡೋಣಾ ಸದ್ಯ ನಿಶ್ಚಿತಾರ್ಥ ಮಾಡೋಣಾ ಅಂತಾ ಹೇಳಿದರು. ದಿನಾಂಕ 26-10-2016 ರಂದು ನಮ್ಮೂರ ಇಸ್ಲಾಂ ಕಮೀಟಿ ಅಧ್ಯಕ್ಷರಾದ ಇಬ್ರಾಹಿಮಸಾಬ ಉಸ್ತಾದರಜಾಕ ಮನಿಯಾರಅಲ್ಲಾಪಟೇಲ ಚಿಂಚೋಳಿಇಸ್ಮಾಯಿಲ್ ನಾಯ್ಕೋಡಿಮಹಿಬೂಬಪಟೇಲ ಚಿಂಚೋಳಿಶಿವಲಿಂಗ ಸುಂಕದಚಂದ್ರಶೇಖರ ಪುರಾಣಿಕಮಲ್ಲಿಕಾರ್ಜುನ ಹಲಕಟ್ಟಿಕೆವಿರೇಶಗೌಡ ಹಾಗು ನಮ್ಮ ಮತ್ತು ಹಮೀದ ರವರ ಸಂಬಂಧಿಕರ ಸಮಕ್ಷಮದಲ್ಲಿ ನಮ್ಮ ಮನೆಯಲ್ಲಿ ನಿಶ್ಚಿತಾರ್ಥ (ರಸಂಮಾಡಿರುತ್ತಾರೆನಂತರ ಹಮೀದ ಇವನು ನನ್ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದನುಈಗ 5-6 ತಿಂಗಳಿಂದ ಹಮೀದ ಇವನು ನನಗೆ ಸರಿಯಾಗಿ ಮಾತನಾಡದೆ ನೀನು ಸರಿಯಾಗಿಲ್ಲಾನಿನ್ನ ಕ್ಯಾರಕ್ಟರ್ ಸರಿ ಇಲ್ಲಾ ಅಂತಾ ಅನ್ನುತ್ತಾ ನನ್ನಿಂದ ದೂರ ಇರಲು ಪ್ರಾರಂಭೀಸಿದನುನಂತರ ಈ ವಿಷಯ ನಮ್ಮ ಮನೆಯವರಿಗೆ ಹೇಳಿದಾಗ ನಮ್ಮ ತಂದೆ ಇಮಾಮಖಾಸಿಂತಾಯಿ ಮಮತಾಜ ಹಾಗು ಮೇಲ್ಕಂಡ ಜಮಾತ ಮಂದಿ ಕೂಡಿಕೊಂಡು ಆಲೂರ ಗ್ರಾಮಕ್ಕೆ 3-4 ಸಲ ಹೋಗಿ ಹಮೀದನ ತಂದೆ ತಾಯಿಗೆ ತೆಳವಳಿಕೆ ಹೇಳಿ ಮದುವೆ ಮಾಡೋಣಾ ಅಂತಾ ಹೇಳಿದರು ಅವರು ಒಪ್ಪದೆ ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿ ನಾವು ನಮ್ಮ ಮನಗ ಮದುವೆ ನಿಮ್ಮ ಮಗಳೊಂದಿಗೆ ಮಾಡುವುದಿಲ್ಲಾ ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದರುಆಗ ನಮ್ಮ ತಂದೆಯವರು ಈ ಬಗ್ಗೆ ಪೊಲೀಸ ಕಂಪ್ಲೆಂಟ ಕೊಡುತ್ತೇವೆ ಅಂತಾ ಅಂದಾಗ ಪೊಲೀಸ ಕಂಪ್ಲೆಂಟ ಕೊಟ್ಟರೆ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಜೀವ ಭಯ ಹಾಕಿರುತ್ತಾರೆಕಾರಣ ಹಮೀದ ತಂದೆ ಬಂದೇನವಾಜ ಹರನೂರ ಸಾ|| ಆಲೂರ ಈತನು ನನ್ನೊಂದಿಗೆ ಪ್ರಿತಿಸಿದಂತೆ ವರ್ತಿಸಿ ಮದುವೆಯಾಗುತ್ತೇನೆ ಅಂತಾ ನಂಬಿಸಿ ನನ್ನನ್ನು ಪುಸಲಾಯಿಸಿ ಸುಮಾರು ಸಲ ಬಲಾತಕಾರದಿಂದ ನಮ್ಮ ಮನೆಯಲ್ಲಿ ಸಂಭೋಗ ಮಾಡಿ ನನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ಯ ನನಗೆ ಮದುವೆ ಯಾಗದೆ ಮೋಸ ಮಾಡಿರುತ್ತಾರೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಆರೀಫಖಾನ ತಂದೆ ನಿಜಾಮಖಾನ ಸಾ|| ಪ್ಲಾಟ ನಂ; 48 ವಿಶ್ವರಾದ್ಯ ಕಾಲೋನಿ ಆಳಂದ ರೋಡ ಕಲಬುರಗಿ ಇವರು ಮ್ಮ ಬಡಾವಣೆಯಲ್ಲಿ ವಾಸವಾಗಿರುವ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರು ವಿನಾಕಾರಣ ನನ್ನ ಸಂಗಡ ವೈರತ್ವ ಬೇಳೆಯಿಸಿಕೊಂಡು ಬಂದಿದ್ದು ಇರುತ್ತದೆ. ನಾನು ಅವರ ಸಂಗಡ ತಿರುಗಾಡಲು ಹೋಗದಕ್ಕೆ ಸದರಿಯವರು ನನ್ನ ಮೇಲೆ ಹಗೆತನ ಬೇಳೆಯಿಸಿಕೊಂಡು ಬಂದಿದ್ದು ದಿನಾಂಕ 12/04/2018 ರಂದು ರಾತ್ರಿ 10.15 ಪಿ.ಎಂ ಸುಮಾರಿಗೆ ನಾನು ನಮ್ಮ ಮನೆಯಿಂದ ಅವಟೆ ಹಾಸ್ಪೆಟಲ್ ಕಡೆಗೆ ಹೊಗುವ ಕುರಿತು ಎಸ್ ಬಿ ಟ್ರೇಡರ್ಸ ಅಂಗಡಿಯ ಮುಂದಿನ ರಸ್ತಯ ಮೇಲೆ ನಡೆದುಕೊಂಡು ಹೊಗುತ್ತಿದ್ದು ಅದೆ ವೇಳೆಗೆ ನನ್ನ ಎದುರಗಡೆ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರೆಲ್ಲರೂ ಕೋಡಿಕೊಂಡು ಬಂದವರೆ ನನ್ನನ್ನು ತಡೆದು ಅವರಲ್ಲಿ ಹೈದರ ತಂದೆ ಜಿಲಾನಿ ಇತನು ರಂಡಿ ಮಗನೆ ನನ್ನ ಎದರು ಗಾಡಿಮೇಲೆ ದಿಮಾಕ ಮಾಡಿಕೊಂಡು ಹೊಗುತ್ತಿಯಾ ನಿನ್ನ ತಿಂಡಿ ಬಹಳ ಇದೆ ಬೋಸಡಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ಯಾಕೆ ನನಗೆ ಬೈಯುತ್ತಿ ಅಂತ ಕೇಳಿದಾಗ ಸದರಿಯವನು ತನ್ನ ಕೈಯಿಂದ ನನ್ನ ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು,  ಆರೀಫ್ ತಂದೆ ಸಲಿಂ ಇತನು ನಮಗೆ ಎದರು ಮಾತನಾಡುತ್ತಿಯಾ ಬೋಸಡಿಕ್ಯಾ ಅಂತಾ ಬೈದು ಅಲ್ಲೆ ಬಿದ್ದಿದ್ದ ಡ್ರ್ಯಾನೆಜ್ ಪೈಪು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡದು ರಕ್ತಗಾಯ ಪಡಿಸಿದ್ದು. ಮುಭೀನ್ ತಂದೆ ಖಯುಂ ಕೈಮುಷ್ಟಿಮಾಡಿ ನನ್ನ ತಲೆಯ ಹಿಂಬಾಗ, ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ಫಯಾಜ ಇತನು ಕೈಯಿಂದ ನನ್ನ ಹೊಟ್ಟೆಗೆ ಹೊಡೆದನು. ಪ್ರಶಾಂತ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.