ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಬಸವರಾಜ ತಂದೆ
ಹಣಮಂತಪ್ಪಾ ಗೌರಾಗೋಳ ಸಾ; ರೇವಣಸಿದ್ದೇಶ್ವರ
ಕಾಲೋನಿ ಆಳಂದ ರವರು ದಿನಾಂಕ: 11/04/2016 ರಂದು
ರಾತ್ರಿ 10-00 ಗಂಟೆಗೆ ನಮ್ಮ ಆಗ್ರೊ ಬಂದ ಮಾಡಿಕೊಂಡು ಮನೆಗೆ ಬಂದು ಊಟ ಮಾಡಿಕೊಂಡು ಮನೆಯಲ್ಲಿ
ಮಲಗಿ ಕೊಂಡಿದ್ದು ದಿನಾಂಕ: 12/04/2016 ರಂದು ಬೆಳಗ್ಗೆ 6-00 ಗಂಟೆಗೆ ಎದ್ದು ನೋಡಲು ಬಾಗಿಲು
ಖುಲ್ಲಾ ಇದ್ದು ಬಾಗಿಲ ಕೊಂಡಿ ಮುರಿದಿದ್ದು ಹೊರಗೆ ಬಂದು ನೋಡಲು ಬಾಡಿಗೆ ಕೊಟ್ಟಿದ್ದ ಕೋಣೆಯ
ಕೀಲಿ ಸಹ ಮುರಿದಿದ್ದು ನೋಡಿ ನಾನು ಗಾಬರಿ ಬಿದ್ದು ನಮ್ಮ ಡಿಸ್ಟ್ರುಬಿಟರ್‌ಗೆ ಕೊಡಬೇಕು ಅಂತಾ
ನನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟಿದ್ದ 23,800/- ರೂ ಬಂದು ನೋಡಲು ಅದರಲ್ಲಿ ಕಾಣಲಿಲ್ಲ. ದಿನಾಂಕ: 12/04/2016 ರಂದು ರಾತ್ರಿ 01-00
ಎಎಮ್ ದಿಂದ ಬೆಳಗಿನ ಜಾವ 5-00 ಎಎಮ್ ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಒಳಗಿನ ಕೊಂಡಿ
ಮುರಿದು ಮನೆಯ ಒಳಗೆ ಬಂದು ಮನೆಯಲ್ಲಿ ಹ್ಯಾಂಗರಗೆ ಸಿಗಿಸಿದ್ದ ಪಾಂಟಿನ ಜೇಬಿನಲ್ಲಿದ್ದ 23,800/-
ರೂ ಕಳ್ಳತನ ಮಾಡಿಕೊಂಢು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಜಗದೀಶ ತಂದೆ ಗಂಗಪ್ಪ ಹಂದಿಗನೂರ ಸಾ:
ಮಳ್ಳಿ ಗ್ರಾಮ ತಾ: ಜೇವರಗಿ ಇವರು ಸುಮಾರು 2 ವರ್ಷಗಳಿಂದ ನಮ್ಮ ಮನೆಯಲ್ಲಿ ಪಾಲುಗಾರಿಕೆ ವಿಷಯದಲ್ಲಿ ನಮಗು ಹಾಗು ನಮ್ಮ
ಅಣ್ಣಂದಿರಾದ ಬಸವರಾಜ, ಸುರೇಶ, ಮಡಿವಾಳ ರವರ ಮದ್ಯ ಆಗಾಗ ತಂಟೆ ತಕರಾರು ಆಗುತ್ತಾ ಬಂದಿದ್ದು ಸುಮಾರು
ದಿನಗಳಿಂದ ನನಗೆ ಪಾಲು ಕೊಡುವುದು ಬರುತ್ತದೆ ಅಂತಾ ನಮ್ಮ ಅಣ್ಣಂದಿರು ಊರು ಬಿಟ್ಟು
ಹೋಗಿರುತ್ತಾರೆ. ಈಗ 3 ದಿವಸಗಳಿಂದ ನನ್ನ ಅಣ್ಣ
ಮಡಿವಾಳಪ್ಪ ಈತನು ಊರಿಗೆ ಬಂದಿದ್ದು ನಿನ್ನೆ ರಾತ್ರಿ 9-00 ಗಂಟೆ ಸುಮಾರಿಗೆ ನನಗೆ ನನ್ನ ಅಣ್ಣನಾದ ಮಡಿವಾಳಪ್ಪ ಈತನು ಫೊನ
ಮಾಡಿ ನಿನ್ನ ಹತ್ತಿರ ದಮ್ಮ ಇದ್ದರೆ ಉರಗೆ ಬಂದು ಪಾಲು ತೆಗೆದುಕೊಂಡು ಹೋಗು ನನ್ನ ಹಿಂದೆ
ಬಹಳಷ್ಟು ಜನರಿದ್ದಾರೆ ನಿನು ಬಂದರೆ ನಿನಗೆ ಖಲಾಸ ಮಾಡೆ ಬಿಡುತ್ತೇವೆ ಅಂತಾ ಅಂದನು. ಆಗ ನಾನು
ಹಾಗೆ ಮಾತಾಡುತ್ತಾನೆ ಅಂತಾ ಸುಮ್ಮನಿದ್ದೇನು. ನಮ್ಮ ಅಣ್ಣ ಬಸವರಾಜ ಈತನು ಸಿಮೇ ಎಣ್ಣೆ ವಿತರಕರು
ಇದ್ದು, ಅವರು ಉರಲ್ಲಿ ಇರದೆ ಇದ್ದುದ್ದರಿಂದ ನಾನೆ
ಸಿಮೆ ಎಣ್ಣೆ ವಿತರಣೆ ಮಾಡುತ್ತೇನೆ. ದಿನಾಂಕ 17-05-2016
ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ನಾನು ಸಿಮೆ
ಎಣ್ಣೆ ಬರುತ್ತದೆ ಅಂತಾ ತಿಳಿದು ನಾನು ನಮ್ಮೂರಿಗೆ ಹೋಗಿ ನಮ್ಮ ಮನೆಯ ಮುಂದೆ ಇದ್ದಾಗ, ನಮ್ಮ ಅಣ್ಣ ಮಡಿವಾಳಪ್ಪ ಮತ್ತು ಅವನೊಂದಿಗೆ ನಮ್ಮೂರ ರೇವಣಸಿದ್ದ ತಂದೆ
ಮಲ್ಲಪ್ಪ ಹರಿಜನ, ಶಿವು ತಂದೆ ಮಲ್ಲಪ್ಪ ಹರಿಜನ, ಶ್ರೀಶೈಲ ಹರಿಜನ, ಮಲ್ಲಪ್ಪ ಹರಿಜನ ಹಾಗು ಇತರೆ 10 ಜನರು ಕೂಡಿಕೊಂಡು ನನ್ನ ಹತ್ತಿರ ಬಂದು ಅವರಲ್ಲಿ ರೇವಣಸಿದ್ದ
ಈತನು ನನಗೆ ನಿಮ್ಮ ಅಣ್ಣ ಮಡಿವಾಳಪ್ಪನಿಗೆ ಅಂಜಿಸಿ ಪಾಲ ಕೇಳತಿಯಾ ಮಗನಾ ಅಂತಾ ಅಂದು ಅಲ್ಲೆ
ಬಿದ್ದ ಕಲ್ಲಿನಿಂದ ಬೆನ್ನಿನ ಮೇಲೆ ಹೊಡೆದನು, ಅಲ್ಲದೆ ಶಿವು ಈತನು
ಕಲ್ಲಿನಿಂದ ನನ್ನ ಮುಖದ ಮೇಲೆ, ಹೊಡೆದು ಗುಪ್ತ ಪೆಟ್ಟು
ಮಾಡಿರುತ್ತಾನೆ, ಶ್ರೀಶೈಲ ಈತನು ತನ್ನ ಟೊಂಕಿನಲ್ಲಿದ್ದ
ಬೆಲ್ಟಿನಿಂದ ನನ್ನ ಮೈ ಕೈಗೆ ಹೊಡೆದು ನನ್ನ ಹತ್ತಿರ ಇದ್ದ ಸೂನಿ ಮೂಬೈಲ ತೆಗೆದುಕೊಂಡನು, ಅಲ್ಲದೆ ಮಲ್ಲಪ್ಪ ಹರಿಜನ ಈತನು ನನ್ನ ಕೊರಳಲ್ಲಿಯ ಎರಡು ತೊಲಿ ಬಂಗಾರದ
ಚೈನ ಕಿತ್ತಿಕೊಂಡಿರುತ್ತಾನೆ. ನಮ್ಮ ಅಣ್ಣ ಮಡಿವಾಳಪ್ಪ ಈತನು ಕೊಲೆ ಮಾಡುವ ಉದ್ದೇಶದಿಂದ ನನ್ನ
ತೊಡ್ಡನ್ನು ಹಿಚಿಕಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ದಿನಾಂಕ 17-052016 ರಂದು ಶ್ರೀ ಬರಗಾಲಿ ತಂದೆ ಧರ್ಮಣ್ಣ ಶಿರೂರ, ಸಾ|| ಹಿತ್ತಲಶಿರೂರ. ರವರ ತಂದೆಯವರಾದ ಧರ್ಮಣ್ಣ ತಂದೆ ಮಾಳಪ್ಪ
ಶಿರೂರ ಇವರು ತಮ್ಮ ಮನೆಯ ಮುಂದೆ ರೋಡಿನ ಮೇಲೆ ನೀರು ತರುವಾಗ ಗೈಬಿಸಾಬ ದರ್ಗಾದ ಕಡೆಯಿಂದ ಕೆನಾಲ
ರೋಡಿನ ಮೇಲೆ ಟಿಪ್ಪರ ನಂ. ಕೆ.ಎ 28, ಬಿ 0492 ನೇದ್ದರ ಚಾಲಕನಾದ
ಚಂದ್ರು ತಂದೆ ಶಾವಿರಪ್ಪ ಪೂಜಾರಿ ಸಾ|| ಸಾತಖೇಡ, ತಾ|| ಜೇವರ್ಗಿ
ಇತನು ಟಿಪ್ಪರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿ ತನ್ನ ತಂದೆಗೆ ಡಿಕ್ಕಿಪಡಿಸಿ
ಅಪಘಾತಪಡಿಸಿ ನಿಲ್ಲದೆ ಹೋಗಿದ್ದು ಅಪಘಾತದಲ್ಲಿ ತಂದೆಯ ಎಡಗಾಲಿಗೆ ತೊಡೆಯಿಂದ ಮೊಳಕಾಲವರೆಗೆ ಭಾರಿ
ರಕ್ತಗಾಯ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಬಾಬು ತಂದೆ
ಮೌಲಾಸಾ ಗುಳೇಕರ ಸಾ|| ಭೂಸನೂರ, ಹಾ|| ವ|| ಹಿಂಗೆ ವಠಾರ, ತಾ|| ಬೋರ, ಜಿ|| ಪುಣೆ, ರಾಜ್ಯ || ಮಹಾರಾಷ್ಟ್ರ.
ರವರು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರ ರಾಜ್ಯದ ಹಿಂಗೆ ವಠಾರದಲ್ಲಿ ಸರ್ಜಿರಾವ ತಂದೆ ಗಣಪತರಾವ
ಹಿಂಗೆ ಇವರ ಹತ್ತಿರ ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಹೆಂಡತಿಯಾದ ಹುಸೇನಬಿ ಇವಳೊಂದಿಗೆ
ವಾಸಿಸುತ್ತಿದ್ದೇನೆ,
ನಮ್ಮಿಬ್ಬರಿಗೆ 4 ಜನ ಹೆಣ್ಣು ಮಕ್ಕಳು ಇದ್ದು ಹಿರಿಯ ಮಗಳಾದ ಕು|| ಮದೀನಾ ತಂದೆ ಬಾಬು ಗುಳೇಕರ ವ|| 14 ವರ್ಷ, ಇವಳು ಹಡಲಗಿ
ಗ್ರಾಮದ ಉರ್ದು ಸರ್ಕಾರಿ ಶಾಲೆಯಲ್ಲಿ 8 ತರಗತಿಯಲ್ಲಿ ಓದುತ್ತಿದ್ದು ವಾಸಕ್ಕಾಗಿ ನನ್ನ ಹೆಂಡತಿಯ
ತವರು ಮನೆಯಾದ ಯಳಸಂಗಿ ಗ್ರಾಮದಲ್ಲಿ ನನ್ನ ಅತ್ತೆಯಾದ ಮಾಲನಬಿ ಮತ್ತು ಮಾವ ವಜೀರಸಾಬ ಇವರೊಂದಿಗೆ
ವಾಸಿಸುತ್ತಿದ್ದಾಳೆ. ದಿನಾಲೂ ಶಾಲೆಗೆ ಖಾಸಗಿ ವಾಹನಗಳಲ್ಲಿ ಹೋಗಿ ಬಂದು ಮಾಡುತ್ತಿದ್ದಳು. ನಾನು
ದಿನಾಂಕ 13/05/2016 ರಂದು ಹಿಂಗೆ ವಠಾರದಿಂದ ಭೂಸನೂರ ಗ್ರಾಮಕ್ಕೆ ಬಂದು ನನ್ನ ಮನೆಯ ಜಾಗೆಯ
ಕೆಲಸ ಮುಗಿಸಿಕೊಂಡು ಯಳಸಂಗಿ ಗ್ರಾಮಕ್ಕೆ ಹೋದಾಗ ನನ್ನ ಅತ್ತೆ ಮತ್ತು ಮಾವಂದಿರು ನನಗೆ
ತಿಳಿಸಿದ್ದೇನೆಂದರೆ ನಿನ್ನೆ ದಿನಾಂಕ 12/05/2016 ರಂದು ಬೆಳಿಗ್ಗೆ
1000 ಗಂಟೆಗೆ ಮದಿನಾ ಇವಳು ತಾನು ಭೂಸನೂರ ಗ್ರಾಮಕ್ಕೆ ಹೋಗಿ ಬರುವದಾಗಿ ಹೇಳಿ ಹೊಗಿದ್ದಾಳೆ ಅಂತ
ತಿಳಿಸಿದ ಮೇರೆಗೆ ನಾನು ಭೂಸನೂರ ಗ್ರಾಮದಿಂದಲೇ ಬಂದಿದ್ದು ಅವಳು ಅಲ್ಲಿ ಇಲ್ಲ ಅಂತ
ತಿಳಿಸಿರುತ್ತೇನೆ. ಅಲ್ಲದೆ ಈ ವಿಚಾರ ತಿಳಿದುಕೊಂಡು ನಾನು ನನ್ನ ಅತ್ತೆ, ಮಾವ, ಅಳಿಯನಾದ ಇಲಾಯಿ
ಎಲ್ಲರೂ ಸೇರಿ ಗಾಬರಿಗೊಂಡು ಆಳಂದ, ಕಲಬುರಗಿ,
ನಿಂಬರ್ಗಾ, ಸ್ಟೇಶನ
ಗಾಣಗಾಪೂರಗಳಲ್ಲಿ ಇರುವ ನಮ್ಮ ಸಂಭಂಧಿಕರಲ್ಲಿ ಖುದ್ದಾಗಿ ಹೋಗಿ ವಿಚಾರಿಸಲಾಗಿ ನನ್ನ ಮಗಳು
ಅಲ್ಲಿಗೆ ಹೋಗಿರುವದಿಲ್ಲ ತಿಳಿದಿರುತ್ತದೆ. ಹೀಗಾಗಿ ನಾನು. ನನ್ನ ಅಪ್ರಾಪ್ತ ವಯಸ್ಕ ಮಗಳಿಗೆ
ಯಾರೋ ಯಾವುದೊ ದುರುದ್ದೇಶದಿಂದ ಯಾವುದೊ ಆಮೀಶ ತೋರಿಸಿ ಪುಸಲಾಯಿಸಿ ಅಪಹರಿಸಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.