Police Bhavan Kalaburagi

Police Bhavan Kalaburagi

Thursday, July 1, 2021

BIDAR DISTRICT DAILY CRIME UPDATE 01-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-07-2021

 

ಮೇಹಕರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 30-06-2021 ರಂದು ಫಿರ್ಯಾದಿ ಶಿವಾಜಿ ತಂದೆ ಸಿತಾರಾಮ ಜಾಧವ ವಯ: 28 ವರ್ಷ, ಜಾತಿ: ಲಂಬಾಣಿ, ಸಾ: ಸಾಯಗಾಂವ ತಾಂಡಾ, ತಾ: ಭಾಲ್ಕಿ ರವರ ತಂದೆಯಾದ ಸಿತಾರಾಮ ತಂದೆ ಅಂಬಾಜಿ ಜಾಧವ ವಯ: 55 ವರ್ಷ ರವರು ಮನೆಯ ಹತ್ತಿರ ಹೊಲದಲ್ಲಿ ಕಟ್ಟಿದ ಎಮ್ಮೆಗೆ ಹುಲ್ಲು ಹಾಕಲು ಹೋದಾಗ ಅವರ ಎಡಗಾಲಿಗೆ ಯಾವುದೋ ಒಂದು ವಿಷಪೂರಿತ ಹಾವು ಕಡಿದಾಗ ಅವರು ಕೆಳಗೆ ಬಿದ್ದಿರುವುದಿರಂದ ಹಾವು ಬಲ ಗಟಾಯಿಗೆ ಕಚ್ಚಿರುತ್ತದೆ,  ನಂತರ ಫಿರ್ಯಾದಿಯು ಅವರನ್ನು ಮನೆಗೆ ತಂದು ನೋಡುವಷ್ಟರಲ್ಲಿ ಪ್ರಾಣ ಹೋಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 14/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 30-06-2021 ಫಿರ್ಯಾದಿ ಚಂದ್ರಕಲಾ ಗಂಡ ಮಾಧವರಾವ ವಯ: 50 ವರ್ಷ, ಸಾ: ಕೊಸಮ, ತಾ: ಭಾಲ್ಕಿ ರವರ ಗಂಡನಾದ ಮಾಧವರಾವ ತಂದೆ ಕೇರಬಾ ವಯ: 60 ವರ್ಷ ರವರು ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡ ಸಾಲವನ್ನು ಮರುಪಾವತಿ ಮಾಡಲು ಆಗದೇ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿದ್ದ ವಿಷಕಾರಿ ಕಿಟನಾಶಕ ಔಷಧಿ ಸೇವಿಸಿ ಗ್ರಾಮದ ಚೌಡಿ ಕಟ್ಟೆಯ ಮೇಲೆ ಚಡಪಡಿಸುವಾಗ ಫಿರ್ಯಾದಿ ಹಾಗೂ ಗ್ರಾಮದವರು ನೋಡಿ ಅವರ ಹತ್ತಿರ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದು ಇರುತ್ತದೆ, ಅವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 76/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 30-06-2021 ರಂದು ಫಿರ್ಯಾದಿ ಬಸವರಾಜ ತಂದೆ ಗಣಪತಿ ಸಿಂಗೆ ಸಾ: ಡೋಣಗಾಪೂರ, ತಾ: ಭಾಲ್ಕಿ ರವರ ಭಾವನಾದ ಆರೋಪಿ ಶೇರದಕುಮಾರ ತಂದೆ ರಾವುಸಾಬ ಸಿಂದೆ ಸಾ: ಕೋರೆಖಲ ರವರು ಮೋಟಾರ ಸೈಕಲ್ ನಂ. ಎಪಿ-12/ಜೆ-7031 ನೇದರ ಮೇಲೆ ಫಿರ್ಯಾದಿಯ ತಂಗಿ ನಮ್ರತಾ ಇವಳಿಗೆ ಮತ್ತು ಅವರ ಎರಡು ಮಕ್ಕಳಿಗೆ ಕೂಡಿಸಿಕೊಂಡು ಕೋರೆಖಲದಿಂದ ಡೊಣಗಾಪೂರ ಗ್ರಾಮಕ್ಕೆ ಬರುವಾಗ ಮೋಟಾರ ಸೈಕಲ್ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಉದಗೀರ-ಬೀದರ ರೋಡಿನ ಮೇಲೆ ಆಳಂದಿ ಶಿವಾರದಲ್ಲಿ ಸಂಗಮ ಬ್ರಿಜ ಹತ್ತಿರ ಮೋಟಾರ ಸೈಕಲಗೆ ಒಮ್ಮೇಲೆ ಬ್ರೆಕ ಹಾಕಿದ್ದರಿಂದ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತ ತಂಗಿ ನಮ್ರತಾ ಇವಳು ಮೋಟಾರ ಸೈಕಲ ಮೇಲಿಂದ ಹಿಂದೆ ರೋಡಿನ ಮೇಲೆ ಬಿದ್ದ ಪ್ರಯಜಕ್ತ ತಲೆಗೆ ಭಾರಿ ರಕ್ತಗಾಯವಾಗಿ ಬಲಕೀವಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 113/2021, ಕಲಂ. 363 ಐಪಿಸಿ :-

ದಿನಾಂಕ 30-06-2021 ರಂದು 0720 ಗಂಟೆಯಿಂದ 0730 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಆರೋಪಿತರು ಫಿರ್ಯಾದಿ ಫಿರ್ಯಾದಿ ರವಿಂದ್ರ ತಂದೆ ಬಾಬುರಾವ ಬಿರಾದರ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಹಿರೆಮಠ ಕಾಲೋನಿ ಬಸವಕಲ್ಯಾಣ  ರವರ ಮಗನಾದ ಅನುರಾಗ ಇತನಿಗೆ ಮನೆಯ ಎದುರಿನಿಂದ ಅಪಹರಿಸಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.