ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 2: ದಿನಾಂಕ-12/04/2019 ರಂದು ಬೆಳ್ಳಿಗೆ 8-30 ಗಂಟೆ
ಸುಮಾರಿಗೆ ರಾಮ ಮಂದಿರ ದಿಂದ ನಾಗನಹಳ್ಳಿ ಕ್ರಾಸ್ ರಸ್ತೆಯಲ್ಲಿ ಬರುವ ಓಜಾ ಲೇಔಟ್ ಕ್ರಾಸ್
ಹತ್ತಿರ ರೋಡ ಮೇಲೆ ಆರೋಪಿ ಮಹೆಬೂಬ ಈತನು ತನ್ನ ಸೈಕಲ ಮೇಲೆ ಬಿದರಿನ ಬಡಿಗಿಗೆ ಕೊಯಿತ್ತಾ ಕಟ್ಟಿಕೊಂಡು ನಿರ್ಲಕ್ಷತನದಿಂದ ನಾಗಹಳ್ಳಿ
ರೋಡ ಕಡೆಗೆ ಸೈಕಲ್ ತಿರುಗಿಸಿ ರಾಮ ಮಂದಿರ
ಕಡೆಯಿಂದ ಮೋಟಾರ ಸೈಕಲ ನಂ ಕೆಎ-32 ಇವ್ಹಿ-0724 ನೇದ್ದನ್ನು ಚಲಾಯಿಸಿಕೊಂಡು ಬರುತ್ತಿದ್ದ ಮೇಘಾ
ಇವಳ ಕುತ್ತಿಗೆಗೆ ಕೊಯಿತ್ತಾ ಹತ್ತಿ ಭಾರಿ ರಕ್ತಗಾಯವಾಗಿದ್ದು ಸದರಿಯವಳಿಗೆ ಉಪಚಾರ ಕುರಿತು
ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ 8-45 ಗಂಟೆ ಸುಮಾರಿಗೆ ಮೃತಪಟ್ಟಿ
ರುತ್ತಾಳೆ. ಸದರ ಘಟನೆಗೆ ಕಾರಣನಾದ ಮಹೆಬೂಬ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ವರೇಶ ತಂದೆ ಚಂದ್ರಕಾಂತ ಪಡಶೆಟ್ಟಿ ಸಾ : ಕರುಣೇಶ್ವರ ಕಾಲೂನಿ ಕಲಬುರಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 2 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 1: ಶ್ರೀಮತಿ ಭಾಗ್ಯಶ್ರೀ @
ಭಾಗ್ಯಲಕ್ಷ್ಮಿ ರವರು ದಿನಾಂಕ 12-04-2019 ರಂದು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ನನ್ನ ಪರೀಕ್ಷೆಗಳು
ಇರುವದರಿಂದ ನನ್ನ ತಂದೆಯಾದ ಮಲ್ಲಿಕಾರ್ಜುನ ಇವರು ನನಗೆ ವಿ.ಜಿ.ವುಮೇನ್ಸ ಕಾಲೇಜಕ್ಕೆ ಬಿಡುವ
ಸಲುವಾಗಿ ಮೋಟಾರ ಸೈಕಲ ನಂ ಕೆಎ-32/ಎಕ್ಸ-5758 ನೇದ್ದರ ಹಿಂದುಗಡ ನನಗೆ ಕೂಡಿಸಿಕೊಂಡು ಲಾಲಗೆರಿ
ಕ್ರಾಸ ಮುಖಾಂತರವಾಗಿ ಕೋರ್ಟ ಕ್ರಾಸ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ
ಆನಂದ ಹೊಟೇಲ ಕ್ರಾಸ ಹತ್ತೀರ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32/ಇಎಮ್-9417 ನೇದ್ದರ ಸವಾರಳಾದ
ಅಕ್ಷತಾ ಇವಳು ರಂಗ ಮಂದಿರ ಕಡೆಯಿಂದ ಎಸ.ಬಿ ಕಾಲೇಜ್ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ
ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಅಡ್ಡವಾಗಿ ಬಂದು ನಮ್ಮ ಮೋಟಾರ ಸೈಕಲಕ್ಕೆ
ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ತಂದೆಗೆ ಭಾರಿಗಾಯ ಹಾಗೂ ನನಗೆ ಗಾಯಗೊಳಿಸಿ ತಾನೂ ಗಾಯ
ಹೊಂದಿದ್ದು ಸದರಿಯವಳ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಸಿದ್ದಾರೂಡ ತಂದೆ ಶಾಮರಾವ
ಪರಸ್ತಿ ಸಾ : ಪಟ್ಟಣ ತಾ:ಜಿ: ಕಲಬುರಗಿ ರವರು
ಹಾಗು ನನ್ನ ಅಕ್ಕಳಾದ ಅಂಬಿಕಾ ಗಂಡ ಶಿವಲಿಂಗಪ್ಪಾ ಬಿರಾದಾರ ಇಬ್ಬರೂ ಕೂಡಿಕೊಂಡು ಮೊಟರ ಸೈಕಲ
ನಂಬರ್ ಕೆಎ-16, ಇಇ-5673 ನೆದ್ದರ ಮೇಲೆ
ಲಾಡಚಿಂಚೊಳಿ ಜಾತ್ರೆಯ ನಿಮಿತ್ಯ ದಿನಾಂಕ 11/04/2019 ರಂದು ಲಾಡಚಿಂಚೊಳಿ ಗ್ರಾಮಕ್ಕೆ
ಹೋಗಿ ದೇವರಿಗೆ ಕಾಯಿ-ಕರ್ಪುರ ಮಾಡಿಕೊಂಡು ಅದೇ ಮೊಟರ್ ಸೈಕಲ ಮೇಲೆ ಲಾಡಚಿಂಚೋಳಿ ಗ್ರಾಮದಿಂದ
ನಮ್ಮೂರಿಗೆ ಬರುವಾಗ ಸಾಯಂಕಾಲ ಅಂದಾಜು 0700 ಗಂಟೆಯ ಸುಮಾರಿಗೆ ಲಾಡಚಿಂಚೋಳಿ
ಗ್ರಾಮದ ನೀರಿನ ಟ್ಯಾಂಕ ಹತ್ತಿರ ರೋಡಿನ ಮೇಲೆ ಕ್ರೂಸರ್ ನಂ ಕೆಎ-27, ಎಮ್-1655 ನೆದ್ದರ ಚಾಲಕನು ಲಾಡಚಿಂಚೋಳಿ
ಕ್ರಾಸ್ ಕಡೆಯಿಂದ ತನ್ನ ವಶದಲ್ಲಿರುವ ಕ್ರೂಜರ್ ವಾಹನವನ್ನು ಅತೀವೇಗ ಹಾಗು ನಿರ್ಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೊಟರ್ ಸೈಕಲಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ
ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋದನು. ಸದರಿ ಅಪಘಾತದಲ್ಲಿ ನನಗೆ ಬಲಗಾಲಿನ ತೊಡೆ, ಮೋಳಕಾಲಿನ ಹತ್ತಿರ ಹಾಗು ಹಿಂಬಡಿಗೆ ಭಾರಿ ರಕ್ತಗಾಯ ಹಾಗು ಭಾರಿ
ಗುಪ್ತಗಾಯಗಳಾಗಿರುತ್ತದೆ. ನನ್ನ ಸಂಗಡ ಇದ್ದ ನನ್ನ ಅಕ್ಕಳಾದ ಅಂಬಿಕಾ ಇವಳಿಗೆ ಬಲಗೈ ಮೊಣಕೈ
ಹತ್ತಿರ ಗುಪ್ತಗಾಯ ಹಾಗು ತುಟಿಗೆ ರಕ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುಣಾವಣೆ ನೀತಿಸಂಹಿತೆ ಉಲ್ಲಂಘನೆ
ಪ್ರಕರಣ :
ನರೋಣಾ ಠಾಣೆ : ದಿನಾಂಕ:12/04/2019 ರಂದು ಬೆಳಿಗ್ಗೆ ಶ್ರೀ.ಪ್ರವೀಣ್
ತಂದೆ ಅಶೋಕ ಕುಮಾರ ಹೇರೂರ, ಸಾ||ಮನೆ ನಂ:2-631 ಸುಂದರ ನಗರ ಸೇಡಂ ರೋಡ್ ಕಲಬುರಗಿ, ಎಫ್.ಎಸ್.ಟಿ ಮುಖ್ಯಸ್ಥರು ಕಮಲಾಪೂರ, ಮಹಾಗಾಂವ ಮತ್ತು ನರೋಣಾ ಹೊಬಳಿ ರವರ 43-ಗುಲಬರ್ಗಾ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ನರೋಣಾ
ಗ್ರಾಮದಲ್ಲಿ ದಿನಾಂಕ: 09.04.2019 ರಂದು ನಡೆದ ಬಿ.ಜೆ.ಪಿ ಪಕ್ಷದ
ರಾಜಕೀಯ ಪ್ರಚಾರ ಸಭೆಗೆ ಉಲ್ಲೇಖಿತ (1) ರಂತೆ ಷರತ್ತುಗಳಿಗೆ ಒಳಪಟ್ಟು
ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿರುತ್ತದೆ. ಅದರಂತೆ ತಂಡದ ಮುಖ್ಯಸ್ಥರಾದ ಶ್ರೀ ತಿಪ್ಪಣ್ಣ ಸಿರಸಗಿ, ಶ್ರೀ ಶಿವಲಿಂಗಪ್ಪ ದ್ವಿ.ದ.ಸ, ಶ್ರೀ ರಾಜು ಡಿ.ಇ.ಓ
ಗ್ರಾಮ ಪಂಚಾಯತ ಸಣ್ಣೂರ, ಬಸಲಿಂಗಪ್ಪ ಪಿ.ಸಿ ಶಹಾಬಾದ ಪೋಲಿಸ್ ಠಾಣೆ ಇವರುಗಳು
ಸದರಿ ಕಾರ್ಯಕ್ರಮದಲ್ಲಿ ನಿಗದಿಪಡಿಸಿರುವಂತೆ ಚಿತ್ರಿಕರಣ ಮಾಡುತ್ತಿರುವ ಸಮಯದಲ್ಲಿ ಸಭೆಗೆ
ಹಾಜರಾದ ಜನರಿಗೆ ಊಟದ ವ್ಯವಸ್ಥೆ ಮಾಡುವುದು ಚಿತ್ರಿಕರಣದಲ್ಲಿ ಕಂಡುಬಂದಿರುತ್ತದೆಂದು ಜಿಲ್ಲಾ
ಸಮಿತಿಯು ವೀಕ್ಷಿಸಿ ಇದು ನೀತಿ ಸಂಹಿತೆ ಉಲ್ಲಂಘನೆ ಯಾಗಿರುತ್ತದೆಂದು, ಉಲ್ಲೇಖೀತ (2) ರಂತೆ ಕಾರ್ಯಕ್ರಮ ಆಯೋಜಕರಾದ
ಶ್ರೀ ಗುರುಸಿದ್ದಯ್ಯ ತಂ. ಛತ್ರಯ್ಯ ಇವರ ಮೇಲೆ ದೂರು ದಾಖಲಿಸಲು ಸೂಚಿಸಿರುವುದರಿಂದ ಕಮಲಾಪೂರ
ಮಹಾಗಾಂವ ಮತ್ತು ನರೋಣಾ ಹೊಬಳಿ ಮುಖ್ಯಸ್ಥರಾದ ನಾನು ಶ್ರೀ ಪ್ರವೀಣ ಹೇರೂರ ಮುಖ್ಯಸ್ಥರು ಹಾಗೂ
ತಂಡದ ಶ್ರೀ ಪ್ರೇಮಾನಂದ ಚಿಂಚೋಳಿಕರ ಪ್ರ.ದ.ಸ, ಶ್ರೀ ನಾಗೇಂದ್ರ ಸಿಪಿಸಿ 86 ಗ್ರಾಮೀಣ ಪೋಲಿಸ್ ಠಾಣೆ ಶ್ರೀ ಅಲಿಮೊದ್ದಿನ ಅವರಾದ ಗ್ರಾಮ ಪಂಚಾಯತ ಆಗಿದ್ದು
ದಿನಾಂಕ: 09.04.2019 ರಂದು ನಮ್ಮ ತಂಡದ ಸಮಯ 02:00 ರಿಂದ ರಾತ್ರಿ 10:00 ಗಂಟೆ ಆಗಿದ್ದು ಅಂದು
ಏಕ ಕಾಲಕ್ಕೆ 4-5 ಕಡೆ ಬಿ.ಜೆ.ಪಿ ಪಕ್ಷದ ರಾಜಕೀಯ ಪ್ರಚಾರ ಸಭೆಗಳು ಇದ್ದು, ಆ ಸಂದರ್ಭದಲ್ಲಿ ಬೆಳಮಗಿ ಗ್ರಾಮದಲ್ಲಿ ನಡೆಯುವ ಸಭೆಗೆ ಕಾರ್ಯ
ನಿರ್ವಹಿಸಲು ಮೇಲಾಧಿಕಾರಿಗಳ ಆದೇಶದ ಮೇಲೆ ಕೆಲಸ ನಿರ್ವಹಿಸಿದ್ದೇವೆ. ದಿನಾಂಕ: 09.04.2019 ರಂದು ನರೋಣಾ ಗ್ರಾಮದ
ಕಾರ್ಯಕ್ರಮ ವಿ.ಎಸ್.ಟಿ. ತಂಡ ಚಿತ್ರೀಕರಣ ಮಾಡಿದ್ದು, ಜಿಲ್ಲಾ ಸಮಿತಿಯಲ್ಲಿ
ಪರಿಶೀಲಿಸಿದಾಗ ಚಿತ್ರೀಕರಣದಲ್ಲಿ ಸಭೆಗೆ ಹಾಜರಾದ ಜನರಿಗೆ ಊಟ ವ್ಯವಸ್ಥೆ ಮಾಡಿರುವುದು ಕಂಡು
ಬಂದಿರುವುದರಿಂದ ದಿನಾಂಕ: 10.04.2019 ರಂದು ಕಾರ್ಯಕ್ರಮ ಆಯೋಜಕರ
ಮೇಲೆ ದೂರು ದಾಖಲಿಸಲು ಸೂಚಿಸಿರುವುದರಿಂದ ಶ್ರೀ ಗುರುಸಿದ್ದಯ್ಯ ತಂ. ಛತ್ರಯ್ಯ ಮು||ನರೋಣ ಮೋ.ಸಂ:9844811147,
ಆಯೋಜಕರು ಬಿ.ಜೆ.ಪಿ
ಪಕ್ಷ ಇವರ ಮೇಲೆ ಭಾರತ ದಂಡ ಸಂಹಿತೆ ಕಾಯ್ದೆ (ಕಅ) ನಿಯಮ 171 (ಇ) ಹಾಗೂ ಪ್ರಜಾ
ಪ್ರತಿನಿಧಿ ಕಾಯ್ದೆ 1951 ರ ನಿಯಮ 123(1) ರ ಅಡಿಯಲ್ಲಿ ದೂರು
ದಾಖಲಿಸಿಕೊಂಡು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.