Police Bhavan Kalaburagi

Police Bhavan Kalaburagi

Tuesday, June 30, 2020

BIDAR DISTRICT DAILY CRIME UPDATE 30-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 30-06-2020

ಬೇಮಳೇಡಾ ಠಾಣೆ  ಅಪರಾದ ಸಂಖ್ಯೆ 28/2020 ಕಲಂ 87 ಕೆ.ಪಿ ಎಕ್ಟ್  :-

ದಿನಾಂಕ 29-06-2020 ರಂದು 16:30 ಗಂಟೆಗೆ  ಬಸಿಲಾಪೂರ  ಶಿವಾರದಲ್ಲಿರವ  ಬಾಲಾಸಾಬ ದರ್ಗಾಕ್ಕೆ ಹೋಗವ ರೋಡಿನ ಮೇಲೆ ಸಾರ್ವಜನಿಕ  ಸ್ಥಳದಲ್ಲಿ  ಅಂದಾರ ಬಾಹೇರ ಎಂಬ ಇಸ್ಪೇಟ ಆಟವಾಡುತ್ತಿದ್ದಾರೆ. ಅಂತಾ ಖಚಿತ ಬಾತ್ಮಿ  ಬಂದ ಮೆರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ  ಸಾರ್ವಜನಿಕ  ಸ್ಥಳದಲ್ಲಿ ಕೆಲವು ಜನರು ಗೋಲಾಕರವಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಅಂದರ-ಬಾಹರ ಎಂಬ ನಸಿಬಿನ ಇಸ್ಪೀಟ್ ಜೂಜಾಟ ಆಡುತ್ತಿರುವುದು ಖಚಿತಪಡಿಸಿಕೊಂಡು   ದಾಳಿ ಮಾಡಿ 2 ಜನರನ್ನು ಹಿಡಿಯಲಾಯಿತ್ತು. ಇನ್ನೂ 2 ಜನರು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೊದರು ದಾಳಿ ಮಾಡಿ ಹಿಡಿದ 2 ಜನರ ಅಂಗ ಜಡ್ತಿ ಮಾಡಿ ಹೆಸರು, ವಿಳಾಸ ವಿಚಾರಿಸಿದ್ದು 1) ಸಂತೋಷ ತಂದೆ ಶಿವರಾಮ ಮೇತ್ರೆ ಸಾ// ಟೀಚರ ಕಾಲೋನಿ ಹುಮನಾಬಾದ ಇತನ ಹತ್ತಿರ 880=00 2) ಮಹ್ಮದ ಆಸೀಪ ತಂದೆ ಮುಸ್ತಫ ಸಾ// ಜೇರಪೇಟ ಹುಮನಾಬಾದ ಇತನ ಹತ್ತಿರ 1150=00 ರೂಪಾಯಿಗಳು ಹಾಗೂ  ಎಲ್ಲರ ನಡುವೆ ಜೂಜಾಟಕ್ಕೆ ಪಣಕ್ಕೆ ಹಚ್ಚಿದ ರೂಪಾಯಿ ನೋಡಲು 780=00 ರೂ ಹೀಗೆ ಒಟ್ಟು 2810=00 ರೂಪಾಯಿಗಳು ಹಾಗೂ ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ   ಯೋಹನ ಚಾಂಗಲೇರಾ ಮತ್ತು ಸಿದ್ದು ಸಿಂಧನಕೇರಾ ಅಂತಾ ತಿಳಿದು ಬಂದಿರುತ್ತದೆ .ಜೂಜಾಟಕ್ಕೆ ಸಂಭಂಧಿಸಿದ 52 ಇಸ್ಪೀಟ್ ಎಲೆಗಳು, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಸವಕಲ್ಯಾಣ  ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 78(3) ಕೆಪಿ ಕಾಯ್ದೆ :-

ದಿನಾಂಕ 29-06-2020 ರಂದು 0730 ಗಂಟೆಗೆ ಪಿಎಸ್ಐ ರವರು  ಜೊತೆಯಲ್ಲಿ ಲೊಕೇಶ ಸಿಪಿಸಿ 1152, ಪ್ರವೀಣ ಸಿಪಿಸಿ 1160 ರವರೊಂದಿಗೆ ನಮ್ಮ ಠಾಣೆಯ ಜೀಪ ನಂಬರ ಕೆಎ-38-ಜಿ-287 ನೇದ್ದರಲ್ಲಿ ಠಾಣೆಯಿಂದ ಹೊರಟು   ಪರಿಕ್ಷಾ ಕೇಂದ್ರಗಳಾದ ಧನ್ನೂರ(ಕೆ),  ಮುಚಳಂಬ, ರಾಜೊಳಾ, ರಾಜೇಶ್ವರ ಪರಿಕ್ಷೆ ಕೇಂದ್ರಗಳಿಗೆ ಭೇಟ್ಟಿಕೊಟ್ಟು ಪರಿಕ್ಷೆ ಬಂದೋಬಸ್ತ ಮುಗಿಸಿಕೊಂಡು 1415 ಗಂಟೆಗೆ   ರಾಜೇಶ್ವರದಲ್ಲಿ ಇದ್ದಾಗ  ರಾಜೇಶ್ವರ ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ 1 ರೂಪಾಯಿಗೆ 90 ರೂಪಾಯಿ ಅಂತಾ ಕೂಗುತ್ತಿದ್ದು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಮೆರೆಗೆ ಹೋಗಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕುಗುತ್ತಾ 1 ರೂಪಾಯಿಗೆ 90 ರೂಪಾಯಿ ಅಂತಾ ಜೋರಾಗಿ ಕೂಗುತ್ತಿದ್ದು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 1630   ಗಂಟೆಗೆ ಅವನ ಮೇಲೆ ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಅಲ್ಲೆ ಇದ್ದ ಜನರು ಓಡಿ ಹೋಗಿರುತ್ತಾರೆ ಜೂರಾಗಿ ಕೂಗಾಡಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಗೆ ಆತನ ಹೆಸರು ಮತ್ತು ವಿಳಾಸ ನಾನು ವಿಚಾರಿಸಲು ಆ ವ್ಯಕ್ತಿ ತನ್ನ ಹೆಸರು ಶಿವಾನಂದ ತಂದೆ ಈರಣ್ಣಾ ಮಚಕೂರಿ ವಯ 31 ವರ್ಷ ಜಾತಿ ಎಸ್ ಸಿ ಹೊಲಿಯಾ ಉದ್ಯೋಗ ಕೂಲಿ ಕೆಲಸ ಸಾ : ರಾಜೇಶ್ವರ ಗ್ರಾಮ ಅಂತಾ ತಿಳಿಸಿದನು. ಇತನ ಅಂಗ ಝಡ್ತಿ ಮಾಡಲು ಇತನ ಹತ್ತಿರ 2,500 ರೂಪಾಯಿ ಒಂದು ಬಾಲ ಪೇನ್ ಹಾಗೂ ಮಟಕಾ ಬರೆದ ಚೀಟಿ ಸಿಕ್ಕಿರುತ್ತವೆ. ಪುನಃ ಶಿವಾನಂದ ಇತನಿಗೆ ನಾನು ಪಂಚರ ಸಮಕ್ಷಮ ವಿಚಾರಿಸಲು ಆತನ ತಿಳಿಸಿದೇನೆಂದರೆ ನಾನು ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಂಡು ಬಂದ ಹಣವನ್ನು 100 ರೂಪಾಯಿಗೆ 20 ರೂಪಾಯಿ ಕಮೀಷನಂತೆ ತ್ರೀಪೂರಾಂತ ಬಸವಕಲ್ಯಾಣನಿನ ಮೋಹನ ತಂದೆ ಮಧುಕರ ಸೂರ್ಯವಂಶಿ ವಯ 28 ವರ್ಷ ಜಾತಿ ಎಸ್ ಸಿ ಮಾದಿಗ ಉದ್ಯೋಗ ಕೂಲಿ ಕೆಲಸ ಇತನಿಗೆ ಕೊಡುತ್ತೇನೆ ಅಂತಾ ತಿಳಿಸಿದೆನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Sunday, June 28, 2020

BIDAR DISTRICT DAILY CRIME UPDATE 28-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 28-06-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 102/2020 ಕಲಂ 379 ಐಪಿಸಿ :-

ದಿನಾಂಕ 27/06/2020 ರಂದು 1800 ಗಂಟೆಗೆ ಫಿರ್ಯಾದಿ ಪ್ರಶಾಂತ ತಂದೆ  ಕಾಶಿನಾಥ ಸಾ/ ವಿದ್ಯಾನಗರ ಕಾಲೋನಿ  ಬೀದರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಯ ಹೊಂಡಾ ಎಕ್ಟಿವಾ 5 ಜಿ ಬಿಳಿ  ಬಣ್ಣದ  ನಂ ಕೆಎ-38-ಡಬ್ಲ್ಯೂ-6310  , ಚಾಸಿಸ್ ನಂ. ಎಮ್ಇ4ಜೆಎಫ್50ಬಿಬಿಕೆಜಿ114826  ಇಂಜೀನ್ ನಂ. ಜೆಎಫ್0ಇಜಿ1114855 ಅಂ.ಕಿ: 49000/- ರೂ. ಇದ್ದು   ದಿನಾಂಕ 22/06/2020 ರಂದು ರಾತ್ರಿ 2200 ಗಂಟೆಯ ಸುಮಾರಿಗೆ  ಮನೆಯ ಮುಂದೆ ನಿಲ್ಲಿಸಿ  ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದು ದಿನಾಂಕ. 23-06-2020 ರಂದು  ಮುಂಜಾನೆ. 0700 ಗಂಟೆಯ ಸುಮಾರಿಗೆ ಎದ್ದು ಹೊರಗೆ ಬಂದು ನೋಡಲಾಗಿ  ಮೋಟಾರ ಸೈಕಲವನ್ನು ಇರಲಿಲ್ಲಾ ಫಿರ್ಯಾದಿ ಮತ್ತು ಗೆಳೆಯರು ಸೇರಿ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಇಲ್ಲಿಯವರೆಗೆ ಸಿಕ್ಕಿರುವದಿಲ್ಲಾ ಕಾರಣ ನನ್ನ ಎಕ್ಟಿವಾ 5 ಜಿ ಮೋಟಾರ ಸೈಕಲವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಠಾಣೆ ಅಪರಾಧ ಸಂಖ್ಯೆ 70/2020 ಕಲಂ 379 ಐಪಿಸಿ :-

ದಿನಾಂಕ 27/06/2020  ರಂದು 2030 ಗಂಟೆಗೆ ಫಿರ್ಯಾದಿ ಶ್ರೀ. ನಾಗೇಶ ಚಿಕಲಿಂಗೆ ತಂದೆ ಬಸವರಾಜ ವಯ:29 ವರ್ಷ ಜಾತಿ:ಲಿಂಗಾಯತ ಉ:ಮಾಕರ್ೆಟಿಂಗ ಕೆಲಸ ಸಾ/ಸಿದ್ದಾರೆಡ್ಡಿ ಲೆಔಟ ನೌಬಾದ ಬೀದರ  ರವರು ಠಾಣೆಗೆ ಹಾಜರಾಗಿ   ಲಿಖಿತ  ದೂರು ನೀಡಿದರ ಸಾರಾಂಶವೆನೆಂದರೆ   ಬಜಾಜ ಪಲ್ಸಾರ 150 ಸಿಸಿ  ಮೋಟರ ಸೈಕಲ  ನಂ ಟಿಎಸ್1-ಇಎಸ್8703  ನೇದನ್ನು    ದಿನಾಂಕ 23/06/2020  ರಂದು ರಾತ್ರಿ 00:30 ಎ.ಎಮ್. ಗಂಟೆಗೆ   ಮೊಟರ ಸೈಕಲನ್ನು   ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದು ್ದ, 06:30 ಗಂಟೆಯ ಸಮಯಕ್ಕೆ ಎದ್ದು ನೋಡಿದಾಗ   ಮೊಟರ ಸೈಕಲ ಇದ್ದಿರುವದಿಲ್ಲ.   ಮನೆಯ ಅಕ್ಕ ಪಕ್ಕದಲ್ಲಿ  ನೊಡಿದಾಗ ಎಲ್ಲಿಯೂ ಕಾಣಲಿಲ್ಲ.  ದಿನಾಂಕ 23/06/2020 ರಂದು ರಾತ್ರಿ 00:30  ಎ.ಎಮ. ರಿಂದ 06:30 ಎ..ಎಮ್. ಗಂಟೆಯ ಅವಧಿಯಲ್ಲಿ  ಸಿದ್ದಾರೆಡ್ಡಿ ಲೇಔಟ ನೌಬಾದನಲ್ಲಿ ಇರುವ ನಮ್ಮ ಮನೆಯ ಮುಂದೆ  ನಿಲ್ಲಿಸಿದ  ನನ್ನ ಬಜಾಜ ಪಲ್ಸಾರ   ಮೋಟರ ಸೈಕಲ  ನಂ ಟಿ.ಎಸ್.11ಇಎಸ್.8703  ನೇದನ್ನು ಕಳ್ಳತನ ಮಾಡಿಕೊಂಡು  ಹೋದ ಅಪರಿಚಿತ ಕಳ್ಳರ  ವಿರುಧ್ಧ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಬೇಕೆಂದು ವಿನಂತಿ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಖಟಕಚಿಂಚೊಳ್ಳಿ ಪೊಲಿಸ್ ಠಾಣೆ ಅಪರಾಧ ಸಂಖ್ಯೆ 48/2020 ಕಲಂ 379 ಐಪಿಸಿ:-

ದಿನಾಂಕ; 27/06/2020 ರಂದು 1600 ಗಂಟೆಗೆ  ಫಿರ್ಯಾದಿ ಶ್ರೀ ಭೀಮಾಶಂಕರ ತಂದೆ ಶರಣಪ್ಪಾ ಬೀಚಕುಂದೆ ವಯ- 28 ವರ್ಷ ಜಾತಿ- ಲಿಂಗಾಯತ ಉ- ಸೈಟ್ ಇಂಜಿನಿಯರ ಸಾ- ಭಾಲ್ಕಿ ರವರ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರ ಸಾರಂಶವೆನೆಂದರೆ  ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಘೋಡವಾಡಿಯಿಂದ ಹೋನ್ನಳಿ ರಸ್ತೆ ಸುಧಾರಣೆ ಕಾಮಗಾರಿಯನ್ನು ಟೆಂಡರ ಮೂಲಕ ಕೈಗೊಳ್ಳಲಾಗುತ್ತಿದೆ  ಸದರಿ ಕಾಮಗಾರಿಯು ಪ್ರಗತಿಯಲ್ಲಿದ್ದು ದಿನಾಂಕ: 10/06/2020 ರಂದು ನಮ್ಮ ಕಂಪನಿಯ 06 ವಾಹಾನಗಳು ಗೌಸೊದ್ದಿನ ತಂದೆ ಶಮಶೊದ್ದಿನ ಮು-ಘೋಡವಾಡಿ ರವರ  ಗೊರ್ಟಾ ಶಿವಾರದಲ್ಲಿ ಇರುವ ಹೋಲದಲ್ಲಿ ರಾತ್ರಿ 08:00 ಪಿ,ಎಮ್ ಗಂಟೆಗೆ  ನಿಲ್ಲಿಸಲಾಗಿರುತ್ತದೆ  ದಿನಾಂಕ: 11/06/2020 ರಂದು ಬೆಳ್ಳಿಗೆ ಸುಮಾರು 07:20 ಗಂಟೆಗೆ ಕಾಮಗಾರಿ ಪುನಃ ಪ್ರಾರಂಭಿಸಲು ವಾಹನಗಳ ನಿಲ್ಲಿಸಿರುವ ಸ್ಥಳಕ್ಕೆ ಹೋದಾಗ 06 ವಾಹನಗಳ ಇಂಧನದ ಟ್ಯಾಂಕಗಳ ಬೀಗವನ್ನು ಮುರಿದು ಎಸೆಯಲಾಗಿದ್ದು 06 ವಾಹಾನಗಳ್ಳಿ ಸುಮಾರು 700 ಲೀಟರ (ಡೀಜಲ್) ಇಂಧನ ಯಾರೋ ಅಪರಿಚೀತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ 1 ಲೀಟರ ಡೀಜಲ ಬೇಲೆ 70.37 ಇದ್ದು 700 ಲೀಟರ ಡೀಜಲನ ಒಟ್ಟು ಬೇಲೆ 49259/- ಇರುತ್ತದೆ    ಆದರಿಂದ ಮಾನ್ಯರೆ ಈ ಕಳುವಿನ ಬಗ್ಗೆ ತನಿಖೆ ಮಾಡಿ ಸೂಕ್ತ ಕಾನೂನ ಕ್ರಮ ಕೈಗೊಳ್ಳಲು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Saturday, June 27, 2020

BIDAR DISTRICT DAILY CRIME UPDATE 27-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-06-2020

ಬೇಮಳಖೇಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 26-06-2020 ರಂದು ಫಿರ್ಯಾದಿ ಅಜಯಕುಮಾರ ತಂದೆ ವೀರಣ್ಣ ಕೊಟಿ ಸಾ: ವೆಂಕಟೇಶ್ವರ ನಗರ ಕುಕಡಪಲ್ಲಿ ಹೈದ್ರಾಬಾದ ರವರ ತಂದೆಯಾದ ವೀರಣ್ಣಾ ತಂದೆ ಗುರಪ್ಪಾ ಕೋಟಿ ವಯ: 67 ವರ್ಷ, ಜಾತಿ: ಲಿಂಗಾಯತ, ಸಾ: ಆಲಗೋಲ, ತಾ: ಜಹೀರಾಬಾದ, ಜಿಲ್ಲಾ: ಸಂಗಾರೆಡ್ಡಿ ರವರು ತಮ್ಮ ಮನೆ ದೇವರಾದ ಶ್ರೀ ಚಾಂಗಲೇರಾ ವೀರಭದ್ರೇಶ್ವರ ದೇವರ ದರ್ಶನ ಮಾಡಿಕೊಂಡು ಬರುತ್ತೆನೆ ಚಾಂಗಲೇರಾ ಗ್ರಾಮಕ್ಕೆ ಬಂದು ಅವರಿಗಿದ್ದ ಕ್ಷಯ ರೋಗ (ಟಿ.ಬಿ ಕಾಯಿಲೆ) ಹೆಚ್ಚಾಗಿ ಚಾಂಗಲೇರಾ ಶ್ರೀ ವೀರಭದ್ರೇಶ್ವರ ದೇವಾಲದ ದಾಸೋಹದ ಕಟ್ಟಡದ ಎದುರಿಗೆ ರೋಡಿನ ಪಕ್ಕದಲ್ಲಿ ನೆಲದ ಮೇಲೆ ಆಕಸ್ಮಿಕವಾಗಿ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 302 ಐಪಿಸಿ :-
ಫಿರ್ಯಾದಿ ಸುಭಾಷ ತಂದೆ ಗುಂಡೇರಾವ ಪೊಲೀಸ್ ಪಾಟೀಲ್ ಸಾ: ಮರಖಲ್ ಗ್ರಾಮ, ತಾ: & ಜಿ: ಬೀದರ ರವರ ಗ್ರಾಮದ ಲಲೀತಾಬಾಯಿ ತಂದೆ ಶಂಕರೆಪ್ಪ ಬಿರಾದಾರ ರವರಿಗೆ 32 ವರ್ಷಗಳ ಹಿಂದೆ ತೆಲಂಗಾಣಾ ರಾಜ್ಯದ ಕುಶನೂರ ಗ್ರಾಮದ ತಮ್ಮ ಸೋದರ ಮಾವನ ಜೊತೆಯಲ್ಲಿ ಮದುವೆ ಮಾಡಿಕೊಟ್ಟಿದ್ದು, ಲಲೀತಾಬಾಯಿ 2 ವರ್ಷ ಮಾತ್ರ ತನ್ನ ಗಂಡನ ಹತ್ತಿರ ಉಳಿದು, 30 ವರ್ಷಗಳ ಹಿಂದೆ ತನ್ನ ಗಂಡನಿಗೆ ಬಿಟ್ಟು ಮರಖಲ ಗ್ರಾಮಕ್ಕೆ ಬಂದು ತನ್ನ ತಂದೆ-ತಾಯಿಯ ಮನೆಯಲ್ಲಿಯೇ ವಾಸವಾಗಿದ್ದು, ಲೀತಾಬಾಯಿ ಬಿರಾದಾರ ವರ ತಂದೆ ಮೃತಪಟ್ಟ ಬಳಿಕ ಲಲೀತಾಬಾಯಿ ಬಿರಾದಾರ ಮತ್ತು ಅವರ ಅಣ್ಣ ಕುಶಾಲರಾವ ಬಿರಾದಾರ ರವರ ಮಕ್ಕಳ ಮದ್ಯ ಆಸ್ತಿ ಹಂಚಿಕೆ ಕುರಿತು ತಕರಾರು ಆಗಿದ್ದು ರವರ ಮದ್ಯ ಕಳೆದ 5-6 ವರ್ಷಗಳಿಂದ ಆಸ್ತಿ ಹಂಚಿಕೆ ಕುರಿತು 2-3 ಸಾರಿ ತಕರಾರು ಮಾಡಿಕೊಂಡಿರುತ್ತಾರೆ, ಇದರ ಬಗ್ಗೆ ಊರಿನ ಹಿರಿಯರು ಇಬ್ಬರಿಗೂ ಬುದ್ದಿ ಹೇಳಿರುತ್ತಾರೆ, ಕಳೆದ 7 ವರ್ಷಗಳ ಹಿಂದೆ ಕುಶಾಲರಾವ ಬಿರಾದಾರರವರು ಮೃತಪಟ್ಟದ್ದು, ಕಳೆದ 4 ವರ್ಷUಳಿಂದ ಜಗದೇವಿ ಬಿರಾದಾರ ರವರು ಬೀದರದಲ್ಲಿ ಬಾಡಿಗೆ ಮನೆ ಡಿಕೊಂಡು ಅಲ್ಲಿಯೇ ವಾಸವಾಗಿದ್ದು, ಆವಾಗ ಆವಾಗ ಅವರು ಮರಖಲ ಗ್ರಾಮಕ್ಕೆ ಬಂದು ಹೋಗುತ್ತಿದ್ದರು, ಲಲೀತಾಬಾಯಿ ಬಿರಾದಾರ ರವರ ಸೋದರಳಿಯ ಸಚೀನ್ ಬಿರಾದಾರ ಇತನು ಸುಮಾರು ಸಲ ಮರಖಲ ಗ್ರಾಮಕ್ಕೆ ಬಂದಾಗಲೆಲ್ಲಾ ಆಸ್ತಿ ಹಂಚಿಕೆ ಕುರಿತು ತನ್ನ ಅತ್ತೆ ಲಲೀತಾಬಾಯಿ ಇವಳೊಂದಿಗೆ ತಕರಾರು ಮಾಡುತ್ತಲೆ ಬಂದಿರುತ್ತಾನೆ, ನಂತರ ದಿನಾಂಕ 09-01-2020 ರಂದು 2200 ಗಂಟೆಯಿಂದ ದಿನಾಂಕ 10-01-2020 ರಂದು 0900 ಗಂಟೆ ಮದ್ಯಾವಧಿಯಲ್ಲಿ ಲಲೀತಾಬಾಯಿ ಬಿರಾದಾರ ರವರು ಮರಖಲ ಗ್ರಾಮದ ತಮ್ಮ ಮನೆಯಲ್ಲಿ ಸಂಶಾಸ್ಪದ ರಿತಿಯಲ್ಲಿ ಮೃತಪಟ್ಟಿರುತ್ತಾರೆ, ನಂತರ ಫಿರ್ಯಾದಿಗೆ ಗೊತ್ತಾಗಿದ್ದೇನೆಂದರೆ ಲಲೀತಾಬಾಯಿ ಬಿರಾದಾರ ರವರಿಗೆ ಕೊಲೆ ಮಾಡಿದರೆ ಪುರ್ತಿ ಆಸ್ತಿ ತನಗೆ ಸೇರುತ್ತದೆ ಅಂತಾ ಅವಳ ಸೋದರಳಿಯ ಆರೋಪಿ ಸಚೀನ ತಂದೆ ಕುಶಾಲರಾವ ಬಿರಾದಾರ ಮರಖಲ ಗ್ರಾಮ ಈತನು ತನ್ನ ಅತ್ತೆ ಲಲೀತಾಬಾಯಿ ಬಿರಾದಾರ ರವರಿಗೆ ಕತ್ತು ಹಿಸುಕಿ ಕೊಲೆ ಮಾಡಿರುತ್ತಾನೆ ಅಂತಾ ತಿಳಿದು ಬಂದಿರುತ್ತದೆ, ಲಲೀತಾಬಾಯಿ ಬಿರಾದಾರ ರವರಿಗೆ ಅವಳ ಸೋದರಳಿಯ ಸಚೀನ್ ತಂದೆ ಕುಶಾಲರಾವ ಬಿರಾದಾರ ಈತನೇ ಕೊಲೆ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 26-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 101/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 25-06-2020 ರಂದು ವೆಂಕಟರೆಡ್ಡಿ ತಂದೆ ವೀರರೆಡ್ಡಿ ಪೋಗುಲ ವಯ: 45 ವರ್ಷ, ಜಾತಿ : ರೆಡಿ, ಸಾ: ಜಾಂಪಡ, ತಾ: & ಜಿ: ಬೀದರ ರವರು ತನ್ನ ಮೋಟಾರ ಸೈಕಲ ಮೇಲೆ ತನ್ನ ಮಗಳು ರುಕ್ಮೀಣಿ ಮತ್ತು ಮಗ ಹರಿಕಾಂತ ರೆಡ್ಡಿ ಮೂವರು ಬೀದರ ಕುಂಬಾರವಾಡಾ ಹತ್ತಿರ ಇರುವ ಕರ್ನಾಟಕ ಕಾಲೇಜ ಹತ್ತಿರ ಬಂದು ರುಕ್ಮೀಣಿಗೆ ಬಿಟ್ಟು ಅವಳಿಗೆ ಕಾಲೇಜನ ಲೈಬ್ರರಿಯಲ್ಲಿ ಪುಸ್ತಕ ಬದಲಾಯಿಸಿಕೊಂಡು ನೀನು ನಿನ್ನ ಗೆಳತಿಯಾದ ಗುಮ್ಮೆ ಕಾಲೋನಿಯ ದಿವ್ಯಾ ಇವಳ ಮನೆಗೆ ಹೋಗು ನಾನು ನಿಗೆ 1330 ಗಂಟೆಯ ಸುಮಾರಿಗೆ ಕರೆಯಲು ಬರುತ್ತೆನೆ ಅಂತ ಅವಳಿಗೆ ಹೇಳಿ ಮಗನಾದ ಹರಿಕಾಂತ ಇವನ 10 ನೇ ತರಗತಿ ಪರೀಕ್ಷೆ ಇದ್ದ ಕಾರಣ ಅವನಿಗೆ ಮಾತೊಶ್ರೀ ಶಾಲೆಗೆ ಬಿಟ್ಟು ನಂತರ ಆಮೇಲೆ ಬರುತ್ತೆನೆ ಅಂತ ತಿಳಿಸಿ ಅಲ್ಲಿಂದ ಹೋಗಿ ನಂತರ ಫಿರ್ಯಾದಿಯು 1330 ಗಂಟೆಗೆ ಕಾಲೇಜ ಹತ್ತಿರ ಬಂದು ಅಲ್ಲಿಂದ ದಿವ್ಯಾ ಇವಳ ಮನೆಗೆ ಹೋಗಿ ವಿಚಾರಿಸಲು ದಿವ್ಯಾ ತಿಳಿಸಿದ್ದೆನೆಂದರೆ ರುಕ್ಮೀಣಿ ನನ್ನ ಮನೆಗೆ ಬಂದಿರುವದಿಲ್ಲಾ ಅವಳು ಬರಬೇಕಾದರೆ ಯಾವಾಗಳು ನನಗೆ ಕರೆ ಮಾಡಿ ಬರುತ್ತಿದ್ದಳು ಅಂತ ತಿಳಿಸಿರುತ್ತಾಳೆ, ನಂತರ ಫಿರ್ಯಾದಿಯು ತನ್ನ ಮಗಳು ಕಾಣೆಯಾದ ಬಗ್ಗೆ ಎಲ್ಲಾ ಕಡೆ ಸಂಬಂಧಿಕರ ಹತ್ತಿರ ಹುಡುಕಲು ಯಾವುದೆ ರೀತಿಯ ಮಾಹಿತಿ ಸಿಕ್ಕಿರುವದಿಲ್ಲ, ಮಗಳ ಚಹರೆ ಪಟ್ಟಿ ಹೆಸರು 1) ಕುಮಾರಿ ರುಕ್ಮೀಣಿ ತಂದೆ ವೆಂಕಟರೆಡ್ಡಿ ವಯ: 18 ವರ್ಷ 02 ತಿಂಗಳು, ಜಾತಿ: ರೆಡ್ಡಿ, ಸಾ: ಜಾಂಪಾಡ, ಬೀದರ, 2) ಮೈಬಣ್ಣ: ಗೋಧಿ ಮೈ ಬಣ್ಣ, ಮೈಕಟ್ಟು: ಸಾಧಾರಣ, 3) ಟಾಪ: ಕೆಂಪು&ಕರಿ ಕಲರ ಅದರಲ್ಲಿ ಬಾಲ್ಸ ಟೇಪ ಚಿತ್ರವುಳ್ಳ ಟಾಪ ಮತ್ತು ಕೆಂಪು ಕಲರ ಪ್ಯಾಂಟ ಇರುತ್ತದೆ, 4) ಭಾಷೆ: ತೆಲಗು, ಕನ್ನಡ, ಹಿಂದಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 69/2020, ಕಲಂ. 379 ಐಪಿಸಿ :-
ದಿನಾಂಕ 20-06-2020 ರಂದು 1600 ಗಂಟೆಯಿಂದ 1730 ಗಂಟೆಯ ಮದ್ಯದ ಅವಧಿಯಲ್ಲಿ  ಬೀದರ ಸರಕಾರಿ ಆಸ್ಪತ್ರೆಯ ಮುಖ್ಯ ಬಾಗಿಲಿನ ಎದುರಿಗೆ ನಿಲ್ಲಿಸಿದ ಫಿರ್ಯಾದಿ ರಾಜಶೇಖರ ತಂದೆ ಬಸಪ್ಪ ಸಾ: ಕಂಗಟಿ, ತಾ: ಬೀದರ ರವರ ಅಣ್ಣನ ಹೀರೊ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ-38/ಯು-6429, ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್..ಆರ್.073.ಹೆಚ್.ಹೆಚ್.ಹೆಚ್.98219, ಇಂಜಿನ್ ನಂ. ಹೆಚ್..10..ಜಿ.ಹೆಚ್.ಹೆಚ್.ಹೆಚ್.5859, ಮಾಡಲ್ 2017, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 30,000/- ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಮಶದ ಮೇರೆಗೆ ದಿನಾಂಕ 26-06-2020 ರಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 73/2020, ಕಲಂ. 15(), 32(3) ಕೆ. ಕಾಯ್ದೆ :-
ದಿನಾಂಕ 26-06-2020 ರಂದು ತಾಜಲಾಪೂರ ಗ್ರಾಮದಲ್ಲಿ ರವಿ ಪೆಂಟರ ಇವರು ತನ್ನ ಹತ್ತಿರ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ತಮ್ಮ ಮನೆಯ ಹತ್ತಿರ ರಸ್ತೆಯ ಬದಿಯಲ್ಲಿ ಜನರಿಗೆ ಮಧ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿರುತ್ತಾರೆ ಅಂತ ಸಿದ್ದಲಿಂಗ ಪಿ.ಎಸ್.ಬೀದರ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತಾಜಲಾಪೂರ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಲಕ್ಷ್ಮೀ ಮಂದಿರ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಮಧ್ಯಪಾನ ಮಾಡುತ್ತಿರುವುದನ್ನು ನೋಡಿ ದಾಳಿ ಮಾಡುವಾಗ ಅಲ್ಲಿ ಸೇರಿದ ಜನರು ಓಡಿ ಹೋಗಿದ್ದು, ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ಆರೋಪಿ ರವಿ ತಂದೆ ಭೀಮರಾವ ಪೆಂಟರ ವಯ: 65 ವರ್ಷ, ಜಾತಿ: ಉಪ್ಪಾರ, ಸಾ: ತಾಜಲಾಪೂರ ಗ್ರಾಮ ಇತನಿಗೆ ಹಿಡಿದು ಅವನ ವಶದಲ್ಲಿದ್ದ ಪ್ಲಾಸ್ಟಿಕ ಚೀಲದಲ್ಲಿ ಏನಿದೆ? ತೆಗೆದು ತೋರಿಸಲು ಕೇಳಿದಾಗ ಅವನು ತೆಗೆದು 2 ಕೊಡ್ಯಾಸ್ ಮಧ್ಯದ ಒಡೆದ 375 ಎಂ.ಎಲ್ ದ ಪ್ಲಾಸ್ಟಿಕ ಬಾಟಲಗಳು ಇದ್ದು ಅವುಗಳಲ್ಲಿ ಅರ್ಧದಷ್ಟು ಮಧ್ಯ ಇರುತ್ತದೆ ಮತ್ತು 2 ಗಾಜಿನ ಗ್ಲಾಸಗಳು ಸರಾಯಿ ಕುಡಿಯಲು ಇಟ್ಟಿದ್ದು ಸದರಿ ಗ್ಲಾಸಗಳು ಹಾಜರು ಪಡಿಸಿರುತ್ತಾನೆ, ಸದರಿ ಸ್ವತ್ತು ಜಪ್ತಿ ಮಾಡಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 46/2020, ಕಲಂ. 279, 338 ಐಪಿಸಿ :-
ದಿನಾಂಕ 26-06-2020 ರಂದು ಫಿರ್ಯಾದಿ ಅನಿಲಸ್ವಾಮಿ ತಂದೆ ಅಶೋಕಸ್ವಾಮಿ ಮಠಪತಿ ಸಾ: ಶಿವಾಜಿ ನಗರ ಕಲಬುರಗಿ ರವರಿ ತನ್ನ ಗೆಳೆಯನಾದ ಅಜಯಕುಮಾರ ತಂದೆ ಶಶಿಕಾಂತ ಭೀಮನಳ್ಳಿ ಸಾ: ಭವಾನಿ ನಗರ ಕಲಬುರಗಿ ಇತನ ಮೋಟಾರ್ ಸೈಕಲ್ ಸಂ. ಕೆಎ-32/ಇ.ಜೆ-0689 ನೇದರ ಮೇಲೆ ಕಲಬುರಗಿಯಿಂದ ಹುಮನಾಬಾದ ಮಾರ್ಗವಾಗಿ ಬಸವಕಲ್ಯಾಣಕ್ಕೆ ಹೋಗುತ್ತಿರುವಾಗ ಅಜಯಕುಮಾರ ಇವನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ರಾಷ್ಟ್ರೀಯ ಹೆದ್ದಾರಿ-65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮೋಳಕೇರಾ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹೋಗಿ ರೋಡಿನ ಡಿವೈಡರಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಎಡಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯ, ಬಲಗಾಲ ಪಾದಕ್ಕೆ ತರಚಿದ ಗಾಯಗಳು ಆಗಿರುತ್ತವೆ, ಅಜಯಕುಮಾರ ಇವನಿಗೆ ನೋಡಲಾಗಿ ಎಡಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯ ಮತ್ತು ತಲೆಗೆ ಹಾಗೂ ಗಟಾಯಿಗೆ ರಕ್ತಗಾಯಗಳು ಆಗಿರುತ್ತವೆ, ನಂತರ ಇಬ್ಬರು ಚಿಕಿತ್ಸೆ ಕುರಿತು 108 ಆಂಬುಲೆನ್ಸದಲ್ಲಿ ಕುಳಿತುಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 43/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 26-06-2020 ರಂದು ಗೌರ-ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿಗಳನ್ನು ಬರೆದುಕೊಳ್ಳುತ್ತಿದ್ದಾನೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೌರ ಗ್ರಾಮಕ್ಕೆ ಹೋಗಿ ಗ್ರಾಮದ ಹೊರಗೆ ಮರೆಯಾಗಿ ವಿಕ್ಷಿಸಿ ನೋಡಲು ಆರೋಪಿ ಬಸವರಾಜ ತಂದೆ ವೈಜಿನಾಥ ಶೇಟ್ಟೆಪ್ಪಾ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಗೌರ ಇತನು ಗೌರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತಿರುವದನ್ನು ನೋಡಿ ದಾಳಿ ನಡೆಸಿ ಹಿಡಿದು ವಿಚಾರಿಸಲು ನಾನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಒಂದು ರೂಪಾಯಿಗೆ 90/- ರೂಪಾಯಿಗಳು ಕೊಡುವದಾಗಿ ಭರವಸೆ ನೀಡಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣಿ ಮಟ್ಕಾ ನಂಬರಿನ ಚೀಟಿ ಬರೆದುಕೊಳ್ಳುತ್ತಿರುವದಾಗಿ ತಿಳಿಸಿದ್ದು, ನಂತರ ಅದಕ್ಕೆ ಸಂಬಂಧಪಟ್ಟ ಮಟಕಾ ನಂ. ಬರೆದ 3 ಚೀಟಿಗಳು, ಸಂಗ್ರಹ ಮಾಡಿದ ಒಟ್ಟು ಹಣ 4080/- ರೂಪಾಯಿಗಳು ಹಾಗು ಒಂದು  ಬಾಲ ಪೆನ್ನ ಹಾಜರ ಪಡಿಸಿದ ಮೇರೆಗೆ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 140/2020, ಕಲಂ. 317 ಐಪಿಸಿ :-
ದಿನಾಂ20-06-2020 ರಂದು 0600 ಗಂಟೆಗೆ ಫಿರ್ಯಾದಿ ಮಹಾನಂದಾ ಗಂಡ ಅಣ್ಣಾರಾವ ದೇಶಮುಖ ಸಾ: ತೀನದುಕಾನ ಗಲ್ಲಿ ಭಾಲ್ಕಿ ರವರು ವಾಕಿಂಗ (ವಾಯು ವಿಹಾರ) ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಖಂಡ್ರೆ ಗಲ್ಲಿಯಲ್ಲಿ ಮುಕ್ತಮ್ಮ ಖಂಡ್ರೆ ರವರ ಮನೆಯ ಹತ್ತಿರ ಮಗು ಅಳುತ್ತಿರುವ ಶಬ್ದ ಕೇಳಿ ತಕ್ಷಣ ನೋಡಲಾಗಿ ಒಂದು ನವಜಾತ ಹೆಣ್ಣು ಶಿಶುವನ್ನು ಯಾರೋ ಅಪರಿಚಿತ ಮಹಿಳೆ ಅನಾಥವಾಗಿ ತೊರೆದು ಬಿಟ್ಟು ಹೋಗಿರುತ್ತಾರೆ, ಸುತ್ತಲೂ ಹುಡುಕಾಡಲು ಯಾರೂ ಇಲ್ಲದರಿಂದ ಮಗು ಅಳುತ್ತಿರುವುದರಿಂದ ಕೂಡಲೆ ಫಿರ್ಯಾದಿಯು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿ, ನಂತರ ಭಾಲ್ಕಿಯ ದತ್ತು ಕೇಂದ್ರದ ಅಧ್ಯಕ್ಷ ಶ್ರೀ ಅನೀಲ ಹಾಲಕುಡೆರವರಿಗೆ ಕರೆ ಮಾಡಿ ತಿಳಿಸಿದ್ದರಿಂದ ಅವರು ಬಂದು ಆಸ್ಪತ್ರೆಯಲ್ಲಿ ವ್ಯವಸ್ಥೆ ಇಲ್ಲದ ಕಾರಣ ಅದೆ ದಿವಸ ಕರಡ್ಯಾಳ ದತ್ತು ಕೇಂದ್ರಕ್ಕೆ ತೆಗೆದುಕೊಂಡು ಹೋಗಿರುತ್ತಾರೆ, ಸದ್ಯ: ಮಗು ಸುರಕ್ಷತವಾಗಿ ಮತ್ತು ಕ್ಷೇಮವಾಗಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.