Police Bhavan Kalaburagi

Police Bhavan Kalaburagi

Tuesday, October 13, 2020

BIDAR DISTRICT DAILY CRIME UPDATE 13-10-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-10-2020

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 151/2020, ಕಲಂ. ಕಲಂ 41 (ಡಿ), 102 ಸಿ.ಆರ.ಪಿ.ಸಿ ಹಾಗೂ 379 ಐಪಿಸಿ :-

ದಿನಾಂಕ 12-10-2020 ರಂದು ಪಿ.ಎಸ್. ದ್ರೋಪದಿ ಹಾಗೂ ವಿನಾಯಕ .ಎಸ್. ಗಾಂಧಿಗಂಜ ಪೊಲೀಸ ಠಾಣೆ ಬೀದರ ಇಬ್ಬರು ಕೂಡಿ ವಿಶೇಷ ಪೇಟ್ರೊಲಿಂಗ ಕುರಿತು ಗಾಂಧಿಗಂಜ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿರುವಾಗ ಬೀದರ ಲಕ್ಷ್ಮಿಬಾಯಿ ಕಮಠಾಣೆ ಶಾಲೆ ವಿದ್ಯಾನಗರ ಕಾಲೋನಿ ಕಡೆಗೆ ಬಂದಾಗ ಅಲ್ಲಿ ಒಬ್ಬ ಹುಡುಗ ಎರಡು ಮೋಟಾರ ಸೈಕಲಗಳು ತೆಗೆದುಕೊಂಡು ನಿಂತಿದ್ದು ಪಿಎಸ್ಐ ರವರು ಆತನ ಮೇಲೆ ಸಂಶಯ ಪಟ್ಟು ಆತನನ್ನು ಹಿಡಿದು ಅವನ ಆಧಿನದಲ್ಲಿದ್ದ ಎರಡು ಮೋಟಾರ ಸೈಕಲಗಳ ಬಗ್ಗೆ ವಿಚಾರಿಸಲಾಗಿ ಯಾವುದೇ ಸಮಂಜಸ ಉತ್ತರ ಕೊಡದ ಕಾರಣ ಪಿಎಸ್ಐ ರವರು ಆತನನ್ನು ಗುರ್ತಿಸಿ ಆತನ ಹೆಸರು ಕೃಷ್ಣಾ ತಂದೆ ಚಂದ್ರಕಾಂತ ವಯ: 19 ವರ್ಷ, ಸಾ: ವಿದ್ಯಾನಗರ ಕಾಲೋನಿ ಬೀದರ ಇದ್ದು, ಮೋದಲು ಸಹ ಇತನು ಬೇರೆ ಪೊಲೀಸ ಠಾಣೆಯ ಕಳವು ಪ್ರಕರಣಗಳಲ್ಲಿ ಭಾಗಿ ಇದ್ದು ಆತನನ್ನು ತಿವ್ರವಾಗಿ ವಿಚಾರಿಸಿದಾಗ ಎರಡು ಮೋಟಾರ ಸೈಕಲಗಳ ದಾಖಲಾತಿ ಕೇಳಿದಾಗ ಯಾವದೆ ದಾಖಲಾತಿ ಇರುವದಿಲ್ಲಾ ಅಂತಾ ತಿಳಿಸಿದ್ದು, ನಂತರ ಸದರಿ ಎರಡು ಮೋಟರ ಸೈಕಲಗಳು ಈಗ ಅಂದಾಜು 10 ರಿಂದ 15 ದಿವಸಗಳ ಹಿಂದೆ ಕಳವು ಮಾಡಿದ್ದು ಇರುತ್ತದೆ ಅಂತಾ ತಿಳಿಸಿದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಆರೋಪಿ ಕೃಷ್ಣಾ ಇತನ ಹತ್ತಿರವಿದ್ದ 1) ಕಪ್ಪು ಬಣ್ಣದ ಪಲ್ಸರ ನಂಬರ ಪ್ಲೆಟ ಇಲ್ಲದು ಚೇಸ್ಸಿ ನಂ. MDZA36FZ5ECB93978, ಇಂಜಿನ್ ನಂ. JLZCEM61058, .ಕಿ 1,00,000/- ರೂ. 2) ಕಪ್ಪು ಹಾಗು ಕೆಂಪು ಬಣ್ಣದ ಪ್ಯಾಶನ ಪ್ರೋ ನೊಂದಣಿ ಸಂ. ಕೆಎ-49/ಕೆ-4700, ಚೇಸ್ಸಿ ನಂ. MBLHA10EWBHJ00298, ಇಂಜಿನ್ ನಂ. HA10EDBHJ00399, .ಕಿ 30,000/- ರೂ., ಹೀಗೆ ಎರಡು ಮೋಟಾರ ಸೈಕಲಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 134/2020, ಕಲಂ. 498(), 323, 504, 506 ಜೊತೆ 149 ಐಪಿಸಿ :-

ದಿನಾಂಕ 12-10-2020 ರಂದು ಫಿರ್ಯಾದಿ ರೇಣುಕಾ ಗಂಡ ಪ್ರಶಾಂತ ವಳಕಿಂಡಿ, ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ರಾಮಪೂರ, ತಾ: ಚಿಟಗುಪ್ಪಾ ರವರ ಮದುವೆ 5 ವರ್ಷಗಳ ಹಿಂದೆ ರಾಮಪೂರ ಗ್ರಾಮದ ಪ್ರಶಾಂತ ತಂದೆ ಮಾಣಿಕಪ್ಪಾ ವಳಕಿಂಡಿ ವಯ: 27 ವರ್ಷ ರವರೊಂದಿಗೆ ಆಗಿದ್ದು, ಸುಮಾರು ಎರಡು ವರ್ಷಗಳಿಂದ ಫಿರ್ಯಾದಿಗೆ ಆರೋಪಿತರಾದ ಅತ್ತೆ ದ್ರೌಪತಿ ವಯ: 65 ವರ್ಷ, ಮಾವ ಮಾಣಿಕಪ್ಪಾ ವಯ: 70 ವರ್ಷ, ಮೈದುನ ರಾಜಕುಮಾರ ವಯ: 25 ವರ್ಷ, ನಾದಣಿ ನಾಗಮ್ಮಾ ವಯ: 35 ವರ್ಷ, ನೇಗೇಣಿ ಸಂಗೀತಾ ವಯ: 20 ವರ್ಷ ಇವರೆಲ್ಲರೂ ಫಿರ್ಯಾದಿಗೆ ನೀನು ನಮ್ಮ ಮನೆಗೆ ಬರಬೇಡ ಅಂತಾ ನಿಂದಿಸಿ ಮಾನಸಿಕವಾಗಿ ಹಾಗು ದೈಹಿಕವಾಗಿ ಹೊಡೆಬಡೆ ಮಾಡಿ ಹಿಂಸೆ ನೀಡಿರುತ್ತಾರೆ, ಹೀಗಿರುವಾಗ ದಿನಾಂಕ 12-10-2020 ರಂದು ಫಿರ್ಯಾದಿಯ ಗಂಡನಿಗೆ ಮೈದುನ ವಿಜಯಕುಮಾರ ಹಾಗು ಮನೆಯವರೆಲ್ಲರೂ ಸೇರಿ ಮನೆ ಜಾಗದ ಹಂಚಿಕಿ ಸಂಬಂಧ ಮನೆ ಮುಂದೆ ಜಗಳ ಮಾಡುತ್ತಿರುವಾಗ ಬಿಡಿಸಲು ಹೋದ ಫಿರ್ಯಾದಿಗೆ ಸದರಿ ಆರೊಪಿತರೆಲ್ಲರೂ ಸೇರಿ ಫಿರ್ಯಾದಿಗೆ ಬೈದು ನಿಂದಿಸಿ ಕೈಯಿಂದ ಹೊಡೆಬಡೆ ಮಾಡಿ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ, ಇದರಿಂದ ಫಿರ್ಯಾದಿಯು ಅವರ ಮಾನಸಿಕ ಹಾಗು ದೈಹಿಕ ಕಿರುಕುಳದಿಂದ ಬೇಸತ್ತು ಮ್ಮ ಮನೆಯಲ್ಲಿ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದಾಗ ಗಂಡ ಪ್ರಶಾಂತ ಹಾಗು ಭಾವ ಸಂತೋಷ ಚಿಕಿತ್ಸೆಗಾಗಿ ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 89/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 12-10-2020 ರಂದು ಮಹಮ್ಮದ ನವೀದ ತಂದೆ ಹುಸೇನ ಈತನು ಮೋಟಾರ ಸೈಕಲ ನಂ. ಎಪಿ-28/ಸಿಎ-1007 ನೇದರ ಮೇಲೆ ಹಮ್ಮದ ಮಹೇಬೂಬ ಮತ್ತು ಫಿರ್ಯಾದಿ ಮಹಮ್ಮದ ಸಲೀಮ ತಂದೆ ಮಹೇಮೂದ ಮನ್ನಾಎಖೆ್ಖೕಳ್ಳಿವಾಲೆ ವಯ: 48 ವರ್ಷ, ಜಾತಿ: ಮುಸ್ಲಿಂ, ಸಾ: ಜನತಾ ನಗರ ನಿರ್ಣಾ ಗ್ರಾಮ ರವರ ಮಗನಾದ ಎಂ.ಡಿ ಅಜಮ ಇವರಿಬ್ಬರಿಗೆ ಕೂಡಿಸಿಕೊಂಡು ಶಂಕರರೆಡ್ಡಿ ಚೂಡಾ ಇವರ ಹೊಲದ ಕಡೆಯಿಂದ ಉಡಬಾಳ ರೋಡಿನ ಮೇಲೆ ಬಂದು ನಿರ್ಣಾ ಕಡೆಗೆ ಹೋಗುತ್ತಿರುವಾಗ ನಿರ್ಣಾ ಕಡೆಯಿಂದ ಬಂದ ಕಾರ ನಂ. ಕೆಎ-38/ಎಮ್-6471 ನೇದ್ದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಮಹಮ್ಮದ ನವೀದ ಈತನ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಹವರ ಮಗನ ಹಲ್ಲುಗಳು ಬಿದ್ದು ಭಾರಿ ರಕ್ತಗಾಯ, ಮೂಗಿಗೆ ರಕ್ತಗಾಯ, ಹಣೆಗೆ ರಕ್ತಗಾಯ, ಬಲಗೈ ರೆಟ್ಟೆಗೆ, ಮುಂಗೈ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಮ್ಮೂರ ಮಹಮ್ಮದ ಮಹೇಬೂಬ ತಂದೆ ಜಾಫರ ಈತನಿಗೆ ಬಲಗಡೆ ಹಣೆಗೆ ರಕ್ತಗಾಯ, ಕೆಳ ತುಟಿಗೆ, ಮೂಗಿನ ಹತ್ತಿರ ರಕ್ತಗಾಯ, ಬಲಗೈ ಮುಂಗೈ ಹಾಗೂ ಎಡಗೈ ಮುಂಗೈಗೆ ರಕ್ತಗಾಯವಾಗಿರುತ್ತದೆ ಹಾಗೂ ಮಹಮ್ಮದ ನವೀದ ತಂದೆ ಹುಸೇನ ವಯ: 19 ವರ್ಷ ಈತನಿಗೆ ಸೊಂಟಕ್ಕೆ ಮತ್ತು ಬೆನ್ನಿಗೆ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಮೂವರನ್ನು ಫಿರ್ಯಾದಿಯು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 131/2020, ಕಲಂ. 78(6) ಕೆ.ಪಿ ಕಾಯ್ದೆ :-

ದಿನಾಂಕ 12-10-2020 ರಂದು ಬಸವಕಲ್ಯಾಣ ನಗರದ ಹಿಮ್ಮತ ನಗರ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ .ಪಿ.ಎಲ್ ಟೂರ್ನಿಯ  ಆರ್.ಸಿ.ಬಿ ಮತ್ತು ಕೋಲ್ಕತ್ತಾ ತಂಡಗಳ ಮೇಲೆ ಗೆಲುವು ಮತ್ತು ಸೋಲಿನ ಬಗ್ಗೆ ಸಾರ್ವಜನಿಕರಿಂದ ಹಣ ಪಡೆದು ಬೆಟ್ಟಿಂಗ್ ಕಟ್ಟಿಕೊಂಡು ಹಣ ಪಡೆಯುತ್ತಿದ್ದಾನೆಂದು ಜಿ.ಎಮ್ ಪಾಟೀಲ್ ಪಿಎಸ್ಐ (ಕಾಸೂ) ಬಸವಕಲ್ಯಾಣ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಿಮ್ಮತ ನಗರ ಮಸೀದಿ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು ಬಾತ್ಮಿಯಂತೆ ಅಲ್ಲಿ ಆರೋಪಿ 1) ಶೇಖ್ ಶಾಬೋದ್ದಿನ ತಂದೆ ಶೇಖ್ ಛೋಟುಮಿಯಾ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಹಿಮ್ಮತ ನಗರ ಬಸವಕಲ್ಯಾಣ ಇತನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಇಂದು ನಡೆಯುತ್ತಿರುವ .ಪಿ.ಎಲ್ ಟೂರ್ನಿಯ ಆರ್.ಸಿ.ಬಿ ಮತ್ತು ಕೋಲ್ಕತ್ತಾ ತಂಡಗಳ ಸೋಲು ಗೇಲುವಿನ ಬಗ್ಗೆ ಜನರಿಗೆ ಎರಡು ಕ್ರಿಕೇಟ್ ತಂಡಗಳ ಬೆಟ್ಟಿಂಗ್ ಕಟ್ಟಿ ಎಂದು ಕೂಗಿ ಹೇಳುತ್ತ ಸಾರ್ವಜನಿಕರಿಂದ ಹಣ ಪಡೆದು ಕೋಳ್ಳುತ್ತಿರುವುದನ್ನು ನೋಡಿ ಅವನ ಮೇಲೆ ಎಲ್ಲರು ಒಮ್ಮೆಲೆ ದಾಳಿ ಮಾಡಿ ಆರೋಪಿತನಿಗೆ ಹಿಡಿದುಕೊಂಡು ಅಂಗ ಶೋಧನೆ ಮಾಡಲು ಆತನ ಹತ್ತಿರ ನಗದು ಹಣ 23,010/- ರೂಪಾಯಿ ಸಿಕ್ಕಿರುತ್ತವೆ, ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ ಠಾಣೆ ಅಪರಾಧ ಸಂ. 69/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 12-10-2020 ರಂದು ಕುಶನೂರ-ಸಂತಪೂರ ರೋಡಿಗೆ ಇರುವ ಅಂಬಿಕಾ ಧಾಭಾದ ಮುಂದುಗಡೆ ಲೈಟಿನ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಸರಾಯಿ ಸಾಗಾಟ ಮಾಡುತ್ತಿದ್ದ ಬಗ್ಗೆ ಡಾ: ಶ್ರೀ ದೇವರಾಜ್ ಬಿ, ಮಾನ್ಯ ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಡಿಎಸ್ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸಂತಪೂರ ರೋಡಿಗೆ ಇರುವ ಭವಾನಿ ಧಾಬಾದ ಹತ್ತಿರ ಹೋಗಿ ನೋಡಲು ಲೈಟಿನ ಬೆಳಕಿನಲ್ಲಿ ಆರೋಪಿ ದಿಲೀಪ ತಂದೆ ಮಸಾಜಿ ಕಾಂಬಳೆ ವಯ: 30 ವರ್ಷ, ಜಾತಿ: ಸಮಗಾರ, ಸಾ: ಠಾಣಾ ಕುಶನೂರ ಗ್ರಾಮ ಇತನು ಒಂದು ಕಾರ್ಟನ ಹಾಗು ಒಂದು ಬಿಳಿ ಪ್ಲಾಸ್ಟಿಕ್ ದಲ್ಲಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆತನ ಹತ್ತಿರವಿದ್ದ ಕಾರ್ಟನ ತೆಗೆದು ನೋಡಲು ಅದರಲ್ಲಿ 1) 650 ಎಂ.ಎಲ್ ವುಳ್ಳ 12 ಕಿಂಗಫೀಶರ್ ಸ್ಟ್ರಾಂಗ್ ಬಿಯರ್ ಬಾಟಲಗಳು ಅ.ಕಿ 1800/- ರೂ., 2) 275 ಎಂ.ಎಲ್ ವುಳ್ಳ 5 ಬಕಾಆರ್ಡಿ ಕ್ಯಾನಬೇರಿ ಸರಾಯಿ ಬಾಟಲಗಳು ಅ.ಕಿ 425/- ರೂ., 3) 180 ಎಂ.ಎಲ್ ವುಳ್ಳ 8 ಎಮ್.ಸಿ ಡುವೆಲ್ಸ್ ನಂ. 1 ಲಕ್ಷುರಿ ಸರಾಯಿ ಬಾಟಲಗಳು ಅ.ಕಿ 1584/- ರೂ., 4) 180 ಎಂ.ಎಲ್ ವುಳ್ಳ 9 ಇಂಪೆರಿಯಲ್ ಬ್ಲೂ ಸರಾಯಿ ಬಾಟಲಗಳು ಅ.ಕಿ 1782/- ರೂ., 5) 180 ಎಂ.ಎಲ್ ವುಳ್ಳ 5 ರಾಯಲ್ ಸ್ಟ್ಯಾಗ್ ಡಿಲಕ್ಸ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 1600/- ರೂ., 6) 180 ಎಂ.ಎಲ್ ವುಳ್ಳ 4 ಬ್ಲೆಂಡರ್ ಪ್ರೈಡ್ ಸರಾಯಿ ಬಾಟಲಗಳು ಅ.ಕಿ 1804/- ರೂ., 7) 180 ಎಂ.ಎಲ್ ವುಳ್ಳ 15 ನ ಓಲ್ಡ್ ಟಾವರ್ನ ವಿಸ್ಕಿ ಸರಾಯಿ ಫುಟ್ಟದ ಪೌಚಗಳು ಅ.ಕಿ 1290/- ರೂಪಾಯಿಗಳು ಹೀಗೆ ಒಟ್ಟು 10,285/- ರೂಪಾಯಿ ಬೆಲೆಯುಳ್ಳದ್ದು ಆರೋಪಿತನ ತಾಬೆಯಿಂದ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.