ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-02-2021
ಬೀದರ ನೂತನ
ನಗರ ಠಾಣೆ ಅಪರಾಧ ಸಂಖೈ 09/2021 ಕಲಂ ಮಹಿಳೆ ಕಾಣೆ :-
ದಿನಾಂಕ 31/01/2021 ರಂದು 1730 ಗಂಟೆಗೆ
ಫಿರ್ಯಾದಿ ಶ್ರೀ ಸಚಿನ ತಂದೆ ಬಾಬುರಾವ ಕೆಂಪೆ ವಯ 25 ವರ್ಷ ಸಾ/ ಪ್ರೀತಿ ಕಾಲೋನಿ ನೌಬಾದ
ಬೀದರ ರವರು ಪೊಲೀಸ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸದರ ಸಾರಾಂಶವೆನೆಂದರೆ, ದಿನಾಂಕ 23/01/2021 ರಂದು ಸಾಯಂಕಾಲ ಇವರ ತಂಗಿ ಹಾಗೂ ಅಜ್ಜಿ, ಅಜ್ಜ ಊಟ ಮಾಡಿಕೊಂಡು ರಾತ್ರಿ ಮಲಗಿಕೊಂಡಿರುತ್ತೆವೆ. ನಂತರ
ಮಾರನೆ ದಿವಸ ಅಂದರೆ ದಿನಾಂಕ 24/01/2021 ರಂದು 0600
ಗಂಟೆಗೆ ದಿನಂಪ್ರತಿ ಎಳುವಂತೆ ಎದ್ದು ಹೊರಗಡೆ
ಬಂದು ನೋಡಿದಾಗ ಇವರ ತಂಗಿ ಕಾಣದೆ ಇರುವುದರಿಂದ
ಅಜ್ಜಿ,
ಅಜ್ಜನಿಗೆ
ವಿಚಾರಿಸಲು ತನಗೆ ಗೊತ್ತಿರುವುದಿಲ್ಲಾ ಅಂತ ತಿಳಿಸಿದ್ದು ಇರುತ್ತದೆ. ನಂತರ ಫಿರ್ಯಾದಿಯು ಎಲ್ಲಿಯಾದರು
ಹೋಗಿರಬಹುದು ಅಂತ ಭಾವಿಸಿದ್ದು ಸಮಯವಾದರು ಮನೆಗೆ ಬಂದಿರಲಿಲ್ಲಾ ಎಲ್ಲಾ ಕಡೆ ನೆಂಟರ
ಹತ್ತಿರ ವಿಚಾರಿಸಲಾಗಿದ್ದು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ. ಆದ್ದರಿಂದ ಫಿರ್ಯಾದಿಯು ತನ್ನ
ತಂಗಿಯಾದ ಸಪ್ನಾ @
ರೆಬೆಕಾ ವಯ 21 ವರ್ಷ ಇವಳು ದಿನಾಂಕ 23,24/01/2021 ರಾತ್ರಿ ವೆಳೆಯಲ್ಲಿ ನಮ್ಮ ಮನೆಯಿಂದ
ಕಾಣೆಯಾಗಿರುತ್ತಾಳೆ ಎಲ್ಲಾ ಕಡೆ ಹುಡಕಾಡಿಕೊಂಡು ಪೊಲೀಸ ಠಾಣೆಗೆ ಬಂದು ಈ ದೂರು ನೀಡಲು
ತಡವಾಗಿರುತ್ತದೆ. ಕಾಣೆಯಾದ ನನ್ನ ತಂಗಿಯ ವಿವರ ಈ ಕೆಳಗಿನಂತೆ ಇರುತ್ತದೆ. ಹೆಸರು:- ಸಪ್ನಾ @ ರೆಬೆಕಾ ತಂದೆ ಹೆಸರು :- ಬಾಬುರಾವ
ಕೆಂಪೆ ವಯಸ್ಸು :- 21 ವರ್ಷ
ಎತ್ತರ :- 5-4
ಫೀಟ ಚಹರೆ ಪಟ್ಟಿ :- ದಪ್ಪನೆಯ ಮೈಕಟ್ಟು, ಗೋದಿ ಮೈಬಣ್ಣ, ಇರುತ್ತದೆ. ಧರಿಸಿದ ಬಟ್ಟೆಗಳು :- ಬೂದಿ ಬಣ್ಣದ
ನೂರಿ ಪೈಜಾಮಾ ಮಾತನಾಡುವ ಭಾಷೆ :- ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ.ಅಂತಾ
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮುಡುಬಿ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 05/2021 ಕಲಂ ಮಹಿಳೆ ಕಾಣೆ :-
ದಿನಾಂಕ 31/01/2021 ರಂದು 1345 ಗಂಟೆಗೆ ಶ್ರೀಮತಿ ಸುನಿತಾ ಗಂಡ
ಗಣಪತಿ ಪವಾರ ವಯ: 39 ವರ್ಷ ಜಾತಿ: ಲಂಬಾಣಿ ಸಾ|| ಬಾಗ ಹಿಪ್ಪರ್ಗಾ ತಾಂಡಾ ಇವರು
ನೀಡಿದ ಅರ್ಜಿಯ ಸಾರಾಂಶವೆನೆಂದರೆ ಇವರ ಪತಿಯು ನಾಲ್ಕು ವರ್ಷದ ಹಿಂದೆ ಮರಣ ಹೊಂದಿರುತ್ತಾನೆ ಇವರಿಗೆ
1] ವೈಷ್ಣವಿ ವಯ: 19 ವರ್ಷ 2] ನವೀನ ವಯ: 17 ವರ್ಷ 3] ವೈಶಾಲಿ ವಯ: 15 ವರ್ಷ 4] ಕಲ್ಪನಾ ವಯ:
12 ವರ್ಷ ಹೀಗೆ ನಾಲ್ಕು ಜನ ಮಕ್ಕಳು ಇರುತ್ತಾರೆ. ಹೀಗಿರುವಾಗ ಹಿರಿಯ
ಮಗಳಾದ ವೈಷ್ಣವಿ ಇವಳು ಕಲಬುರಗಿಯ ಮಹಿಳಾ ಕಾಲೇಜಿನಲ್ಲಿ ಬಿ ಕಾಂ ಮೊದಲನೆ ವರ್ಷದ ವಿದ್ಯಾಭ್ಯಾಸ
ಮಾಡುತ್ತಿರುತ್ತಾಳೆ. ದಿನಾಂಕ 21/01/2021 ರಂದು ಬೆಳಿಗ್ಗೆ 0900 ಗಂಟೆಯ ಸುಮಾರಿಗೆ ಕು.ವೈಷ್ಣವಿ ಇವಳು ಕಾಲೇಜಿಗೆ ಹೋಗಿ ಬರುತ್ತೆನೆಂದು
ಹೇಳಿ ಮನೆಯಿಂದ ಹೋಗಿ ಸಂಜೆ 0800 ಗಂಟೆಯಾದರೂ ಮನೆಗೆ ಬಾರದ ಕಾರಣ ಅವಳ ಮೋಬಾಯಿಲ್ ಗೆ ಕಾಲ್
ಮಾಡಿದಾಗ ಅವಳ ಪೋನ್ ಸ್ವಿಚ್ಆಪ್ ಅಂತಾ ಹೇಳಿರುತ್ತದೆ. ಆಗ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಿದಾಗ ವೈಷ್ಣವಿ ಇವಳ
ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ಸಂಬಂಧಿಕರ ಊರು ಮತ್ತು ಕಲಬುರಗಿಗೆ ಹೋಗಿ
ಹುಡಕಾಡಲಾಗಿ ವೈಷ್ಣವಿ ಇವಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ನನ್ನ ಮಗಳು ಮನೆಯಿಂದ
ಹೋಗುವಾಗ ಹಳದಿ ಬಣ್ಣದ ಟಾಪ್ ಬಿಳಿ ಬಣ್ಣದ ಪ್ಯಾಂಟ ಹಾಕಿಕೊಂಡಿದ್ದು ನೋಡಲು ಗೊಧಿ ಬಣ್ಣ ದುಂಡು
ಮುಖ ತೆಳ್ಳನೆ ಮೈಕಟ್ಟು ಅಂದಾಜು 05 ಪೀಟ್ ಎತ್ತರ ಇದ್ದು ಕನ್ನಡ ಹಿಂದಿ ಹಾಗೂ ಲಂಬಾಣಿ ಭಾಷೆ
ಮಾತನಾಡುತ್ತಾಳೆ ನನ್ನ ಮಗಳು ವೈಷ್ಣವಿ ಇವಳು ಕಾಣೆಯಾದ ನಂತರ ಎಲ್ಲಾ ಕಡೆ ಹುಡಕಾಡಿ ನಮ್ಮ
ಕುಟುಂಬದ ಸದಸ್ಯರೊಂದಿಗೆ ವಿಚಾರಿಸಿ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಕಾಣೆಯಾದ ನನ್ನ ಮಗಳನ್ನು ಹುಡುಕಿಕೋಡಲು ವಿನಂತಿ
ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.