ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 14-09-2020
ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಅಪರಾಧ ಸಂಖ್ಯೆ 11/2020
ಕಲಂ 20(ಬಿ)(2) ಎನ್.ಡಿ.ಪಿ.ಎಸ್
ಕಾಯ್ದೆ :-
ದಿನಾಂಕ : 12/09/2020
ರಂದು 2015 ಗಂಟೆಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ,
ತೆಲಂಗಾಣಾದ
ಸಿದ್ದ ಹಂಗರಗಾ ಕಡೆಯಿಂದ ಕನರ್ಾಟಕ ಬಾರ್ಡರ ಮುಖಾಂತರ ಜಂಬಗಿ ಕಡೆಗೆ ಎರಡು ಮೋಟಾರ ಸೈಕಲಗಳ ಮೇಲೆ
ಅನಧಿಕೃತವಾಗಿ ಗಾಂಜಾ ಮಾದಕ ಪದಾರ್ಥ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದಿದ ಮೇರೆಗೆ
ಪಿ.ಐ. ರವರು ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಎರಡೂ ಮೋಟಾರ ಸೈಕಲ್ಗಳ ಮೇಲೆ ಒಬ್ಬೋಬ್ಬರು
ವ್ಯಕ್ತಿ ಇದ್ದು ಒಂದು ಹೋಂಡಾ ಶೈನ್ ಮತ್ತು ಇನ್ನೋಂದು ಹೀರೋ ಹೊಂಡಾ ಪ್ಯಾಶನ್ ಮೋಟಾರ್ ಸೈಕಲ್
ಇದ್ದವು. ಪ್ಯಾಶನ್ ಮೋಟಾರ್ ಸೈಕಲ್ ಮೇಲೆ ಸುಮಾರು 50
ವರ್ಷ ವಯಸ್ಸಿನ ಪಂಚೆ ತೊಟ್ಟ ವ್ಯಕ್ತಿ ಇದ್ದು
ಅವನ ಮೋಟಾರ್ ಸೈಕಲ್ ಮುಂಭಾಗದಲ್ಲಿ ಒಂದು ಗೋಣಿ ಚೀಲ ಇದ್ದಿತ್ತು. ಮತ್ತು ಹೊಂಡಾ ಶೈನ್ ಮೋಟಾರ್
ಸೈಕಲ್ ಮೇಲಿನ ವ್ಯಕ್ತಿ ಸುಮಾರು 25
ವರ್ಷ ವಯಸ್ಸಿನವನಾಗಿದ್ದನು. ಆಗ ಸದರಿ ಮೋಟಾರ ಸೈಕಲಗಳನ್ನು ನಿಲ್ಲಿಸುವಂತೆ ಕೈ ಮಾಡಿದಾಗ ಎರಡು
ಮೋಟಾರ ಸೈಕಲಗಳ ಮೇಲಿನ ಇಬ್ಬರು ವ್ಯಕ್ತಿಗಳು ಮೋಟಾರ ಸೈಕಲ ನಿಲ್ಲಿಸಿ ಅವರಲ್ಲಿನ ಒಬ್ಬನ ಹತ್ತಿರ
ಇದ್ದ ಒಂದು ಗೋಣಿ ಚೀಲ ಅಲ್ಲೆ ಕೆಳಗೆ ಬಿಸಾಡಿ ರೋಡಿನ ಪಕ್ಕದ ಹೊಲದಲ್ಲಿ ಓಡಲು ಪ್ರಾರಂಭಿಸಿದರು
ಆಗ ಇಬ್ಬರನ್ನು ಹಿಡಿಯಲು ಬೆನ್ನತ್ತಿದ್ದು ಆದರೆ
ಅವರು ಕತ್ತಲಲ್ಲಿ ಹೊಲಗಳಲ್ಲಿ ಮರೆಯಾಗಿ ಓಡಿ
ಹೋಗಿದ್ದು ಗೋಣಿ ಚೀಲದಲ್ಲಿ ನೋಡಲು ಪ್ಲಾಸ್ಟಿಕ
ಕವರನ 6 ಪ್ಯಾಕೇಟಗಳು ಗಾಂಜಾ ಮಾದಕ ಪದಾರ್ಥ ತುಂಬಿದ್ದು,
ಅವು
ತಲಾ ಅಂದಾಜು 2 ಕೆ.ಜಿ ತೂಕ ಉಳ್ಳದ್ದಾಗಿದ್ದವು. ಅದರ ಅ.ಕಿ. 60000=0
ರೂ ಮತ್ತು ಅವರು ತೆಗೆದುಕೊಂಡು ಬಂದ ಮೋಟಾರ್ ಸೈಕಲ್ಗಳು ನೋಡಲು 1) ಹೊಂಡಾ
ಶೈನ್ ಮೋಟಾರ ಸೈಕಲ ನಂ:ಟಿ.ಎಸ್-15/ಈ.ಟಿ-9690
ಅ.ಕಿ 50,000/- ರೂ ಮತ್ತು 2)
ಹಿರೊ
ಹೊಂಡಾ ಫ್ಯಾಶನ್ ಪ್ಲಸ್ ಮೋಟಾರ ಸೈಕಲ ನಂ:ಎಪಿ-13/ಕೆ-0153
ಅ.ಕಿ 20,000/- ರೂ ನೇದವು ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮಾರ್ಕೇಟ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 58/2020
ಕಲಂ 279, 304(ಎ) ಐಪಿಸಿ :-
ದಿನಾಂಕ:13-9-2020
ರಂದು 1500 ಗಂಟೆಯ ಸುಮಾರಿಗೆ ಶ್ರೀಮತಿ ಭಾರತಬಾಯಿ ರಾಠೋಡ
ವಯ:22ವರ್ಷ ಜಾ:ಲಮಾಣಿ ಸಾ:ಹಾನೆಗಾಂವ ತಾಂಡಾ ರವರು
ಠಾಣೆಗೆ ಬಂದು ದೂರು ನೀಡಿದ್ದು ದೂರಿನ ಸಾರಾಂಶವೇನೆಂದರೆ, ಇವರ
ಗಂಡ ಬಾಲಾಜಿ ತಂದೆ ಮಾರುತಿ ರಾಠೋಡ್ ವಯ 30
ವರ್ಷ ಜಾತಿ ಲಮಾಣಿ ಉ;ಕೂಲಿ ಕೆಲಸ ಸಾ:ಹನ್ನೆಗಾಂವ ಲೋನಿ ತಾಂಡಾ ಇವನು
ದಿನಾಂಕ 12-09-2020 ರಂದು 1930
ಗಂಟೆಯ ಸುಮಾರಿಗೆ ಮಲ್ಕಾಪೂರ ರಿಂಗ್ ಕಡೆಯಿಂದ ದೇವ ದೇವ ವನದ ಕಡೆಗೆ ತನ್ನ ಹಿರೊ ಸ್ಪಲೆಂಡರ್
ದ್ವಿಚಕ್ರ ವಾಹನ. ನಂ.ಎಂ.ಹೆಚ್-28-ಎವಿ-5436
ನೇದನ್ನು ಅತಿವೇಗ ಹಾಗೂ ನಿಷ್ಕಾಳಜೀತನ ದಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಬದಿಗೆ
ಬಿದಿದ್ದರಿಂದ ಬಾಲಾಜಿ ಇವನ ಎಡಗಡೆ ತಲೆ ಹಿಂದೆ ಭಾರಿ ರಕ್ತಗಾಯ, ಎಡಕೈ
ಭೂಜಕ್ಕೆ ಮತ್ತು ಬಲಕೈ ಭೂಜಕ್ಕೆ ಹತ್ತಿ ತರಚಿದ ಗಾಯ ಹಾಗೂ ಎಡಕಾಲಿನ ಹಿಂಬಡಿ ಮೇಲೆ
ರಕ್ತಗಾಯವಾಗಿದ್ದು ಸದರಿಯವನು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ
ಕುರಿತು ಸೂಲಾಪೂರ (ಎಂ.ಎಸ್)ಕ್ಕೆ ಹೋಗಿ ಸೂಲಾಪೂರ ದಿಂದ ಮರಳಿ ಬೀದರಕ್ಕೆ ಬರುವಾಗ ದಿನಾಂಕ 13-09-2020
ರಂದು 1230 ಗಂಟೆಯ ಸುಮಾರಿಗೆ ದಾರಿಯಲ್ಲಿ
ಮೃತಪಟ್ಟಿರುತ್ತಾನೆ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದ.
No comments:
Post a Comment