Police Bhavan Kalaburagi

Police Bhavan Kalaburagi

Tuesday, August 3, 2021

BIDAR DISTRICT DAILY CRIME UPDATE 03-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-08-2021

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 69/2021, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 02-08-2021 ರಂದು ಫಿರ್ಯಾದಿ ನಾಗಣ್ಣಾ ತಂದೆ ರಾಮಗೊಂಡ ಹಾಲಗಾರ, ವಯ: 55 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬಾಳೂರ, ತಾ: ಭಾಲ್ಕಿ, ಜಿ: ಬೀದರ ರವರ ಮಗನಾದ ನೀಲಕಂಠ ತಂದೆ ನಾಗಣ್ಣಾ ಹಾಲಗಾರ, ವಯ: 26 ವರ್ಷ, ಜಾತಿ: ಎಸ್.ಟಿ ಗೊಂಡ, : ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಕಲೆಕ್ಷನ ಕೆಲಸ, ಸಾ: ಬಾಳೂರ, ತಾ: ಭಾಲ್ಕಿ ಇತನು ತನ್ನ ಮೋಟಾರ ಸೈಕಲ ನಂ. ಕೆಎ-38/ಡಬ್ಲೂ-0054 ನೇದರ ಮೇಲೆ ಬೀದರದಿಂದ ನೌಬಾದ ಮೂಲಕ ಬಾಳೂರ ಗ್ರಾಮಕ್ಕೆ ಹೋಗಲು ಬೀದರ ಏರಫೋರ್ಟ ಆಫಿಸರ್ ಮೆಸ್ಸ ಹತ್ತಿರ ಬಂದಾಗ ಹಿಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ. ಕೆಎ-33/ಎಫ್-0505 ನೇದರ ಚಾಲಕನಾದ ಆರೋಪಿಯು ತನ್ನ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ ಬಸ್ಸ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ನೀಲಕಂಠ ಈತನು ಬಸ್ಸಿನ ಕೆಳಗೆ ಬಿದ್ದಾಗ ಬಸ್ಸಿನ ಚಕ್ರ ತಲೆಯ ಮೇಲಿಂದ ಮತ್ತು ಎಡಗೈ ಭುಜದ ಮೇಲಿಂದ ಹೋಗಿದ್ದರಿಂದ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 89/2021, ಕಲಂ. 379 ಐಪಿಸಿ :-

ಫಿರ್ಯಾದಿ ಸೂರ್ಯವಂಶಿ ಪವನಕುಮಾರ ತಂದೆ ಪ್ರಕಾಶ ವಯ: 29 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಪ್ರೀತಿ ಕಾಲೋನಿ ನೌಬಾದ ಬೀದರ ರವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ತನ್ನ ಬಜಾಜ ಲ್ಸರ್  220 ಸಿಸಿ ಮೋಟಾರ ಸೈಕಲ ನಂ. KA-38/X-0902, Chassis No. MD2A13EXOLCM17656, Engine No. DKXCLM13026, Model: 2020, Color: Black, ಅ.ಕಿ 55,000/- ರೂ. ನೇದನ್ನು ದಿನಾಂಕ 02-07-2021 ರಂದು 2200 ಗಂಟೆಯಿ0 ದಿನಾಂಕ 03-07-2021 ರಂದು 0800 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ 02-08-2021 ರಂದು ಬಸವರಾಜ ತಂದೆ ಚಂದ್ರಪ್ಪಾ ನೆಲವಾಳ ಎಂಬ ವ್ಯಕ್ತಿ ಕರಕನಳ್ಳಿ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆಂದು ಶಿವಕುಮಾರ ಪಿಎಸ್ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಬಸವರಾಜ ತಂದೆ ಚಂದ್ರಪ್ಪಾ ನೆಲವಾಳ ಸಾ: ಕರಕನಳ್ಳಿ ಇತನ ಮೇಲೆ ದಾಳಿ ಮಾಡಿ ಬಸವರಾಜ ಇತನಿಗೆ ಹಿಡಿದುಕೊಂಡು ಆತನಿಗೆ ಸಾರಾಯಿ ಮಾರಾಟದ ಬಗ್ಗೆ ಸರಕಾರದ ಲೈಸನ್ಸ್ ಇದೆಯೇ ಅಂತ ವಿಚಾರಿಸಲು ಆತನು ನನ್ನ ಹತ್ತಿರ ಯಾವುದೇ ಲೈಸನ್ ಇರುವುದಿಲ್ಲ ಅಂತ ತಿಳಿಸಿದನು, ನಂತರ ಆತ ಮುಂದೆ ಇದ್ದ ಒಂದು ಚೀಲ ಪರೀಶಿಲಿಸಿ ನೋಡಲಾಗಿ ದರಲ್ಲಿ 1) 90 ಎಂಎಲ್ ವುಳ್ಳ  33 ಯು.ಎಸ್ ವಿಸ್ಕಿ ಬಾಟಲಗಳು ಅ.ಕಿ 1159.29 ರೂ. ಇದ್ದು, ನಂತರ ಸದರಿ ಸರಾಯಿ ಬಾಟಲಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 46/2021, ಕಲಂ. 279, 337, 338 ಐಪಿಸಿ ಜೋತೆ 187 ಎಂವಿ ಕಾಯ್ದೆ :-      

ದಿನಾಂಕ 02-08-2021 ರಂದು ವಿಜೆಂದ್ರ ಕ್ರಿಷ್ಟ ತಂದೆ ಸೈಮನ್ ಮೇತ್ರೆ ವಯ: 32 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಸುಲ್ತಾನಪೂರ(ಜೆ) ರವರು ತನ್ನ ಸೋದರ ಅಳಿಯ ಬಿನಹೀನ್ ತಂದೆ ಅಬ್ರಹಂ ಮನೆಹಿಂದಿನೋರ ವಯ: 17 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಪಕ್ಕಲವಾಡಾ, ಬೀದರ ಇಬ್ಬರು ತನ್ನ ಮೊಟಾರ ಸೈಕಲ ನಂ. ಕೆಎ-51-ಕ್ಯೂ-9803 ನೇದರ ಮೇಲೆ ಅಕ್ಕಳಾದ ಪ್ರಿಯದರ್ಶಿನಿ ಗಂಡ ಅಬ್ರಹಂ ರವರ ಮನೆ ಪಕ್ಕಲವಾಡಾ ಬೀದರಗೆ ಬರುತ್ತಿರುವಾಗ ಮಲಕಾಪೂರ ರಿಂಗ ರೋಡ ಹತ್ತಿರದ ಬ್ರಿಜ ಸಮೀಪ ಹಿಂದಿನಿಂದ ಕಾರ ನಂ. ತನ್ನ ಕಾರ ನಂ. ಟಿಎಸ್-31/0890 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಅಪಘಾತಪಡಿಸಿ ತನ್ನ ಕಾರ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಎಡಗಣ್ಣಿನ ಮೇಲೆ, ಎಡಕಪಾಳ ಹತ್ತಿರ, ಎಡಕಿವಿಯ ಕೇಳಗೆ, ಎಡಕಿವಿಯ ಮೇಲೆ ತಲೆಯಲ್ಲಿ, ಎಡಗಾಲ ಮೋಳಕಾಲಿಗೆ ರಕ್ತಗಾಯ ಮತ್ತು ಬಲಗೈ ಮಣಿಕಟ್ಟಿನ ಹತ್ತಿರ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿರುತ್ತದೆ, ಅಲ್ಲದೇ ಸೋದರ ಅಳಿಯ ಬೆನ್ಹೀನ ಇತನಿಗೆ ಎಡಗೈ ರಟ್ಟೆಗೆ, ಎಡ ಬೆನ್ನಿಗೆ ಬಲ ರಟ್ಟೆಗೆ, ಬಲಮೋಳಕೈ ಕೆಳಗೆ, ಎಡಗಾಲ ಪಿಂಡ್ರಿ ಕೆಳಗೆ ರಕ್ತಗಾಯವಾಗಿರುತ್ತದೆ, ಕೂಡಲೇ ಹಿಂದೆ ಮೊಟಾರ ಸೈಕಲ ಮೇಲೆ ಬರುತ್ತಿದ್ದ ತಮ್ಮೂರ ಸಂಜೀವಕುಮಾರ ತಂದೆ ವಿಠಲ ಕುಂಬಾರ ರವರು ಘಟನೆ ನೋಡಿ ತಮ್ಮೂರ ಅರುಣ ತಂದೆ ಪೀಟರ ರವರ ಅಟೋದಲ್ಲಿ ಗಾಯಗೊಂಡ ಇಬ್ಬರಿಗೂ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿವರ ಹೇಳಿಕೆಯ ಸಾರಾಂಶದ  ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 136/2021, ಕಲಂ. ಕಲಂ. 279, 337, 338 ಐಪಿಸಿ :-

ದಿನಾಂಕ 01-08-2021 ರಂದು ಫಿರ್ಯಾದಿ ಸಂತೊಷ ತಂದೆ ಭಿಮಶ್ಯಾ ಥೆಮಗ್ಯಾಳೆ ಸಾ: ದಾಡಗಿ, ತಾ: ಭಾಲ್ಕಿ ರವರು ಬಿ.ಕೆ.ಐ.ಟಿ ಕಾಲೇಜಿನಲ್ಲಿ ಸೇಕ್ಯೂರಿಟಿ ಕೆಲಸಕ್ಕೆ ಬಂದು ತನ್ನ ಕೆಲಸ ಮಾಡುತ್ತಿರುವಾಗ ದಿನಾಂಕ 02-08-2021 ರಂದು ಹುಮನಾಬಾದ ರಸ್ತೆಯ ಮಖಾಂತರ ಬಂದ ಕಾರ ನಂ. ಎಮ.ಎಚ್-14/ಜಿ.ಎಚ್-4848 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಕೆ.ಐ.ಟಿ ಕಾಲೇಜಿನ ಮುಖ್ಯದ್ವಾರದ ಮುಂದೆ ಇರುವ ಕಂಪೌಂಡ ಗೊಡೆಗೆ ಡಿಕ್ಕಿ ಮಾಡಿದ್ದರಿಂದ ಗೊಡೆ ಒಡೆದಿದ್ದು ಇರುತ್ತದೆ, ನಂತರ ಫಿರ್ಯಾದಿಯು ಕಾರ ಹತ್ತಿರ ಹೋಗಿ ನೋಡಲು ಕಾರಿನಲ್ಲಿ ನಾಲ್ಕು ಜನರಿದ್ದು ಕಾರ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಶಿವಶಂಕರ ತಂದೆ ಬಸವರಾಜ ಹಣಮಶೆಟ್ಟಿ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಸಾಯಿಗಾಂವ ಅಂತಾ ತಿಳಿಸಿದನು, ಅವನ ಪಕ್ಕದಲ್ಲಿ ಕುಳಿತ ಪ್ರವಿಣ ವಾಗೆ ಹಾಗೂ ಚಾಲಕ ಶಿವಶಂಕರ ಇವರಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ, ನಂತರ ಕಾರಿನ ಹಿಂದೆ ಕುಳಿತ ದಿನೇಶ ತಂದೆ ಗುರುನಾಥ ಸಾ: ಭಾಲ್ಕಿ ಇವನಿಗೆ ತಲೆಗೆ ಭಾರಿ ರಕ್ತ ಗಾಯವಾಗಿದ್ದು ಮತ್ತು ವೀರಶೆಟ್ಟಿ ದುಂಡಪ್ಪಾ ಸಾ: ಬೆಟಬಾಲಕುಂದ ಇವನಿಗೆ ಮೂಗಿಗೆ ರಕ್ತ ಗಾಯವಾಗಿರುತ್ತದೆ, ಸದರಿಯವರು ಕಾರ ಸ್ಥಳದಲ್ಲೆ ಬಿಟ್ಟು ಬೆರೊಂದು ಖಾಸಗಿ ವಾಹನದಲ್ಲಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.