Police Bhavan Kalaburagi

Police Bhavan Kalaburagi

Monday, September 14, 2020

KALABURAGI DISTRICT CRIME REPORTED

 ಅಕ್ರಮ ಗಾಂಜಾ ಮಾರಾಟ :-

ಅಫಜಲಪೂರ ಪೊಲೀಸ ಠಾಣೆ 

 ಇಂದು ದಿನಾಂಕ 13-09-2020 ರಂದು 6:00 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆ ಹಾಜರುಪಡಿಸಿ ಸ:ತ ಫೀರ್ಯಾದಿ ಸಲ್ಲಿಸಿದ್ದು ಸದರಿ ಫೀರ್ಯಾದಿಯ ಸಾರಾಂಶವೇನೆಂದರೆ ದಿನಾಂಕ 13-09-2020 ರಂದು ಮದ್ಯಾಹ್ನ 1:30 ಗಂಟೆಗೆ ನಾನು ಠಾಣೆಯಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಶೀವೂರ ಸೀಮಾಂತರದ ಒಂದು ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆಮಾನ್ಯ ತಾಲೂಕಾ ಆರೋಗ್ಯಾಧಿಕಾರಿಗಳು ಪತ್ರಾಂಕಿತ ಅಧಿಕಾರಿಯವರಾದ ಡಾ|| ಸಂಗಮೇಶ ಟಕ್ಕಳಕಿ ವೈದ್ಯಾಧಿಕಾರಿಗಳು ತಾಲೂಕು ಸರ್ಕಾರಿ ಆಸ್ಪತ್ರೆ ಅಫಜಲಪೂರ ಮತ್ತು ತಹಸಿಲ್ದಾರ ಕಛೇರಿಯಿಂದ ಇಬ್ಬರು ಸರ್ಕಾರಿ ಪಂಚರೊಂದಿಗೆ ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಸಂತೋಷ ಹೆಚ್.ಸಿ-439, ಚಿದಾನಂದ ಹೆಚ್.ಸಿ-306, ಭಾಗಣ್ಣ ಪಿಸಿ-167   ಎಲ್ಲರೂ ಒಂದು ಖಾಸಗಿ ಕ್ರೂಜರ ವಾಹನದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಜನರು ಮತ್ತು ಉಳಿದವರು ಕೂಡಿ ಶಿವೂರ ಗ್ರಾಮಕ್ಕೆ ಹೋಗಿಪೊಲೀಸ್ ಬಾತ್ಮಿದಾರನು ತೋರಿಸಿದ  ಕಬ್ಬಿನ ಹೊಲವನ್ನು ತೊರಿಸಿದಾಗ ನಾವೇಲ್ಲರೂ ಸದರಿ ಹೊಲದಲ್ಲಿ ಹೊಗುತ್ತಿದ್ದಾಗಸದರಿ ಹೊಲದಿಂದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಓಡ ತೊಡಗಿದನು. ಆಗ ನಾವು ಬೆನ್ನಟ್ಟಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ರೇವಪ್ಪ ತಂದೆ ಶಿವರಾಯ ಪಾಟೀಲ ವಯ|| 45 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಲಾಳಸಂಗಿ ತಾ|| ಇಂಡಿ ಜಿ|| ವಿಜಯಪೂರ ಹಾ|| || ಶಿವೂರ ಹೊಲದಲ್ಲಿ ವಸತಿ ಮಾಡುತ್ತಿರುವದಾಗಿ ತಿಳಿಸಿದ್ದುಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ಪುನ ಪುನ ವಿಚಾರಿಸಲು ಸದರಿಯವನು ಕಬ್ಬಿನ ಬೆಳೆಯಲ್ಲಿ ಕರೆದುಕೊಂಡು ಹೋಗಿ ಕಬ್ಬಿನ ಬೆಳೆಯ ಮದ್ಯದಲ್ಲಿ ಬೆಳೆದ ಒಂದು ಗಾಂಜಾ ಗಿಡವನ್ನು ತೊರಿಸಿದನು. ನಂತರ ವಿಚಾರಿಸಲು ಅಲ್ಲೆ ಸ್ವಲ್ಪ ದೂರದಲ್ಲಿ ಇನ್ನೊಂದು ಕಬ್ಬಿನ ಸಾಲಿನಲ್ಲಿ ಬೆಳೆದ ಗಾಂಜಾ ಗಿಡವನ್ನು ತೊರಿಸಿದನು. ಸದರಿಯವನಿಗೆ ವಿಚಾರಿಸಿದಾಗ ನನ್ನ ಸ್ವಂತ ಊರು ಇಂಡಿ ತಾಲೂಕಿನ ಲಾಳಸಂಗಿ ಗ್ರಾಮ ಇದ್ದುಸದರಿ ಹೊಲನನ್ನ ಹೆಂಡತಿಯ ತಾಯಿಯಾದ ಅಂಬುಬಾಯಿ ಗಂಡ ಗುರಪ್ಪ ಉಡಚಾಣ ಸಾ|| ಶಿವೂರ ಇವರ ಹೆಸರಿನ ಸರ್ವೇ ನಂ 86/2 ರಲ್ಲಿ ಇರುತ್ತದೆ. ನನ್ನ ಅತ್ತೆಗೆ ಗಂಡು ಮಕ್ಕಳು ಇಲ್ಲದ ಕಾರಣ ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ನನ್ನ ಅತ್ತೆಯ ಹೊಲದಲ್ಲಿಯೆ ಕೆಲಸ ಮಾಡಿಕೊಂಡು ಹೊಲದಲ್ಲೆ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ನಂತರ ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ವಿಚಾರಿಸಲು ನಾನು ಸದರಿ ನನ್ನ ಹೊಲದಲ್ಲಿ ಸುಮಾರು ದಿನಗಳಿಂದ ಗಾಂಜಾ ಗಿಡಗಳನ್ನು ಬೆಳೆದು ಅದನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡುನಂತರ ಸದರಿ ಗಾಂಜಾ ಗಿಡಗಳನ್ನು ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಪಿತನಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 02 ಗಾಂಜಾ ಗಿಡಗಳಿದ್ದು ಅವುಗಳನ್ನುಕಬ್ಬಿನ ಹೊಲದಿಂದ ಹೊರಕ್ಕೆ ತಂದು ಪ್ರತ್ಯೆಕವಾಗಿ  ತೂಕ ಮಾಡಿದ್ದು ಎರಡು ಗಿಡಗಳು 1) 0.825 ಗ್ರಾಮ 2) 0.265 ಒಟ್ಟು 1.085 ಕೆಜಿ ತೂಕವಿದ್ದುನಂತರ ಅವುಗಳನ್ನು ಪಂಚರ ಸಮಕ್ಷಮ ಮತ್ತು ಪತ್ರಾಂಕಿತ ಅಧಿಕಾರಿಗಳ ಸಮ್ಮುಖದಲ್ಲಿ ಆರೋಪಿತನಿಂದ ವಶಪಡಿಸಿಕೊಂಡಿದ್ದುಸದರಿ ಕಾಂಡ ಸಮೇತವಾದ ಹಸಿ ಗಾಂಜಾ ಗಿಡಗಳು ಅಂದಾಜು 5000/- ರೂ ಕಿಮ್ಮತ್ತಿನವು ಇರಬಹುದು. ನಂತರ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಆರೋಪಿತನ  ವಿರುದ್ದ ಕ್ರಮ ಕೈಕೊಳ್ಳಲು ನೀಡಿದ ವರದಿ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

  

ಜಾತಿ ನಿಂದನೆ ಪ್ರಕರಣ:-

ರೇವೂರ ಪೊಲೀಸ ಠಾಣೆ 

           ದಿನಾಂಕ 13/09/2020 ರಂದು 7.00 ಪಿಎಮ್ ಕ್ಕೆ ಫೀರ್ಯಾದಿದಾರರಾದ ಶ್ರೀ ಗುರುನಾಥ ತಂದೆ ಲಾಡಪ್ಪ ನಡುಗೇರಿ ಸಾ||ಸಿಥನೂರ ರವರು ಠಾಣೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೆನೆಂದರೆ,

         ಇಂದು ದಿನಾಂಕ 13/09/2020 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಗ್ರಾಮದ ಹುಲೇಪ್ಪ ತಂದೆ ಶರಣಪ್ಪ ಹೇರೂರ, ಹಣಮಂತ ತಂದೆ ಲಕ್ಷ್ಮಣ ತಳೇಕೇರಿ ಮೂರು ಜನರು ನಮ್ಮ ಗ್ರಾಮದ ನಾಗೇಶ ತಂದೆ ಮಾಳಪ್ಪ ಪೂಜಾರಿ ರವರ ಅಂಗಡಿಯ ಮುಂದೆ ಮಾತನಾಡುತ್ತಾ ನಿಂತಾಗ ರಮೇಶ ಕವಲಗಿ ಈತನು ನನ್ನ ಹತ್ತಿರ ಬಂದು ನನಗೆ ಏ ರಂಡಿ ಮಗನೇ ಹೊಲ್ಯಾ ಸುಳೆ ಮಗನೆ ನಿನೌವ್ನ ನಾ ಇಟಂಗಿ ಕೆಲಸಕ್ಕೆ ಹೇಳಿದ ಜನರಿಗೆ ನೀನು ತಗೊಂಡಿದಿ ರಂಡಿ ಮಗನೆ ಅಂತ ಬೈಯುತಿದ್ದಾಗ ನಾನು ಸದರಿಯವನಿಗೆ ನೀವು ಈ ರೀತಿ ಬೈದಾಡುವದು ಸರಿ ಅಲ್ಲಾ ಅವರೇ ನನ್ನ ಹತ್ತಿರ ಕೆಲಸಕ್ಕೆ ಬಂದಿರುತ್ತಾರೆ ಅದು ಮುಗಿದೊದ ವಿಷಯ ಈಗ್ಯಾಕೆ ಅಂತ ಅಂದಾಗ ರಮೇಶ ಈತನು ಹೊಲ್ಯಾ ರಂಡಿಮಗನೆ ನಿನಗ ಸೊಕ್ಕ ಬಾಳ ಅದಾ ಅಂತ ಅಂದು ಹೊಡೆಯಲು ನನ್ನ ಮೇಲೆ ಬರುತಿದ್ದಾಗ ಅಲ್ಲೇ ಇದ್ದ ಹುಲೇಪ್ಪ, ಹಣಮಂತ ಹಾಗು ಅಂಗಡಿಯಲಿದ್ದ ನಾಗೇಶ ರವರು ಬಂದು ರಮೇಶ ರವರಿಗೆ ಬಿಡಿಸಿ ಕಳುಯಿಸಿರುತ್ತಾರೆ. ನಾನು ಈ ಘಟನೆಯ ಬಗ್ಗೆ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿ ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ.

 ಕಾರಣ ರಮೇಶ ತಂದೆ ಶಿವರಾಯ ಕವಲಗಿ ಸಾ||ಸಿದನೂರ ಈತನು ನನಗೆ ಹಳೆ ವೈಶಮ್ಯದಿಂದ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದು ಸದರಿಯವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಅಕ್ರಮ ಮಧ್ಯ ಮಾರಾಟ ಪ್ರಕರಣ:-

ಶಹಾಬಾದ ನಗರ ಪೊಲೀಸ ಠಾಣೆ 

ದಿನಾಂಕ:13/09/2020 ರಂದು 5-45 ಪಿ ಎಮ್ ಕ್ಕೆ ಶ್ರೀ ಬಿ ಅಮರೇಶ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಠಾಣೆಗೆ ಬಂದು ಇಬ್ಬರು ಅರೋಪಿ ಮತ್ತು ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ  ದಿನಾಂಕ: 13/09/2020  ರಂದು 3-00 ಪಿ ಎಮ್  ಕ್ಕೆ ಠಾಣೆಯಲ್ಲಿದ್ದಾಗ ಹಳೆ ಶಹಾಬಾದ ಅಟೋ ಸ್ಟಾಂಡ ಹತ್ತಿರ ಇಬ್ಬರೂ ವ್ಯಕ್ತಿಗಳು ಆಕ್ರಮವಾಗಿ ಮದ್ಯ  ಮಾರಾಟ ಮಾಡುತ್ತಿದ್ದಾರೆ  ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚ ಜನರೊಂದಿಗೆ ಹೊರಟು  ಹಳೆ ಶಹಾಬಾದಕ್ಕೆ ಹೋಗಿ  ಒಂದು ಹೊಟೇಲ  ಮರೆಯಾಗಿ ನಿಂತು ನೋಡಲಾಗಿ  ಅಟೋ ಸ್ಟಾಂಡ ಹತ್ತಿರ ಖುಲ್ಲಾ ಜಾಗೆಯಲ್ಲಿ ಇಬ್ಬರೂ ವ್ಯಕ್ತಿಗಳು ಎರಡು ರಟ್ಟಿನ ಬಾಕ್ಸಗಳಲ್ಲಿ ಮದ್ಯ ಇಟ್ಟುಕೊಂಡು ಸಾರ್ವಜನಿಕರಿಗೆ ಆಕ್ರಮವಾಗಿ ಮದ್ಯ ಮರಾಟ ಮಾಡುತ್ತಿದ್ದನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರೂ ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಚಾರಿಸಲು ಅವರು ತಮ್ಮ ಹೆಸರು 1) ಹಾಜಪ್ಪ ತಂದೆ ಮಲ್ಕಪ್ಪಾ ಪೂಜಾರಿ ವಯಾ: 57 ವರ್ಷ ಉ: ಖಾಸಗಿ ಕೆಲಸ ಜಾ: ಕುರಬರ ಸಾ: ಹಳೆ ಶಹಾಬಾದ 2) ಸಾಬಯ್ಯ ತಂದೆ ಅಶೋಕ ಗುತ್ತೇದಾರ ವಯಾ: 25 ವರ್ಷ ಉ: ಖಾಸಗಿ ಕೆಲಸ ಜಾ: ಇಳಗೇರ ಸಾ: ಹಳೆ ಶಹಾಬಾದ ಅಂತಾ ತಿಳಿಸಿದರು ಅವರ ಹತ್ತಿರ ಇದ್ದ ರಟ್ಟಿನ ಬಾಕ್ಸಗಳು ಪರಿಶೀಲಿಸಿ ನೋಡಲಾಗಿ ಒಂದು ಬಾಕ್ಸದಲ್ಲಿ 90 ಎಮ್ ಎಲ್ ನ ಯು ಎಸ್ ವಿಸ್ಕಿ ತುಂಬಿದ 70 ಪೌಚಗಳು ಅ.ಕಿ 1750-00 ರೂ ಇನ್ನೋಂದು ಬಾಕ್ಸನಲ್ಲಿ 90 ಎಮ್ ಎಲ್ ನ ಓರಿನಲ್ ಚಾಯ್ಸ ವಿಸ್ಕಿ ತುಂಬಿದ 60 ಪೌಚಗಳು ಅ.ಕಿ 2100-00 ರೂ  ಇದ್ದು ಅವರಿಗೆ ಮಧ್ಯ ಮಾರಾಟ ಮಾಡುವ ಬಗ್ಗೆ ಏನಾದರೂ ಪರವಾನಿಗೆ ಇದೆಯೋ ಹೇಗೆ ಅಂತಾ ವಿಚಾರಿಸಲುಅವರು ಯಾವುದೆ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದರು ಸದರಿಯವರು ಸರಕಾರದಿಂದ ಯಾವುದೆ ಪರವಾನಿಗೆ ಪಡೆದುಕೊಳ್ಳದೆ ಮದ್ಯ ಮಾರಾಟ ಮಾಡುತ್ತಿದ್ದರಿಂದ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಕ್ರಮ ಕೈಗೊಳ್ಳುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ  ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

BIDAR DISTRICT DAILY CRIME UPDATE 14-09-2020

  

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-09-2020

 

ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಅಪರಾಧ ಸಂಖ್ಯೆ 11/2020 ಕಲಂ 20(ಬಿ)(2) ಎನ್.ಡಿ.ಪಿ.ಎಸ್ ಕಾಯ್ದೆ :-

ದಿನಾಂಕ : 12/09/2020 ರಂದು 2015 ಗಂಟೆಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ, ತೆಲಂಗಾಣಾದ ಸಿದ್ದ ಹಂಗರಗಾ ಕಡೆಯಿಂದ ಕನರ್ಾಟಕ ಬಾರ್ಡರ ಮುಖಾಂತರ ಜಂಬಗಿ ಕಡೆಗೆ ಎರಡು ಮೋಟಾರ ಸೈಕಲಗಳ ಮೇಲೆ ಅನಧಿಕೃತವಾಗಿ ಗಾಂಜಾ ಮಾದಕ ಪದಾರ್ಥ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದಿದ ಮೇರೆಗೆ ಪಿ.ಐ. ರವರು ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಎರಡೂ ಮೋಟಾರ ಸೈಕಲ್ಗಳ ಮೇಲೆ ಒಬ್ಬೋಬ್ಬರು ವ್ಯಕ್ತಿ ಇದ್ದು ಒಂದು ಹೋಂಡಾ ಶೈನ್ ಮತ್ತು ಇನ್ನೋಂದು ಹೀರೋ ಹೊಂಡಾ ಪ್ಯಾಶನ್ ಮೋಟಾರ್ ಸೈಕಲ್ ಇದ್ದವು. ಪ್ಯಾಶನ್ ಮೋಟಾರ್ ಸೈಕಲ್ ಮೇಲೆ ಸುಮಾರು 50 ವರ್ಷ ವಯಸ್ಸಿನ ಪಂಚೆ  ತೊಟ್ಟ ವ್ಯಕ್ತಿ ಇದ್ದು ಅವನ ಮೋಟಾರ್ ಸೈಕಲ್ ಮುಂಭಾಗದಲ್ಲಿ ಒಂದು ಗೋಣಿ ಚೀಲ ಇದ್ದಿತ್ತು. ಮತ್ತು ಹೊಂಡಾ ಶೈನ್ ಮೋಟಾರ್ ಸೈಕಲ್ ಮೇಲಿನ ವ್ಯಕ್ತಿ ಸುಮಾರು 25 ವರ್ಷ ವಯಸ್ಸಿನವನಾಗಿದ್ದನು. ಆಗ ಸದರಿ ಮೋಟಾರ ಸೈಕಲಗಳನ್ನು ನಿಲ್ಲಿಸುವಂತೆ ಕೈ ಮಾಡಿದಾಗ ಎರಡು ಮೋಟಾರ ಸೈಕಲಗಳ ಮೇಲಿನ ಇಬ್ಬರು ವ್ಯಕ್ತಿಗಳು ಮೋಟಾರ ಸೈಕಲ ನಿಲ್ಲಿಸಿ ಅವರಲ್ಲಿನ ಒಬ್ಬನ ಹತ್ತಿರ ಇದ್ದ ಒಂದು ಗೋಣಿ ಚೀಲ ಅಲ್ಲೆ ಕೆಳಗೆ ಬಿಸಾಡಿ ರೋಡಿನ ಪಕ್ಕದ ಹೊಲದಲ್ಲಿ ಓಡಲು ಪ್ರಾರಂಭಿಸಿದರು ಆಗ  ಇಬ್ಬರನ್ನು ಹಿಡಿಯಲು ಬೆನ್ನತ್ತಿದ್ದು ಆದರೆ ಅವರು ಕತ್ತಲಲ್ಲಿ ಹೊಲಗಳಲ್ಲಿ ಮರೆಯಾಗಿ  ಓಡಿ ಹೋಗಿದ್ದು ಗೋಣಿ ಚೀಲದಲ್ಲಿ ನೋಡಲು  ಪ್ಲಾಸ್ಟಿಕ ಕವರನ 6 ಪ್ಯಾಕೇಟಗಳು  ಗಾಂಜಾ ಮಾದಕ ಪದಾರ್ಥ ತುಂಬಿದ್ದು, ಅವು ತಲಾ ಅಂದಾಜು 2 ಕೆ.ಜಿ ತೂಕ ಉಳ್ಳದ್ದಾಗಿದ್ದವು. ಅದರ ಅ.ಕಿ. 60000=0 ರೂ ಮತ್ತು ಅವರು ತೆಗೆದುಕೊಂಡು ಬಂದ ಮೋಟಾರ್ ಸೈಕಲ್ಗಳು ನೋಡಲು 1) ಹೊಂಡಾ ಶೈನ್ ಮೋಟಾರ ಸೈಕಲ ನಂ:ಟಿ.ಎಸ್-15/ಈ.ಟಿ-9690 ಅ.ಕಿ 50,000/- ರೂ ಮತ್ತು 2) ಹಿರೊ ಹೊಂಡಾ ಫ್ಯಾಶನ್ ಪ್ಲಸ್ ಮೋಟಾರ ಸೈಕಲ ನಂ:ಎಪಿ-13/ಕೆ-0153 ಅ.ಕಿ 20,000/- ರೂ ನೇದವು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

 

ಮಾರ್ಕೇಟ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 58/2020 ಕಲಂ 279, 304(ಎ) ಐಪಿಸಿ :-

ದಿನಾಂಕ:13-9-2020 ರಂದು 1500 ಗಂಟೆಯ ಸುಮಾರಿಗೆ ಶ್ರೀಮತಿ ಭಾರತಬಾಯಿ ರಾಠೋಡ ವಯ:22ವರ್ಷ ಜಾ:ಲಮಾಣಿ ಸಾ:ಹಾನೆಗಾಂವ ತಾಂಡಾ ರವರು ಠಾಣೆಗೆ ಬಂದು ದೂರು ನೀಡಿದ್ದು ದೂರಿನ ಸಾರಾಂಶವೇನೆಂದರೆ, ಇವರ ಗಂಡ ಬಾಲಾಜಿ ತಂದೆ ಮಾರುತಿ ರಾಠೋಡ್ ವಯ 30 ವರ್ಷ ಜಾತಿ ಲಮಾಣಿ ಉ;ಕೂಲಿ ಕೆಲಸ ಸಾ:ಹನ್ನೆಗಾಂವ ಲೋನಿ ತಾಂಡಾ ಇವನು ದಿನಾಂಕ 12-09-2020 ರಂದು 1930 ಗಂಟೆಯ ಸುಮಾರಿಗೆ ಮಲ್ಕಾಪೂರ ರಿಂಗ್ ಕಡೆಯಿಂದ ದೇವ ದೇವ ವನದ ಕಡೆಗೆ ತನ್ನ ಹಿರೊ ಸ್ಪಲೆಂಡರ್ ದ್ವಿಚಕ್ರ ವಾಹನ. ನಂ.ಎಂ.ಹೆಚ್-28-ಎವಿ-5436 ನೇದನ್ನು ಅತಿವೇಗ ಹಾಗೂ ನಿಷ್ಕಾಳಜೀತನ ದಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಬದಿಗೆ ಬಿದಿದ್ದರಿಂದ ಬಾಲಾಜಿ ಇವನ ಎಡಗಡೆ ತಲೆ ಹಿಂದೆ ಭಾರಿ ರಕ್ತಗಾಯ, ಎಡಕೈ ಭೂಜಕ್ಕೆ ಮತ್ತು ಬಲಕೈ ಭೂಜಕ್ಕೆ ಹತ್ತಿ ತರಚಿದ ಗಾಯ ಹಾಗೂ ಎಡಕಾಲಿನ ಹಿಂಬಡಿ ಮೇಲೆ ರಕ್ತಗಾಯವಾಗಿದ್ದು ಸದರಿಯವನು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಕುರಿತು ಸೂಲಾಪೂರ (ಎಂ.ಎಸ್)ಕ್ಕೆ ಹೋಗಿ ಸೂಲಾಪೂರ ದಿಂದ ಮರಳಿ ಬೀದರಕ್ಕೆ ಬರುವಾಗ   ದಿನಾಂಕ 13-09-2020 ರಂದು 1230 ಗಂಟೆಯ ಸುಮಾರಿಗೆ ದಾರಿಯಲ್ಲಿ ಮೃತಪಟ್ಟಿರುತ್ತಾನೆ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ.