Police Bhavan Kalaburagi

Police Bhavan Kalaburagi

Tuesday, October 1, 2019

BIDAR DISTRICT DAILY CRIME UPDATE 01-10-2019

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 01-10-2019

ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ. 19/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಲಲಿತಾ ಗಂಡ ಬಾಬು ಉಪ್ಪಾರ ಸಾ: ಚಂದನಳ್ಳಿ ರವರ ಗಂಡ ಸರಾಯಿ ಕುಡಿಯುವ ಚಟದವನಾಗಿದ್ದು, ಆತನು ಯಾವಾಗಲೂ ಸರಾಯಿ ಕುಡಿದು ಊರಲ್ಲಿ ಅಲ್ಲಲ್ಲಿ ಬಿಳುವದು ಮಾಡುತ್ತಿದ್ದು ಹೀಗಿರುವಾಗ ದಿನಾಂಕ 29-09-2019 ರಂದು ಗಂಡ ಸರಾಯಿ ಕುಡಿದ ನಶೆಯಲ್ಲಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಅತ್ಮಹತ್ಯ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವದೇ ತರಹದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 30-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 83/2019, ಕಲಂ. 279, 304 () ಐಪಿಸಿ ಜೋತೆ 187 ಐಎಂವಿ ಕಾಯ್ದೆ :-
ದಿನಾಂಕ 30-09-2019 ರಂದು ಫಿರ್ಯಾದಿ ಜಗನ್ನಾಥ ತಂದೆ ಮೈಲಾರಿ ನಿರ್ಣಾ ರವರ ಅಕ್ಕಣ ಮಗಣಾ ಕಾಮಣ್ಣಾ ಇತನು ಸುಮಾರು 7-8 ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿ ಮನೆ ಬಿಟ್ಟು ಹೊರಗಡೆ ಅಲ್ಲಲ್ಲಿ ತಿರುಗಾಡಿಕೊಂಡಿದ್ದು, ಕಾಮಣ್ಣಾ ಇತನು ಈಗ 3-4 ದಿವಸಗಳಿಂದ ಕಪ್ಪರಗಾಂವ ಮತ್ತು ವಡ್ಡನಕೇರಾ ರಾಷ್ಟ್ರೀಯ ಹೆದ್ದಾರಿ ಮೇಲೆ ತಿರುಗಾಡಿಕೊಂಡು ದಿನಾಂಕ 28-09-2019 ರಂದು ರಾತ್ರಿ ಸಮಯದಲ್ಲಿ ಫಿರ್ಯಾದಿಯು ಮನೆಯಲ್ಲಿ ಮಲಗಿಕೊಂಡಾಗ ಕಪ್ಪರಗಾಂವ ಗ್ರಾಮದ ತಮ್ಮ ಮನೆಯ ಪಡಸಾಲೆಯಲ್ಲಿ ಬಂದು ಮಲಗಿಕೊಂಡಿದ್ದು, ನಂತರ 0600 ಗಂಟೆ ಸುಮಾರಿಗೆ ಎದ್ದು ಹೊಗಿರುತ್ತಾನೆ, ಅವನ ಮೈಮೇಲೆ ಕಪ್ಪು ಬಣ್ಣದ ಪ್ಯಾಂಟ ಮತ್ತು ಶರ್ಟ ಇದ್ದವು ಮತ್ತು ಅವನು ಯಾವಾಗಲು ತನ್ನ ಸೊಂಟಕ್ಕೆ ಪ್ಯಾಂಟಿನ ಮೇಲೆ ಪ್ಲಾಸ್ಟಿಕ ದಾರ ಕಟ್ಟಿಕೊಂಡು ತಿರುಗಾಡುತ್ತಿದ್ದನು, ಹೀಗಿರುವಾಗ ದಿನಾಂಕ 30-09-2019 ರಂದು ರಾತ್ರಿ 1230 ಗಂಟೆಯ ಸುಮಾರಿಗೆ ಕಾಮಣ್ಣಾ ಇವನು ರಾಷ್ಟ್ರೀಯ ಹೆದ್ದಾರಿ ನಂ. 65 ನೇದರ ಮೇಲೆ ವಡ್ಡನಕೇರಾ ಕ್ರಾಸ ಹತ್ತಿರ ನಡೆದುಕೊಂಡು ಹೋಗುವಾಗ ಹೈದ್ರಾಬಾದ ಕಡೆಯಿಂದ ಹುಮನಾಬಾದ ಕಡೆಗೆ ಚಲಾಯಿಸಿಕೊಂಡು ಹೊಗುತ್ತಿದ್ದ ಒಂದು ಕಂಟೇನರ್ ವಾಹನ ಚಾಲಕ ಅಪಘಾತ ಪಡಿಸಿಕೊಂಡು ಹೋಗಿದ್ದು, ಸದರಿ ಕಂಟೇನರ್ ನಂಬರ ಗೊತ್ತಾಗಿರುವುದಿಲ್ಲಾ, ಇದರಿಂದ ಕಾಮಣ್ಣಾ ಇತನ ಮೃತ ದೇಹವು ಸಂಪುರ್ಣವಾಗಿ ಮುದ್ದೆಯಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 138/2019, ಕಲಂ. 379 ಐಪಿಸಿ :-
ದಿನಾಂಕ 30-09-2019 ರಂದು ಫಿರ್ಯಾದಿ ಮಹ್ಮದ ಯೂಸೂಫ್ ತಂದೆ ಅಬ್ದುಲ ರಜಾಖ ವಯ: 56 ವರ್ಷ, ಜಾತಿ: ಮುಸ್ಲಿಂ, ಸಾ: ಹನುಮಾನ ಮಂದಿರದ ಹಿಂದೆ, ನಿಚ್ಚೆ ಮಹೆಲಾ ಕಮಠಾಣಾ, ತಾ: ಜಿ: ಬೀದರ ರವರು ಬಿಲಾಲ ಪ್ರಾರ್ಥಮಿಕ ಶಾಲೆ ಕಮಠಾಣಾದಲ್ಲಿ ಸಹಾಯಕ ಶಿಕ್ಷಕ ಅಂತ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿಯವರು ಡಿ.ಸಿ.ಸಿ. ಬ್ಯಾಂಕಿನ ಮಖ್ಯ ಶಾಖೆಯಲ್ಲಿ 5,50,000/- ರೂ. ಹಣವನ್ನು ಸುಮಾರು 2 ವರ್ಷಗಳ ಹಿಂದೆ ಎಫ್.ಡಿ ಇಟ್ಟಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 30-09-2019 ರಂದು ಫಿರ್ಯಾದಿಯು ತನ್ನ ಹೆಂಡತಿಯಾದ ಅಫಸರ ಬೇಗಂ ಕೂಡಿಕೊಂಡು ತಮ್ಮೂರಿನಿಂದ ತನ್ನ ಹೀರೊ ಮೇಸ್ಟ್ರೊ ಮೊಟರ ಸೈಕಲ ಮೇಲೆ ಹೊರಟು, ಬೀದರ ಬಸವೇಶ್ವರ ವೃತ್ತದ ಹತ್ತಿರ ಇರುವ ಡಿ.ಸಿ.ಸಿ. ಬ್ಯಾಂಕಿಗೆ ಬಂದು ಬ್ಯಾಂಕಿನಿಂದ ತನ್ನ ಖಾತೆಯಲ್ಲಿಟ್ಟಿದ್ದ 5,50,000/- ರೂ. ಹಣವನ್ನು ತೆಗೆದುಕೊಂಡು ಒಂದು ಪ್ಲಾಸ್ಟಿಕ ಕ್ಯಾರಿಬಾಗಿನಲ್ಲಿ ಹಾಕಿ ಅದನ್ನು ಒಂದು ಪ್ಲಾಸ್ಟಿಕ ಕೈಚೀಲದಲ್ಲಿ ಹಾಕಿಕೊಂಡು ತನ್ನ ಮೊಟರ ಸೈಕಲಿನ ಸೀಟಿನ ಕೆಳಗೆ ಇರುವ ಡಿಕ್ಕಿಯಲ್ಲಿ ಇಟ್ಟುಕೊಂಡು ಕೆನರಾ ಬ್ಯಾಂಕಿಗೆ ಬಂದು ಮೊಟರ ಸೈಕಲನ್ನು ಬ್ಯಾಂಕಿನ ಮುಂದೆ ನಿಲ್ಲಿಸಿ, ಬ್ಯಾಂಕಿನಲ್ಲಿ ಹೋಗಿ ಮರಳಿ ಬ್ಯಾಂಕಿನಿಂದ ಹೊರಗೆ ಬಂದು ನೋಡಿದಾಗ ಮೊಟರ ಸೈಕಲಿನ ಡಿಕ್ಕಿ ತೆರೆದಿತ್ತು, ಡಿಕ್ಕಿಯಲ್ಲಿ ಹಣ ಇರಲಿಲ್ಲ, ಹಣ ಕಳವು ಆದ ಬಗ್ಗೆ ತನ್ನ ಸಂಬಂಧಿಕರಾದ ಮಹ್ಮದ ಸುಜಾವೊದ್ದೀನ ಇವರಿಗೆ ತಿಳಿಸಿದಾಗ ಕಳವು ಆದ ಹಣದ ಬಗ್ಗೆ ಹುಡುಕಾಡಿದ್ದು, ಎಲ್ಲಿಯೂ ಯಾವುದೇ ಸುಳಿವು ಸಿಕ್ಕಿರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 39/2019, ಕಲಂ. 498(), 306 ಜೊತೆ 34 ಐಪಿಸಿ :-
ದಿನಾಂಕ 30-09-2019 ರಂದು ಫಿರ್ಯಾದಿ ಉಮಾದೇವಿ ಗಂಡ ಶಿವಶರಣಪ್ಪಾ ಸಾವಳೆ ಸಾ: ಬಳತ(ಬಿ), ತಾ: ಔರಾದ(ಬಾ) ರವರ ಹಿರಿಯ ಮಗಳಾದ ರಾಜಶ್ರೀ ಇವಳಿಗೆ ಸಂತಪುರದ ಗ್ರಾಮದ ಅಮೃತರಾವ ಪಾಟಿಲ್ ರವರ ಮಗನಾದ ಬಸವರಾಜ ಪಾಟಿಲ್ ಇತನೊಂದಿಗೆ 15 ವರ್ಷಗಳ ಹಿಂದೆ ತಮ್ಮ ಧರ್ಮದ ಪ್ರಕಾರ ಮದುವೆ ಮಾಡಿದ್ದು, ರಾಜಶ್ರೀ ಇವಳಿಗೆ ಮೂರು ಜನ ಮಕ್ಕಳಿರುತ್ತಾರೆ, ಅವಳ ಗಂಡ ಬಸವರಾಜ ರವರು 4-5 ವರ್ಷಗಳಿಂದ ಬೀದರದಲ್ಲಿ ಗುಂಪಾ ವಿಭಾಗದ ಕೆ..ಬಿ ಕಾಲೋನಿಯಲ್ಲಿ ಒಂದು ಮನೆ ಬಾಡಿಗೆ ಮಾಡಿಕೊಂಡು ಹೆಂಡತಿ, ಮಕ್ಕಳು ಮತ್ತು ತಾಯಿಯೊಂದಿಗೆ ವಾಸವಾಗಿರುತ್ತಾರೆ, ಬಸವರಾಜ ಇತನು ಸಾರಾಯಿ ಸೇವಿಸುವ ಚಟದವನಿದ್ದು, ಸರಾಯಿ ಕುಡಿದು ಬಂದು ರಾಜಶ್ರೀ ಇವಳ ಜೊತೆಯಲ್ಲಿ ಜಗಳ ತೆಗೆಯುವದು ಮತ್ತು ಅವಳಿಗೆ ಹೊಡೆ ಬಡೆ ಮಾಡುವದು, ಚಿತ್ರ ಹಿಂಸೆ ಕೊಡುವದು ಮಾಡುತಿದ್ದನು, ಅಲ್ಲದೇ ಮನೆಯಲ್ಲಿದ್ದ ಅತ್ತೆ ಶರಣಮ್ಮಾ ಇವಳು ಸಹ ರಾಜಶ್ರೀ ಇವಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಅವಳು ಸಹ ಚಿತ್ರ ಹಿಂಸೆ ಕೊಡುತಿದ್ದಳು, ನಾದಣಿಯಾದ ಅಶ್ವಿನಿ ಹಾಗು ಅವಳ ಗಂಡನಾದ ಸಚಿನ ಇವರು ಸಹ ಆವಾಗ ಆವಾಗ ಮನೆಗೆ ಬಂದಾಗ ಅವರು ಸಹ ರಾಜಶ್ರೀ ಇವಳಿಗೆ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುವದು ಅಲ್ಲದೆ ಅವರೆಲ್ಲರೂ ಕೂಡಿ ಸಾಯುವ ಹಾಗೆ ಪ್ರಚೋದನೆ ನೀಡುತ್ತಿದ್ದು, ಅವರು ಕೊಡುವ ತೊಂದರೆಯಿಂದ ಅವಳು ಪ್ರಾಣ ಕಳೆದುಕೊಳ್ಳಲು ಸಹ ಹೋಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 30-09-2019 ರಂದು ಕರೆ ಮುಖಾಂತರ ರಾಜಶ್ರೀ ಇವಳು ಬೀದರ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾಳೆಂದು ಕರೆ ಬಂದಾಗ ಫಿರ್ಯಾದಿಯು ಸಂತಪುರ ಮನೆಗೆ ಹೋಗಿ ನೋಡಲಾಗಿ ಮಗಳು ಮರಣ ಹೊಂದಿದ್ದು ಕುತ್ತಿಗೆಯ ಸುತ್ತಲು ಕಂದು ಗಟ್ಟಿದಯದಿಂದ ಮರಣ ಹೊಂದಿರುತ್ತಾಳೆ, ಅವಳ ಗಂಡನಿಗೆ ಪೊಲೀಸರಿಗೆ ಏಕೆ ಮಾಹಿತಿ ತಿಳಿಸಿಲ್ಲ ಅಂತ ಕೇಳಿದಾಗ, ಆತನು ಗಾಬರಿಗೊಂಡಿದ್ದು ಇರುತ್ತದೆ, ಫಿರ್ಯಾದಿಯು ಆತನಿಗೆ ಸುಮ್ಮನೆ ಇದಕ್ಕೆ ಬಿಡುವದಿಲ್ಲ ನಾವು ಪೊಸ್ಟ್ಮಾಟಮ್ ಮಾಡಿಸುತ್ತೇವೆ ಅಂತ ಹೇಳಿ ಸಂತಪುರದಿಂದ ಬೀದರಕ್ಕೆ ಸರ್ಕಾರಿ ಆಸ್ಪತ್ರೆಗೆ ಮೃತ ದೇಹವನ್ನು ತಂದಿದ್ದು, ಅವಳ ಗಂಡ ಹಾಗು ಗಂಡನ ಮನೆಯವರ ತೊಂದರೆಯಿಂದ ಅವಳು ಮರಣ ಹೊಂದಿರುತ್ತಾಳೆಂದು ನೀಡಿದ ಫಿರ್ಯಾದಿಯವರ ಲಿಖಿತ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಿ..ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 31/2019, ಕಲಂ. 419, 420 ಐಪಿಸಿ ಮತ್ತು 66(ಸಿ) (ಡಿ) .ಟಿ ಕಾಯ್ದೆ :-
ಫಿರ್ಯಾದಿ ವೈಜಿನಾಥ ತಂದೆ ಕಾಶೀನಾಥ ಶೇಗಿದಾರ್, ವಯ: 66 ವರ್ಷ, ಜಾತಿ: ಸ್ವಾಮಿ, ಸಾ: ಡೋಣಗಾಂವ (ಎಮ್), ತಾ: ಕಮಲನಗರ, ಜಿ: ಬೀದರ ರವರು ಎಸ್.ಬಿ. ಬ್ಯಾಂಕ ಕಮಲನಗರ ಬ್ರಾಂಚನಲ್ಲಿ ಉಳಿತಾಯ ಖಾತೆ ಸಂ. 62308520930 ನೇದ್ದು ಹೊಂದಿದ್ದು, ಹೀಗಿರುವಲ್ಲಿ ದಿನಾಂಕ 21-09-2019 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ತನ್ನ ಮೋಬೈಲ್ ನಂ. 9972756803 ನೇದಕ್ಕೆ ಅಪರಿಚಿತ ವ್ಯಕ್ತಿಯು ತನ್ನ ಮೋಬೈಲ್ ನಂ. 8617505370 ನೇದರಿಂದ ಕರೆ ಮಾಡಿ ನಾನು ¨Á್ಯಂಕ ಮ್ಯಾನೇಜರ್ ಇದ್ದು ನಿಮ್ಮ .ಟಿ.ಎಮ್ ಕಾರ್ಡ ಬ್ಲಾಕ್ ಆಗಿರುತ್ತದೆ ಅದು ರಿನೀವಲ್ ಕುರಿತು ನಿಮ್ಮ .ಟಿ.ಎಮ್ ಕಾರ್ಡನ ನಂ. ಮತ್ತು ಸಿವಿವಿ ನಂಬರ ಹೇಳಿರಿ ಅಂತಾ ಕೇಳಿದಾಗ ಫಿರ್ಯಾದಿಯು ತನ್ನ .ಟಿ.ಎಮ್ ಕಾರ್ಡ ನಂ. 4592 0002 1313 2224 ಮತ್ತು ಕಾರ್ಡನ ಹಿಂದೆ ಇರುವ ಸಿವಿವಿ ನಂಬರ 2224 - 050 ನೇದ್ದು ಕೊಟ್ಟಿದ್ದು, ನಂತರ ನಿಮ್ಮ ಮೋಬೈಲ್ ಸಂಖ್ಯೆಗೆ .ಟಿ.ಪಿ ಬರುತ್ತದೆ ಸದರಿ .ಟಿ.ಪಿ ನಂಬರನ್ನು ಕೊಡಲು ಸೊಚಿಸಿದ್ದರಿಂದ ಫಿರ್ಯಾದಿಯ ನಂಬರಿಗೆ ಎರಡು ಸಲ ಬಂದಿದ್ದ .ಟಿ.ಪಿ ನಂಬರಗಳನ್ನು ಸಹ ಹೇಳಿದ್ದು, ನಂತರ ಫಿರ್ಯಾದಿಗೆ ಅನುಮಾನ ಬಂದು ನಾನು ಬ್ಯಾಂಕಿಗೆ ಹೋಗಿ ಬ್ಯಾಂಕ ಮ್ಯಾನೇಜರ್ ಗೆ ವಿಚಾರಿಸಲು ಫಿರ್ಯಾದಿಯವರ ಬ್ಯಾಂಕ ಖಾತೆಯಿಂದ ಒಂದನೇ ಸಲ 9095.58 ರೂ. ಗಳು ಮತ್ತು ಎರಡನೇ ಸಲ 9832.50 ರೂ. ಗಳು ಹೀಗೆ ಒಟ್ಟು 18928.08 ರೂಪಾಯಿಗಳು ಆನಲೈನ್ನಲ್ಲಿ ಏನೋ ಖರೀದಿ ಆಗಿರುತ್ತದೆ ಅಂತಾ ತಿಳಿಸಿರುತ್ತಾರೆ, ಕಾರಣ ಅಪರಿಚಿತ ಮೋಬೈಲ್ ಸಂ. 8617505370 ನೇದ್ದರಿಂದ ಕರೆ ಮಾಡಿ ಮೋಸದಿಂದ .ಟಿಎಂ ಕಾರ್ಡ £À., ಸಿವಿವಿ ನಂ., ಹಾಗೂ .ಟಿ.ಪಿ ನಂಬರಗಳನ್ನು ಪಡೆದು ಆನ್ ಲೈನನಲ್ಲಿ ಫಿರ್ಯಾದಿಯವರ ಖಾತೆಯಿಂದ ಒಟ್ಟು 18928.08 ರೂಪಾಯಿಗಳಿಂದ ಖರೀದಿ ಮಾಡಿ ಫಿರ್ಯಾದಿಗೆ ಮೋಸ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಿ..ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 32/2019, ಕಲಂ. 419, 420 ಐಪಿಸಿ ಮತ್ತು 66(ಸಿ) (ಡಿ) .ಟಿ ಕಾಯ್ದೆ :-
ದಿನಾಂಕ 28-09-2019 ರಂದು 1600 ಗಂಟೆಗೆ ಫಿರ್ಯಾದಿ ಉಜ್ಮಾ ಗಂಡ ಮಹೇಬೂಬ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಶಿವಪುರ ಗಲ್ಲಿ ಬಸವಕಲ್ಯಾಣ ರವರ ಮೊಬೈಲ ನಂ. 9880272221 ನೇದಕ್ಕೆ ಯಾರೋ ಅಪರಿಚಿತರು ಮೊಬೈಲ ನಂ. 6296431097 ಮತ್ತು 8345008563 ನೇದ್ದರಿಂದ ಕರೆ ಮಾಡಿ ನಾನು ಹೆಡ್ ಆಫೀಸ್ ಬ್ಯಾಂಕ ಮ್ಯಾನೇಜರ ಇದ್ದು ನಿಮ್ಮ .ಟಿ.ಎಂ. ಕಾರ್ಡ ಬ್ಲಾಕ್ ಆಗಿದೇ ನೀವು ಕಾರ್ಡ ಉಪಯೋಗಿಸಿರುವುದಿಲ್ಲ ತಾವು .ಟಿ.ಎಂ.ಗೆ ಹೊಗಿ ಕಾರ್ಡ ಉಪಯೋಗಿಸಿ ಹಣ ಡ್ರಾ ಮಾಡಿಕೊಂಡು ಬನ್ನಿ ಇಲ್ಲಾವಾದರೆ ನಿಮ್ಮ ಖಾತೆಯಲ್ಲಿರುವ ಹಣವು ಸರಕಾರದ ಖಾತೆಗೆ ಜಮಾ ಆಗುತ್ತದೆ ಅಂತ ಹೇಳಿದ್ದರಿಂದ ಫಿರ್ಯಾದಿಯು ಬಸವಕಲ್ಯಾಣ ಆಕ್ಸಿಸ್ ಬ್ಯಾಂಕ್ .ಟಿ.ಎಂ. ದಿಂದ 1000/- ರೂ. ಹಣ ಡ್ರಾ ಮಾಡಿಕೊಂಡು ಬಂದಿದ್ದು, ನಂತರ ಪುನಃ ಮೋಬೈಲ ನಂ. 6296431097 ನಿಂದ ಸದರಿ ವ್ಯಕ್ತಿ ಕರೆ ಮಾಡಿ ನಿಮ್ಮ ಕಾರ್ಡ ಇವಾಗ ಪ್ರಾರಂಭವಾಗಿದೆ ಅಂತ ಹೇಳಿ .ಟಿ.ಎಂ. ಕಾರ್ಡ ಮೇಲಿನಲ್ಲಿರುವ ನಂಬರ ಹೇಳಲು ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ಕೇನರಾ ಬ್ಯಾಂಕ .ಟಿ.ಎಂ. ಡೇಬಿಟ್ ಕಾರ್ಡ ಸಂಖ್ಯೆ ಮತ್ತು ಸಿ.ವಿ.ವಿ. ಸಂಖ್ಯೆ ಹೇಳಿದ್ದು, ನಂತರ ಫಿರ್ಯಾದಿಯವರ ಮೊಬೈಲಗೆ 5 ಸಲ .ಟಿ.ಪಿ. ಮೇಸೇಜ್ ಬಂದಿದ್ದು ಅದನ್ನು ಸಹ ಸದರಿ ವ್ಯಕ್ತಿಗೆ ಹೇಳಿದ್ದು, ನಂತರ ಸಂಶಯ ಬಂದು ಫಿರ್ಯಾದಿಯು ಆಕ್ಸಿಸ್ ಬ್ಯಾಂಕ್ .ಟಿ.ಎಂ.ಗೆ ಹೊಗಿ ಬ್ಯಾಲೇನ್ಸ ಪರಿಶಿಲಿಸಿದಾಗ ಸದರಿ .ಟಿ.ಎಂ.ದಲ್ಲಿ ರಿಸೀಪ್ಟ ಬಂದಿರುವುದಿಲ್ಲ ನಂತರ ಕೇನರಾ ಬ್ಯಾಂಕ .ಟಿ.ಎಂ.ಗೆ ಹೋಗಿ ಬ್ಯಾಲೇನ್ಸ ಪರಿಶಿಲನೆ ಮಾಡಿ ನೋಡಲು ಖಾತೆಯಲ್ಲಿ ಬ್ಯಾಲೇನ್ಸ ತೊರಿಸಿಲಿಲ್ಲ ನಂತರ ಮೀನಿ ಸ್ಟೇಟಮೆಂಟ ತೆಗೆದು ನೋಡಿದರೆ ಬ್ಯಾಂಕ ಖಾತೆಯಿಂದ ಮೊದಲನೆ ಸಲ 19,999/- ರೂ., ಎರಡನೆ ಸಲ 19,999/- ರೂ., ಮೂರನೆ ಸಲ 5000/- ರೂ., ನಾಲ್ಕನೆ ಸಲ 4000/- ರೂ., ಐದನೆ ಸಲ 880/- ರೂಪಾಯಿಗಳು ಹೀಗೆ ಒಟ್ಟು 49,878/- ರೂ.ಗಳು ಯಾರೋ ಅಪರಿಚಿತ ವ್ಯಕ್ತಿ ಬ್ಯಾಂಕ ಮ್ಯಾನೇಜರ ಇದ್ದೇನೆ ಅಂತ ಸುಳ್ಳು ಹೇಳಿ ಮೋಸದಿಂದ ಫಿರ್ಯಾದಿಯವರ ಬ್ಯಾಂಕ ಖಾತೆಯಿಂದ 49,878/- ರೂ. ತೆಗೆದುಕೊಂಡು ವಂಚಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-09-2019 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 95/2019, ಕಲಂ. 32, 34 ಕೆ. ಕಾಯ್ದೆ :-
ದಿನಾಂಕ 30-09-2019 ರಂದು ಕಮಲನಗರದ ಪಟ್ಟದೇವರ ಚೌಕ ಹತ್ತಿರ ಒಬ್ಬ ವ್ಯಕ್ತಿ ಅಕ್ರಮವಾಗಿ ಸಾರಾಯಿ ಸಾಗಾಟ ಮಾಡಿಸುತ್ತಿದ್ದಾನೆ ಅಂತಾ ಚಿದಾನಂದ ಎ.ಎಸ್.ಐ ಕಮಲನಗರ ಪೊಲೀಸ್ ಠಾಣೆಗೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಮಲನಗರದ ಪಟ್ಟದೇವರ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಪಟ್ಟದೇವರ ಚೌಕದಿಂದ ಸ್ವಲ್ಪ ದೂರದಲ್ಲಿ ಆರೋಪಿ ಸೂರ್ಯಕಾಂತ ತಂದೆ ಮನ್ಮಥಪ್ಪಾ ಸಂಗಮೆ ವಯ: 52 ವರ್ಷ, ಜಾತಿ: ಲಿಂಗಾಯತ, ಸಾ: ಕಮಲನಗರ ಇತನು ತನ್ನ ಹತ್ತಿರ ಒಂದು ಬಿಳಿ ಕೈಚೀಲ ಹಿಡಿದುಕೊಂಡು ಹೋಗಿ ಬರುವ ಜನರಿಗೆ ಮಾರಾಟ ಮಾಡಲು ಅಕ್ರಮ ಸರಾಯಿ ಇರುವುದನ್ನು ನೋಡಿ ಖಚಿತ ಮಾಡಿಕೊಂಡು ಪಂಚರ ಸಮಕ್ಷಮ ಆರೋಪಿಗೆ ಹಿಡಿದು ನೋಡಲು ಅವನ ಹತ್ತಿರ 1) ಓಲ್ಡ್ ಟಾವರ್ನ 180 ಎಮ.ಎಲ್ ನ 18 ಪೇಪರ್ ಪೌಷ್ ಅ.ಕಿ 1334/- ರೂ., 2) ಬ್ಯಾಗ್ ಪೈಪರ್ 180 ಎಮ್.ಎಲ್ ನ 6 ಪೇಪರ್ ಪೌಚ್ ಅ.ಕಿ 541/- ರೂ., 3) ಮ್ಯಾಕ್ಡಾಲ್ 180 ಎಮ್.ಎಲ್ ನ 2 ಬಾಟಲಗಳು ಅ.ಕಿ 300/- ರೂ. ಹಾಗೂ 4) ಐ.ಬಿ 180 ಎಮ್.ಎಲ್ ಬಾಟಲ ಅ.ಕಿ 120 ರೂ. ಇದ್ದು, ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.