ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-11-2020
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 75/2020, ಕಲಂ. 408, 409, 420 ಐಪಿಸಿ :-
ಫಿರ್ಯಾದಿ ಮೇಘರಾಜ ತಂದೆ ಯಲ್ಲಪ್ಪಾ ವಯ: 55 ವರ್ಷ, ಉ: ಎ.ಹೆಚ್.ಸಿ, ಡಿ.ಎ.ಆರ್ ಬೀದರ, ಸಾ: ಲೇಬರ ಕಾಲೋನಿ ಬೀದರ ರವರು ದಿನಾಂಕ 07-09-1988 ರಂದು ಬೀದರನಲ್ಲಿ ಡಿ.ಎ.ಆರ್ ಕಾನ್ಸಟೇಬಲ್ ಹುದ್ದೆಗೆ ನೇಮಕಾತಿ ಹೊಂದಿದ್ದು, ಆರೋಪಿ ಮಂಜುನಾಥ ತಂದೆ ಮಾರುತಿರಾವ ವಯ: 49 ವರ್ಷ, ಉ: ಎ.ಆರ್.ಎಸ್.ಐ ಡಿ.ಎ.ಆರ್ ಬೀದರ, ಸಾ: ಬೀದರ ರವರು ತನ್ನ ತಂದೆಯಾದ ಮಾರುತಿರಾವ ಮೃತಪಟ್ಟಿರುವುದರಿಂದ ಅನುಕಂಪದ ಆಧಾರದ ಮೇರೆಗೆ ದಿನಾಂಕ 07-09-1988 ರಂದು ಡಿ.ಎ.ಆರ್ ಕಾನ್ಸಟೇಬಲ್ ಹುದ್ದೆಗೆ ನೇಮಕ ಆಗಿರುತ್ತಾರೆ, ಆರೋಪಿತನು ಕರ್ತವ್ಯಕ್ಕೆ ಸೇರುವಾಗ ಚಿಟಗುಪ್ಪಾ ಶಾಲೆಯ ಶಾಲಾ ದಾಖಲಾತಿಗಳು ಹಾಜರಪಡಿಸಿದ್ದು ಅದರಲ್ಲಿ ಯಾವುದೇ ಜಾತಿ ನಮೂದು ಇರುವುದಿಲ್ಲಾ, ಇದು 2014 ನೇ ಸಾಲಿನವರೆಗೆ ಇದೇ ರೀತಿ ಇರುತ್ತದೆ, ಎಂ.ಪಿ.ಹೆಚ್ ಶಾಲೆ ಹುಲಸೂರ ಶಾಲಾ ದಾಖಲಾತಿ ಪ್ರಕಾರ ಆರೋಪಿತನು ದಿನಾಂಕ 31-05-1980 ರಂದು ಶಾಲೆಗೆ ಸೇರಿದ್ದು ವರ್ಗಾವಣೆ ಪ್ರಮಾಣ ಪತ್ರದ ಪ್ರಕಾರ ದಿನಾಂಕ 23-05-1980 ರವರೆಗೆ ಶಾಲೆಗೆ ಹಾಜರಾದ ಬಗ್ಗೆ ನಮೂದು ಇದ್ದು ಈ ಶಾಲೆಯ ವರ್ಗಾವಣೆ ಪ್ರಮಾಣ ಪತ್ರದಲ್ಲಿ ಕೂಡ ಯಾವುದೇ ಜಾತಿ ನಮೂದು ಇರುವುದಿಲ್ಲಾ, ಆರೋಪಿತನು ಸರಕಾರಿ ಪ್ರೌಡ ಶಾಲೆ ಚಿಟಗುಪ್ಪಾದಲ್ಲಿ ದಿನಾಂಕ 02-06-1980 ರಂದು ಸೇರಿದ್ದು ಈ ಶಾಲೆಯಲ್ಲಿ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು ಅದರಲ್ಲಿ ಜಾತಿ ಸಾಮಾನ್ಯ ವರ್ಗ ಎಂದು ಇರುತ್ತದೆ, ಅದರೆ ಆರೋಪಿತನು ಒತ್ತಾಯಪೂರ್ವಕವಾಗಿ ಚಿಟಗುಪ್ಪಾ ಶಾಲೆ ಮುಖ್ಯ ಗುರುಗಳಿಗೆ ಬೆದರಿಸಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಅದರಲ್ಲಿ ಕೊಳಿ ಎಂದು ಜಾತಿ ನಮೂದು ಮಾಡಿದ ದಾಖಲೆಗಳು ಜಿಲ್ಲಾ ಪೊಲೀಸ್ ಕಛೇರಿ ಬೀದರದಲ್ಲಿ ಹಾಜರು ಪಡಿಸಿ 2014 ನೇ ಸಾಲಿನಲ್ಲಿ ಜೇಷ್ಠೆತಾ ಪಟ್ಟಿ ಸಿದ್ದವಾಗಿ ಮುಂಬಡ್ತಿ ಹೊಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 25-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 104/2020, ಕಲಂ. 379 ಐಪಿಸಿ :-
ದಿನಾಂಕ 04-11-2020 ರಂದು 2100 ಗಂಟೆಯಿಂದ ಗಂಟೆಯಿಮದ ದಿನಾಂಕ 05-11-2020 ರಂದು 0600 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಪ್ರಭುಶೆಟ್ಟಿ ಕಲಮೂಡ ವಯ: 51 ವರ್ಷ, ಜಾತಿ: ಲಿಂಗಾಯತ, ಸಾ: ಮೀನಕೇರಾ, ತಾ: ಚಿಟ್ಟಗುಪ್ಪ, ಜಿ: ಬೀದರ ತನ್ನ ಹೊಂಡಾ ಯುನಿಕಾರ್ನ ದ್ವೀಚಕ್ರ ವಾಹನ ಸಂ. ಕೆಎ-39/ಎಲ್-1758 ನೇದನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿರುವುದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ನೊಂದಣಿ ಸಂ. ಕೆಎ-39/ಎಲ್-1758, 2) ಚಾಸಿಸ್ ನಂ. ME4KC09CDE8710194, 3) ಇಂಜಿನ್ ನಂ. KC09E86720695, 4) ಅ.ಕಿ 30,000/- ಬೆಲೆ ಬಾಳುವುದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಖ 25-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.