Police Bhavan Kalaburagi

Police Bhavan Kalaburagi

Monday, October 12, 2020

BIDAR DISTRICT DAILY CRIME UPDATE 12-10-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 12-10-2020


ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 150/2020 ಕಲಂ 392 ಐಪಿಸಿ :-

 

ದಿನಾಂಕ 11/10/2020 ರಂದು 2100 ಗಂಟೆಗೆ ಫಿರ್ಯಾದಿ ಶ್ರೀ ವೈಜಿನಾಥರಾವ ತಂದೆ ಏಕನಾಥರಾವ ಬಿರಾದರ ವಯ 57 ವರ್ಷ ಜಾತಿ: ಮರಾಠಾ ಉದ್ಯೋಗ: ದೇವರಾಜ ಅರಸ ಬಿಎಡ ಕಾಲೇಜನ ಪ್ರಾಚಾರ್ಯರರು, ಸಾ: ಶಿವಾಜಿನಗರ ಗುಂಪಾ ಹಿಂದುಗಡೆ ಬೀದರ ನಿವಾಸಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ  ದಿನಾಂಕ 07-10-2020 ರಂದು ರಾತ್ರಿ 08.45 ಗಂಟೆಗೆ  ಗುಂಪಾಕಡೆಗೆ ಹೊಗಿ ಜಿರಾಕ್ಸ ಮಾಡಿಕೊಂಡು ಮರಳಿ ಬರುವಾಗ ಅಲ್ಲಂಪ್ರಭು ನಗರ ಪಾರ್ಕ ಹತ್ತಿರ ನಡೆದು ಕೊಂಡು ಬರುವಾಗ ಇವರ ಮೊಬೈಲ ಫೋನಿಗೆ ಕರೆ ಬಂದ ಕಾರಣ ಮೊಬೈಲ ಪೋನ ಕಿವಿಗೆ ಹಚ್ಚಿಕೊಂಡು ಮಾತಾಡುತ್ತಾ ಹೋಗುತ್ತಿದ್ದಾಗ ಇಬ್ಬರು ಯಾರೋ ಅಪರಿಚಿತರು ದ್ವಿಚಕ್ರ ವಾಹನದ ಮೇಲೆ ನನ್ನ ಹಿಂದಿನಿಂದ ಬಂದು ವಾಹನದ ಹಿಂಬದಿಯಲ್ಲಿ ಕುಳಿತ ವ್ಯಕ್ತಿ  ಮೊಬೈಲ ಫೋನ ಕಸಿದುಕೊಂಡು ದ್ವಿ ಚಕ್ರ ವಾಹನದ ಮೇಲೆ ಓಡಿ ಹೋಗಿರುತ್ತಾರೆ. ಸದರಿ ಮೋಬೈಲ ರೆಡಮಿ 7ಎ ನೇದು ಇದ್ದು ಅದರ ಐಎಂಇಐ ನಂಬರ 1) 866896040628392, 2) 866896040628400 ನೇದು ಇದ್ದು ಅದರ ಅಂದಾಜು ಕಿಮ್ಮತ್ತು 5000/- ರೂ. ಇರುತ್ತದೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 133/2020 ಕಲಂ 78(6) ಕೆ.ಪಿ.ಕಾಯ್ದೆ :-

ದಿನಾಂಕ: 11-10-2020 ರಂದು ಸಾಯಂಕಾಲ 1930 ಗಂಟೆಗೆ  ಪಿಎಸ್ಐ ರವರಿಗೆ  ಚಿಟಗುಪ್ಪಾ ಪಟ್ಟಣದ ಬಸ್ಸ ನಿಲ್ದಾಣ ಹತ್ತಿರ ಮೂರು ಜನರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕರೆದು ಅವರಿಗೆ ಐಪಿಎಲ್ ಕ್ರಿಕೇಟ ಪಂದ್ಯದ ಆಟಕ್ಕೆ 50 ರೂಪಾಯಿ ನೀಡಿರಿ 50 ರೂಪಾಯಿಗೆ 100 ರೂಪಾಯಿ ನೀಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಕ್ರಿಕೇಟ ಬೆಟಿಂಗ ಚೀಟಿ ಬರೆದುಕೋಡುತ್ತಿದಾರೆ ಅಂತ ಮಾಹಿತಿ ಇದುದರಿಂದ  ಸಿಬ್ಬಂದಿಯೊಂದಿಗ ಚಿಟಗುಪ್ಪಾ ಬಸ್ಸ ನಿಲ್ದಾಣ ಹತ್ತಿರ ದೂರಿನಿಂದ ಮರೆಯಾಗಿ ನಿಂತು ನೋಡಿ ಮೂರು ಜನರು ಸಾರ್ವಜನಿಕರಿಗೆ ಕ್ರಿಕೇಟ ಬೆಟಿಂಗ ಚೀಟಿ ಬರೆದುಕೊಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವರ ಮೇಲೆ 2000 ಗಂಟೆಗೆ ಎಲ್ಲರೂ  ದಾಳಿ ಮಾಡಿ ಅವರಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು 1] ರಬ್ಬಾನಿ ತಂದೆ ಮೋಜನಸಾಬ ಗಂಗಾಪೂರೆ, ವಯ: 26 ವರ್ಷ, ಜಾತಿ: ಮುಸ್ಲಿಂ, : ಪ್ಲಾಸ್ಟರ, ಸಾ/ಚೌಥಾ ಮೈಲ್ಲಾ ಚಿಟಗುಪ್ಪಾ ಅಂತಾ ತಿಳಿಸಿದನು. ನಂತರ ಇವನ ಅಂಗ ಶೋಧನೆ ಮಾಡಲು ಕಿಸೆಯಿಂದ ಒಂದು ಬಾಲ ಪೇನ ಹಾಗು 2 ನಂಬರ ಬರೆದ ಕ್ರಿಕೇಟ ಬೆಟಿಂಗ ಚೀಟಗಳು ಹಾಗು ನಗದು ಹಣ ರೂ.2000/-ಮತ್ತು ಒಂದು ಸ್ಯಾಮಸಂಗ್ ನೋಟ್8 ಮೂಬೈಯಿಲ್ ,ಕಿ, 15000/-ರೂ, ವಿವೊ ಮೂಬೈಲ್ ,ಕಿ. 6000/-ರೂ. ಹಾಗೂ ಅಲ್ಲಿಯೇ ನಿಲ್ಲಿಸಿದ ಒಂದು ಹಿರೋ ಹೊಂಡಾ ಸ್ಪೆಲೆಂಡರ ಪ್ರೋ ಮೋಟಾರ ಸೈಕಲ್ ನಂಬರ ಇರುವುದಿಲ್ಲಾ ಅದರ ಚೆಸ್ಸಿ ನಂಬರ: ಎಮ್.ಬಿ.ಎಲ್.ಎಚ್.ಎ10ಬಿಎಫ್.ಎಚ್.ಎಲ್69576 ಇದ್ದು ಅದರ ,ಕಿ,35000/-ರೂ, ಹೀಗೆ ಒಟ್ಟು 58000/-ರೂ. 2] ಮಹೇಶ ತಂದೆ ಶಂಕರರಾವ ಕೊಂಡಾ, ವಯ: 32 ವರ್ಷ, ಜಾತಿ:ಪದ್ಮಾಶಾಲಿ, : ವ್ಯಾಪಾರ, ಸಾ/ಭಾಸ್ಕರ ನಗರ ಚಿಟಗುಪ್ಪಾ ಅಂತಾ ತಿಳಿಸಿದನು. ನಂತರ ಇವನ ಅಂಗ ಶೋಧನೆ ಮಾಡಲು ಕಿಸೆಯಿಂದ ಒಂದು ಬಾಲ ಪೇನ ಹಾಗು 2 ನಂಬರ ಬರೆದ ಕ್ರಿಕೇಟ ಬೆಟಿಂಗ ಚೀಟಗಳು ಹಾಗು ನಗದು ಹಣ ರೂ.1500/-ರೂಪಾಯಿ  ಮತ್ತು ಒಂದು ಒಪೋ ಮೋಬೈಲ್ ,ಕಿ, 5000/-ರೂ. ಹೀಗೆ ಒಟ್ಟು 6500/-ರೂ 3] ಕೀರಣ ತಂದೆ ಉಮೇಶ ಹಮೀಲಪೂರಕರ, ವಯ: 28 ವರ್ಷ, ಜಾತಿ: ಎಸ್,ಸಿ ಸಮಗಾರ, : ವ್ಯಾಪಾರ, ಸಾ/ಭಾಸ್ಕರ ನಗರ ಚಿಟಗುಪ್ಪಾ ಅಂತಾ ತಿಳಿಸಿದನು. ನಂತರ ಇವನ ಅಂಗ ಶೋಧನೆ ಮಾಡಲು  ಒಂದು ಬಾಲ ಪೇನ ಹಾಗು 2 ನಂಬರ ಬರೆದ ಕ್ರಿಕೇಟ ಬೆಟಿಂಗ ಚೀಟಗಳು ಹಾಗು ನಗದು ಹಣ ರೂ.2000/-ರೂ, ಮತ್ತು ಒಂದು ಸ್ಯಾಮಸಂಗ್ ಜೆ6 ಮೊಬೈಲ್ ,ಕಿ, 6000/-ರೂ ಹಾಗೂ ಅಲ್ಲಿಯೇ ನಿಲ್ಲಿಸಿದ ಒಂದು ಹೊಂಡಾ ಶೈನ ಮೋಟಾರ ಸೈಕಲ್ ನಂಬರ: ಕೆಎ39ಎಲ್1230 ಅದರ ,ಕಿ,25000/-ರೂ, ಹೀಗೆ ಒಟ್ಟು 31000/-ರೂ ಹೀಗೆ ಒಟ್ಟು 95500/-ರೂಪಾಯಿ,  ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 133/2020 ಕಲಂ 457, 380 ಐಪಿಸಿ :-

ದಿನಾಂಕ: 11/10/2020 ರಂದು 0815 ಗಂಟೆಗೆ ಫಿರ್ಯಾದಿ ಶ್ರೀ ಬಾಬುರಾವ ತಂದೆ ಶರಣಪ್ಪಾ ಹಾವಶೆಟ್ಟೆ ವಯ: 70 ವರ್ಷ ಉ: ಒಕ್ಕಲುತನ ಜಾತಿ: ಲಿಂಗಾಯತ ಸಾ: ತರನಳ್ಳಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನೆಂದರೆ ಫಿರ್ಯಾದಿಯು ತರನಳ್ಳಿ ಗ್ರಾಮದ ರೇವಪಯ್ಯಾ ಗುಡಿಯ ಅದ್ಯಕ್ಷನಾಗಿದ್ದು ಸದರಿ ಗುಡಿಯು ಹಳೆಯ ಕಾಲದಿಂದ ಇರುತ್ತದೆ. ಸದರಿ ಗುಡಿಯಲ್ಲಿ ಎರಡು ಕಬ್ಬಿಣದ ದಾನಿ ಪೆಟ್ಟಿಗೆಗಳು ಇರುತ್ತವೆ. ಅದರ ಪೂಜಕಾರರಾದ ಬಸಯ್ಯಾ ತಂದೆ ಶಂಕರಯ್ಯಾ ಸ್ವಾಮಿ ಇರುತ್ತಾರೆ.   ದಿನಾಂಕ: 10/10/2020 ರಂದು ರಾತ್ರಿ 2100 ಗಂಟೆಗೆ ಪೂಜೆ ಮಾಡಿ ಗುಡಿಯ ಕೀಲಿ ಹಾಕಿಕೊಂಡು ತನ್ನ ಮನೆಗೆ ಹೊಗಿರುತ್ತಾರೆ.   ದಿನಾಂಕ: 11/10/2020 ರಂದು ಮುಂಜಾನೆ 0700 ಗಂಟೆಗೆ ಗುಡಿಯ ಬಾಜಿದವರಾದ ಮಲ್ಲಿಕಾರ್ಜುನ ತಂದೆ ಮಾಧವರಾವ ಇವರು ನನಗೆ ಬಂದು ತಿಳಿಸಿದ್ಧೇನೆಂದರೆ ದಿನಾಂಕ: 10, 11/10/2020 ರಂದು ರಾತ್ರಿ ಹೊತ್ತಿನಲ್ಲಿ ಯಾರೊ ಅಪರೀಚಿತ ಕಳ್ಳರು ರೇವಪ್ಪಯ್ಯಾ ಗುಡಿಯ ಕಬ್ಬಿಣದ ಹುಂಡಿಗಳು ಕಳ್ಳವು ಮಾಡಿಕೊಂಡು ಹೊಗಿ ಶಾಂತಾಬಾಯಿ ಪಾಟೀಲ ಇವರ ಹೊಲದಲ್ಲಿ ಅವುಗಳನ್ನು ಒಡೆದು ಅದರಲ್ಲಿದ್ದ ದುಡ್ಡು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.