Police Bhavan Kalaburagi

Police Bhavan Kalaburagi

Monday, April 13, 2020

BIDAR DISTRICT DAILY CRIME UPDATE 13-04-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 13-04-2020

ಬೀದರ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 14/2020 ಕಲಂ 3 & 7 ಈ.ಸಿ. ಕಾಯ್ದೆ :-

ದಿನಾಂಕ 12/04/2020 ರಂದು 1800  ಗಂಟೆಗೆ ಶ್ರೀ ವಿಶಾಲ ತಂದೆ ಮಾಹಾದೇವ ಬನಸೋಡೆ ವಯ-42 || ಆಹಾರ ಶಿರಸ್ಥೆದಾರರು ತಹಸೀಲ ಕಛೆರಿ ಬೀದರ ರವರು  ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸಾರಾಂಶವೆನೆಂದರೆ ದಿನಾಂಕ 12/04/2020  ರಂದು 1700 ಗಂಟೆಗೆ   ಕಛೆರಿಯಲ್ಲಿ ಕೆಲಸ ಮಾಡುವಾಗ ವೀರಶೇಟ್ಟಿ ಪೆಟ್ರೊಲಿಯಂ ಕಮಠಾಣಾ  ಪೆಟ್ರೋಲ್ ಪಂಪನಲ್ಲಿ ಅಕ್ರಮವಾಗಿ ಕ್ಯಾನನಲ್ಲಿ ಡಿಜೇಲ್ ತುಂಬಿ  ಮಾರಾಟ ಮಾಡುತಿದಾರೆ ಅಂತ ಬಾತ್ಮಿ ಬಂದಿರುತ್ತದೆ, ಕರೋನಾ ವೈರಸ್ ಹರಡುತಿರುವ ಹಿನ್ನಲೆಯಲ್ಲಿ ಅಗತ್ಯ ಸೇವೆಗಳಿಗೆ ಹೊರತುಪಡಿಸಿ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರು ಪೆಟ್ರೊಲಿಯಂ ಉತ್ಪನಗಳ ಮಾರಾಟ ಮಾಡುವ ಬಗ್ಗೆ ಆಧೇಶ ಹೊರಡಿಸಿದ್ದರೂ ಸಹ ವೀರಶೇಟ್ಟಿ ಪೆಟ್ರೊಲಿಯಂ ಕಮಠಾಣಾ  ಪೆಟ್ರೋಲ್ ಪಂಪನಲ್ಲಿ ಅಕ್ರಮವಾಗಿ ಕ್ಯಾನನಲ್ಲಿ ಡಿಜೇಲ್ ತುಂಬಿ  ಮಾರಾಟ ಮಾಡುತ್ತಿದ್ದರಿಂದ ಅಗತ್ಯ ವಸ್ತುಗಳ ಕಾಯ್ದೆ  1955 ಕಲಂ 3 & 7  ನೇದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಹಳ್ಳಿಖೇಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 12-04-2020 ರಂದು ಮದ್ಯಾಹ್ನ 1300 ಗಂಟೆ ಸುಮಾರಿಗೆ  ಪಿ.ಎಸ್.ಐ ರವರು  ಠಾಣೆಯಲ್ಲಿದ್ದಾಗ   ಹಳ್ಳಿಖೇಡ (ಬಿ) ಪೊಲೀಸ ಠಾಣೆಯ ವ್ಯಾಪ್ತಿಯ ಅಮೀರಾಬಾದ ವಾಡಿ ಶಿವಾರ ಶಿವರಾಜ ತಿಬಶೆಟ್ಟಿ ಸಾ: ಹಳ್ಳಿಖೇಡ (ಬಿ) ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಸಿಬ್ಬಂದಿ ಹಾಗು ಪಂಚರೊಂದಿಗೆ ಹೋಗಿ ನೋಡಲು ಶಿವರಾಜ ತಿಬಶೆಟ್ಟಿ ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ 11 ಜನರು ಗೋಲಾಕಾರವಾಗಿ ಕುಳಿತು ಅವರ ಪಕ್ಕದಲ್ಲಿ 6 ಮೋಟಾರ ಸೈಕಲಗಳು ನಿಲ್ಲಿಸಿಕೊಂಡು, ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ, ಖಚಿತ ಪಡಿಸಿಕೊಂಡು 1435 ಗಂಟೆಗೆ ಸದರಿಯವರ ಮೇಲೆ ದಾಳಿ ಮಾಡಿ 11 ಜನರನ್ನು ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ತಿಳಿದುಕೊಂಡು ಜಪ್ತಿ ಪಂಚನಾಮೆ ಪ್ರಕಾರ ಜೂಜಾಟಕ್ಕೆ ಸಂಬಂಧಪಟ್ಟ ಜಪ್ತಿ ಮಾಡಿಕೊಂಡ ಮುದ್ದೆ ಮಾಲು ಮತ್ತು ಆರೋಪಿತರನ್ನು ತಾಬೆಗೆ ತೆಗೆದುಕೊಂಡು   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 270, 353, 332, 307, 323, 324, 504, 506 ಜೊತೆ 34 ಐಪಿಸಿ:-

ದಿನಾಂಕ 12/04/2020 ರಂದು 1500 ಗಂಟೆಯಿಂದ ಕರೋನಾ ಸೊಂಕಿನ ಜಾಗೃತಿ ಕುರಿತು , ಬೆಳಕುಣಿ(ಬಿ), ಭೋಪಾಳಗೇಡ ಗ್ರಾಮಕ್ಕೆ ಹೊಗಿ ಅಲ್ಲಿನ ಜನರಿಗೆ ಗ್ರಾಮದ ಮುಖ್ಯಸ್ಥರು ಹಾಗು ಆಶಾ ಕಾರ್ಯಕರ್ತೆಯರ ಜೊತೆ ಹೊಗಿ ತಿಳಿಹೇಳಿದ್ದು ಅಲ್ಲಿಂದ ಬೇಳಕುಣಿ(ಬಿ) ಗ್ರಾಮಕ್ಕೆ ಹೊಗಿ ಅಲ್ಲಿನ ಜನರಿಗೆ ಕೊರೋನಾ ಸೊಂಕು ಹರಡುತ್ತಿದೆ ಬೇರೆ ದೇಶದಿಂದ ಬಂದವರು ಹಾಗು ಬೇರೆ ಬೇರೆ ಪಟ್ಟಣದಿಂದ ಬಂದವರು ಮನೆಯಲ್ಲೆ ಇರಿ ಹೊರಗೆ ಬರಬೇಡಿ ಅಂತಾ ಜನಗರಿಗೆ ತಿಳಿಸುತ್ತಾ ಬೇಳಕುಣಿ(ಬಿ) ಗ್ರಾಮದಲ್ಲಿ ವಾರ್ಡವಾರ ಹೇಳುತ್ತಾ ಗ್ರಾಮದಲ್ಲಿ ಸುತ್ತಾಡಿ ಬೆಳಕುಣಿ(ಬಿ) ಗ್ರಾಮದ ಎಸ್ ಸಿ  ಓಣಿಯಲ್ಲಿ ಹೊಗಿದ್ದಾಗ ರಾಹುಲ ತಂದೆ ದೌಲತರಾವ ಡೊಂಗರೆ ವಯ 32 ವರ್ಷ ಜ್ಯಾತಿ ಎಸ್ ಸಿ ಹೊಲಿಯಾ ಉ// ಕೂಲಿ ಕೆಲಸ  ಇತನು ಪೂಣೆ ಪಟ್ಟಣದಿಂದ ಬಂದಿದ್ದು ಇದೆ ಅಂತಾ ಆಶಾ ಕಾರ್ಯಕರ್ತರು ತಿಳಿಸಿದ್ದು ಅವನಿಗೆ ಹೊರಗೆ ತಿರುಗಾಡ ಬೇಡಾ ಅಂತಾ ತಿಳಿಹೇಳಲು ಅವನ ಮನೆಯ ಹತ್ತಿರ ಹೊದಾಗ ರಾಹುಲ ಎಲ್ಲಿ ಅದಾನರೀ ಅನುವಷ್ಟರಲ್ಲಿ ಆಶಾ ಕಾರ್ಯಕತರ್ೆಯಿರಿಗೆ ಅವಾಚ್ಯವಾಗಿ ಬೈದು ನೀವ ಎನೆ ಹೇಳಿತ್ತಿರಿ ಅಂತಾ ಅವಚ್ಯವಾಗಿ ಬೈಯುತ್ತಿದ್ದಾಗ ಶ್ರೀ. ಪಾಲಕ್ಷಯ್ಯಾ ಎಮ್.ಹಿರೆಮಠ ಸಿಪಿಐ ರವರು ಹಾಗು ಅಲ್ಲಿ ಇದ್ದವರು ಎನೋ  ಹಿಗೇಕೆ ಬೈಯುತ್ತಿದ್ದಿ ಅಂತಾ ಅಂದಾಗ  ಅವನು   ಎದುರಿಗೆ ಬಂದು ಯಾವ ಪೊಲೀಸರು ಎನು ಹೇಳುತ್ತಾರೆ ನನದೇನು ಸೆಂಟಾ ಕಿತ್ತುಕೊಳ್ಳುತ್ತಾರ ಸೂಳೆ ಮಕ್ಕಳು ಅವರು ಬಂದರೆ ಒಬ್ಬರಿಗೆ ಕೊಂದು ಬಿಡುತ್ತೆನೆ ಅಂತಾ ಅವಾಚ್ಯವಾಗಿ ಬೈಯುತ್ತಾ ಸಿಪಿಐ  ಮೈಮೇಲೆ ಬಂದು ಸಮವಸ್ತ್ರ ಹಿಡಿದು ಜಿಂಜಾ ಮುಷ್ಠಿ  ಸ್ಟೀಲ್ ಕಳಸಿ ತಂದು  ಕಳಸಿಯಿಂದ   ತಲೆಯಲ್ಲಿ ಜೋರಾಗಿ ಹೊಡೆದನು ಹಾಗು  ಎದೆಯಲ್ಲಿ ಕೈಯಿಂದ ಹೊಡೆದಿರುತ್ತಾನೆ, ಆದ್ದರಿಂದ ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ:12/04/2020 ರಂದು ಮಧ್ಯಾಹ್ನ ಮುನ್ನಳ್ಳಿ ಗ್ರಾಮದ ರಾಚಣ್ಣಾ ತಂದೆ ಮಲಕಪ್ಪಾ ಪಟ್ಟಣ ಇವರ ಹೊಲದ ಪಕ್ಕ ಹಳ್ಳದ ದಂಡೆಯ ಮೇಲೆ ಬೆವಿನ ಮರದ ಕೆಳಗೆ ಸುಮರು 8-10 ಜನರು ದುಂಡಾಗಿ ಕುಳಿತು ಇಸ್ಪಿಟ್ ಎಲೆಗಳ ಸಾಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿಪಿಐ ಸಾಹೇಬರು ಆಳಂದ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನರೋನಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸರ್ಕಾರಿ  ಜೀಪ್ ನಂ ಕೆಎ32-ಜಿ476 ನೇದ್ದರಲ್ಲಿ ಮುನ್ನಳ್ಳಿ ಗ್ರಾಮ ಸೀಮಾಂತರದಲ್ಲಿ ಹೋಗಿ ವಿಚಾರಿಸುತ್ತಾ, ರಾಚಣ್ಣಾ ತಂದೆ ಮಲಕಪ್ಪಾ ಪಟ್ಟಣ ಇವರ ಹೊಲಕ್ಕೆ ಹೋಗಿ ಹೊಲದ ಬಂದಾರಿಯ ಮರೆಯಲ್ಲಿ ನಿಂತು ನೋಡಿದಾಗ ಹೊಲದ ಪಕ್ಕ ಹಳ್ಳದ ದಂಡೆಯ ಮೇಲೆ ಬೆವಿನ ಮರದ ಕೆಳಗೆ ಸುಮಾರು 9ಜನರು ದುಂಡಾಗಿ ಕುಳಿತು ಇಸ್ಟಿಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಸುಮಾರು 4ಜನ ಓಡಿ ಹೋಗಿದ್ದು 5ಜನ ಸಿಕ್ಕಿರುತ್ತಾರೆ. ಸದರಿಯವರ ಹೆಸರು ವಿಳಾಸ ವಿಚಾರಿಸಲಾಯಿತು 1)ಶರಣಬಸಯ್ಯ ತಂದೆ ಪರಮೇಶ್ವರಯ್ಯ ಸ್ವಾಮಿ,. 2)ನಾರಾಯಣ ತಂದೆ ಗುಂಡೇರಾವ ಇಂಗಳೆ, 3)ದಿಗಂಬರ ತಂದೆ ಹಣಮಂತರಾವ ಇಂಗಳೆ, 4)ನಂದೇಶ ತಂದೆ ಶಿವಶರಣಪ್ಪಾ ಪಾಟೀಲ್, 5) ಸಂಗಯ್ಯಸ್ವಾಮಿ ತಂದೆ ವಿಶ್ವನಾಥಯ್ಯ ಮಠಪತಿ, ಸಾ: ಎಲ್ಲರು ಮುನ್ನಳ್ಳಿ,  ಅಂತಾ ತಿಳಿಸಿದ್ದು ಓಡಿ ಹೋದವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಅವರ ಹೆಸರು 6) ರವೀಂದ್ರ ತಂದೆ ಶಿವಶರಣಪ್ಪಾ ವಾಲಿ, 7) ವೆಂಕಟ್ ತಂದೆ ಮಾಲು ಅವತಾಡೆ, 8) ಲಿಂಗರಾಜ ತಂದೆ ಮಾಹಾದೇವ ಜಾನೆ, 9)ಸಂಜು ತಂದೆ ಮಲ್ಲೇಶಪ್ಪಾ ಕೊಳ್ಳಿ, ಸಾ:ಮುನ್ನಳ್ಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 2640/- ರೂ ನಗದು ಹಣ 52 ಇಸ್ಪೀಟ ಎಲೆಗಳು ಮತ್ತು  1)ಒಂದು ನೀಲಿ ಮತ್ತು ಕಪ್ಪು ಬಣ್ಣದ ಸ್ಪ್ಲೈಂಡರ್ ಪ್ಲಸ್ ಮೊಟಾರ್ ಸೈಕಲ್ ನಂ ಕೆಎ 32 ಇ-ಎಂ 6761 ಅಂದಾಜು ಕಿಮ್ಮತ್ತು 30000/- ಸಾವಿರ, 2)ಒಂದು ನೀಲಿ ಮತ್ತು ಕಪ್ಪು ಬಣ್ಣದ ಹೀರೊಹೊಂಡಾ ಸ್ಪ್ಲೈಂಡರ್ ಪ್ರೋ ಮೊಟಾರ್ ಸೈಕಲ್ ನಂ ಕೆಎ32-ವೈ8781 ಅಂದಾಜು ಕಿಮ್ಮತ್ತು 40000/- ಸಾವಿರ, 3)ಒಂದು ಕೆಂಪು ಮತ್ತು ಕಪ್ಪು ಬಣ್ಣದ ಹೊಂಡಾ ಡ್ರೀಮ್ ಮೊ.ಸೈ ನಂ ಕೆಎ32-ಇಎನ್0062 ಅಂ.ಕಿ ರೂ 50000/- 4)ಕೆಂಪು ಬಣ್ಣದ ಫ್ಯಾಷನ್ ಪ್ರೋ ಮೊ.ಸೈ ನಂ ಕೆಎ32-ಇಇ5358 ಅಂದಾಜ ಕಿಮ್ಮತ್ತ 25000/- ಸಾವಿರ, 5)ಕಪ್ಪು ಬಣ್ಣದ ಹಿರೋ ಸ್ಪೆಲೆಂಡರ್ ಮೊ.ಸೈ ನಂಬರ್ ಇರುವುದಿಲ್ಲ ಚೆಸ್ಸಿ ನಂಬರ್ ಪರೀಶೀಲಿಸಿದಾಗ MBLHAR0805JHG31010 ಅಂದಾಜು ಕಿಮ್ಮತ್ತ 65000/- ಹೀಗೆ 52 ಇಸ್ಟಿಪ್ ಎಲೆಗಳು 2640/- ನಗದು ಹಣ 5 ಮೊಬೈಲ್ ಹಾಗೂ 5 ಮೊಟಾರ್ ಸೈಕಲಗಳು ಇವೆಲ್ಲವುಗಳನ್ನು ಜಪ್ತಿ ಮಾಡಿಕೊಂಡು  ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ. 
ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಧ್ಯ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 12-04-2020 ರಂದು ಕೊರೊನಾ ವೈರಸ್ ಕೋವಿಡ-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ರಾಜ್ಯದ್ಯಂತ ಹಾಗೂ ರಾಷ್ಟ್ರಾಧ್ಯಂತ ಕಲಂ:133, 144 ಸಿಆರ್.ಪಿಸಿ ಪ್ರಕಾರ ಲಾಕ್ ಡೌನ ಘೊಷಿಸಿದ್ದು ಇರುತ್ತದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತೀರ ಇದ್ದಾಗ ಚಿಂಚೋಳಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮೋಟಾರ ಸೈಕಲ ಮೇಲೆ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಬಾದ-ರೇವೂರ ಮುಖ್ಯ ರೋಡಿಗೆ ಹೊಂದಿಕೊಂಡಿರುವ ಚಿಂಚೋಳಿ ಕ್ರಾಸ ಹತ್ತೀರ ಹೋಗುತ್ತಿದ್ದಂತೆ ನಮ್ಮ ಜೀಪ ಎದುರುಗಡೆ ಒಬ್ಬ ವ್ಯಕ್ತಿ ಮೋಟಾರ ಸೈಕಲ ಮೇಲೆ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ಬಂದಿದ್ದು ನಮಗೆ ಸಂಶಯ ಬಂದು ಅದನ್ನು ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟಾಗ ಆ ವ್ಯಕ್ತಿ ಮೋಟಾರ ಸೈಕಲ ನಿಲ್ಲಿಸಿ ನಮಗೆ ನೋಡಿ ಮೋಟಾರ ಸೈಕಲ ಮೇಲೆ ಇಳಿದು ಮೋಟಾರ ಸೈಕಲ ಬಿಟ್ಟು ಹಿಂದಕ್ಕೆ ಸರಿದನು  ಆಗ ನಾವು ಪಂಚರ ಸಮಕ್ಷಮ ಮೋಟಾರ ಸೈಕಲ ಹತ್ತಿರ ಹೋಗಿ ರಟ್ಟಿನ ಡಬ್ಬಿ ನೋಡಲಾಗಿ ಅದರಲ್ಲಿ ಮಧ್ಯದ ಬಾಟಲಿಗಳು ಇದ್ದವು ಆಗ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಲು ಹೋದಾಗ ಸದರಿ ಓಡಿ ಹೊದನು  ಆಗ ನಾವು ಸದರಿಯವನನ್ನು ಬೆನ್ನಟ್ಟಿದರೂ ಸಹ ನಮಗೆ ಸಿಗಲಿಲ್ಲ ಸದರಿ ವ್ಯಕ್ತಿ  ಸ್ಥಳದಲ್ಲಿ ಬಿಟ್ಟು ಹೋದ ಮೋಟಾರ ಸೈಕಲ ನಂಬರ ಮತ್ತು ರಟ್ಟಿನ ಬಾಕ್ಸನ್ನು ಪರಿಶೀಲಿಸಿ ನೋಡಲು ಮೋಟಾರ ಸೈಕಲ ನಂಬರ ಕೆ,ಎ-32 ಈಕ್ಯೂ-5483 ಅಂತ ಇರುತ್ತದೆ ಮತ್ತು ರಟ್ಟಿನ ಬಾಕ್ಸದಲ್ಲಿದ್ದ ಮಧ್ಯದ ಬಾಟಲಿಗಳನ್ನು ನೋಡಲು (01)ದೇಶಿ ದಾರು ಅಂತ ಬರೆದ 180 ಎಮ್,ಎಲ್.ಅಳತೆಯ 15 ಬಾಟಲಗಳು ಅ||ಕಿ||780 ನಂತರ ನಮ್ಮಿಂದ ತಪ್ಪಿಸಿಕೊಂಡು ಓಡಿ ಹೊದ ವ್ಯಕ್ತಿಯ ಹೆಸರು ಬಾತ್ಮಿದಾರರಿಗೆ ವಿಚಾರಿಸಿ ತಿಳಿದುಕೊಳ್ಳಲಾಗಿ 1)ಸಿದ್ದಪ್ಪ ತಂದೆ ವಿಠಲ ಪೂಜಾರಿ  ಸಾ||ಚಿಂಚೋಳಿ ಎಂದು ಗೊತ್ತಾಗಿರುತ್ತದೆ. ಸದರಿಯವುಗಳನ್ನು ಮತ್ತು ಮೋಟಾರ ಸೈಕಲ ಜಪ್ತಿ ಮಾಡಿಕೊಂಡು  ಅಫಜಲಪೂರ ಠಾಣೆಗೆ ಭಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ನೀಡಿದ್ದರಿಂದ ಹೇನಿನಪುಡಿ ವಿಷ ಕುಡಿದು ಮೃತಪಟ್ಟ ಪ್ರಕರಣ  :
ಜೇವರಗಿ ಠಾಣೆ : ಶ್ರೀಮತಿ ಕುತಿಜಾಬೇಗಂ ಗಂಡ ಮೈಹಿಬೂಬ  ಪಟೇಲ ಸಾ: ಬಿರಾಳ (ಬಿ),  ತಾ: ಜೇವರಗಿ ರವರ ಮಗಳಾದ ನೂರಜಾಬೇಗಂ ಇವಳಿಗೆ ಈಗ ಸುಮಾರು 4 ವರ್ಷದ ಹಿಂದೆ ಗೂಡೂರ  (ಎಸ್..) ಗ್ರಾಮದ ಮುಸ್ತಾಫ ತೇಲಿ  ಇತನ್ನೊಂದಿಗೆ ಜೇವರಗಿಯಲ್ಲಿ  ಮೈಹಿಬೂಬ ಪಂಕ್ಷನ ಹಾಲನಲ್ಲಿ  ಹಿರಿಯ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿರುತ್ತೆವೆ.  ಮದುವೆ ಮುಂಚಿತವಾಗಿ ಮಾತುಕತೆ ಆಡಿದಂತೆ ಮದುವೆ ಕಾಲಕ್ಕೆ ಎರಡು ತೊಲಿ ಬಂಗಾರ,  11000/- ರೂಪಾಯಿ ಹುಂಡಾ, ಮಂಚ ಗಾದಿ ಕಬ್ಬಿಣದ ಅಲಮಾರಿ ಅಡುಗೆ ಮಾಡುವ ಮನೆ ಬಳಕೆ ಹಾಂಡೆ ಬಾಂಡೆ  ತಾಮ್ರ ಕೊಡ  ವಸ್ತಗಳು ನನ್ನ ಅಳಿಯನಿಗೆ ಕೊಟ್ಟಿರುತ್ತೆವೆ.  ನನ್ನ ಮಗಳು  ನೂರಜಾಬೇಗಂ ಇವಳು ಮದುವೆಯಾದ ನಂತರ ತನ್ನ ಗಂಡನ್ನೊಂದಿಗೆ ಗೂಡುರ (ಎಸ್.ಎ) ಗ್ರಾಮದಲ್ಲಿ ತನ್ನ ಗಂಡನ ಮನೇಯಲ್ಲಿಯೇ ವಾಸವಾಗಿದ್ದಳು. ಅವಳಿಗೆ ಮೇಹಾರಬೇಗಂ,  ಮೈನ್ನೊದ್ದೀನ ಅಂತಾ ಇಬ್ಬರೂ ಮಕ್ಕಳಿರುತ್ತಾರೆ.  ಮದುವೆಯಾದ  ಸುಮಾರು 2-3  ವರ್ಷಗಳವರೆಗೆ ಅವಳ ಗಂಡ ಮತ್ತು ಗಂಡನ ಮನೆಯವರು ಅವಳಿಗೆ  ಸರಿಯಾಗಿಯೇ ನೊಡಿಕೊಂಡು ಬಂದಿರುತ್ತಾರೆ.  ನಂತರ ನನ್ನ ಮಗಳಿಗೆ ಅವಳ ಗಂಡ ಮತ್ತು ಅವಳ ಗಂಡನ ಮನೆಯವರು ವಿನಾಕಾರಣವಾಗಿ ಅವಳಿಗೆ ತೊಂದರೆ ಕೊಡುತ್ತಾ ಬಂದಿರುತ್ತಾರೆ.  ಮತ್ತು ನನ್ನ ಮಗಳು ನಮ್ಮ ಮನೆಗೆ ಬಂದಾಗ ನನಗೆ  ನನ್ನ ಗಂಡ ಮತ್ತು ಅತ್ತೆ ಬಾವಂದಿರು ಕೂಡಿಕೊಂಡು ನೀನಗೆ ಮನೆ ಕೆಲಸ, ಮತ್ತು ಅಡುಗೆ  ಸರಿಯಾಗಿ ಮಾಡಲು ಬರುವುದಿಲ್ಲಾ ಮತ್ತು ನೀನ್ನ ತವರು ಮನೆಯವರು ಮದುವೆ ಕಾಲಕ್ಕೆ ಇನ್ನೂ ಬಂಗಾರ ಕೊಡಬೇಕಾಗಿತ್ತು ಕೊಟ್ಟಿಲ್ಲಾ ನೀನ್ನ ತವರು  ಮನೆಯಿಂದ  ಬಂಗಾರ  ತೆಗೆದುಕೊಂಡು ಬಾ ಎಂದು ನನ್ನ ಸಂಗಡ ಜಗಳ ಮಾಡಿ ಹೊಡೆ ಬಡೆ  ಮಾಡಿ ಮಾನಸೀಕ ಮತ್ತು ದೈಹಿಕ  ತೊಂದರೆ  ಕೊಡುತ್ತಿದ್ದಾರೆ . ಎಂದು ನಮ್ಮ ಮುಂದೆ ಹೇಳಿದರಿಂದ ನನಗೆ  ಗೊತ್ತಾಗಿರುತ್ತದೆ.   ಅದಕ್ಕೆ . ನಾನು ಮತ್ತು ನನ್ನ ಗಂಡ ಇಬ್ಬರೂ ಗೂಡರ ಗ್ರಾಮಕ್ಕೆ  ಹೋಗಿ ನನ್ನ ಅಳಿಯನಿಗೆ ಮತ್ತು ಅವರ  ಮನೆಯವರಿಗೆ ಬುದ್ದಿ ಮಾತು ಹೇಳಿ ಬಂದಿರುತ್ತೆವೆ. ಆದರೂ ಕೂಡಾ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಮಾವ ಬಾವಂದಿರರು ಕೂಡಿಕೊಂಡು  ಅವಳಿಗೆ ಬೈಯುವುದು ಹೊಡೆಯುವುದು ಮಾಡಿ ಮಾನಸೀಕ ಮತ್ತು ದೈಹಿಕ ಕಿರಕುಳ ಕೊಡುತಾ ಬಂದಿರುತ್ತಾರೆ. ನನ್ನ ಮಗಳು ಮನೆಯ ಮರ್ಯಾದೆಗೆ ಅಂಜಿ ಮತ್ತು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ  ಯೋಚಿಸಿ ಅವರು ಕೊಡುವ ತೊಂದರೆ  ತಾಳುತ್ತಾ ಬಂದಿರುತ್ತಾಳೆ. ದಿನಾಂಕ 10/04/2020 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ನನ್ನಅಳಿಯ ಇಮಾಮಸಾಬ  ಈತನು ನನಗೆ  ಹೇಳಿದ್ದನೆಂದೆನೆಂದರೆ ಗೂಡೂರ (ಎಸ್.ಎ) ಗ್ರಾಮದಿಂದ ಮುಸ್ತಾಫ ಈತನು  ಪೊನ ಮಾಡಿ  ನೂರಜಾಬೇಗಂ ಇವಳು ಮನೆಯಲ್ಲಿ ಸುಸ್ತಾಗಿ  ಬಿದ್ದಿರುತ್ತಾಳೆ.  ಅವಳಿಗೆ  ಜೇವರಗಿ ಸರಕಾರಿ ಆಸ್ಪತ್ರೆಗೆ  ತೆಗೆದುಕೊಂಡು ಬರುತ್ತಿದ್ದೆವೆ ಎಂದು  ಹೇಳಿರುತ್ತಾನೆ.  ಎಂದು ತಿಳಿಸಿದರಿಂದ   ನಾನು ಮತ್ತು ನನ್ನ ಮಗಳು  ಶಹಾಜಾಬೇಗಂ ಅವಳ ಗಂಡ ಇಮಾಮಸಾಬ ಮೂವರು  ಜೇವರಗಿ ಆಸ್ಪತ್ರೆಗೆ  ಹೋಗಿ ನೋಡಲು ನಮ್ಮ ಮಗಳು ಸತ್ತಿದ್ದಳು.  ನನ್ನ ಅಳಿಯನಿಗೆ ಕೇಳಲು ಅವನು  ಹೇಳಿದ್ದೆನೆಂದರೆ ರಾತ್ರಿ 9.೦೦ ಗಂಟೆಯ ಸುಮಾರಿಗೆ   ಮನೆಯಲ್ಲಿ ನೂರಜಾಬೇಗಂ ಇವಳು ಮನೆಯಲ್ಲಿದ್ದ ಹೇನಿನ ಪುಡಿ ಕುಡಿದು ಸುತ್ತಾಗಿ ಬಿದ್ದಾಗ,  ಅವಳಿಗೆ ಅಸ್ಪತ್ರೆ ತಂದಿರುತ್ತೆವೆ ಅವಳು ಸತ್ತಿರುತ್ತಾಳೆ ಎಂದು ಹೇಳಿ  ಹಾಗೇನೆ ತರಾತುರಿಯಲ್ಲಿ  ನನ್ನ ಮಗಳ ಹೆಣ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗೂಡರ (ಎಸ್.ಎ) ಗ್ರಾಮಕ್ಕೆ  ತೆಗೆದುಕೊಂಡು ಹೋಗಿ ಮನೆಯಲ್ಲಿ ಹಾಕಿರುತ್ತಾರೆ. ರಾತ್ರಿಯಾಗಿದ್ದರಿಂದ  ನಮಗೇನು ಗೊತ್ತಾಗದಕ್ಕೆ  ನಾನು ನನ್ನ ಗಂಡನಿಗೆ ಮತ್ತು ನಮ್ಮ ಸಂಭಂಧಿಕರಿಗೆ  ವಿಷಯ  ತಿಳಿಸಿದೆನು.  ಇಂದು ದಿ 11/04/2020 ರಂದು ಮುಂಜಾನೆ ನಾನು ಮತ್ತು ನನ್ನ ಗಂಡ ಮೈಹಿಬೂಬ ಪಟೇಲ ಇನ್ನೊಬಳು ಮಗಳಾದ ಶಹಾಜಾಬೇಗಂ, ಹಾಗೂ ಅವಳ ಗಂಡ ಇಮಾಮಸಾಬ ತಂದೆ  ಹುಸೇನಸಾಬ ಇನಾಮ್ದಾರ, ನನ್ನ ತಂಗ್ಗಿ ರೇಷ್ಮಾ ಗಂಡ ಇಸ್ಮಾಯಿಲ್ ಅತ್ತಾರ ಎಲ್ಲರೂ ಕೂಡಿಕೊಂಡು ಗುಡೂರ (ಎಸ್.ಎ) ಗ್ರಾಮಕ್ಕೆ ಹೋಗಿ ನೋಡಿ ನನ್ನ ಮಗಳಿಗೆ ಅವಳ ಗಂಡ ಮತ್ತು ಗಂಡನ ಮನೆಯವರು ತೊಂದರೆ ಕೊಟ್ಟಿದ್ದರಿಂದ  ಅವರು ಕೊಟ್ಟ ಕಿರಕುಳ ತಾಳಲಾರದೆ ಮನೆಯಲ್ಲಿದ್ದ ಹೆನಿನಪುಡಿ ಧಿ  ಕುಡಿದು ಸತ್ತ ಬಗ್ಗೆ ಗೊತ್ತಾಗಿ  ಅವರ ಮೇಲೆ ಕೇಸು ಮಾಡಬೇಕೆಂದು ವಿಚಾರ ಮಾಡಿ  ನೂರಜಾಬೇಗಂ ಇವಳ ಹೆಣ ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಹಾಕಿರುತ್ತೆವೆ. ನನ್ನ ಮಗಳಾದ ನೂರಾಜ ಬೇಗಂ ಇವಳಿಗೆ ಅವಳ ಗಂಡ 1)  ಮುಸ್ತಾಫಾ   ತಂದೆ  ಅಹ್ಮದ್ ಹುಸೇನ ತೇಲಿ, ಅವಳ ಬಾವಂದಿರಾದ 2) ನಸೀರೊದ್ದೀನ ತಂದೆ ಅಹ್ಮದ್ ಹುಸೇನ ತೇಲಿ, 3) ಹಜರತಲಿ @ ಅಜ್ಜು  ತಂದೆ ಅಹೇಮದ್ ಹುಸೇನ ತೇಲಿ,  ಅತ್ತೆಯಾದ 4) ಚಾಂದಬೀ ಗಂಡ ಅಹೇಮದ್ದ ಹುಸೇನ್ ತೇಲಿ, ಸಾ: ಗೂಡೂರ ( ಎಸ್.ಎ) ಇವರೆಲ್ಲರೂ ಕೂಡಿಕೊಂಡು ನನ್ನ ಮಗಳಿಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲಾ ಮತ್ತು ತವರು ಮನೆಯಿಂದ ಬಂಗಾರ ತೆಗೆದುಕೊಂಡು ಬಾ ಎಂದು ಅವಾಚ್ಯವಾಗಿ ಬೈಯುವುದು  ಹೊಡೆಯುವುದು ಮಾಡಿ ಮಾನಸೀಕ ಮತ್ತು ದೈಹಿಕ ಕಿರಕುಳ ನೀಡಿದರಿಂದ ಅವಳು ಮನನೊಂದು  ದಿನಾಂಕ 10/04/2020 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ  ಮನೆಯಲ್ಲಿ ಹೇನಿನಪುಡಿ ವಿಷ ಕುಡಿದು ಸತ್ತಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.