Police Bhavan Kalaburagi

Police Bhavan Kalaburagi

Thursday, May 3, 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರಶಾಂತ ತಂದೆ ಅಪ್ಪಾರಾವ ಕರೂಟಿ ಸಾ: ಮಣುರ ಇವರಿಗೆ ಮಣೂರ ಗ್ರಾಮದ ಲಗಮವ್ವ ಗಂಡ ಖಾಜಪ್ಪ ಕರಗಾರ ಎಂಬುವವರು ಪರಿಚಯ ಇದ್ದು ಸದರಿಯವಳು ಸುಮಾರಿ 15-20 ವರ್ಷಗಳಿಂದ ಮಾಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದು ಈಗ ಮಣೂರ ಗ್ರಾಮದ ಯಲ್ಲಮ್ಮ ದೇವಿಯ ಜಾತ್ರೆ ಇದ್ದರಿಂದ ಗ್ರಾಮಕ್ಕೆ ಬಂದಿರುತ್ತಾಳೆ ಅದರಂತೆ ಅಪ್ಪಾರಾವ ಕರೂಟಿ ಇತನು ದಿ: 01-05-18 ರಂದು ಲಗಮವ್ವ ಇವಳಿಗೆ ಮಾತನಾಡಿಸಬೇಕೆಂದು ಅವಳ ಮನೆಗೆ ಹೋಗಿ ಬಂದಿರುತ್ತಾನೆ ಇದರಿಂದ ಲಗಮವ್ವಳ ತಮ್ಮಂದಿರರಾದ 1) ಮಾಳಪ್ಪ ತಂದೆ ಭೀರಪ್ಪ ಕರಗಾರ, 2) ಶೀವಾಜಿ ತಂದೆ ಬೀರಪ್ಪ ಕರಗಾರ, 3) ಬಸವರಾಜ ತಂದೆ ಬೀರಪ್ಪ ಕರಗಾರ ಸಾ: ಎಲ್ಲರೂ ಮಣೂರ ಇವರು ಅಪ್ಪಾರಾವ ಕರೂಟಿ ಇತನನ್ನು ಕೊಲೆ ಮಾಡಬೇಕೆಂದು ರಾತ್ರಿ ಅವನ ಮನೆಗೆ ಹೋಗಿ ನಾವು ಯಾರು ಇಲ್ಲದ ಸಮಯದಲ್ಲಿ ನಮ್ಮ ಮನೆಗೆ ಬಂದು ನಮ್ಮ ಅಕ್ಕ ಲಗಮವ್ವಳಿಗೆ ಯಾಕೆ ಮಾತನಾಡಿಸಿದಿ  ಎಂದು ಸಿಟ್ಟು ಮಾಡಿಕೊಂಡು ಅಪ್ಪಾರಾವ ಕರೂಟಿ ಇತನನ್ನು ಕೊಲೆ ಮಾಡಬೇಕೆಂದು ಬಡಿಗೆಗಳಿಂದ ಹೊಟ್ಟೆಯ ಮೇಲೆ ಎದೆಗೆ, ಎರಡು ಕಾಲುಗಳ ಮೇಲೆ ಹೊಡೆದು ಭಾರಿ ಒಳ ಪೆಟ್ಟುಗಳು ಮತ್ತು ರಕ್ತಗಾಯಗಳು ಪಡೆಸಿರುತ್ತಾರೆ. ಇದರಿಂದ ಅಪ್ಪಾರಾವ ಕರೂಟಿ ಇತನಿಗೆ ಭಾರಿ ಗಾಯಗಳಾಗಿ ಉಪಚಾರ ಕುರಿತು ಸೊಲ್ಲಾಪೂರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಇಂದು ದಿನಾಂಕ 02-05-18 ರಂದು ಬೆಳಿಗ್ಗೆ 07:15 ಗಂಟೆಯ ಸುಮಾರಿಗೆ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಕಾರಣ ಅಪ್ಪಾರಾವ ಕರೂಟಿ ಇತನನ್ನು ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 02/05/2018 ರಂದು ಮದ್ಯಾಹ್ನ ಕಲಬುರಗಿ-ಹುಮನಾಬಾದ ಮೇನ ರೋಡ ಅವರಾದ (ಬಿ) ಗ್ರಾಮದ ಸಿಮಾಂತರದ ಸ್ವಾಮಿ ಸಮರ್ಥ ಆಶ್ರಮದ ಮುದಕಿ ಪೂಲಿನ ಹತ್ತಿರ ಮೃತ ಮಾದುರಾಯ ಮತ್ತು ಫಿರ್ಯಾದಿ ಶಶಿಕುಮಾರ ಇಬ್ಬರು ಕೂಡಿಕೊಂಡು ತಮ್ಮ TVS XL ಮೋಟಾರ ಸೈಕಲ್ ನಂ KA-36 EF-3079 ನೇದ್ದರ ಮೇಲೆ ಸಂಡಾಸಕ್ಕೆ ಬಂದು ಸಂಡಾಸಕ್ಕೆ ಕುಳಿತುಕೊಂಡು ಮರಳಿ ಊರಿಗೆ ಹೋಗಬೇಕೆಂದು ಮೋಟಾರ ಸೈಕಲ್ ಚಾಲು ಮಾಡಿ ತಮ್ಮ ಗ್ರಾಮಕ್ಕೆ ಹೋಗಬೇಕೆಂದು ಮೋಟಾರ ಸೈಕಲ್ ತಿರುಗಿಸಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಅಂದರೇ ಹುಮನಾಬಾದ ರೋಡಿನ ಕಡೆಯಿಂದ ಹಿರೋ ಹೊಂಡಾ ಸ್ಪ್ಲೇಂಡರ್ ಮೋಟಾರ ಸೈಕಲ್ ನಂ KA-32 EE-1896 ನೇದ್ದರ ಚಾಲಕ ಚೆನ್ನಣ್ಣಗೌಡ ತಂದೆ ನಾಗಣ್ಣಗೌಡ ಮಾಲಿ ಪಾಟೀಲ ಸಾ:ಮೋರೆ ಕಾಂಪ್ಲೇಕ್ಸ ಹತ್ತಿರ ನ್ಯೂ ರಾಘವೆಂದ್ರ ಕಾಲೋನಿ ಕಲಬುರಗಿ ತನ್ನ ಮೋಟಾರ ಸೈಕಲನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದ ಸದರಿ ಮೋಟಾರ ಸೈಕಲದ ಹಿಂದುಗಡೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಮೃತ ಮಾದುರಾಯ ಇತನಿಗೆ ತಲೆಗೆ ಹಾಗು ಇತರೇ ಕಡೆ ಭಾರಿ ರಕ್ತಗಾಯಗಳಾಗಿ ಮೂಗಿನಿಂದ ಮತ್ತು ಬಾಯಿಯಿಂದ ರಕ್ತಸ್ರಾವವಾಗಿದ್ದು ಫಿರ್ಯಾದಿ ಶಶಿಕುಮಾರ ಇತನಿಗೆ ಸಾದಾ ತರಚಿದ ರಕ್ತಗಾಯಗಳಾಗಿದ್ದು ಆಪಾದಿತ ಮೋಟಾರ ಸೈಕಲ್ ಚಾಲಕ ಚೆನ್ನಣ್ಣಗೌಡ ಇತನಿಗೆ ಭಾರಿ ಹಾಗು ಸಾದಾ ಗಾಯಗಳಾಗಿದ್ದು ನಂತರ ಸದರಿ ಮೃತ ಮಾದುರಾಯ ಮತ್ತು ಶಶಿಕುಮಾರ, ಆಪಾದಿತ ಚೆನ್ನಣ್ಣಗೌಡ 03 ಜನರಿಗೆ ಕಲಬುರಗಿ ನಗರದ ಯುನೈಟೇಢ್ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದಾಗ ಮೃತ ಮಾದುರಾಯ ಇತನು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ಸಾಯಂಕಾಲ 07:15 ಗಂಟೆಗೆ ಮೃತಪಟ್ಟಿರುತ್ತಾನೆ. ಕಾರಣ ಸದರಿ ಈ ಹಿರೋ ಹೊಂಡಾ ಸ್ಪ್ಲೇಂಡರ್ ಮೋಟಾರ ಸೈಕಲ್ ನಂ KA-32 EE-1896 ನೇದ್ದರ ಚಾಲಕ ಚೆನ್ನಣ್ಣಗೌಡ ತಂದೆ ನಾಗಣ್ಣಗೌಡ ಮಾಲಿ ಪಾಟೀಲ ಸಾ:ಮೋರೆ ಕಾಂಪ್ಲೇಕ್ಸ ಹತ್ತಿರ ನ್ಯೂ ರಾಘವೆಂದ್ರ ಕಾಲೋನಿ ಕಲಬುರಗಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ  ಗಣೇಶ ತಂದೆ ಗೋವಿಂದರಾವ ಬಿರಾದಾರ ಸಾ||ಸಂಗೋಳಗಿ(ಸಿ) ಇವರ ಮನೆಯ ಹತ್ತಿರದಲ್ಲಿ ನಮ್ಮ ಹೊಲವಿದ್ದು ಸರ್ವೆ ನಂ:37 ಇದ್ದು ಈ ಹೊಲದ ಬಂದಾರಿಗೆ ಹೊಂದಿ ಆನಂದರಾವ ರಾಜಕುಮಾರ ಬಿರಾದಾರ ಇವರ ಹೊಲ ವಿರುತ್ತದೆ. ಸದರಿ ಹೊಲವನ್ನು ಆನಂದರಾವ ಇವನು ಒತ್ತುವರಿ ಮಾಡಿದ್ದರಿಮದ ನಾನು ಸರ್ವೆೇಗಾಗಿ ಅರ್ಜಿ ಸಲ್ಲಿಸಿದ್ದು ಸರ್ವೆೇ ಆಗುವರೆಗೂ ನಾವು ಇಬ್ಬರು ಯಥಾ ಪ್ರಕಾರ ಇರಬೇಕೆಂದು ಮಾತುಕತೆ ಮಾಡಿಕೊಂಡಿದ್ದೇವು. ಆದರೆ ಆನಂದರಾವ ಇವರು ಸದರಿ ಹೊಲದಿಂದ ಮಣ್ಣು ಕೇದುರುತ್ತಿರುವುದರಿಂದ ನಾನು ಸರ್ವೆೇ ಆಗುವರೆಗೆ ಮಣ್ಣು ಕೇದರಬೇಡಿ ಅಂತಾ ಹೇಳಿದರು ಕೂಡ ಮೊನ್ನೆ ದಿನಾಂಕ:30/04/2018 ರಂದು ಮಣ್ಣು ಕೇದರಿದ್ದು ಅದಕ್ಕೆ ನಾನು ಮತ್ತು ನನ್ನ ತಾಯಿ ಕೇದರಬೇಡಿ ಅಂತಾ ಹೇಳಿದ್ದರಿಂದ ಆನಂದರಾವ ಈತನು ಆತನ ಸಂಬಂಧಿಯಾದ ಸಚಿನ ತಂದೆ ದಿಲೀಪ್ ಬಿರಾದಾರ ಈತನು ನಮ್ಮೊಂದಿಗೆ ತಕರಾರು ಮಾಡಿರುತ್ತಾನೆ.  ದಿನಾಂಕ:30/04/2018 ರಂದು ರಾತ್ರಿ 9-15 ಗಂಟೆ ಸುಮಾರಿಗೆ ನಾನು ನನ್ನ ತಾಯಿಯಾದ ಜೀಜಾಬಾಯಿ ಹಾಗೂ ನನ್ನ ಸಂಬಂಧಿಕರಾದ ವಿಠಲರಾವ ಬಿರಾದಾರ ರವರುಗಳು ನಮ್ಮ ಮನೆಯ ಮುಂದೆ ಕುಳಿತಿರುವಾಗ 1)ಸಚಿನ ತಂದೆ ದಿಲೀಪ್ ಬಿರಾದಾರ, 2)ವಿಠಲ್ ತಂದೆ ಅಂಗದರಾವ ಬಿರಾದಾರ, 3)ವಿನೋದ ತಂದೆ ಕಾಶಿನಾಥ ಬಿರಾದಾರ, 4)ಆನಂದ ತಂದೆ ರಾಜಕುಮಾರ ಬಿರಾದಾರ, 5)ಕಿರಣ ತಂದೆ ವೈಜನಾಥ ಬಿರಾದಾರ, 6)ಆನಂದ ತಂದೆ ಅಂಗದರಾವ ಬಿರಾದಾರ, 7)ಬಳಿರಾಮ್ ತಂದೆ ಭಜಂಗರಾವ ಬಿರಾದಾರ, 8)ಧನರಾಜ ತಂದೆ ಶ್ರೀರಾಮ ಬಿರಾದಾರ, 9)ಕಾಶಿನಾಥ ತಂದೆ ರಾಮರಾವ ಬಿರಾದಾರ, 10)ಭಜರಂಗ ತಂದೆ ಪಾಂಡುರಂಗ ಬಿರಾದಾರ, 11)ಸುನೀಲಕುಮಾರ ತಂದೆ ಜೈಹಿಂದ ಬಿರಾದಾರ, 12)ಜೈಹಿಂದ ತಂದೆ ಜಗನ್ನಾಥರಾವ ಬಿರಾದಾರ, 13)ವೈಜನಾಥ ತಂದೆ ರಾಮರಾವ ಬಿರಾದಾರ, 14)ಅನೀಲಕುಮಾರ ತಂದೆ ಜೈಹಿಂದ ಬಿರಾದಾರ, 15)ಆಕಾಶ ತಂದೆ ವೈಜನಾಥ ಬಿರಾದಾರ, 16)ಅಂಗದರಾವ ತಂದೆ ಬಲಭೀಮರಾವ ಬಿರಾದಾರ, 17)ಶ್ರೀರಂಗ ತಂದೆ ಪಾಂಡುರಂಗ ಬಿರಾದಾರ, 18)ಮಹಾದೇವ ತಂದೆ ತುಕರಾಮ ಅಲಗುಡೆ ಎಲ್ಲರೂ ಸಾ||ಸಂಗೋಳಗಿ(ಸಿ) ಗ್ರಾಮ ಇವರುಗಳು ಎಲ್ಲರೂ ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನನಗೆ ಹಾಗೂ ನನ್ನ ತಾಯಿಗೆ ಬೋಸಡಿ ಮಗನೆ ರಂಡಿ ಬೋಸಡಿ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ನಾನು ಮತ್ತು ನನ್ನ ತಾಯಿ ಏಕೆ ಬೈಯುತ್ತಿದ್ದಿರಿ ಎಂದು ವಿಚಾರಿಸುತ್ತಿದ್ದಾಗ, ಆನಂದರಾವ ಈತನು ನಾನು ನಮ್ಮ ಹೊಲದಾಗಿನಿಂದ ಮಣ್ಣು ಕೇದರುತ್ತಿದ್ದೇವೆ. ಅದಕ್ಕೆ ನೀನು ಯಾವನೋ ಕೇಳುವವನು ಎಂದು ಏರು ಧ್ವನಿಯಲ್ಲಿ ಚೀರಾಡುತ್ತಾ ಸಚಿನ ವಿಠಲ್ ವಿನೋದ ಇರುಗಳು ನನಗೆ ಕೈಯಿಂದ ಅಡ್ಡಾದಿಡ್ಡಿಯಾಗಿ ಹೊಡೆದಿದ್ದು ಅಲ್ಲದೇ ಸಚಿನನು ಚಾಕುವಿನಿಂದ ಎಡಗೈ ರಟ್ಟೆಗೆ ಚುಚ್ಚಿ ರಕ್ತಗಾಯ ಪಡಿಸಿದನು. ಆಗ ನನ್ನ ತಾಯಿ ಮತ್ತು ವಿಶ್ವನಾಥ ರವರು ಬಿಡಸಲು ಬಂದಾಗ ಆನಂದ, ಕಿರಣ್ ಮತ್ತು ಬಳಿರಾಮ್ ಇವರು ನನ್ನ ತಾಯಿಗೆ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿ ಕೈಯಿಂದ ಹೊಡೆದಿರುತ್ತಾರೆ, ಧನರಾಜ ಕಾಶಿನಾಥ, ಭಜರಂಗ ಇವರುಗಳು ವಿಶ್ವನಾಥ ಇವರಿಗೆ ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಸುನೀಲಕುಮಾರನು ಕಲ್ಲಿನಿಂದ ಬಲಗಡೆ ಹಣೆಗೆ ಹೊಡೆದು ರಕ್ತಗಾಯ ಪಡಿಸಿದನು. ಜೈಹಿಂದ, ವೈಜನಾಥ, ಅನೀಲಕುಮಾರ, ಆಕಾಶ, ಶ್ರೀರಂಗ, ಅಂಗದರಾವ, ಮಹಾದೇವ ಇವರುಗಳು ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ, ಅಲ್ಲಿಯೇ ನಮ್ಮ ಮನೆಯ ಪಕ್ಕದಲ್ಲಿದ್ದ ವೆಂಕಟ್ ತಂದೆ ಗಣಪತಿ ಬಿರಾದಾರ, ಅಭಿಮಾನ ತಂದೆ ಯಾದವರಾವ ಬಿರಾದಾರ, ವೆಂಕಟ್ ತಂದೆ ರಾಮರಾವ ಬಿರಾದಾರ ರವರುಗಳು ಜಗಳ  ನೋಡಿ ಬಿಡಿಸಿರುತ್ತಾರೆ. ನಂತರ 18 ಜನ ಸೇರಿ ನನಗೆ ಹಾಗೂ ನನ್ನ ತಾಯಿಗೆ ಇನ್ನುಮುಂದೆ ಆಹೊಲದ ವಿಷಯಕ್ಕೆ ಬಂದರೆ, ನಿಮ್ಮ ಇಬ್ಬರಿಗೂ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇವೆಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀಮತಿ ಶಿವಗಂಗಾ ಗಂಡ ಶಿವಶರಣಪ್ಪ ಕಡೋಳೆ ಸಾ||ಚಿಂಚನಸೂರ ಇವರು ದಿನಾಂಕ:01/05/2018 ರಂದು ಮಂಗಳವಾರ ದಿವಸ ನಾನು ಮತ್ತು ನನ್ನ ಮಕ್ಕಳಾದ ಆಕರ್ಶನ ಮತ್ತು ಗುರುಶಾಂತಕುಮಾರ @ ಗುಲ್ಶನಕುಮಾರ ರವರುಗಳು ಮುಂಜಾನೆ ನಮ್ಮೂರಿನ ಮಾಪೂರತಾಯಿ ದೇವಸ್ಥಾನಕ್ಕೆ ಹೋಗಿ ಪೂಜೆ ಕೆಲಸದಲ್ಲಿ ತೊಡಗಿರುವಾಗ ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ನಮ್ಮ ಜಾತಿಯವರಾದ ನಮ್ಮೂರಿನ ಅಜಯ ತಂದೆ ಪೀರಪ್ಪಾ ಚಿಂಚೋಳಿ @ ಸಜ್ಜನ್, ಪ್ರಕಾಶ ತಂದೆ ಮರೇಪ್ಪ ಚಿಂಚೋಳಿ @ ಸಜ್ಜನ ಹಾಗೂ ಸೋನಾಜಿ ತಂದೆ ಪ್ರಕಾಶ ಚಿಂಚೋಳಿ @ ಸಜ್ಜನ್ ರವರುಗಳು ಕೂಡಿಕೊಂಡು ಬಂದವರೆ, ನನಗೆ ಏ ರಂಡಿ ನೀನ್ಯಾಕೆ ಪೂಜೆ ಮಾಡುತ್ತಿದ್ದಿಯಾ ಗರ್ಭಗುಡಿಯಿಂದ ಹೊರಗೆ ಬಾ ಅಂತಾ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅಜಯ ಈತನು ನನ್ನ ಕೂದಲು ಮತ್ತು ಸೀರೆ ಹಿಡಿದು ಎಳೆದಾಡುತ್ತಾ ಗರ್ಭ ಗುಡಿಯಿಂದ ಹೊರಗೆ ತಂದು ಕೈಯಿಂದ ಹೊಡೆಯುತ್ತಿರುವಾಗ ನನ್ನ ಮಕ್ಕಳಾದ ಆಕರ್ಶನ್ ಮತ್ತು ಗುಲ್ಶನ್ಕುಮಾರ ರವರು ಜಗಳ ಬಿಡಿಸಲು ಬಂದಾಗ ಪ್ರಕಾಶ ಹಾಗೂ ಸೋನಾಜಿ ರವರುಗಳು ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದಿಯುತ್ತಿದ್ದರು ಅಸ್ಟರಲ್ಲಯೇ ಅಲ್ಲಿಯೇ ಪೂಜೆಯಲ್ಲಿ ತೊಡಗಿದ ನಮ್ಮ ಓಣಿಯ ಶಿಸುಪಾಲ ಇವರು ಜಗಳ ಬಿಡಿಸಲು ಬಂದಾಗ ಸೋನಾಜಿ ಈತನು ಚಾಕುವಿನಿಂದ ಹೊಡೆಯಲು ಬಂದಾಗ ನನ್ನ ಗಂಡನಾದ ಶಿವಶರಣಪ್ಪ ಇವರು ಸೋನಾಜಿ ಈತನ ಕೈಹಿಡಿದು ಜಗ್ಗಿದ್ದರಿಂದ ಸದರಿ ಚಾಕು ಶಿಸುಪಾಲ ಬಲಕುತ್ತಿಗೆಗೆ ತರಚಿರುತ್ತದೆ. ಅಸ್ಟರಲ್ಲಿಯೇ ಅಲ್ಲಿಯೇ ಇದ್ದ ನನ್ನ ಗಂಡ ಶಿವಶರಣಪ್ಪ ತಂದೆ ಚಂದಪ್ಪ ಕಡೋಳಿ ಕೃಷ್ಣಪ್ಪ ತಂದೆ ಪರಸಪ್ಪ ಧನ್ನಿ, ವೈಜನಾಥ ತಂದೆ ಸೈಬಣ್ಣಾ ಧನ್ನಿ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ಮೂರುಜನ ಸೇರಿ ನನಗೆ ಹಾಗೂ ನನ್ನ ಮಕ್ಕಳಿಗೆ ಇನ್ನಮುಂದೆ ನೀವೇನಾದರು ಗುಡಿಯೋಳಗೆ ಕಾಲಿಟ್ಟರೇ ನಿಮಗೆ ಜೀವ ಸಹಿತ ಬಿಡುವುದಿಲ್ಲ ಖಲಾಸ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಅಜಕುಮಾರ   ಕಲಬುರಗಿಯ ಡಾ||ಬಿ.ಆರ್ ಅಂಬೇಡ್ಕರ್ ಪದವಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದೇನೆ. ಈಗ ಕಾಲೇಜಿಗೆ ರಜಾ ಇದ್ದುದರಿಂದ ನಾನು ಮತ್ತು ನನ್ನ ಸ್ನೇಹಿತನಾದ ಸೋನಾಜಿ ತಂದೆ ಪ್ರಕಾಶ ಸಜ್ಜನ್ @ ಚಿಂಚೋಳಿ ಹಾಗೂ ನನ್ನ ಸೋದರತ್ತೆಯಾದ ಮಾಪಮ್ಮಾ ಗಂಡ ನಾಗೇಶ್, ವಿಜಯ ರವರುಗಳು ಕೂಡಿಕೊಂಡು ನಮ್ಮೂರಿನ ಮಾಪೂರತಾಯಿಯ ಜಾತ್ರೆ ನೋಡಲು ನಿನ್ನೆ ಮಂಗಳವಾರ ದಿವಸ ದಿನಾಂಕ: 01/05/2018 ರಂದು ಮಾಪೂರತಾಯಿ ದೇವಸ್ಥಾನಕ್ಕೆ ಹೋಗಿದ್ದೇವು ಜಾತ್ರೆಗೆ ಬಹಳಷ್ಟು ಜನರು ಬಂದಿದ್ದರು ಅದರಿಂದ ದೇವಸ್ಥಾನದ ಗರ್ಭಗಡಿಯಲ್ಲಿ ಜನರಿಗೆ ದರ್ಶನ ಮಾಡಿಕೊಂಡ ಬರಲು ತೊಂದರೆಯಾಗುತ್ತಿದ್ದರಿಂದ ದೇವಸ್ಥಾನದ ಪೂಜಾರಿಯಾದ ಶಿವಗಂಗಾ ಗಂಡ ಶಿವಶರಣಪ್ಪ ಕಡೋಳೆ ಇವರು ತಮ್ಮ ಮಕ್ಕಳಾದ ಆಕರ್ಶನ ಮತ್ತು ಗುಲ್ಶನಕುಮಾರ ರವರುಗಳನ್ನು ಕೂಡ ದೇವಸ್ಥಾನದ ಗರ್ಭ ಗುಡಿಯಲ್ಲಿ ನಿಲ್ಲಿಸಿಕೊಂಡಿದ್ದು ಅವರನ್ನು ಹೊರೆಗೆ ಕಳಿಸಿ ಜನರಿಗೆ ಹೋಗಿ ಬರಲು ತೊಂದರೆ ಯಾಗುತ್ತಿದೆ ಅಂತಾ ಶಿವಗಂಗಾ ಇವರಿಗೆ ಹೇಳಿದ್ದು ಅದಕ್ಕೆ ಅವಳು ನನಗೆ ನೀನ್ಯಾವನೊ ಹಟ್ಯಾ ಕೇಳವವನು ಎಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಗರ್ಭಗುಡಿಯಿಂದ ಹೊರಗಡೆ ಬಂದು ನಮ್ಮೊಂದಿಗೆ ಜಗಳ ವಾಡುತ್ತಿದ್ದಳು ಅಷ್ಟರಲ್ಲಿಯೇ ಅವರ ಮಕ್ಕಳಾದ ಆಕರ್ಶನ ಮತ್ತು ಗುಲ್ಶನಕುಮಾರ ಮತ್ತು ಅವರ ತಮ್ಮನಾದ ಶಿಸುಪಾಲ ರವರುಗಳು ಕೂಡಿಕೊಂಡು ಬಂದು ಆಕರ್ಶನ ಈತನು ಕಲ್ಲಿನಿಂದ ನನ್ನ ಹಣೆಗೆ ಹೊಡೆದು. ರಕ್ತಗಾಯ ಪಡಿಸಿದನು. ಆಗ ಸೋನಾಜಿ ಮತ್ತು ಮಾಪಮ್ಮರವರು ಜಗಳ ಬಿಡಿಸಲು ಬಂದಾಗ ಗುಲ್ಶನಕುಮಾರ ಈತನು ಸಹ ಕಲ್ಲಿನಿಂದ ಸೋನಾಜಿ ಇವರ ಹಣೆಗೆ ಕಲ್ಲಿನಿಂದ ಹೊಡೆದಿರುತ್ತಾನೆ. ಶಿಸುಪಾಲ ಈತನು ಮಾಪಮ್ಮ ಇವರಿಗೆ ಕೈಯಿಂದ ಹೊಡೆಬಡೆ ಮಾಡಿ ದಂಗಾಮುಸ್ತಿ ಮಾಡಿರುತ್ತಾರೆ. ಅಷ್ಟ್ಟರಲ್ಲಿಯೇ ಅಲ್ಲಿಯೇ ಇದ್ದ ನಮ್ಮೂರಿನ ಪ್ರೇಮ ತಂದೆ ದುರ್ಗಪ್ಪ ಕೋಟೆ, ಸಾಯಬಣ್ಣಾ ದೇವಪ್ಪಾ ಮದನ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ಆಕರ್ಶನ ಶಿಸುಪಾಲ ಹಾಗೂ ಗುಲ್ಶನಕುಮಾರ ರವರುಗಳು ನನಗೆ ಮಗನ್ಯಾ ನೀನು ಇವತ್ತು ಉಳದಿದ್ದಿ ಮುಂದೆ ಒಂದಾಲ್ಲಾ ಒಂದು ದಿವಸ ನಿನಗೆ ಖಲಾಸ ಮಾಡುತ್ತೇವೆಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಜೇಮಸಿಂಗ ತಂದೆ ಕಾನು ರಾಠೋಡ ಸಾ: ಡಣ್ಣೂರ ತಾಂಡಾ ಇವರ ತಾಂಡಾದ ವಾಲಾಬಾಯಿ ಗಂಡ ಬಾಬು ರಾಠೋಡ ಇವರು ನಮ್ಮ ಮನೆ ಹಿಂದೆ ಇರುವ ನಮ್ಮ ಜಾಗದಲ್ಲಿ ತಿರುಗಾಡುವುದು, ಕಟ್ಟಿಗೆ ಹಾಕುವುದು ಅಲ್ಲದೆ ಕಸ ಹಾಕುವುದು ಮಾಡುತ್ತಿರುವದರಿಂದ ನಾನು ಈ ರೀತಿ ಮಾಡಬೇಡಿ ಅಂತಾ ಹೇಳಿದರು ಕೂಡಾ ಇದನ್ನೆ ಮುಂದುವರೆಸಿಕೊಂಡು ಬಂದಿದ್ದು ದಿನಾಂಕ 26/04/2018 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನಾನು ನಮ್ಮ ಮನೆ ಹಿಂದೆ ನಿಂತಿರುವಾಗ ವಾಲಾಬಾಯಿ ಗಂಡ ಬಾಬು ರಾಠೋಡ ಇವಳು ನಮ್ಮ ಜಾಗದಲ್ಲಿ ಕಸ ಚೆಲ್ಲುತ್ತಿರುವದನ್ನು ನೋಡಿ ನಾನು ನಮ್ಮ ಜಾಗದಲ್ಲಿ ಏಕೆ ? ಕಸ ಚೆಲ್ಲುತ್ತಿದ್ದಿಯಾ ? ಅಂತಾ ಕೇಳಿದಕ್ಕೆ ವಾಲಾಬಾಯಿ ಹಾಗು ಅವರ ಕುಟುಂಬದವರಾದ ಬಾಬು ತಂದೆ ಕ್ರೀಷ್ಣು ರಾಠೋಡ, ಪ್ರಿಯಾಂಕಾ @ ಪ್ರಿಯಾ ತಂದೆ ಬಾಬು ರಾಠೋಡ, ಅರವಿಂದ ತಂದೆ ಬಾಬು ರಾಠೋಡ, ಜ್ಯೋತಿ ಗಂಡ ಶಂಬು ಪವಾರ ಇವರೆಲ್ಲರೂ ಕೂಡಿಕೊಂಡು ಬಂದವರೆ ಭೋಸಡಿ ಮಗನೆ, ಈ ಜಾಗ ನಮಗು ಸಂಬಂಧಪಡುತ್ತದೆ ಅಂತಾ ಚೀರಾಡುತ್ತಾ ಬಾಬು ಮತ್ತು ಅರವಿಂದ ಇವರು ನನ್ನ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಹೊಟ್ಟೆಗೆ ಗುದ್ದಿ ಕಾಲಿನಿಂದ ಬೆನ್ನಮೇಲೆ ಮತ್ತು ಬಲಗೈ ಮಣಿಕಟ್ಟಿನ ಹತ್ತಿರ ಒದೆಯುತ್ತಿರುವಾಗ ವಾಲಾಬಾಯಿ ಕಲ್ಲಿನಿಂದ ನನ್ನ ಎಡಗೈ ರಟ್ಟೆಗೆ ಹೊಡೆದಿದ್ದರಿಂದ ಒಳಪೆಟ್ಟಾಗಿರುತ್ತದೆ. ಪ್ರಿಯಾಂಕ ಹಾಗು ಜ್ಯೋತಿ ಇವರು ಈ ಹಾಟ್ಯಾಂದು ಬಹಳ ನಡೆದಿದೆ ಅಂತಾ ಕೈಯಿಂದ ಕಪಾಳ ಮೇಲೆ ಹೊಡೆದು ಕಾಲಿನಿಂದ ತಲೆಗೆ ಒದೆಯುತ್ತಿರುವಾಗ ಅಲ್ಲೆ ಇದ್ದ ನಮ್ಮ ತಾಂಡಾದ ಆನಂದ ತಂದೆ ಪೋಮು ಜಾಧವ ಮತ್ತು ಮಧೂಸುದನ ತಂದೆ ಕನಿರಾಮ್ ಜಾಧವ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ಐದು ಜನ ಸೇರಿ ನನಗೆ ಇವತ್ತು ನೀನು ಉಳಿದಿದ್ದಿ ಮುಂದೆ ಒಂದಲ್ಲಾ ಒಂದು ದಿನ ನಿನಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಸಚಿನ ತಂದೆ ದಿಲೀಪ್ ಬಿರಾದಾರ ಸಾ||ಸಂಗೋಳಗಿ ಸಿ ರವರದು ಮ್ಮೂರಿನ ಸೀಮಾಂತರದ ಸರ್ವೆ  ನಂ 38 ರಲ್ಲಿ ನಮ್ಮ ಹಾಗೂ ನಮ್ಮ ಚಿಕ್ಕಪ್ಪನಾದ ರಾಜಕುಮಾರ ಬಿರಾದಾರ ರವರ ಹೊಲವಿದ್ದು ಸದರಿ ಹೊಲದ ಬಂದಾರಿಗೆ ಹೊಂದಿಯೇ ಸರ್ವೆೇ ನಂ 37 ರಲ್ಲಿ ಗಣೇಶ ತಂದೆ ಗೋವಿಂದರಾವ ಬಿರಾದಾರ ರವರ ಹೊಲ ವಿರುತ್ತದೆ. ನಮ್ಮ ಇಬ್ಬರ ಹೊಲಗಳ ಮದ್ಯ ಇರುವ ಬಂದಾರಿ ವಿಷಯವಾಗಿ ತಕರಾರು ಇದ್ದುದ್ದರಿಂದ ಗಣೇಶ ಇವರು ಸರ್ವೆೇಗಾಗಿ ಅರ್ಜಿ  ಸಲ್ಲಿಸಿರುತ್ತಾರೆ. ನಮ್ಮ ಹೊಲದಾಗಿನಿಂದ ನಾವು ಮಣ್ಣನ್ನು ಕೆದರುತ್ತಿದ್ದು ಅದಕ್ಕೆ ಗಣೇಶ ಇವರು ಸದರಿ ಹೊಲವು ಅವರಿಗೆ ಸಂಬಂಧಪಟ್ಟಿರುತ್ತದೆ ಅಂತಾ ನಮ್ಮೊಂದಿಗೆ ತಕಾರು ಮಾಡುತ್ತಾ ಬಂದಿರುತ್ತಾರೆ. ಅದರಂತೆ ದಿನಾಂಕ:30/04/2018 ರಂದು ಸಹ ನಾವು ನಮ್ಮ ಹೊಲದಾಗಿನಿಂದ ಮಣ್ಣನ್ನು ಕೆದರಿದ್ದರಿಂದ ಅವರ ನಮ್ಮೊಂದಿಗೆ ತಕರಾರರು ಮಾಡಿದ್ದರಿಂದ ಅದೇ ದಿವಸ ಅಂದರೆ ದಿನಾಂಕ:30/04/2018 ರಂದು ರಾತ್ರಿ 9-15 ಗಂಟೆ ಸುಮಾರಿಗೆ ನಾನು ಶ್ರೀರಂಗ ತಂದೆ ಪಾಂಡುರಂಗ ಬಿರಾದಾರ, ಆನಂದರಾವ ತಂದೆ ಅಂಗದರಾವ ಬಿರಾದಾರ, ಆನಂದ ತಂದೆ ರಾಜಕುಮಾರ ಬಿರಾದಾರ ರವರುಗಳು ಕೂಡಿಕೊಂಡು ಸದರಿ ಗಣೇಶ ಇವರ ಮನೆಯ ಹತ್ತಿರ ಹೋಗಿ ನಮ್ಮ ಹೊಲದಾಗಿನಿಂದ ಮಣ್ಣು ಕೆದರಲು ತಕಾರರು ಮಾಡಬೇಡಿ ಎಂದು ಕೇಳುತ್ತಿರುವಾಗ 1)ಗಣೇಶ ತಂದೆ ಗೊವಿಂದರಾವ ಬಿರಾದಾರ, 2)ಮಹೇಶ ತಂದೆ ಗೋವಿಂದರಾವ ಬಿರಾದಾರ, 3)ವೆಂಕಟ್ ತಂದೆ ರಾಮರಾವ ಬಿರಾದಾರ, 4)ಗೋವಿಂದರಾವ ತಂದೆ ಗಣಪತಿರಾವ ಬಿರದಾರ, 5)ವಿಶ್ವನಾಥ ತಂದೆ ವಿಠಲರಾವ ಬಿರಾದಾರ, 6)ಕೃಷ್ಣಾ ತಂದೆ ಬಲಬೀಮರಾವ ಬಿರಾದಾರ, 7)ಬಲಭೀಮ ತಂದೆ ಮಾಧುರಾವ ಬಿರಾದಾರ, 8)ಆನಂದ ತಂದೆ ದಶವಂತರಾವ ಬಿರಾದಾರ, 9)ಪ್ರಕಾಶ ತಂದೆ ಬಲಭೀಮರಾವ ಬಿರಾದಾರ, 10)ಜೀಜಾಬಾಯಿ ಗಂಡ ಗೋವಿಂದರಾವ ಬಿರಾದಾರ, 11)ವಿಠಲರಾವ ತಂದೆ ಮಾಧರಾವ ಬಿರಾದಾರ, 12)ಅಭಿಮಾನ ತಂದೆ ಮಾಧುರಾವ ಬಿರಾದಾರ, 13)ರಾಘವೇಂದ್ರ ತಂದೆ ವೆಂಕಟ್ರಾವ ಬಿರಾದಾರ, 14)ವೆಂಕಟ್ರಾವ ತಂದೆ ಗಣಪತಿರಾವ ಬಿರಾದಾರ ಎಲ್ಲರೂ ಸಾ||ಸಂಗೋಳಗಿ ಸಿ ಗ್ರಾಮ ಇವರುಗಳು ಎಲ್ಲರೂ ಕೂಡಿಕೊಂಡು ನನಗೆ ಏ ಬೋಸಡಿ ಮಗನೆ ನೀನು ನಮ್ಮ ಹೊಲದಾಗಿನಿಂದ ಮಣ್ಣು ಕೆದರಿ ನಮಗೆ ಕೇಳಕ್ಕೆ ಬರತ್ತಿಯಾ ಎಂದು ಅವಾಚ್ಯವಾಗಿ ಬೈಯುತ್ತಾ ನನ್ನೊಂದಿಗೆ ಜಗಳ ತಗೆದು ಗಣೇಶ, ವೆಂಕಟ್, ಮಹೇಶ್, ವಿಶ್ವನಾಥ ರವರು ಕೂಡಿ ನನಗೆ ಕೈಯಿಂದ ಹೊಡೆಬಡೆಮಾಡಿ ವೆಂಕಟನು ಕಲ್ಲಿನಿಂದ ನನ್ನ ಹಣೆಯ ಬಲಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು, ಅಲ್ಲದೇ ಇನ್ನುಳಿದ ಗೋವಿಂದ, ಕೃಷ್ಣಾ, ಬಲಭೀಮ, ಆನಂದ, ಪ್ರಕಾಶ, ಜೀಜಾಬಾಯಿ, ವಿಠಲರಾವ ಅಭಿಮಾನ ರಾಘವೇಂದ್ರ ಮತ್ತು ವೇಂಕಟರಾವ ರವರು ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಸುತ್ತುವರಿದು ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದಿಯುತ್ತಿರುವಾಗ ನನ್ನೊಂದಿಗೆ ಇದ್ದ ಆನಂದರಾವ, ಶ್ರೀರಂಗ, ಆನಂದ ರವರು ಜಗಳ ಬಿಡಿಸಲು ಬಂದಾಗ ಅವರಿಗೆ ಈ ಮೇಲೆ ಹೇಳಿದ 14ಜನ ಸೇರಿ ನೀವೇನಾದರು ಜಗಳ ಬಿಡಿಸಿದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಹೆದುರಿಸುತ್ತಿರುವಾಗ ವಾಮನರಾವ ತಂದೆ ಜಗನ್ನಾಥ ಬಿರಾದಾರ ಮತ್ತು ನರಸಿಂಗ್ ತಂದೆ ಗೋವಿಂದರಾವ ಬಿರಾದಾರ ರವರುಗಳು ಜಗಳದಲ್ಲಿ ಮದ್ಯಸ್ತಿಕೆ ವಹಿಸಿ ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 01/05/2018 ರಂದು ರಾತ್ರಿ 11.00 ಗಂಟೆಯ ಸುಮಾರಿಗ ಚಾಂದಸಾಬ ತಂದೆ ಹುಸೇನ ಸಾಬ ಖನಬೋ  ಸಂಗಡ ಇನ್ನೂ ಹನ್ನೊಂದು ಜನ ಸಾಃ ಎಲ್ಲರೂ ಮೈನಾಳ ಗ್ರಾಮ ಎಲ್ಲರು  ಕೂಡಿಕೊಂಡು ಶ್ರೀ ಸುಲೇಮಾನ ತಂದೆ ಮಹ್ಮದ ಹುಸೇನ ಸಾಃ ಮೈನಾಳ ತಾ.ಜಿಃ ಕಲಬುರಗಿ ರವರ  ಮತ್ತು ಆವರ ತಾಯಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಕಬ್ಬಿಣದ ರಾಡಿನಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 01/05/2018 ರಂದು ರಾತ್ರಿ 11.00 ಗಂಟೆಯ ಸುಮಾರಿಗ 1.ಹಮೀದ ತಂದೆ ಚಾಂದಸಾಬ 2. ಸುಲೇಮಾನ ತಂದೆ ಮಹ್ಮದ ಹುಸೇನ ದರ್ಗಾ ಸಾಃ ಇಬ್ಬರೂ ಮೈನಾಳ ಗ್ರಾಮ ಇವರು ಕುಡಿಕೊಂಡು ಶ್ರೀ ಚಾಂದಸಾಬ ತಂದೆ ಹುಸೇನಸಾಬ ಖನಬೋ ಸಾಃ ಮೈನಾಳ ಗ್ರಾಮ ಇವರಿಗೆ  ಮತ್ತು ಆತನ ಹೆಂಡತಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.