ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-10-2020
ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 14/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಶಂಕರ ತಂದೆ ಹಣಹಂತ ವಡೆರಾಜ ವಯ: 58 ವರ್ಷ, ಜಾತಿ: ವಡ್ಡರ, ಸಾ: ಯಲ್ಲದಗುಂಡಿ ಗ್ರಾಮ ರವರ ಮಗನಾದ ಮಲ್ಲಿಕಾರ್ಜುನ ಇತನು ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದು, ಆಗಾಗ ನಾನು ಸಾಯುತ್ತೇನೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಿದ್ದನ್ನು, ಹೀಗಿರುವಾಗ ದಿನಾಂಕ 04-10-2020 ರಂದು 1100 ಗಂಟೆಯಿಂದ 1300 ಗಂಟೆಯ ಮಧ್ಯದ ಅವಧಿಯಲ್ಲಿ ಹೊಲದ ಬಂದರಿಯ ಮೇಲಿದ್ದ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ದೂರು ಮತ್ತು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 124/2020, ಕಲಂ. ಹುಡುಗಿ ಕಾಣೆ :-
ದಿನಾಂಕ 03-10-2020 ರಂದು 2030 ಗಂಟೆ ಸುಮಾರಿಗೆ ಫಿರ್ಯಾದಿ ವೈಜಿನಾಥ ತಂದೆ ಶಿವಲಿಂಗಪ್ಪಾ ಕುಂಬಾರ ಸಾ: ಹಳ್ಳಿಖೇಡ(ಬಿ) ಇವಳು ತಮ್ಮ ಮನೆಯಿಂದ ಮನೆಯ ಮುಂದಿನ ಗೇಟ್ ಹಾಕಿ ಬರುತ್ತೇನೆ ಅಂತ ಹೇಳಿ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ತಿಳಿದುಕೊಳ್ಳಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಕಾಣೆಯಾದ ಮಗಳ ಚಹರೆ ಪಟ್ಟಿ ತೆಳ್ಳನೆಯ ಮುಖ ಸಾಧಾರಣ ಮೈಕಟ್ಟು, ನೇರವಾದ ಮೂಗು, ಗೋಧಿ ಮೈಬಣ್ಣ, ಮೈಮೇಲೆ ಹಳದಿ ಬಣ್ಣದ ಟಾಪ್ ಮತ್ತು ಚುಡಿದಾರ ಧರಿಸಿರುತ್ತಾಳೆ, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 04-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 73/2020, ಕಲಂ. 279, 338 ಐಪಿಸಿ :-
ದಿನಾಂಕ 04-10-2020 ರಂದು ಫಿರ್ಯಾದಿ ಕು.ಶಶಿಕಲಾ ತಂದೆ ಗುರುನಾಥ ವಯ: 22 ವರ್ಷ, ಸಾ: ಮುಸ್ತಾಪುರ, ರವರಿಗೆ ಹಲ್ಲು ಬೆನೆ ಆದ ಕಾರಣ ತನ್ನ ತಾಯಿ ಮಾಹಾದೇವಿ, ತಮ್ಮ ಬಸವಕೀರಣ ಮೂವರು ಕೊಡಿ ತಮ್ಮೂರ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ದೂಪತಮಾಹಾಗಾಂವ-ಲಾಧಾ ಕಡೆಯಿಂದ ಆಟೋ ನಂ. ಕೆಎ-38/8421 ನೇದು ಬಂದಾಗ ಸದರಿ ಆಟೋದಲ್ಲಿ ದೂಪತಮಾಹಾಗಾಂವ ಗ್ರಾಮದ ಲಕ್ಷ್ಮಿ ಗಂಡ ತುಳಸಿರಾಮ ಮತ್ತು ಫಿರ್ಯಾದಿಯವರೆಲ್ಲರೂ ಕುಳಿತು ಸಂತಒಪುರ ಆಸ್ಪತ್ರೆಗೆ ಹೋಗುವಾಗ ಬೀದರ ಔರಾದ (ಬಿ) ರೋಡಿನ ಮೇಲೆ ವೈಜೀನಾಥ ಪಾಟೀಲ ಜಿರ್ಗಾ (ಬಿ) ರವರ ಹೊಲದ ಹತ್ತಿರ ಬಂದಾಗ ಸದರಿ ಆಟೋ ಚಾಲಕನಾದ ಆರೋಪಿ ನರಸಿಂಗ್ ತಂದೆ ಮಾರುತಿ ದೊಬಿ ಸಾ: ಬಾಚೇಪಳ್ಳಿ ಇತನು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಾಲಾಯಿಸಿ ರೋಡಿನ ಮೇಲೆ ಆಟೋ ಪಲ್ಟಿ ಮಾಡಿದ ಪರಿಣಾಮ ಫಿರ್ಯಾದಿಯ ಎರಡು ಮೊಳಕಾಲಿಗೆ, ಎಡಗಾಲು ಪಾದದ ಮೇಲೆ, ಎಡಗೈ ಮುಂಗೈ ಮೇಲೆ, ಬಲಗೈ ರಟ್ಟೆಯ ಮೇಲೆ, ಬಲಗಡೆ ಮುಖಕ್ಕೆ ತುಟಿಯ ಮೇಲೆ ಹಾಗೂ ಹಣೆಯ ಮೇಲೆ ತರಚಿದ ರಕ್ತಗಾಯಗಳಾಗಿರುತ್ತದೆ, ಲಕ್ಷ್ಮೀ ಇವರಿಗೆ ಎಡಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯ, ಎಡಗಾಲಿನ ಮೊಳಕಾಲಿಗೆ ಹಾಗೂ ಕುತ್ತಿಗೆಯ ಮೇಲೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ತಾಯಿ ಮಾಹಾದೇವಿ, ತಮ್ಮ ಬಸವಕೀರಣ ರವರಿಗೆ ಯಾವುದೆ ಗಾಯವಾಗಿರುವದಿಲ್ಲಾ, ಗಾಯಗೊಂಡ ಫಿರ್ಯಾದಿಗೆ ಹಾಗೂ ಲಕ್ಷ್ಮಿ ಇಬ್ಬರಿಗೆ ಸದರಿ ಆರೋಪಿಯು ಒಂದು ಖಾಸಗಿ ವಾಹನದಲ್ಲಿ ಸಂತಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತೆಗೆದುಕೊಂಡು ಬಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 89/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 04-10-2020 ರಂದು ಚಂದ್ರಕಾಂತ ತಂದೆ ಸೋಪಾನ ಕಾಳೆ ವಯ: 32 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ತೋರಣಾ ಇತನು ತೋರಣಾ ಗ್ರಾಮದ ಶಿವಾಜಿ ಚೌಕ ಹತ್ತಿರ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ತಾನಾಜಿ ಪಿಎಸ್‌ಐ ಕಮಲನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬನ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ, ಸಿಬ್ಬಂದಿಯವರೊಡನೆ ಹೊಗಿ ಶಿವಾಜಿ ಚೌಕ ಹತ್ತಿರ ನೋಡಲು ಸದರಿ ಆರೋಪಿತನು ತನ್ನ ಹತ್ತಿರ ಒಂದು ಬಿಳಿಚೀಲ ಇಟ್ಟುಕೊಂಡು ಜನರಿಗೆ ಮಾರಾಟ ಮಾಡಲು ಅಕ್ರಮ ಸರಾಯಿ ಇರುವುದನ್ನು ಖಚಿತ ಮಾಡಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿ ಬಿಳಿ ಚೀಲವನ್ನು ಪರಿಶಿಲಿಸಿ ನೋಡಲು ಅದರಲ್ಲಿ 1) Original Choice Deluxe Wisky 90 ML 40 Paper pouch RS. 1405/- 2) Old Tavern Whisky 180 ML 10 Paper Pouch RS. 867/- ಮುದ್ದೆ ಮಾಲು ಇರುತ್ತದೆ, ನಂತರ ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.