ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 13-04-2020
ಬೀದರ
ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 14/2020 ಕಲಂ 3 & 7 ಈ.ಸಿ. ಕಾಯ್ದೆ :-
ದಿನಾಂಕ 12/04/2020 ರಂದು
1800 ಗಂಟೆಗೆ
ಶ್ರೀ ವಿಶಾಲ ತಂದೆ ಮಾಹಾದೇವ ಬನಸೋಡೆ ವಯ-42 ಉ|| ಆಹಾರ
ಶಿರಸ್ಥೆದಾರರು ತಹಸೀಲ ಕಛೆರಿ ಬೀದರ ರವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು
ಸಾರಾಂಶವೆನೆಂದರೆ ದಿನಾಂಕ 12/04/2020 ರಂದು 1700 ಗಂಟೆಗೆ
ಕಛೆರಿಯಲ್ಲಿ
ಕೆಲಸ ಮಾಡುವಾಗ ವೀರಶೇಟ್ಟಿ ಪೆಟ್ರೊಲಿಯಂ ಕಮಠಾಣಾ ಪೆಟ್ರೋಲ್ ಪಂಪನಲ್ಲಿ ಅಕ್ರಮವಾಗಿ
ಕ್ಯಾನನಲ್ಲಿ ಡಿಜೇಲ್ ತುಂಬಿ ಮಾರಾಟ ಮಾಡುತಿದಾರೆ ಅಂತ ಬಾತ್ಮಿ ಬಂದಿರುತ್ತದೆ, ಕರೋನಾ
ವೈರಸ್ ಹರಡುತಿರುವ ಹಿನ್ನಲೆಯಲ್ಲಿ ಅಗತ್ಯ ಸೇವೆಗಳಿಗೆ ಹೊರತುಪಡಿಸಿ ಮಾನ್ಯ ಜಿಲ್ಲಾಧಿಕಾರಿಗಳು
ಬೀದರ ರವರು ಪೆಟ್ರೊಲಿಯಂ ಉತ್ಪನಗಳ ಮಾರಾಟ ಮಾಡುವ ಬಗ್ಗೆ ಆಧೇಶ ಹೊರಡಿಸಿದ್ದರೂ ಸಹ ವೀರಶೇಟ್ಟಿ
ಪೆಟ್ರೊಲಿಯಂ ಕಮಠಾಣಾ ಪೆಟ್ರೋಲ್ ಪಂಪನಲ್ಲಿ ಅಕ್ರಮವಾಗಿ ಕ್ಯಾನನಲ್ಲಿ ಡಿಜೇಲ್
ತುಂಬಿ ಮಾರಾಟ ಮಾಡುತ್ತಿದ್ದರಿಂದ ಅಗತ್ಯ
ವಸ್ತುಗಳ ಕಾಯ್ದೆ 1955 ಕಲಂ 3 & 7 ನೇದರ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹಳ್ಳಿಖೇಡ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 12-04-2020 ರಂದು ಮದ್ಯಾಹ್ನ 1300 ಗಂಟೆ
ಸುಮಾರಿಗೆ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ಹಳ್ಳಿಖೇಡ (ಬಿ) ಪೊಲೀಸ ಠಾಣೆಯ ವ್ಯಾಪ್ತಿಯ ಅಮೀರಾಬಾದ
ವಾಡಿ ಶಿವಾರ ಶಿವರಾಜ ತಿಬಶೆಟ್ಟಿ ಸಾ: ಹಳ್ಳಿಖೇಡ (ಬಿ) ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ
ಜಾಗಾದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ
ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗು ಪಂಚರೊಂದಿಗೆ ಹೋಗಿ ನೋಡಲು ಶಿವರಾಜ
ತಿಬಶೆಟ್ಟಿ ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ 11 ಜನರು
ಗೋಲಾಕಾರವಾಗಿ ಕುಳಿತು ಅವರ ಪಕ್ಕದಲ್ಲಿ 6 ಮೋಟಾರ ಸೈಕಲಗಳು ನಿಲ್ಲಿಸಿಕೊಂಡು, ಇಸ್ಪಿಟ ಜೂಜಾಟ
ಆಡುತ್ತಿರುವುದನ್ನು ನೋಡಿ, ಖಚಿತ ಪಡಿಸಿಕೊಂಡು 1435 ಗಂಟೆಗೆ
ಸದರಿಯವರ ಮೇಲೆ ದಾಳಿ ಮಾಡಿ 11 ಜನರನ್ನು ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ
ತಿಳಿದುಕೊಂಡು ಜಪ್ತಿ ಪಂಚನಾಮೆ ಪ್ರಕಾರ ಜೂಜಾಟಕ್ಕೆ ಸಂಬಂಧಪಟ್ಟ ಜಪ್ತಿ ಮಾಡಿಕೊಂಡ ಮುದ್ದೆ ಮಾಲು
ಮತ್ತು ಆರೋಪಿತರನ್ನು ತಾಬೆಗೆ ತೆಗೆದುಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 270, 353,
332, 307, 323, 324, 504, 506 ಜೊತೆ 34 ಐಪಿಸಿ:-
ದಿನಾಂಕ 12/04/2020 ರಂದು 1500 ಗಂಟೆಯಿಂದ
ಕರೋನಾ ಸೊಂಕಿನ ಜಾಗೃತಿ ಕುರಿತು , ಬೆಳಕುಣಿ(ಬಿ), ಭೋಪಾಳಗೇಡ
ಗ್ರಾಮಕ್ಕೆ ಹೊಗಿ ಅಲ್ಲಿನ ಜನರಿಗೆ ಗ್ರಾಮದ ಮುಖ್ಯಸ್ಥರು ಹಾಗು ಆಶಾ ಕಾರ್ಯಕರ್ತೆಯರ ಜೊತೆ ಹೊಗಿ
ತಿಳಿಹೇಳಿದ್ದು ಅಲ್ಲಿಂದ ಬೇಳಕುಣಿ(ಬಿ) ಗ್ರಾಮಕ್ಕೆ ಹೊಗಿ ಅಲ್ಲಿನ ಜನರಿಗೆ ಕೊರೋನಾ ಸೊಂಕು
ಹರಡುತ್ತಿದೆ ಬೇರೆ ದೇಶದಿಂದ ಬಂದವರು ಹಾಗು ಬೇರೆ ಬೇರೆ ಪಟ್ಟಣದಿಂದ ಬಂದವರು ಮನೆಯಲ್ಲೆ ಇರಿ
ಹೊರಗೆ ಬರಬೇಡಿ ಅಂತಾ ಜನಗರಿಗೆ ತಿಳಿಸುತ್ತಾ ಬೇಳಕುಣಿ(ಬಿ) ಗ್ರಾಮದಲ್ಲಿ ವಾರ್ಡವಾರ ಹೇಳುತ್ತಾ
ಗ್ರಾಮದಲ್ಲಿ ಸುತ್ತಾಡಿ ಬೆಳಕುಣಿ(ಬಿ) ಗ್ರಾಮದ ಎಸ್ ಸಿ
ಓಣಿಯಲ್ಲಿ ಹೊಗಿದ್ದಾಗ ರಾಹುಲ ತಂದೆ ದೌಲತರಾವ ಡೊಂಗರೆ ವಯ 32 ವರ್ಷ ಜ್ಯಾತಿ
ಎಸ್ ಸಿ ಹೊಲಿಯಾ ಉ// ಕೂಲಿ ಕೆಲಸ ಇತನು ಪೂಣೆ
ಪಟ್ಟಣದಿಂದ ಬಂದಿದ್ದು ಇದೆ ಅಂತಾ ಆಶಾ ಕಾರ್ಯಕರ್ತರು ತಿಳಿಸಿದ್ದು ಅವನಿಗೆ ಹೊರಗೆ ತಿರುಗಾಡ
ಬೇಡಾ ಅಂತಾ ತಿಳಿಹೇಳಲು ಅವನ ಮನೆಯ ಹತ್ತಿರ ಹೊದಾಗ ರಾಹುಲ ಎಲ್ಲಿ ಅದಾನರೀ ಅನುವಷ್ಟರಲ್ಲಿ ಆಶಾ
ಕಾರ್ಯಕತರ್ೆಯಿರಿಗೆ ಅವಾಚ್ಯವಾಗಿ ಬೈದು ನೀವ ಎನೆ ಹೇಳಿತ್ತಿರಿ ಅಂತಾ ಅವಚ್ಯವಾಗಿ ಬೈಯುತ್ತಿದ್ದಾಗ
ಶ್ರೀ. ಪಾಲಕ್ಷಯ್ಯಾ ಎಮ್.ಹಿರೆಮಠ ಸಿಪಿಐ ರವರು ಹಾಗು ಅಲ್ಲಿ ಇದ್ದವರು ಎನೋ ಹಿಗೇಕೆ ಬೈಯುತ್ತಿದ್ದಿ ಅಂತಾ ಅಂದಾಗ ಅವನು
ಎದುರಿಗೆ ಬಂದು ಯಾವ ಪೊಲೀಸರು ಎನು ಹೇಳುತ್ತಾರೆ ನನದೇನು ಸೆಂಟಾ ಕಿತ್ತುಕೊಳ್ಳುತ್ತಾರ
ಸೂಳೆ ಮಕ್ಕಳು ಅವರು ಬಂದರೆ ಒಬ್ಬರಿಗೆ ಕೊಂದು ಬಿಡುತ್ತೆನೆ ಅಂತಾ ಅವಾಚ್ಯವಾಗಿ ಬೈಯುತ್ತಾ
ಸಿಪಿಐ ಮೈಮೇಲೆ ಬಂದು ಸಮವಸ್ತ್ರ ಹಿಡಿದು ಜಿಂಜಾ
ಮುಷ್ಠಿ ಸ್ಟೀಲ್ ಕಳಸಿ ತಂದು ಕಳಸಿಯಿಂದ
ತಲೆಯಲ್ಲಿ ಜೋರಾಗಿ ಹೊಡೆದನು ಹಾಗು
ಎದೆಯಲ್ಲಿ ಕೈಯಿಂದ ಹೊಡೆದಿರುತ್ತಾನೆ, ಆದ್ದರಿಂದ ಅವರುಗಳ
ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ
No comments:
Post a Comment