Police Bhavan Kalaburagi

Police Bhavan Kalaburagi

Sunday, August 29, 2021

BIDAR DISTRICT DAILY CRIME UPDATE 29-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-08-2021

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 40/2021, ಕಲಂ. 302, 201 ಐಪಿಸಿ :-

ದಿನಾಂಕ 28-08-2021 ರಂದು ಫಿರ್ಯಾದಿ ಜೀತೆಂದ್ರ ತಂದೆ ಲೋಕು ರಾಠೋಡ ವಯ: 32 ರ್ಷ, ಜಾತಿ: ಲಂಬಾಣಿ, ಸಾ: ದೇವಗಿರಿ ತಾಂಡಾ ರವರು ತಮ್ಮ ತಾಂಡಾದ ದುರ್ಗಮ್ಮಾ ದೇವಿಯ ದರ್ಶನಕ್ಕೆಂದು ಹೋದಾಗ ಅದೇ ಸಮಯಕ್ಕೆ ಯಾರೋ ಒಬ್ಬ ವ್ಯಕ್ತಿ ಹೇಳಿದ್ದೆನೆಂದರೆ ದೇವಗಿರಿ ಭಾದ್ರಾಪುರ ರೊಡಿನ ಪಕ್ಕದಲ್ಲಿ ಅರಣ್ಯ ಪ್ರದೇಶದಲ್ಲಿ ಯಾವುರೋ ಒಂದು ಅಪರಿಚಿತ ಮಹಿಳೆಯ ªÀ ಸುಟ್ಟ ಸ್ಥಿತಿಯಲ್ಲಿ ಬೀದ್ದಿರುತ್ತದೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿಯು ಅಲ್ಲಿಪುರ ತಾಂಡಾದ ಗೊವಿಂದ ಚೌಹಾಣ ಇಬ್ಬರು ಕೂಡಿಕೊಂಡು ಅಲ್ಲಿಗೆ ಹೋಗಿ ನೊಡಲಾಗಿ ಸದರಿ ವಿಷಯ ನೀಜವಿದ್ದು ದೇವಗಿರಿ ತಾಂಡ ಶೀವಾರದ ಅರಣ್ಯ ಪ್ರದೇಶದಲ್ಲಿ ರೊಡಿನಿಂದ ಅಂದಾಜು 40 ಫಿಟು ಅಂತರದಲ್ಲಿ ರೊಡಿನ ದಕ್ಷಿಣ ದಿಕ್ಕಿಗೆ ದೇವಗಿರಿ ತಾಂಡಾ ಭಾದ್ರಾಪುರ ರೊಡಿನ ಪಕ್ಕದಲ್ಲಿ ಅಪರಿಚಿತ ಮಹಿಳೆಯ ಶವ ಇದ್ದು ಅಂದಾಜು 20 ರಿಂದ 22 ವರ್ಷ ವಯಸ್ಸಿನಲ್ಲಿ ಇರಬಹುದು, ಸದರಿ ಅಪರಿಚಿತ ಹೆಣ್ಣು ಮಗಳ ಶವವನ್ನು ದಿನಾಂಕ 28-08-2021 ರಂದು ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತರು ಯಾವುದೋ ಉದ್ದೇಶದಿಂದ ಕೊಲೆ ಮಾಡಿಕೊಂಡು ಎಲ್ಲಿಂದಲೊ ತಂದು ಅರಣ್ಯ ಪ್ರದೇಶದಲ್ಲಿ ಬಿಸಾಕಿದ್ದು ಸದರಿ ಮೃತ ಹೆಣ್ಣು ಮಗಳ ಮೈ ಮೇಲೆ ಪೇಟ್ರೊಲ ಹಾಕಿ ಸುಟ್ಟು ಸಾಕ್ಷಿ ನಾಶ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 97/2021, ಕಲಂ. 379 ಐಪಿಸಿ :-

ದಿನಾಂಕ 21-08-2021 ರಂದು 2000 ಗಂಟೆಯಿ0 2200 ಗಂಟೆಯ ಅವಧಿಯಲ್ಲಿ ಬೀದರ ಸರಕಾರಿ ಆಸ್ಪತ್ರೆಯ ಆವರಣದಲ್ಲಿ   ನಿಲ್ಲಿಸಿದ ಫಿರ್ಯಾದಿ ಶಿವಕಾಂತ ತಂದೆ ಬಾಬುರಾವ ವಯ: 31 ವರ್ಷ, ಜಾತಿ: ಲಿಂಗಾಯತ, ಸಾ: ಶಿವನಗರ ಉತ್ತರ ಬೀದರ ರವರ ಹೀರೊ ಸ್ಪ್ಲೆಂಡರ ಪ್ಲಸ್ ಮೋಟಾರ್ ಸೈಕಲ ನಂ. KA-38/S-4276, ಚಾಸಿಸ್ ನಂ. MBLHA10CGGHB01404, ಇಂಜಿನ್ ನಂ. HA10ERGHB11346, ಮಾಡಲ್: 2016, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 55,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 28-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 98/2021, ಕಲಂ. 379 ಐಪಿಸಿ :-

ದಿನಾಂಕ 22-03-2021 ರಂದು 0800 ಗಂಟೆಯಿ0 ದಿನಾಂಕ 23-03-2021 ರಂದು 0500 ಗಂಟೆಯ ಅವಧಿಯಲ್ಲಿ ಬೀದರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಫಿರ್ಯಾದಿ ಸಂಜೀವಕುಮಾರ ತಂದೆ ಸಾಯಪ್ಪ ಕುಂಬಾರ ವಯ: 35 ವರ್ಷ, ಜಾತಿ: ಕುಂಬಾರ, ಸಾ: ನಾಗನಕೇರಾ, ತಾ: ಚಿಟಗುಪ್ಪ, ಜಿಲ್ಲಾ: ಬಿದರ ರವರ ಹೀರೊ ಸ್ಪ್ಲೆಂಡರ ಪ್ರೊ ಮೋಟಾರ್ ಸೈಕಲ ನಂ. KA-39/K-7463, ಚಾಸಿಸ್ ನಂ. MBLHA10ASDHC18145, ಇಂಜಿನ್ ನಂ. HA10ELDHC19557, ಮಾಡಲ್: 2013, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 45,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 99/2021, ಕಲಂ. 379 ಐಪಿಸಿ :-

ದಿನಾಂಕ 20-08-2021 ರಂದು 1930 ಗಂಟೆಯಿ0 2230 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಸಂತೋಷ ಪಾಂಡೆ ತಂದೆ ಮೊಹನಚಂದ ವಯ: 39 ವರ್ಷ, ಜಾತಿ: ಬ್ರಾಹ್ಮಣ, ಸಾ: ಜೆ.ಪಿ ನಗರ ಬೀದರ ರವರು ತಮ್ಮ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದ ತನ್ನ ಹೀರೊ ಪ್ಯಾಶನ ಪ್ರೊ ಮೋಟಾರ್ ಸೈಕಲ ನಂ. KA-38/Q-5828, ಚಾಸಿಸ್ ನಂ. MBLHA10AWDHG10444, ಇಂಜಿನ್ ನಂ. HA10ENDHG24299, ಮಾಡಲ್: 2013, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 65,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 28-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 100/2021, ಕಲಂ. 379 ಐಪಿಸಿ :-

ದಿನಾಂಕ 22-08-2021 ರಂದು 1830 ಗಂಟೆಯಿ0 1930 ಗಂಟೆಯ ಅವಧಿಯಲ್ಲಿ ಬೀದರ ನಗರದ ಅನಮೋಲ ಹೋಟೆಲ್ ಎದುರಿಗೆ ನಿಲ್ಲಿಸಿದ ಫಿರ್ಯಾದಿ ಏಸೆಪ್ಪ ತಂದೆ ಕಾಶಪ್ಪ ವಯ: 35 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನಾಗೂರ (ಎಮ್), ತಾ: ಔರಾದ, ಜಿ: ಬೀದರ ರವರ ಹೀರೊ ಸ್ಪ್ಲೆಂಡರ ಪ್ಲಸ್ ಮೋಟಾರ್ ಸೈಕಲ ನಂ. TS-07/GH-6890, ಚಾಸಿಸ್ ನಂ. MBLHAR071JHG38930, ಇಂಜಿನ್ ನಂ. HA10AGJHG44870, ಮಾಡಲ್: 2018, ಬಣ್ಣ: ಕಪ್ಪು ಬಣ್ಣ ಹಾಗೂ .ಕಿ 55,000/- ರೂ. ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 101/2021, ಕಲಂ. 78(3) ಕೆಪಿ ಕಾಯ್ದೆ :-

ದಿನಾಂಕ 28-08-2021 ರಂದು ಬೀದರನ ಪ್ರತಾಪ ನಗರದ ಶೆಟಕಾರ ಹೋಟೆಲ್ ಹತ್ತಿರ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಎಂಬ ನಸೀಬಿನ ಮಟ್ಕಾ ಚೀಟಿ ನಡೆಸುತ್ತಿದ್ದಾರೆಂದು ಕಪೀಲದೇವ ಪಿಐ ಬೀದರ ನೂತನ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬೀದರ ನಗರದ ಪ್ರತಾಪ ನಗರದ ಶೆಟಕಾರ ಹೋಟಲ್ ಹತ್ತಿರ ಹೋದಾಗ ಅಲ್ಲಿ ಆರೋಪಿತರಾದ 1) ಉಮೇಶ ತಂದೆ ನಾಗಪ್ಪಾ ಅಡ್ಡೆನೋರ ವಯ: 39 ವರ್ಷ, ಜಾತಿ: ಕಿಶ್ಚಿಯನ್ ಹಾಗೂ 2) ಅಮರನಾಥ ತಂದೆ ಶಿವರಾಜ ಅಲಗೂಡೆ ವಯ: 32 ವರ್ಷ, ಜಾತಿ: ಕ್ರೀಶ್ಚಿಯನ್, ಇಬ್ಬರು ಸಾ: ಪ್ರತಾಪ ನಗರ ಬೀದರ ಇವರಿಬ್ಬರು ರೊಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟ್ಕಾ ನಸೀಬಿನ ಜೂಜಾಟ 01/- ರೂಪಾಯಿಗೆ 08/- ರೂ. ಅಂತಲೂ ಮತ್ತು 10/- ರೂಪಾಯಿಗೆ 80/- ರೂ. ಅಂತಾ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಾ ಅವರಿಗೆ ಮಟ್ಕಾ ಚೀಟಿ ಬರೆದುಕೊಡುತ್ತಿರುವುದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿದು ಅವರಿಂದ ಒಟ್ಟು ನಗದು ಹಣ 2500/- ರೂ., 2) 9 ಮಟಕಾ ಚಿಟಿಗಳು ಮತ್ತು 3) 2 ಬಾಲ ಪೆನ್ ಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.