ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 22-02-2021
ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 12/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಸಂಗೋಳಗಿ ಗ್ರಾಮದಲ್ಲಿ ಫಿರ್ಯಾದಿ ಎಮ್.ಡಿ ಪಾಶಾ ತಂದೆ ಎಮ್.ಡಿ ಹನಿಫ ಶಾ ಸಂಗೋಳಗಿವಾಲೆ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ಹಳೆ ಮೈಲೂರ, ಬೀದರ ರವರ ಸಂಬಂಧಿಕರ ಮನೆಯಲ್ಲಿ ಮದುವೆ ಕಾರ್ಯಕ್ರಮ ಇರುವುದರಿಂದ ಫಿರ್ಯಾದಿಯವರು ದಿನಾಂಕ 20-02-2021 ರಂದು ತನ್ನ ಹೆಂಡತಿ ಅಹೆಮದಿ ಬೆಗಂ ವಯ: 45 ವರ್ಷ ಇಬ್ಬರು ತಮ್ಮ ಮೋಟಾರ ಸೈಕಲ ನಂ. ಕೆ.ಎ-17/ಎಲ್-7183 ನೇದರ ಮೇಲೆ ಹಾಗು ಫಿರ್ಯಾದಿಯ ತಮ್ಮ ಖೂರ್ಷಿದ್ ಅಲಿ ಹಾಗು ಅವನ ಮಗಳಾದ ಮಹೇಕ ವಯ: 12 ವರ್ಷ ರವರು ಮೋಟಾರ ಸೈಕಲ ನಂ. ಕೆ.ಎ-38/ಜೆ-6228 ನೇದರ ಮೇಲೆ ಸಂಗೋಳಗಿ ಗ್ರಾಮಕ್ಕೆ ಹೋಗಿ ರಾತ್ರಿ ಕಾರ್ಯಕ್ರಮ ಮುಗಿಸಿ ಅಲ್ಲಿಯೇ ವಸತಿ ಮಾಡಿ ದಿನಾಂಕ 21-02-2021 ರಂದು ತಮ್ಮ ತಮ್ಮ ಮೋಟಾರ್ ಸೈಕಲಗಳ ಮೇಲೆ ಸಂಗೋಳಗಿಯಿಂದ ಬೀದರಗೆ ಬರುತ್ತಿರುವಾಗ ಬೆಳ್ಳುರಾ ಶಿವಾರದ ಫಾರೆಸ್ಟ ತಿರುವಿನಲ್ಲಿ ಬೀದರ ಕಡೆಯಿಂದ ಸುಜುಕಿ ಸ್ವಿಫ್ಟ್ ಕಾರ ನಂ. ಕೆಎ-38/ಎಮ-3352 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ನಂತರ ಹಿಂದ ಬರುತ್ತಿದ್ದ ತಮ್ಮನ ಮೋಟಾರ ಸೈಕಲಿಗೂ ಸಹ ಡಿಕ್ಕಿ ಮಾಡಿ ತನ್ನ ಕಾರನ್ನು ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಎಡಗಡೆ ಬೆನ್ನ ಛೆಪ್ಪೆಗೆ, ಭುಜಕ್ಕೆ, ಎದೆಗೆ, ತಿಕ್ಕಕ್ಕೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ಹೆಂಡತಿಗೆ ಎರಡು ಮೋಳಕಾಲ ಕೆಳಗಡೆ ಭಾರಿ ಪೆಟ್ಟಾಗಿ ಕಾಲು ಮುರಿದಿರುತ್ತದೆ ಮತ್ತು ಎಡಗಡೆ ಬೆನ್ನಿನ ಛೆಪ್ಪಿಗೆ, ಬಲಭುಜಕ್ಕೆ, ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಮತ್ತು ತಮ್ಮನ ಮಗಳಾದ ಮಹೇಕ ಇವಳಿಗೆ ಎಡಗಾಲ ಪಾದಕ್ಕೆ ತರಚಿದ ಗಾಯ, ಎಡ ಬೆನ್ನಿನ ಛಪ್ಪೆಯ ಮೇಲೆ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ನಂತರ ಸದರಿ ಘಟನೆ ಬಗ್ಗೆ ಫಿರ್ಯಾದಿಯವರು ತಮ್ಮ ಮಕ್ಕಳಾದ ನಾಶೇರ ಮತ್ತು ನಸೀರ ರವರಿಗೆ ತಿಳಿಸಿದಾಗ ಅವರು ಘಟನೆ ಸ್ಥಳಕ್ಕೆ ಬಂದು ಗಾಯಗೊಂಡವರಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 18/2021, ಕಲಂ. ಮನುಷ್ಯ ಕಾಣೆ :-
ದಿನಾಂಕ 20-02-2021 ರಂದು ಫಿರ್ಯಾದಿ ಜಗ್ಗಯ್ಯಾ ಸ್ವಾಮಿ ತಂದೆ ಮಡಿವಾಳಯ್ಯಾ ಸ್ವಾಮಿ ಮಠಂ ವಯ: 45 ವರ್ಷ, ಜಾತಿ: ಜಂಗಮ, ಸಾ: ಮಾಧವ ನಗರ, ಬೀದರ ರವರ ಮಗ ಎಂ.ಮಹೇಶ ಇತನು ದಿನ ನಿತ್ಯದಂತೆ 0815 ಗಂಟೆ ಸುಮಾರಿಗೆ ಕಾಲೇಜಗೆ ಮನೆಯಿಂದ ಹೋಗಿ ಕಾಲೇಜದಲ್ಲಿ ಇಂಟರ್ನಲ್ ಪರೀಕ್ಷೆ ಮುಗಿಸಿಕೊಂಡು ಮರಳಿ 1200 ಗಂಟೆ ಸುಮಾರಿಗೆ ಮನೆಗೆ ಬಂದು 1500 ಗಂಟೆಯವರೆಗೆ ಮನೆಯಲ್ಲಿದ್ದು, ನಂತರ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಮನೆಯಿಂದ 1500 ಗಂಟೆಗೆ ಹೋಗಿ ರಾತ್ರಿ 1200 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲ, ಆತನಿಗೆ ಎಲ್ಲಾ ಕಡೆಗೆ ಹುಡುಕಿದರೂ ಪತ್ತೆಯಾಗಲಿಲ್ಲಾ, ಅಲ್ಲದೇ ತಮ್ಮ ನೆಂಟರಿಷ್ಟರುಗಳಿಗೆ ಹಾಗೂ ಅವನ ಗೆಳೆಯರೆಲ್ಲರಿಗೆ ಕರೆ ಮಾಡಿ ಮಹೇಶ ರವರ ಬಗ್ಗೆ ವಿಚಾರಿಸಲು ಅವರ ಹತ್ತಿರವು ಸಹ ಬಂದಿರುವುದಿಲ್ಲಾ ಅಂತ ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.