ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-07-2012
ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 120/12 ಕಲಂ 498(ಎ), 494, 323, 504, 506 ಜೊತೆ 149 ಐಪಿಸಿ ಮತ್ತು 3 ಮತ್ತು 4 ಡಿ.ಪಿ ಎಕ್ಟ 1961 :-
ದಿನಾಂಕ 27-07-2012 ರಂದು 2000 ಗಂಟೆಗೆ ಫಿರ್ಯಾದಿ ಶ್ರೀಮತಿ ಶಕುಂತಲಾ ಗಂಡ ಮಹೇಶ ಕಾಡವಾದೆ 30 ವರ್ಷ ,ಜಾ|| ಲಿಂಗಾಯತ ಉ|| ಮನೆ ಕೆಲಸ ಸಾ|| ಸಿಂಧನಕೇರಾ ಸದ್ಯ ಬೃಹ್ಮಪೂರ ಕಾಲೋನಿ ಬೀದರ ಇವರು ನೀಡಿರು ಲಿಖಿತ ದೂರಿನ ಸಾರಾಂವೆನೆಂದರೆ, ಫಿರ್ಯಾದಿತರ ಮದುವೆಯು ಸಿಂಧನಕೇರಾ ಗ್ರಾಮದ ಮಹೇಶ @ ಮಾಣಿಕ ತಂದೆ ಶರಣಪ್ಪಾ ಕಾಡವಾದೆ ಇವರೊಂದಿಗೆ 2007 ರಲ್ಲಿ ಆಗಿರುತ್ತದೆ. ಮದುವೆಯಾದಾಗಿನಿಂದ ಫಿರ್ಯಾದಿತರಿಗೆ ಅವಳ ಗಂಡ ಹಾಗೂ ಭಾವಂದಿರು ಮತ್ತು ನಾದಿನಿಯರು ವರದಕ್ಷಿಣೆ ಸಲುವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ. ಹೀಗಾಗಿ ಅವರ ಕಿರುಕುಳ ತಾಳಲಾರದೇ ಫಿರ್ಯಾದಿತರು 2009 ನೇ ಸಾಲಿನಿಂದ ತಮ್ಮ ತವರು ಮನೆ ಬೀದರ ಬೃಹ್ಮಪೂರ ಕಾಲೋನಿಯಲ್ಲಿಯೆ ಉಳಿದಿರುತ್ತಾರೆ. ಫಿರ್ಯಾದಿತಳ ಗಂಡ ಮಾಣಿಕ ಇತನು ಸುರೇಖಾ ಎಂಬ ಇನ್ನೋಂದು ಹುಡುಗಿಯ ಜೊತೆ ಮದುವೆಯಾಗಿರುತ್ತಾನೆ. ಹೀಗಿರುವಲ್ಲಿ ದಿನಾಂಕ 27-07-2012 ರಂದು ಬೆಳಿಗ್ಗೆ 09.30 ಗಂಟೆಗೆ ಫಿಯರ್ಾದಿ ಹಾಗೂ ಅವರ ತಂದೆ ಹಣಮಂತರಾವ, ತಾಯಿ ಚೇತನಾ ಹಾಗೂ ತಮ್ಮ ಸಚ್ಚಿದಾನಂದ ಅತ್ತಿಗೆ ರಾಜೇಶ್ವರಿ ಎಲ್ಲರು ಬೃಹ್ಮಪೂರ ಕಾಲೋನಿಯಲ್ಲಿರುವ ಫಿಯರ್ಾದಿ ಗಂಡ ಮಹೇಶ@ಮಾಣಿಕ, ಭಾವಂದಿರಾದ ಚಂದ್ರಶೇಖರ, ಶಿವಾರಾಜ ಹಾಗೂ ನೇಗೇಣಿಯರಾದ ರೇಣುಕಾ ಗಂಡ ಚಂದ್ರಶೇಖರ ಹಾಗೂ ಗೀತಾ ಗಂಡ ಶಿವರಾಜ, ಮತ್ತು ನಾದಿನಿ ರತ್ನಮ್ಮ ಗಂಡ ಗುರಪ್ಪಾ ಹಾಗೂ ನಾದಿನಿಯ ಗಂಡ ಗುರಪ್ಪಾ @ ಗುರಯ್ಯ ಅಲ್ಲದೆ ನನ್ನ ಸವತಿ ಸುರೇಖಾ ಇವರೆಲ್ಲರೂ ಸೇರಿ ನಮ್ಮ ಮನೆಗೆ ಬಂದು, ಎಲ್ಲರೂ ಕೂಡಿ ನೀನು ನಮಗೆ ಇನ್ನು ಹೆಚ್ಚಿನ ವರದಕ್ಷಣೆಯಾಗಿ ಒಂದು ಲಕ್ಷ ರೂ ಕೊಡು ಮತ್ತು ಬೆಂಗಳೂರಿನಲ್ಲಿರುವ ಮನೆ ಹೆಸರಿಗೆ ಮಾಡಿಕೊಂಡು ಬಾ ಇಲ್ಲವಾದಲ್ಲಿ ವಿಚ್ಚದ್ದನ ಪತ್ರಕ್ಕೆ ಸಹಿ ಮಾಡು ಅಂತ ಹೇಳಿದ್ದು, ನಾನು ಅದಕ್ಕೆ ಒಪ್ಪದಿದ್ದಾಗ ಅವರೆಲ್ಲರು ಸೇರಿಕೊಂಡು ಅವಾಚ್ಯವಾಗಿ ಬ್ಶೆದು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 83/12 ಕಲಂ 341, 323, 324, 504, 506 ಜೊತೆ 34 ಐಪಿಸಿ :-
ದಿನಾಂಕ 28-07-2012 ರಂದು ಜ್ಞಾನೇಶ್ವರ ತಂದೆ ಬಾವುರಾವ ಬಿರಾದಾರ ಸಾ: ಕಾಕನಾಳ ರವರು ಮೋಟಾರ ವೈಂಡಿಂಗ ಮಾಡುವ ಸಲುವಾಗಿ ಲಖನಗಾಂವ ಗ್ರಾಮಕ್ಕೆ ಹೊಗುವೊದೊಗೊಸ್ಕರ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ಗ್ರಾಮದ ರಮೇಶ ತಂದೆ ವೆಂಕಟರಾವ ಬಿರಾದಾರ, ಮತ್ತು ಆವನ ಹೆಂಡತಿ ಸುಮನಬಾಯಿ ಮತ್ತು ಲಖನಗಾಂವ ಗ್ರಾಮದ ವೈಜಿನಾಥ ಭಾಟಸಾಂಗ್ವೆ ರವರುಗಳು ಬಂದು ನನಗೆ ಅಕ್ರಮವಾಗಿ ತಡೆದು ಎ ಜ್ಞಾನಾ ಸೂಳ್ಳೆ ಮಗನೆ ನನ್ನ ತಂಗಿ ಸುಮನಬಾಯಿ ಹಾಗೂ ಭಾವ ರಮೇಶ ಇವರಿಗೆ ಎಕೆ ವಿನಾ ಕಾರಣ ಅವರ ಮನೆಗೆ ಹೋಗಿ ಜಗಳ ತಕರಾರು ಮಾಡುತ್ತಿದ್ದಿಯ್ಯಾ ಅಂತಾ ಅಂದು ರಮೇಶ ಮತ್ತು ವೈಜಿನಾಥ ಬಡಿಗೆಯಿಂದ ನನ್ನ ತಲೆಯ ಹಿಂದೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಮತ್ತು ಕೈ ಮುಷ್ಠಿ ಮಾಡಿ ನನ್ನ ಎದೆಯ ಬಲಬಾಗದಲ್ಲಿ, ಹೊಟ್ಟೆಯಲ್ಲಿ ಹೊಡೆದು ಗುಪ್ತಗಾಯ ಪಡಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.