ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-08-2021
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 09/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸುರೇಖಾ ಗಂಡ ಕಮಲಾಕರ ಸಾಗರ, ವಯ: 28 ವರ್ಷ, ಜಾತಿ: ಎಸ್.ಸಿ, ಸಾ: ಹಣಕುಣಿ ರವರ ಮಾವ ತುಕಾರಾಮ ತಂದೆ ದೇವಪ್ಪಾ ರವರ ಹೆಸರಿನಲ್ಲಿ ಇಟಗಾ ಗ್ರಾಮದ ಹೊಲ ಸರ್ವೆ ನಂ. 199 ನೇದರಲ್ಲಿ 3 ಎಕ್ಕರೆ 12 ಗುಂಟೆ ಜಮೀನು ಇರುತ್ತದೆ, ಸದರಿ ಜಮೀನಿನಲ್ಲಿ ಉಳುವೆ ಮಾಡಲು ಫಿರ್ಯಾದಿಯವರ ಗಂಡ ಪಿ.ಕೆ.ಪಿ.ಎಸ್. ಬ್ಯಾಂಕ ಇಟಗಾದಲ್ಲಿ 01,00,000/- ರೂ. ಹಾಗೂ ಎಸ್.ಬಿ.ಐ ಬ್ಯಾಂಕ ಚಿಟಗುಪ್ಪಾದಲ್ಲಿ 02,85,000/- ರೂ. ಸಾಲ ಪಡೆದಿರುತ್ತಾರೆ, ಈ ವರ್ಷ ಹೊಲದಲ್ಲಿ ತೊಗರೆ ಮತ್ತು ಸೊಯಾ ಬೆಳೆ ಹಾಕಿದ್ದು ಈ ವರ್ಷ ಮಳೆ ಬೀಳದೆ ಇದ್ದುದ್ದರಿಂದ ಹೊಲದಲ್ಲಿನ ತೊಗರೆ ಮತ್ತು ಸೊಯಾ ಬೆಳೆ ಹಾಳಾಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 07-08-2021 ರಂದು ಫಿರ್ಯಾದಿಯವರ ಗಂಡ ಬ್ಯಾಂಕಿನಲ್ಲಿ ಮಾಡಿದ ಸಾಲ ಹೇಗೆ ತಿರಿಸುವುದು ಅಂತಾ ಚಿಂತೆ ಮಾಡಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಮ್ಮ ಬೇಡ ರೂಕಿನ ತಗಡದ ಕೆಳಗಿನ ಕಟ್ಟಿಗೆ ದಂಟಕ್ಕೆ ಶಾಲಿನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 49/2021, ಕಲಂ. 295 ಐಪಿಸಿ :-
ದಿನಾಂಕ 07-08-2021 ರಂದು 0130 ಗಂಟೆಯ ಸುಮಾರಿಗೆ ಆರೋಪಿತರಾದ 1) ಸುಧಾಕರ ತಂದೆ ಮಹಾದೇವಪ್ಪಾ ಶೇಡೊಳೆ, 2) ಮಂಜು ತಂದೆ ಸೋಮನಾಥ ಕಮಠಾಣೆ ಇಬ್ಬರೂ ಸಾ: ಬೇಲೂರ ಇವರಿಬ್ಬರು ಡಾ: ಬಿ.ಆರ್ ಅಂಬೇಡ್ಕರ ಚೌಕ ಹತ್ತಿರ ಅಳವಡಿಸಿದ ಡಾ: ಬಿ.ಆರ ಅಂಬೇಡ್ಕರ ರವರ ಭಾವಚಿತ್ರವುಳ್ಳ ಮಹಾನಾಯಕ ಧಾರವಾಹಿಯ ಬ್ಯಾನರಗೆ ಅಪಮಾನಗೊಳಿಸುವ ಉದ್ದೇಶದಿಂದ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ಹರಿzÀÄ ಹಾಕಿ ಅಪಮಾನಗೊಳಿಸಿರುತ್ತಾರೆಂದು ಫಿರ್ಯಾದಿ ನವ£Áಥ ತಂದೆ ವಿಶ್ವನಾಥ ಬೆಳ್ಳೆ ವಯ: 48 ವರ್ಷ, ಜಾತಿ: ಎಸ್.ಸಿ, ಸಾ: ಬೇಲೂರ ರವರು ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 136/2021, ಕಲಂ. ಮನುಷ್ಯ ಕಾಣೆ :-
ದಿನಾಂಕ 05-07-2021 ರಂದು 1730 ಗಂಟೆಗೆ ಫಿರ್ಯಾದಿ ಶಾಂತಮ್ಮಾ ಗಂಡ ನಾಗಪ್ಪಾ ಸಾಗರ ವಯ: 58 ವರ್ಷ, ಜಾತಿ: ಎಸ್.ಸಿ ಹೊಲೆಯಾ, ಸಾ: ಎಂ.ಪಿ ಗಲ್ಲಿ ಹುಮನಾಬಾದ ರವರ ಮಗನಾದ ಜಗನ್ನಾಥ ತಂದೆ ನಾಗಪ್ಪಾ ಸಾಗರ ವಯ: 45 ವರ್ಷ, ಜಾತಿ: ಎಸ್.ಸಿ ಹೊಲೆಯಾ, ಸಾ: ಎಂ.ಪಿ ಗಲ್ಲಿ ಹುಮನಾಬಾದ ಇತನು ತನ್ನ ಹೆಂಡತಿಯಾದ ಶ್ರೀದೇವಿಗೆ ಇವಳ ಜೊತೆ ಜಗಳ ಮಾಡಿಕೊಂಡು ಟಾಟಾ ಎಸಿ ವಾಹನ ತೆಗೆದುಕೊಂಡು ಕೆಲಸಕ್ಕೆ ಹೋಗಿ ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲಾ, ನಂತರ ಫಿರ್ಯಾದಿಯು ತನ್ನ ಮಗನನ್ನು ಎಲ್ಲಾ ಕಡೆಗೆ ಹುಡುಕಾಡಲು ಎಲ್ಲಿಯಾ ಸಿಕ್ಕಿರುವದಿಲ್ಲಾ, ಆತನು ಕಾಣೆಯಾಗಿರುತ್ತಾನೆ, ಕಾಣೆಯಾದ ಮಗನ ಚಹರೆ ಪಟ್ಟಿ 1) ಜಗನ್ನಾಥ ತಂದೆ ನಾಗಪ್ಪಾ ಸಾಗರ, ವಯ: 45 ವರ್ಷ, ಜಾತಿ: ಎಸ್.ಸಿ ಹೊಲೆಯಾ, 2) ಭಾಷೆ: ಕನ್ನಡ, ಹಿಂದಿ, ಮರಾಠಿ ಮಾತನಾಡುತ್ತಾನೆ, 3) ಚಹರೆ ಪಟ್ಟಿ: ಉದ್ದನೆ ದುಂಡು ಮುಖ, ಸಾಧಾರಣ ಮೈಕಟ್ಟು 4) ಅಂದಾಜು 5-5 ಫೀಟ ಎತ್ತರ ಇರುತ್ತಾನೆ ಹಾಗೂ 5) ಧರಿಸಿದ ಬಟ್ಟೆ: ಕ್ರೀಂ ಬಣ್ಣದ ಶರ್ಟ, ನೀಲಿ ಮಿಶ್ರೀತ ಕಪ್ಪು ಪ್ಯಾಂಟ ಧರಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 07-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 60/2021, ಕಲಂ. 79, 80 ಕೆ.ಪಿ ಕಾಯ್ದೆ :-
ದಿನಾಂಕ 07-08-2021 ರಂದು ಕುರುಬಖೇಳಗಿ ಗ್ರಾಮ ಶಿವಾರದ ಶ್ರೀನಿವಾಸ ತಂದೆ
ಗಣಪತಿ ಹೀಲಾಲಪೂರೆ ಸಾ: ಕುರುಬಖೇಳಗಿ ರವರ ಹೊಲ ಸರ್ವೆ ನಂ. 292 ನೇದರಲ್ಲಿನ ತಮ್ಮ ಕಟ್ಟಡದಲ್ಲಿ
ಶ್ರೀನಿವಾಸ ಹೀಲಾಲಪೂರೆ ರವರು ಕೆಲವು ಜನರೊಂದಿಗೆ ಪರೇಲ್ ಎಂಬ ನಸೀಬನ್ 3 ಎಲೆಯ ಇಸ್ಪೀಟ ಜೂಜಾಟ
ಆಡುತ್ತಿದ್ದಾರೆಂದು ಹುಲೆಪ್ಪ ಪಿ.ಎಸ್.ಐ ಖಟಕಚಿಂಚೋಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ
ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಠಾಣೆಯ ಸಿಬ್ಬಂದಿಯವರೊಡನೆ ಶ್ರೀನಿವಾಸ
ತಂದೆ ಗಣಪತಿ ಹೀಲಾಲಪೂರೆ ಸಾ: ಕುರುಬಖೇಳಗಿ ರವರ ಹೊಲದಲ್ಲಿನ ಕಟ್ಟಡದ ಹತ್ತಿರ ಹೋಗಿ ಅಲ್ಲಿ
ಕಟ್ಟಡದ ಕಿಟಕಿಯಿಂದ ಸದರಿ ಕಟ್ಟಡದ ಒಳಗೆ ನೋಡಲು ಅಲ್ಲಿ ಆರೋಪಿತರಾದ 1) ಶ್ರೀನಿವಾಸ ತಂದೆ ಗಣಪತರಾವ
ಹೀಲಾಲಪೂರೆ ಸಾ: ಕುರುಬಖೇಳಗಿ, 2) ಹಣಮಂತ ತಂದೆ ಸಂಗಪ್ಪ ತಮಸಂಗೆ ಸಾ: ದಾಡಗಿ, 3) ಶಿವಕುಮಾರ
ತಂದೆ ಮಾಣಿಕಪ್ಪ ಪರಸಣೆ ಸಾ: ದಾಡಗಿ, 4) ಶಂತಕುಮಾರ ತಂದೆ ವಿಜಯಕುಮಾರ ಪರಸಣೆ ಸಾ: ದಾಡಗಿ, 5) ನಾಗಶೇಟ್ಟಿ
ತಂಧೆ ವಿಶ್ವನಾಥ ಹುಡಗೆ ಸಾ: ದಾಡಗಿ, 6) ಬಾಬುರಾವ ತಂದೆ ಶಿವಮೂರ್ತಪ್ಪ ಒಳಸಂಗೆ ಸಾ: ದಾಡಗಿ, 7)
ಸಂಜುಕುಮಾರ ತಂದೆ ಸಂಗ್ರಾಮಪ್ಪ ಗುಳಶೇಟ್ಟೆ ಸಾ: ದಾಡಗಿ, 8) ಲಕ್ಷ್ಮಣ ತಂದೆ ಜ್ಞಾನದೇವ ಖರಟಮೋಲ
ಸಾ: ಏಣಕೂರ, 9) ಲೊಕೇಶ ತಂದೆ ವೈಜಿನಾಥ ಪರಸರಗೆ ಸಾ: ಏಣಕೂರ, 10) ರಾಜಕುಮಾರ ತಂದೆ ವೈಜಿನಾಥಪ್ಪ
ವಂಕೆ ಸಾ: ಭಾಲ್ಕಿ ಹಾಗೂ 11) ಶೈಲೇಶ ತಂದೆ ಸತ್ಯನಾರಾಯಣ ಭೈರಾಗೆ ಸಾ: ಭಾಲ್ಕಿ ಇವರೆಲ್ಲರೂ ದುಂಡಾಗಿ
ಕುಳಿತು ಪರೇಲ ಎಂಬ ನಸೀಬಿನ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ
ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದುಕೊಂಡು ಆರೋಪಿ
ಶ್ರೀನಿವಾಸ ಇತನಿಗೆ ಈ ಕಟ್ಟಡದಲ್ಲಿ ಪರೇಲ್ ಎಂಬ ನಸೀಬನ್ 3 ಎಲೆಯ ಇಸ್ಪೀಟ ಜೂಜಾಟ ಆಡಲು ಮತ್ತು
ಆಡಿಸಲು ಯಾವುದೆ ಇಲಾಖೆಯಿಂದ ಅನುಮತಿ ಪಡೆದುಕೊಂಡಿದ್ದಿರಾ ಅಂತ ವಿಚಾರಿಸಿಲು ಆತ ಯಾವುದೇ ರೀತಿಯ
ಅನುಮತಿ ಪಡೆದುಕೊಂಡಿರುವುದಿಲ್ಲಾ ಅಂತ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತರಿಂದ ಒಟ್ಟು ನಗದು ಹಣ 47,550/-
ರೂಪಾಯಿ ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.